• Home
  • »
  • News
  • »
  • lifestyle
  • »
  • Health Care: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!

Health Care: ದೇಹದಲ್ಲಿ ಕಾಣಿಸಿಕೊಳ್ಳುವ ಈ ನೋವನ್ನು ಲಘುವಾಗಿ ಪರಿಗಣಿಸಬೇಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಹದಲ್ಲಿ ಕಾಣಿಸಿಕೊಳ್ಳುವ ಕೆಲವು ನೋವು ದೀರ್ಘಕಾಲದವರೆಗೆ ನಿವಾರಣೆ ಆಗಲ್ಲ. ಇದು ಮತ್ತೆ ಬೇರೆ ಬೇರೆ ಸಮಸ್ಯೆ ಉಂಟು ಮಾಡುತ್ತದೆ. ನೋವು ಪ್ರಾರಂಭವಾದ ಕೂಡಲೇ ವೈದ್ಯರ ಬಳಿ ಹೋಗಲೇಬೇಕೆಂದೇನಿಲ್ಲ. ಆದರೆ ಆ ನೋವು ನಿವಾರಣೆಗೆ ಕೂಡಲೇ ಸರಿಯಾದ ಚಿಕಿತ್ಸೆ ಮಾಡುವುದು ಮುಖ್ಯ.

  • Share this:

    ಜೀವನದಲ್ಲಿ (Life) ಒಂದಲ್ಲ ಒಂದು ದಿನ ಅನಾರೋಗ್ಯ (Unhealthy) ಕಾಡುತ್ತಲೇ ಇರುತ್ತದೆ. ಅದರಲ್ಲೂ ದೇಹದಲ್ಲಿ ನೋವಿನ ಸಮಸ್ಯೆ (Body Pain Problem) ಉಂಟಾಗುತ್ತಲೇ ಇರುತ್ತದೆ. ದೇಹದ ಹಲವು ಭಾಗಗಳಲ್ಲಿ (Many Parts) ಯಾವಾಗಲೂ ನೋವು ಉಂಟಾಗುವುದು ಸಾಮಾನ್ಯ ಸಮಸ್ಯೆ ಆಗಿದೆ. ಪ್ರತಿಯೊಬ್ಬರೂ ಕೆಲವೊಮ್ಮೆ ಆದ್ರೂ ನೋವಿನ ಸಮಸ್ಯೆ ಅನುಭವಿಸುತ್ತಾರೆ. ದೇಹದಲ್ಲಿ ನೋವಿನ ಸಮಸ್ಯೆ ಯಾವಾಗಲೂ ಹೆಚ್ಚಾಗಿ ಅತಿಯಾದ ದೈಹಿಕ ಚಟುವಟಿಕೆ, ಆಹಾರ ಪದ್ಧತಿ ಅಥವಾ ಹವಾಮಾನ ಬದಲಾವಣೆಯಿಂದಲೂ ಉಂಟಾಗುತ್ತದೆ. ಹಾಗಾಗಿ ಇದನ್ನು ಆರಂಭದಲ್ಲಿ ಗಂಭೀರವಾಗಿ ಪರಿಗಣಿಸದೇ ಇರುವವರೇ ಹೆಚ್ಚು. ಆದರೆ ಹೀಗೆ ಕಾಡುವ ಸಮಸ್ಯೆಗಳಿಂದ ಸಾಮಾನ್ಯ ನೋವು ಮುಂದೆ ಮಾರಣಾಂತಿಕ ಕಾಯಿಲೆ ರೂಪ ಪಡೆಯುತ್ತದೆ.


    ದೇಹದಲ್ಲಿ ಕಾಡುವ ನೋವಿನ ಸಮಸ್ಯೆ


    ದೀರ್ಘಕಾಲದವರೆಗೆ ನೋವು ನಿವಾರಣೆ ಆಗಲ್ಲ. ಇದು ಮತ್ತೆ ಬೇರೆ ಬೇರೆ ಸಮಸ್ಯೆ ಉಂಟು ಮಾಡುತ್ತದೆ. ನೋವು ಪ್ರಾರಂಭವಾದ ಕೂಡಲೇ ವೈದ್ಯರ ಬಳಿ ಹೋಗಲೇಬೇಕೆಂದೇನಿಲ್ಲ. ಆದರೆ ಆ ನೋವು ನಿವಾರಣೆಗೆ ಕೂಡಲೇ ಸರಿಯಾದ ಚಿಕಿತ್ಸೆ ಮಾಡುವುದು ಮುಖ್ಯ.


    ದೇಹದಲ್ಲಿ ನೋವಿನ ತೀವ್ರತೆ ಮತ್ತು ಅದು ಯಾವ ಸ್ಥಳದಲ್ಲಿ ಉಂಟಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನೋವು ನಿವಾರಣೆ ಮಾಡಿಕೊಳ್ಳಬೇಕಾಗುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ಬಲ ಹೊಟ್ಟೆಯಲ್ಲಿ ಉಂಟಾಗುವ ನೋವು ಸಾಕಷ್ಟು ಗೊಂದಲ ಮೂಡಿಸುತ್ತದೆ.


    ಇದು ಅನೇಕ ಆರೋಗ್ಯ ಸಮಸ್ಯೆಗಳ ಲಕ್ಷಣ ಆಗಿರಬಹುದು. ಇದಕ್ಕೆ ಕೆಲವು ಸಂಭವನೀಯ ಕಾರಣಗಳಿವೆ ಅವುಗಳ ಬಗ್ಗೆ ನೋಡೋಣ.




    ಆಮ್ಲೀಯತೆ ಸಮಸ್ಯೆ


    ಬಲ ಭಾಗದ ಕಿಬ್ಬೊಟ್ಟೆ ನೋವಿನ ಹಿಂದಿನ ಸಾಮಾನ್ಯ ಕಾರಣ ಅಂದ್ರೆ ಎದೆಯುರಿ ಸಮಸ್ಯೆ. ಇದು ಸಾಮಾನ್ಯವಾಗಿ ಆಸಿಡ್ ರಿಫ್ಲಕ್ಸ್‌ ಸಮಸ್ಯೆಯಿಂದ ಆರಂಭವಾಗುತ್ತದೆ. ಇದನ್ನು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಎಂದೂ ಕರೆಯುತ್ತಾರೆ.


    ಆಮ್ಲ ಹಿಮ್ಮುಖ ಹರಿವು, ಹೊಟ್ಟೆಯ ಆಮ್ಲ ಗಂಟಲು ಮತ್ತು ಹೊಟ್ಟೆ ಸಂಪರ್ಕಿಸುವ ಟ್ಯೂಬ್‌ ಗೆ ಹಿಂತಿರುಗಿದರೆ ಈ ರೀತಿಯ ಸಮಸ್ಯೆ ಆಗುತ್ತದೆ. ಇದರಿಂದ ಎದೆ ಹಾಗೂ ಗಂಟಲಿನಲ್ಲಿ ಸುಡುವ ಸಂವೇದನೆ ಸಮಸ್ಯೆ ಉಂಟಾಗುತ್ತದೆ.


    ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಮಸ್ಯೆ


    ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಮಸ್ಯೆಯು ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾದಾಗ ಉಂಟಾಗುತ್ತದೆ. ಈ ರೋಗವು ಯಕೃತ್ತಿನ ಸಿರೋಸಿಸ್ ಉಂಟು ಮಾಡುತ್ತದೆ.


    ಅದರ ರೋಗಿಗಳು ರೋಗಲಕ್ಷಣ ತೋರಿಸುವುದಿಲ್ಲ. ರೋಗ ಲಕ್ಷಣಗಳು ಹೊಟ್ಟೆ ನೋವು, ಹೊಟ್ಟೆ ತುಂಬಿದ ಭಾವನೆ ಉಂಟು ಮಾಡುತ್ತದೆ.


    ಅಪೆಂಡಿಸೈಟಿಸ್ ಸಮಸ್ಯೆ


    ನಿಮ್ಮ ಹೊಟ್ಟೆಯ ಕೆಳಗಿನ ಬಲಭಾಗದಲ್ಲಿರುವ ಕೊಲೊನ್‌ ಇದರಲ್ಲಿ ಉರಿಯೂತ ಉಂಟಾದರೆ ಅದನ್ನು ಅಪೆಂಡಿಸೈಟಿಸ್ ಎಂದು ಕರೆಯುತ್ತಾರೆ. ಇದು ಹೊಟ್ಟೆ ನೋವು ಉಂಟು ಮಾಡುತ್ತದೆ. ಇದು ನಿಮ್ಮ ಹೊಟ್ಟೆಯ ಮಧ್ಯ ಭಾಗದಲ್ಲಿ ಶುರುವಾಗುತ್ತದೆ. ಕೆಳಗಿನ ಬಲಗೈಯ ಕಡೆಗೆ ಚಲಿಸುತ್ತದೆ.


    ಸಾಂದರ್ಭಿಕ ಚಿತ್ರ


    ಕ್ಯಾನ್ಸರ್ ಸಮಸ್ಯೆ


    ಕೆಲವು ರೀತಿಯ ಕ್ಯಾನ್ಸರ್ ಸಮಸ್ಯೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವುಂಟು ಮಾಡುತ್ತದೆ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಉಂಟಾಗುತ್ತದೆ. ಹೊಟ್ಟೆಯ ಈ ಭಾಗದಲ್ಲಿ ದೀರ್ಘಕಾಲ ನೋವು ಇದ್ದರೆ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.


    ಮೂತ್ರಪಿಂಡ ಕಾಯಿಲೆ


    ಮೂತ್ರಪಿಂಡ ಹೊಟ್ಟೆಯ ಮೇಲಿನ ಬಲಭಾಗದಲ್ಲಿದೆ. ಕಿಡ್ನಿಯಲ್ಲಿ ಉಂಟಾಗುವ ಸಣ್ಣ ಪುಟ್ಟ ತೊಂದರೆಗಳು, ಅಡಚಣೆಯಿಂದ ಹೊಟ್ಟೆಯ ಮೇಲಿನ ಭಾಗದಲ್ಲಿ ನೋವು ಉಂಟಾಗುತ್ತದೆ. ಇದು ಮೂತ್ರಪಿಂಡದ ಸೋಂಕು ಮತ್ತು ಮೂತ್ರಪಿಂಡದ ಕಲ್ಲು ಸಮಸ್ಯೆ ಹಾಗೂ ಮೂತ್ರಪಿಂಡದ ಕಾಯಿಲೆ ಉಂಟು ಮಾಡುತ್ತದೆ.


    ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!


    ಇಷ್ಟೇ ಅಲ್ಲದೇ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ನೋವು ಬರುವುದು ಪಿತ್ತದಲ್ಲಿ ಕಲ್ಲು ಉಂಟಾಗುವುದು, ಪಿತ್ತಕೋಶ ಸಂಬಂಧಿ ಸಮಸ್ಯೆ ಉಂಟು ಮಾಡುತ್ತದೆ. ಕಿಬ್ಬೊಟ್ಟೆ ನೋವು, ಕರುಳಿನ ತೊಂದರೆ, ಮಲಬದ್ಧತೆ, ಆಹಾರ ಅಲರ್ಜಿ, ಲ್ಯಾಕ್ಟೋಸ್ ಅಸಹಿಷ್ಣುತೆ, ಆಹಾರ ವಿಷ ಮತ್ತು ಹೊಟ್ಟೆಯ ಸೋಂಕು ಉಂಟಾಗುತ್ತದೆ.

    Published by:renukadariyannavar
    First published: