ದೇಹದ ಆರೋಗ್ಯಕ್ಕೆ (Body Health) ಎಲ್ಲಾ ಪೋಷಕಾಂಶಗಳು (Nutrients) ಬೇಕು. ನಿಮ್ಮ ದೇಹದಲ್ಲಿ ಯಾವುದೇ ಅಂಶದ ಕೊರತೆ (Deficiency) ಇದ್ರೆ ಅದರ ಪರಿಣಾಮ ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಬೀರುತ್ತದೆ. ಈ ಪೋಷಕಾಂಶಗಳಲ್ಲಿ ಒಂದು ಪ್ರಮುಖ ಪೋಷಕ ಅಂಶ ಅಂದ್ರೆ ಪ್ರೋಟೀನ್ (Protein). ನಿಮ್ಮ ದೇಹದಲ್ಲಿ ಪ್ರೋಟೀನ್ ಕೊರತೆ ಇದ್ರೆ ದೇಹದ ನಿರ್ಮಾಣ ಕಾರ್ಯದಲ್ಲಿ ಅಡಚಣೆ ಆಗುತ್ತದೆ. ಹಳೆಯ ಕೋಶಗಳನ್ನು ತೊಡೆದು ಹಾಕುವುದು ಮತ್ತು ಹೊಸ ಕೋಶಗಳ ರಚನೆ ಪ್ರಕ್ರಿಯೆ ದೇಹದಲ್ಲಿ ನಿರಂತರವಾಗಿ ಮುಂದುವರೆಯುತ್ತಲೇ ಇರುತ್ತದೆ. ಆರೋಗ್ಯವಾದ ದೇಹದಲ್ಲಿ ಪ್ರತಿದಿನ 330 ಶತಕೋಟಿ ಹೊಸ ಜೀವಕೋಶಗಳು ಉತ್ಪತ್ತಿ ಆಗುತ್ತವೆ. ಇದಕ್ಕಾಗಿ ಪ್ರೋಟೀನ್ ಅಗತ್ಯವಿದೆ.
ದೇಹದಲ್ಲಿ ಪ್ರೊಟೀನ್ ಕೊರತೆ ಯಾವೆಲ್ಲಾ ಅಡ್ಡ ಪರಿಣಾಮ ಉಂಟು ಮಾಡುತ್ತದೆ?
ದೇಹದಲ್ಲಿ ಪ್ರೋಟೀನ್ ಕೊರತೆ ಹಲವು ಅಸ್ವಸ್ಥತೆಗೆ ಕಾರಣವಾಗುತ್ತದೆ. ಹಾಗಾಗಿ ಇದು ದೇಹಕ್ಕೆ ಬಹಳ ಮುಖ್ಯ. ಜಾಗತಿಕವಾಗಿ ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 68 ಗ್ರಾಂ ಪ್ರೋಟೀನ್ ಬೇಕು.
ಭಾರತದಲ್ಲಿ ದಿನಕ್ಕೆ ಒಬ್ಬ ವ್ಯಕ್ತಿಗೆ 47 ಗ್ರಾಂ ಪ್ರೊಟೀನ್ ಮಾತ್ರ ಬೇಕು. 73 ಪ್ರತಿಶತ ಭಾರತೀಯರು ಪ್ರೋಟೀನ್ ಕೊರತೆ ಹೊಂದಿದ್ದಾರೆ. ಪ್ರೋಟೀನ್ ಕೊರತೆಯು 70 ರಿಂದ 80 ಪ್ರತಿಶತ ಮಹಿಳೆಯರಲ್ಲಿ ಕಂಡು ಬರುತ್ತದೆ.
ಆರೋಗ್ಯ ತಜ್ಞೆ ಪೂಜಾ ಮಖಿಜಾ ಅವರ ಪ್ರಕಾರ, ದಿನದ ಮೂರು ಊಟಗಳಲ್ಲಿ ಪ್ರೋಟೀನ್ ಭರಿತ ಆಹಾರ ಸೇವಿಸಲು ಪ್ರಯತ್ನಿಸಬೇಕು. ಹಾಗೂ ದಿನವೂ ಒಂದೇ ರೀತಿಯ ಆಹಾರವನ್ನು ಸೇವಿಸಬಾರದು. ದೇಹದಲ್ಲಿ ಪ್ರೋಟೀನ್ ಕೊರತೆ ಉಂಟಾದಾಗ, ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಸಂಭವಿಸುತ್ತವೆ ಎಂದು ಹೇಳಿದ್ದಾರೆ.
ಪ್ರೋಟೀನ್ ಕೊರತೆಯ ಆರೋಗ್ಯ ಅಪಾಯಗಳು
ಕೂದಲು ಉದುರುವಿಕೆ
ಕೂದಲಿನ ಆರೈಕೆಗಾಗಿ ನೀವು ಎಲ್ಲಾ ಉತ್ತಮ ಉತ್ಪನ್ನ ಬಳಸುತ್ತಿದ್ದರೆ ಮತ್ತು ಸಂಪೂರ್ಣ ಆರೈಕೆ ಮಾಡಿದ ನಂತರವೂ ನಿಮ್ಮ ಕೂದಲು ಒಣಗುವುದು ಉದುರಯವದು, ತುದಿ ಸೀಳುವಿಕೆ ಉಂಟಾದರೆ ದೇಹದಲ್ಲಿ ಪ್ರೋಟೀನ್ ಕೊರತೆಯ ಸಂಕೇತವಾಗಿದೆ.
ಸ್ನಾಯುಗಳ ನೋವು ಉಂಟಾಗುವುದು
ತಜ್ಞರ ಪ್ರಕಾರ, ದೇಹದಲ್ಲಿ ಪ್ರೋಟೀನ್ ಕೊರತೆ ಸ್ನಾಯುಗಳು ತಮ್ಮ ಅಗತ್ಯವನ್ನು ಪೂರೈಸಲು ಮೂಳೆಗಳಿಂದ ಪ್ರೋಟೀನ್ ಅನ್ನು ಹೀರಿಕೊಳ್ಳಲು ಪ್ರಾರಂಭಿಸುತ್ತವೆ. ಇದು ಮೂಳೆಗಳು ದುರ್ಬಲವಾಗಲು ಕಾರಣವಾಗುತ್ತದೆ. ಮತ್ತು ಸ್ನಾಯುಗಳ ಮೇಲೆ ಅತಿಯಾದ ಒತ್ತಡದಿಂದಾಗಿ, ಸ್ನಾಯುಗಳಲ್ಲಿ ನೋವು ಉಂಟಾಗುತ್ತದೆ.
ಉಗುರು ಹಾನಿ ಆಗುವುದು
ಪ್ರೋಟೀನ್ ಕೊರತೆ ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಮತ್ತು ಕ್ಯಾಲ್ಸಿಯಂ ಕೊರತೆ ಉಗುರು ಒಡೆಯಲು ಮತ್ತು ಬಿರುಕು ಬಿಡಲು ಕಾರಣ ಆಗುತ್ತದೆ. ಉಗುರುಗಳ ಒಳಗೆ ಸೋಂಕು ಬೆಳೆಯಲು ಪ್ರಾರಂಭಿಸುತ್ತದೆ. ಇದು ಉಗುರು ದುರ್ಬಲವಾಗಲು ಕಾರಣವಾಗುತ್ತದೆ. ಕಪ್ಪು ಆಗುತ್ತವೆ.
ಸುಸ್ತಾಗುವಿಕೆ
ದೇಹದಲ್ಲಿ ಕಡಿಮೆ ಪ್ರೋಟೀನ್ ಇದ್ದಾಗ ವ್ಯಕ್ತಿಯು ಯಾವಾಗಲೂ ದಣಿದ ಭಾವನೆ ಉಂಟಾಗುತ್ತದೆ. ಪ್ರೋಟೀನ್ ದೇಹದಲ್ಲಿ ಇಂಧನವಾಗಿ ಕಾರ್ಯ ನಿರ್ವಹಿಸುತ್ತದೆ. ಮತ್ತು ದೇಹವು ಪ್ರೊಟೀನ್ ಹೀರಿಕೊಳ್ಳುವಿಕೆಯಿಂದ ಶಕ್ತಿ ಪಡೆಯುತ್ತದೆ.
ದೇಹದಲ್ಲಿ ಊತ ಉಂಟಾಗುವುದು
ಪ್ರೋಟೀನ್ ಕೊರತೆ ದೇಹದಲ್ಲಿ ಊತ ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಆಹಾರದಲ್ಲಿ ಯಾವುದೇ ಬದಲಾವಣೆಯಿಲ್ಲದೆ ಕೊಬ್ಬಿನ ಭಾವನೆ ಹೊಂದಿದರೆ ಅನೇಕ ಬಾರಿ ಊತ ಉಂಟಾಗುತ್ತದೆ. ಒತ್ತಡದಿಂದ ಅಂಗಾಂಶಗಳಲ್ಲಿ ಊತವು ಹೆಚ್ಚಾಗುತ್ತದೆ. ಮತ್ತು ದೇಹವು ಉಬ್ಬುತ್ತದೆ.
ಮರಾಸ್ಮಸ್ ಸಮಸ್ಯೆ
ಮರಾಸ್ಮಸ್ ದೌರ್ಬಲ್ಯ, ಸ್ನಾಯು ಕ್ಷೀಣತೆ ಮತ್ತು ತೂಕ ನಷ್ಟದಿಂದ ಆಗುತ್ತದೆ. ಪ್ರೋಟೀನ್ ಕೊರತೆಯಿಂದ ಉಂಟಾಗುತ್ತದೆ. ದೀರ್ಘಕಾಲದವರೆಗೆ ಪ್ರೋಟೀನ್ ಕೊರತೆ ಮಾನಸಿಕ ಆರೋಗ್ಯ ಕೆಡಿಸುತ್ತದೆ. ಮೆದುಳಿನ ಕಾರ್ಯಚಟುವಟಿಕೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಹೀಗೆ ಮಸಾಜ್ ಮಾಡಿ, ಆಮೇಲ್ ಮ್ಯಾಜಿಕ್ ನೋಡಿ
ಪ್ರೋಟೀನ್ ಕೊರತೆ ನಿವಾರಿಸುವ ಪದಾರ್ಥಗಳು
ಪ್ರೋಟೀನ್ ಕೊರತೆ ನಿವಾರಿಸಲು ಆಹಾರದಲ್ಲಿ ಹಾಲು, ಚೀಸ್, ಪನೀರ್ ಮತ್ತು ಮೊಟ್ಟೆಯಂತಹ ಡೈರಿ ಉತ್ಪನ್ನ ಸೇರಿಸಿ. ವಿವಿಧ ರೀತಿಯ ಬೇಳೆಕಾಳು ಸೇವಿಸಿ. ಮಾಂಸಾಹಾರಿಗಳು ಚಿಕನ್, ಮೀನು, ಸಿಗಡಿ ಸೇವನೆ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ