Diabetes And Health: ದೇಹದಲ್ಲಿ ಹೆಚ್ಚುವ ಸಕ್ಕರೆ ಮಟ್ಟ ನಿಯಂತ್ರಿಸುತ್ತವೆ ಈ ಗಿಡಮೂಲಿಕೆಗಳು!

ದಿನೇ ದಿನೇ ಹೆಚ್ಚುತ್ತಿರುವ ಸೌಲಭ್ಯಗಳು ಜನರನ್ನು ಕಾಯಿಲೆಗಳಿಗೆ ಹತ್ತಿರ ತರುತ್ತಿದೆ. ಯಾವುದೇ ದೈಹಿಕ ಚಟುವಟಿಕೆ ಇಲ್ಲದೇ ಇರುವುದು ಹಾಗೂ ಮನೆಯಲ್ಲಿ ಕೂತು ಎಲ್ಲವೂ ದೊರೆಯುತ್ತಿರುವುದು ಕಾಯಿಲೆಗಳನ್ನು ಹೆಚ್ಚಿಸಿದೆ. ಮಧುಮೇಹವು ದೇಶದಲ್ಲಿ ಬೆಳೆಯುತ್ತಿರುವ ಕಾಯಿಲೆ ಆಗಿದ್ದು ಇದು ಸವಾಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಇಂದಿನ ಕಾಲದಲ್ಲಿ ಮಧುಮೇಹ ಕಾಯಿಲೆ (Diabetes Disease) ಸಮಸ್ಯೆ ಸಾಕಷ್ಟು ಜನರನ್ನು (People) ಕಾಡುತ್ತಿದೆ. ಎಲ್ಲಾ ವಯೋಮಾನದವರು (Aged) ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ತಪ್ಪು ಆಹಾರ(Food) ಪದ್ಧತಿ ಮತ್ತು ದೀರ್ಘಕಾಲ ಕುಳಿತು ಕೆಲಸ (Sitting Work) ಮಾಡುವ ದಿನಚರಿ. ದಿನೇ ದಿನೇ ಹೆಚ್ಚುತ್ತಿರುವ ಸೌಲಭ್ಯಗಳು ಜನರನ್ನು ಕಾಯಿಲೆಗಳಿಗೆ ಹತ್ತಿರ ತರುತ್ತಿದೆ. ಯಾವುದೇ ದೈಹಿಕ ಚಟುವಟಿಕೆ ಇಲ್ಲದೇ ಇರುವುದು ಹಾಗೂ ಮನೆಯಲ್ಲಿ ಕೂತು ಎಲ್ಲವೂ ದೊರೆಯುತ್ತಿರುವುದು ಕಾಯಿಲೆಗಳನ್ನು ಹೆಚ್ಚಿಸಿದೆ. ಮೊಬೈಲ್ ಮತ್ತು ಆನ್‌ ಲೈನ್ ಆಟಗಳಿಂದಾಗಿ ಮಕ್ಕಳು ಹೊರಾಂಗಣ ಆಟ ಆಡುವುದಿಲ್ಲ. ಇಂತಹ ಸ್ಥಿತಿಯಲ್ಲಿ ಎಲ್ಲಾ ವಯೋಮಾನದವರು ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ.

    ಮಧುಮೇಹದ ಲಕ್ಷಣಗಳು

    ಕೆಲವು ಸಮಯದಲ್ಲಿ ಮಧುಮೇಹದ ಲಕ್ಷಣಗಳು ತೀವ್ರ ಹಂತ ತಲುಪಿದ ನಂತರ ಕಾಣಿಸುತ್ತವೆ. ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಪದೇ ಪದೇ ಮೂತ್ರ ವಿಸರ್ಜನೆ, ಅತಿಯಾದ ಬಾಯಾರಿಕೆ-ಹಸಿವು, ದೃಷ್ಟಿ ಮಂದ, ಸುಸ್ತು, ಕಿರಿಕಿರಿ, ಗಾಯ ವಾಸಿಯಾಗದೇ ಇರುವ ಲಕ್ಷಣಗಳು ಗೋಚರಿಸುತ್ತವೆ.

    ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಧುಮೇಹವು ದೇಶದಲ್ಲಿ ಬೆಳೆಯುತ್ತಿರುವ ಕಾಯಿಲೆ ಆಗಿದ್ದು, ಇದು ಸವಾಲಾಗಿದೆ. ಇದು 20 ರಿಂದ 70 ವರ್ಷ ವಯಸ್ಸಿನ 8.7 ರಷ್ಟು ಜನರ ಮೇಲೆ ಪರಿಣಾಮ ಬೀರುತ್ತದೆ. ಮಧುಮೇಹ ದೇಹದ ಸಕ್ಕರೆ ಮಟ್ಟ ಕಾಪಾಡಿಕೊಳ್ಳಲು ಪ್ರತಿದಿನ ಇನ್ಸುಲಿನ್ ಔಷಧಿಯ ಅಗತ್ಯವಿದೆ. ಆದರೆ ಇನ್ಸುಲಿನ್ ಆಗಿ ಕಾರ್ಯ ನಿರ್ವಹಿಸುವ ಮತ್ತು ನಿಮ್ಮ ಆರೋಗ್ಯ ಕಾಪಾಡುವ ಕೆಲವು ಗಿಡಮೂಲಿಕೆಗಳಿವೆ ಅವಗಳ ಬಗ್ಗೆ ತಿಳಿಯೋಣ.

    ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!

    ಸಕ್ಕರೆ ನಿಯಂತ್ರಣಕ್ಕೆ ಗಿಲೋಯ್ ಜ್ಯೂಸ್

    ಗಿಲೋಯ್ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ ಆಗಿದೆ. ಎನ್‌ಸಿಬಿಐ ವರದಿ ಪ್ರಕಾರ ಗಿಲೋಯ್ ಆಂಟಿ-ಹೈಪರ್‌ಗ್ಲೈಸೆಮಿಕ್ ಗುಣಲಕ್ಷಣ ಹೊಂದಿದೆ. ಇದು ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಅದರ ಪ್ರಯೋಜನ ಪಡೆಯಲು ಗಿಲೋಯ್ ಕ್ರೀಪರ್ ಜ್ಯೂಸ್ ಸೇವಿಸಬಹುದು.

    ನುಗ್ಗೆಸೊಪ್ಪು  

    ಮೊರಿಂಗಾ ಅಥವಾ ಡ್ರಮ್ ಸ್ಟಿಕ್ ಅಂದ್ರೆ ನುಗ್ಗೆಸೊಪ್ಪು ಎಲ್ಲಾ ಭಾಗಗಳಲ್ಲಿ ಔಷಧೀಯ ಗುಣಗಳು ಇವೆ. ಇದು ಮಧುಮೇಹ ವಿರೋಧಿ ಗುಣ ಹೊಂದಿದೆ. ಇದು ಮಧುಮೇಹ ರೋಗಿಗಳಿಗೆ ಆರೋಗ್ಯಕರ.

    ರಕ್ತದಲ್ಲಿ ಹೆಚ್ಚಿದ ಸಕ್ಕರೆ ಮಟ್ಟ ಕಡಿಮೆ ಮಾಡಬಹುದು. ಇದರ ಎಲೆಗಳು ಮಧುಮೇಹ ವಿರೋಧಿ ಗುಣ ಹೊಂದಿವೆ. ಹಾಗಾಗಿ ಇದನ್ನು ನೇರವಾಗಿ ತಿನ್ನಲು ಬಯಸದಿದ್ದರೆ, ನೀವು ಎಲೆಗಳಿಂದ ತಯಾರಿಸಿದ ಟ್ಯಾಬ್ಲೆಟ್ ಸೇವಿಸಬಹುದು.

    ಬೇವಿನ ಎಲೆ

    ಬೇವಿನ ಎಲೆ ರಕ್ತದಲ್ಲಿ ಹೆಚ್ಚುತ್ತಿರುವ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ. NIH ಅಧ್ಯಯನವು ಬೇವು ಹೈಪೊಗ್ಲಿಸಿಮಿಕ್ ಆಗಿದೆ. ಇದು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಅದೇ ವೇಳೆ ಬೇವು ವಿರೋಧಿ ಹೈಪರ್ಗ್ಲೈಸೆಮಿಕ್ ಗುಣಲಕ್ಷಣ ಹೊಂದಿದೆ. ಇದು ಮಧುಮೇಹ ಸಮಸ್ಯೆ ತಡೆಯುತ್ತದೆ. ಬೇವಿನ ಎಲೆಗಳ ರಸ ತಿನ್ನುವುದು ಒಳ್ಳೆಯದು.

    ಅಶ್ವಗಂಧ ಎಲೆ

    ಅಶ್ವಗಂಧ ಆಯುರ್ವೇದದಲ್ಲಿ ಅನೇಕ ರೋಗಗಳ ಚಿಕಿತ್ಸೆಗಾಗಿ ಬಳಕೆಯಾಗುತ್ತಿದೆ. 2009 ರಲ್ಲಿ ಇಂಟರ್​ನ್ಯಾಷನಲ್ ಜರ್ನಲ್ ಆಫ್ ಮಾಲಿಕ್ಯುಲರ್ ಸೈನ್ಸ್ ಮಧುಮೇಹದಿಂದ ಬಳಲುತ್ತಿರುವ ಇಲಿಗಳ ಮೇಲೆ ಅಶ್ವಗಂಧದ ಬೇರು ಮತ್ತು ಎಲೆಗಳ ಮೇಲೆ ಅಧ್ಯಯನ ಮಾಡಿದೆ.

    ಸ್ವಲ್ಪ ಸಮಯದ ನಂತರ ಅದರ ಧನಾತ್ಮಕ ಬದಲಾವಣೆಯು ಇಲಿಗಳಲ್ಲಿ ಕಂಡುಬಂದಿದೆ. ಇದರ ಆಧಾರದ ಮೇಲೆ ಮಧುಮೇಹ ತಡೆಗಟ್ಟುವಲ್ಲಿ ಅಶ್ವಗಂಧವು ಉಪಯುಕ್ತವಾಗಿದೆ. ನೀವು ಅದರ ಎಲೆ ರಸ ಅಥವಾ ಟ್ಯಾಬ್ಲೆಟ್ ಸೇವಿಸಬಹುದು.

    ಇದನ್ನೂ ಓದಿ: ಕೂದಲು ಸಮಸ್ಯೆ ಹೆಚ್ಚಿದ್ರೆ ಇದು ಅಧಿಕ ಕೊಲೆಸ್ಟ್ರಾಲ್ ಸಂಕೇತವಾಗಿರಬಹುದು!

    ಅಲೋವೆರಾ

    ಅಲೋವೆರಾ ಸೇವನೆ ಮಧುಮೇಹ ರೋಗಿಗಳಿಗೆ ಆರೋಗ್ಯಕರ. ಅಸೆಮನ್ನನ್ ಎಂಬ ಅಂಶವು ಅದರಲ್ಲಿದೆ. ಇದು ಹೈಪೊಗ್ಲಿಸಿಮಿಕ್ ಗ್ಲೂಕೋಸ್ ಕಡಿಮೆ ಮಾಡುತ್ತದೆ. ನಿಯಮಿತ ಸೇವನೆ ಹೆಚ್ಚಿದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.
    Published by:renukadariyannavar
    First published: