Vitamin B12: ದೇಹದಲ್ಲಿ ವಿಟಮಿನ್ ಬಿ12 ಕೊರತೆಗೆ ಕಾರಣಗಳು ಮತ್ತು ಲಕ್ಷಣಗಳು ಯಾವುವು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ 12 ಸಹ ಒಂದಾಗಿದೆ. ವಿಟಮಿನ್ ಬಿ12 ಅತ್ಯಗತ್ಯ ವಿಟಮಿನ್ ಆಗಿದೆ. ವಿಟಮಿನ್ ಬಿ 12 ದೇಹದಲ್ಲಿ ಕೆಂಪು ರಕ್ತ ಕಣಗಳು ಮತ್ತು ಡಿಎನ್ಎ ತಯಾರಿಸುವ ಮುಖ್ಯ ಕೆಲಸ ಮಾಡುತ್ತದೆ.

  • Share this:

     ದೇಹದ ಆರೋಗ್ಯಕ್ಕೆ (Body Health) ಹಲವು ಖನಿಜಗಳು, ಜೀವಸತ್ವಗಳು ಬೇಕು. ಉತ್ತಮ ಜೀವಸತ್ವಗಳು ಮತ್ತು ಖನಿಜ ದೇಹಕ್ಕೆ ಒದಗಿಸಿದರೆ ಮಾತ್ರ ಸದೃಢ ಆರೋಗ್ಯ (Strong Health), ಉತ್ತಮ ಮಾನಸಿಕ ಆರೋಗ್ಯ (Good Mental Health) ಮತ್ತು ದೇಹದ ಕಾರ್ಯ ನಿರ್ವಹಣೆ ಸರಾಗವಾಗಿ ಆಗಲು ಸಹಕಾರಿ. ಪೋಷಕಾಂಶಗಳ (Vitamins) ಕೊರತೆಯು ದೇಹವನ್ನು ದುರ್ಬಲವಾಗಿಸುತ್ತದೆ. ಮತ್ತು ದೇಹವನ್ನು ಆಂತರಿಕವಾಗಿ ಅನಾರೋಗ್ಯಕ್ಕೆ ಗುರಿಯಯಾಗಿಸುವ ಸಾಧ್ಯತೆ ಹೆಚ್ಚು. ಈ ಅಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ 12 ಸಹ ಒಂದಾಗಿದೆ. ವಿಟಮಿನ್ ಬಿ12 ಅತ್ಯಗತ್ಯ ವಿಟಮಿನ್ ಆಗಿದೆ. ವಿಟಮಿನ್ ಬಿ 12 ದೇಹದಲ್ಲಿ ಕೆಂಪು ರಕ್ತ ಕಣಗಳು ಮತ್ತು ಡಿಎನ್ಎ ತಯಾರಿಸುವ ಮುಖ್ಯ ಕೆಲಸ ಮಾಡುತ್ತದೆ.


    ದೇಹದ ಆರೋಗ್ಯಕ್ಕೆ ವಿಟಮಿನ್ ಬಿ12 ಅಗತ್ಯತೆ


    ನರಮಂಡಲ ಮತ್ತು ಮೆದುಳಿನ ಆರೋಗ್ಯ ಹೆಚ್ಚಿಸಲು ವಿಟಮಿನ್ ಬಿ 12 ತುಂಬಾ ಸಹಕಾರಿ ಆಗಿದೆ. ಮೂಳೆಗಳ ಆರೋಗ್ಯಕ್ಕೆ ಬಿ12 ಆಹಾರ ತುಂಬಾ ಮುಖ್ಯವಾಗಿ ಬೇಕು. ಮೂಡ್ ಚೆನ್ನಾಗಿಡಲು, ಕೆಂಪು ರಕ್ತ ಕಣಗಳ ಉತ್ಪಾದನೆಗೆ ಮತ್ತು ಶಕ್ತಿಯ ಮಟ್ಟ ಕಾಪಾಡಲು ವಿಟಮಿನ್ ಬಿ12 ಬೇಕು.


    ವಿಟಮಿನ್ ಕೊರತೆಯು ಹಲವು ಕಾಯಿಲೆಗೆ ಕಾರಣವಾಗುತ್ತದೆ. ಅದರ ಲಕ್ಷಣಗಳು ಮತ್ತು ಅನಾನುಕೂಲಗಳು ಯಾವುವು ಎಂದು ನೋಡೋಣ. ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಉಂಟಾದರೆ ಅದು ಅನೇಕ ಗಂಭೀರ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಹೆಚ್ಚು.




    ವಿಟಮಿನ್ ಬಿ 12 ಕೊರತೆಯು ಯಾವ ಸಮಸ್ಯೆ ಉಂಟು ಮಾಡುತ್ತದೆ?


    ವಿಟಮಿನ್ ಬಿ 12 ಕೊರತೆಯು ದೌರ್ಬಲ್ಯ, ಆಯಾಸ, ತಲೆ ತಿರುಗುವಿಕೆ, ತ್ವರಿತ ಹೃದಯ ಬಡಿತ, ಉಸಿರಾಟದ ತೊಂದರೆ, ತೆಳು ಚರ್ಮ, ಕೆಂಪು ನಾಲಿಗೆ, ಮಲಬದ್ಧತೆ, ಅತಿಸಾರ, ಹಸಿವಿನ ಕೊರತೆ, ಅನಿಲ ರಚನೆ, ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ ಸೇರಿದಂತೆ ಅನೇಕ ಗಂಭೀರ ಸಮಸ್ಯೆ ಉಂಟು ಮಾಡುತ್ತದೆ.


    ಜೊತೆಗೆ ಇದು ನರವೈಜ್ಞಾನಿಕ ಸಮಸ್ಯೆಗೂ ಸಹ ಕಾರಣವಾಗುತ್ತದೆ. ಸ್ನಾಯುಗಳಲ್ಲಿ ದೌರ್ಬಲ್ಯ, ವಾಕಿಂಗ್ ಮತ್ತು ಕಣ್ಣುಗಳು ದುರ್ಬಲವಾಗುವ ಸಮಸ್ಯೆ ಕಾಡುತ್ತದೆ.


    ದೇಹದಲ್ಲಿ ವಿಟಮಿನ್ ಬಿ12 ಪೋಷಕಾಂಶ ಕೊರತೆಯ ರೋಗ ಲಕ್ಷಣಗಳು


    ಯಾವಾಗಲೂ ತಲೆನೋವು ಬರುವುದು


    ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದ ಮೆದುಳಿನ ಕಾರ್ಯ ನಿರ್ವಹಣೆಗೆ ಹೊಡೆತ ಬೀಳುತ್ತದೆ. ಇಲ್ಲವೇ ಕೆಟ್ಟ ಪರಿಣಾಮ ಬೀರುತ್ತದೆ. ವಿಟಮಿನ್ ಬಿ 12 ಪೋಷಕಾಂಶವು ನರಮಂಡಲ


    ಮತ್ತು ಮೆದುಳಿನ ಆರೋಗ್ಯ ಉತ್ತೇಜಿಸುತ್ತದೆ. ಹಾಗಾಗಿ ಮೆದುಳಿನ ಆರೋಗ್ಯದ ಕೊರತೆಯು ತಲೆನೋವು ಹಾಗೂ ಇತರೆ ರೋಗಲಕ್ಷಣಕ್ಕೆ ಕಾರಣವಾಗಬಹುದು.


    ಗೊಂದಲ ಉಂಟಾಗುವಿಕೆ ಮತ್ತು ಏಕಾಗ್ರತೆ ತೊಂದರೆ


    ವಿಟಮಿನ್ ಬಿ 12 ಕೊರತೆಯು ಮಾನಸಿಕ ಆರೋಗ್ಯ ಹದಗೆಡಲು ಕಾರಣವಾಗುತ್ತದೆ. ಯಾವಾಗಲೂ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ವಿಟಮಿನ್ ಬಿ12 ಪೋಷಕಾಂಶವು ಮೆದುಳು ಮತ್ತು ನರಮಂಡಲದ ಆರೋಗ್ಯಕ್ಕೆ ಪ್ರಮುಖವಾಗಿ ಬೇಕು.


    ಆಯಾಸ ಉಂಟಾಗುವುದು


    ಆರೋಗ್ಯಕರ ಕೆಂಪು ರಕ್ತ ಕಣಗಳ ಉತ್ಪಾದನೆಗೆ ವಿಟಮಿನ್ ಬಿ 12 ಅತ್ಯಗತ್ಯ. ಇದರ ಕೊರತೆಯು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ ಸಮಸ್ಯೆಗೆ ಕಾರಣವಾಗಬಹುದು.


    ಸಾಂದರ್ಭಿಕ ಚಿತ್ರ


    ಕೈ ಮತ್ತು ಕಾಲುಗಳಲ್ಲಿ ಜುಮ್ಮೆನ್ನುವ ಸಮಸ್ಯೆ


    ಕೈ ಮತ್ತು ಕಾಲುಗಳಲ್ಲಿ ಜುಮ್ಮೆನ್ನುವುದು ಪ್ಯಾರೆಸ್ಟೇಷಿಯಾ ಎಂಬ ಕಾಯಿಲೆ ಆಗಿದೆ. ವಿಟಮಿನ್ ಬಿ 12 ಕೊರತೆಯು ಇದಕ್ಕೆ ಮುಖ್ಯ ಕಾರಂವಾಗಿರುತ್ತದೆ. ಕೈಗಳು, ತೋಳುಗಳು ಅಥವಾ ಕಾಲುಗಳಲ್ಲಿ ಜುಮ್ಮೆನ್ನಿಸುತ್ತದೆ.


    ಚರ್ಮದ ಹಳದಿ ಬಣ್ಣ ಬರುವುದು


    ವಿಟಮಿನ್ ಬಿ 12 ಕೊರತೆ ರಕ್ತಹೀನತೆಗೆ ಕಾರಣವಾಗುತ್ತದೆ. ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣ ಉತ್ಪಾದಿಸುವುದಿಲ್ಲ. ಚರ್ಮದ ಮೈಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಚರ್ಮವು ಸ್ವಲ್ಪ ಹಳದಿ ಆಗುತ್ತದೆ.


    ಬಾಯಿ ಹುಣ್ಣುಗಳ ಸಮಸ್ಯೆ


    ವಿಟಮಿನ್ ಬಿ 12 ಕೊರತೆಯು ಗ್ಲೋಸೈಟಿಸ್ ಅಂದ್ರೆ ಬಾಯಿಯಲ್ಲಿ ಊತ ಮತ್ತು ನಿಮ್ಮ ನಾಲಿಗೆಯ ಊತ ಉಂಟು ಮಾಡುವ ಸ್ಥಿತಿ. ವಿಟಮಿನ್ ಬಿ 12 ಕೊರತೆಯು ಮೆಗಾಲೊಬ್ಲಾಸ್ಟಿಕ್ ರಕ್ತಹೀನತೆ, ನಾಲಿಗೆ ಕೆಂಪು ಬಣ್ಣಕ್ಕೆ ತಿರುಗುವುದು, ಸುಡುವ ಸಂವೇದನೆ ಮತ್ತು ನೋವು ಉಂಟಾಗುತ್ತದೆ.


    ಇದನ್ನೂ ಓದಿ: ನಿಮ್ಮ ಮನಸ್ಸಿನಲ್ಲಿ ಆಗೋ ಬದಲಾವಣೆ ಥೈರಾಯ್ಡ್‌ ಕಾಯಿಲೆಯ ಸೂಚನೆಯಂತೆ!


    ವಿಟಮಿನ್ 12 ಕೊರತೆ ನಿವಾರಿಸುವುದು ಹೇಗೆ?


    ದೇಹದಲ್ಲಿ ವಿಟಮಿನ್ ಬಿ 12 ಕೊರತೆ ಕಡಿಮೆ ಮಾಡಲು, ಯಕೃತ್ತು, ಚಿಪ್ಪುಮೀನು, ಕೆಂಪು ಮಾಂಸ, ಟ್ಯೂನ ಮೀನು, ಸಾಲ್ಮನ್ ಮೀನು, ಬಾದಾಮಿ ಹಾಲು, ಮೊಸರು, ಚೀಸ್, ಮೊಟ್ಟೆ ಸೇವಿಸಿ.

    Published by:renukadariyannavar
    First published: