Body Oil vs. Lotion: ಬಾಡಿ ಆಯಿಲ್ - ಬಾಡಿ ಲೋಷನ್ ಯಾವುದು ಉತ್ತಮ ಆಯ್ಕೆ- ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ ..

Difference Between body oil and Lotion: ಲೋಷನ್‌ಗಳು ಮತ್ತು ಮಾಯಿಶ್ಚರೈಸರ್‌ಗಳಿಗೆ ಹೋಲಿಸಿದರೆ ದೇಹದ ಎಣ್ಣೆಗಳನ್ನ ಬೇಸಿಗೆಯ ಕಾಲದಲ್ಲಿ ಬಳಸಲು ಉತ್ತಮವಾದ ಆಯ್ಕೆ. ಬಾಡಿ ಆಯಿಲ್ ಹೀರಿಕೊಳ್ಳುವ ಗುಣ ಲಕ್ಷಣಗಳಿಗೆ ಹೆಸರುವಾಸಿಯಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚರ್ಮವನ್ನು(Skin) ಮೃದುವಾಗಿಸಲು ಮತ್ತು ಹೈಡ್ರೇಟ್ ಆಗಿಡುವುದು ಸೇರಿದಂತೆ ಯಾವುದೇ ದೇಹದ ಆರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಎಣ್ಣೆಗಳು(Body Oil) ಮತ್ತು ಲೋಷನ್‌ಗಳು(Body Lotion) ಎಷ್ಟು ಉತ್ತಮವೆಂದು ನಮಗೆಲ್ಲರಿಗೂ ತಿಳಿದಿದೆ. ಬಾಡಿ ಮಸಾಜ್‌ಗೆ ಬಾಡಿ ಆಯಿಲ್ ಮತ್ತು ಲೋಷನ್ ಅನ್ನು ಬಳಸುವುದು ಎಲ್ಲರಿಗೂ ಗೊತ್ತಿರುವುದೇ. ಈಗಲೂ ಬಾಡಿ ಆಯಿಲ್ ಮತ್ತು ಲೋಷನ್‌ಗೆ ಬೇಡಿಕೆ ಕಡಿಮೆಯಾಗಿಲ್ಲ. ಎಣ್ಣೆ ಒಳ್ಳೆಯ ಆಯ್ಕೆಯ ಅಥವಾ ಲೋಷನ್​ ಎಂಬುದು ಹಲವಾರು ಜನರಿಗೆ ದೊಡ್ಡ ಪ್ರಶ್ನೆಯಾಗಿದೆ.  ನಿಮಗೂ ಈ ಅನುಮಾನವಿದ್ದಲ್ಲಿ ಅದಕ್ಕೆ ಪರಿಹಾರ ಇಲ್ಲಿದೆ.

ಬಾಡಿ ಆಯಿಲ್ ನಿಜವಾಗಿಯೂ ಲೋಷನ್ ಗಿಂತ ಉತ್ತಮವಲ್ಲ, ಆದರೆ ಇದರರ್ಥ ಲೋಷನ್ ದೇಹದ ಎಣ್ಣೆಗಿಂತ ಉತ್ತಮ ಎಂದು ಅರ್ಥವಲ್ಲ. ಒಂದು ಇನ್ನೊಂದಕ್ಕಿಂತ ಉತ್ತಮ ಎಂದು ಹೇಳಲಾಗುವುದಿಲ್ಲ. ನಿಮ್ಮ ದೇಹವನ್ನು ತೇವಗೊಳಿಸಲು ಎರಡೂ ಉತ್ಪನ್ನಗಳು ಉತ್ತಮವಾಗಿವೆ.ಪ್ರತಿಯೊಂದೂ ತನ್ನದೇ ಆದ ಉಪಯೋಗಗಳನ್ನು ಹೊಂದಿದೆ. ಮತ್ತು ಒಂದರ ಮೇಲೆ ಇನ್ನೊಂದನ್ನು ಆಯ್ಕೆ ಮಾಡಲು ಪ್ರಯತ್ನಿಸುವ ಬದಲು, ಪ್ರತಿಯೊಂದನ್ನು ಯಾವಾಗ ಬಳಸಬೇಕೆಂದು  ತಿಳಿಯುವುದು ಉತ್ತಮ. ಕೆಲವೊಮ್ಮೆ ನೀವು ಎಣ್ಣೆ ಮತ್ತು ಕೆಲವೊಮ್ಮೆ ಲೋಷನ್ ಉತ್ತಮವಾಗಿ ಹೊಂದಿಕೊಳ್ಳಬಹುದು.

ಬಾಡಿ ಆಯಿಲ್ ಮತ್ತು ಲೋಷನ್ ವ್ಯತ್ಯಸ

ಇವರೆರಡರ ನಡುವೆ  ಪ್ರಮುಖ ವ್ಯತ್ಯಾಸವೆಂದರೆ ಇದರಲ್ಲಿರುವ ಅಂಶಗಳು. ಹೌದು, ಬಾಡಿ ಆಯಿಲ್‌ಗೆ ಬಾದಾಮಿ, ತೆಂಗಿನಕಾಯಿ, ಆವಕಾಡೊ, ಜೊಜೊಬಾ ಇತ್ಯಾದಿ ಬೀಜಗಳನ್ನು ಮತ್ತು ತರಕಾರಿಗಳನ್ನು ಬಳಸಿ ತಯಾರಿಸಲಾಗುತ್ತದೆ. ಲೋಷನ್‌ಅನ್ನು ವಾಟರ್-ಇನ್-ಆಯಿಲ್ ಅಥವಾ ಆಯಿಲ್-ಇನ್-ವಾಟರ್ ಆಧಾರಿತ ತಯಾರಿಸಲಾಗುತ್ತದೆ. ಇವೆರಡೂ ಚರ್ಮವನ್ನು ಹೈಡ್ರೇಟ್ ಮಾಡಲು ಅಥವಾ ಮೊಯಿಶ್ಚರೈಸ್ ಮಾಡಲು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: ನೈಲ್ ಪಾಲಿಶ್ ಡ್ರೈ ಆಗಿದೆ ಅಂತ ಬೇಸರ ಬೇಡಾ.. ಈ ಹ್ಯಾಕ್ಸ್​ ಟ್ರೈ ಮಾಡಿ..

ಬಾಡಿ ಆಯಿಲ್

ಲೋಷನ್‌ಗಳು ಮತ್ತು ಮಾಯಿಶ್ಚರೈಸರ್‌ಗಳಿಗೆ ಹೋಲಿಸಿದರೆ ದೇಹದ ಎಣ್ಣೆಗಳನ್ನ ಬೇಸಿಗೆಯ ಕಾಲದಲ್ಲಿ ಬಳಸಲು ಉತ್ತಮವಾದ ಆಯ್ಕೆ. ಬಾಡಿ ಆಯಿಲ್ ಹೀರಿಕೊಳ್ಳುವ ಗುಣ ಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಬಾಡಿ ಆಯಿಲ್ ಚರ್ಮದ ಲಿಪಿಡ್ ಅಂಶವನ್ನು  ಹೊಂದಿರುತ್ತದೆ. ಚರ್ಮದಲ್ಲಿ ಮೇದೋಗ್ರಂಥಿಗಳ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ, ಬೆಚ್ಚಗಿನ ತಾಪಮಾನದಲ್ಲಿ ನಾವು ಹೆಚ್ಚು ಚರ್ಮದ ಬಗ್ಗೆ ಕಾಳಜಿವಹಿಸುತ್ತೇವೆ.  ಹಾಗಾಗಿ ಎಣ್ಣೆಯು ನಿಮ್ಮ ಕೈ ಮತ್ತು ಕಾಲುಗಳ ಮೇಲೆ ನೈಸರ್ಗಿಕವಾಗಿ ಹೊಳಪನ್ನು  ಹೆಚ್ಚಿಸಲು ಸಹಾಯ ಮಾಡುತ್ತದೆ.

ಬಾಡಿ ಲೋಷನ್

ಚರ್ಮದಲ್ಲಿನ ಪೋಷಕಾಂಶಗಳನ್ನು  ಜಾಗೃತಗೊಳಿಸಲು ಎಣ್ಣೆಗಳು ಸಹಾಯ ಮಾಡುತ್ತವೆ, ಶುಷ್ಕತೆಯಿಂದ ತುರಿಕೆ ನಿವಾರಣೆಯವರೆಗೆ ವಿವಿಧ ಚರ್ಮದ  ಆರೋಗ್ಯ ಸಮಸ್ಯೆಗಳಿಗೆ ಲೋಷನ್‌ಗಳು ಕೆಲಸ ಮಾಡುತ್ತವೆ. ಸೂಕ್ಷ್ಮ ಅಥವಾ ಎಣ್ಣೆಯುಕ್ತ ಚರ್ಮ ಹೊಂದಿರುವವರಿಗೆ  ಲೋಷನ್​ ಸೂಕ್ತ ಆಯ್ಕೆಯಾಗಿದೆ.

ಬಾಡಿ ಲೋಷನ್‌ಗಳಲ್ಲಿ ಮುಖ್ಯವಾಗಿ ಸೆರಾಮೈಡ್‌ಗಳು ಮತ್ತು ಹೈಲುರಾನಿಕ್ ಆಮ್ಲವಿದೆ. ದೇಹದ ಎಣ್ಣೆಯು ಲೋಷನ್ ಗಿಂತ ಹೆಚ್ಚು  ತೇವಾಂಶದಿಂದ ಕೂಡಿದೆ ಎಂದು ನೀವು ಭಾವಿಸಬಹುದು, ಆದರೆ ಅದು ಯಾವಾಗಲೂ ಹಾಗಲ್ಲ. ಲೋಷನ್‌ಗಳನ್ನು ನೀರಿನಿಂದ ತಯಾರಿಸಲಾಗುತ್ತದೆ, ಇದು ನಿಮ್ಮ ಚರ್ಮವು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಲೋಷನ್‌ಗಳು ಸಾಮಾನ್ಯವಾಗಿ ಎಣ್ಣೆಗಳು ಮತ್ತು ನೀರಿನ ಮಿಶ್ರಣವಾಗಿದ್ದು ತೇವಾಂಶದ ಅಗತ್ಯವಿರುವ ಚರ್ಮಕ್ಕಾಗಿ ಅವುಗಳನ್ನು  ಬಳಕೆ ಮಾಡಬಹುದು.

ಆಯ್ಕೆ ಮಾಡುವುದು ಹೇಗೆ?

ನಿಮ್ಮ ಚರ್ಮದ ಪ್ರಕಾರ ಮತ್ತು ಅಗತ್ಯತೆ, ನಿಮ್ಮ  ಪ್ರದೇಶದ ಹವಾಮಾನ ಸ್ಥಿತಿ ಆಧಾರದ ಮೇಲೆ ನೀವು ಈ ಆಯ್ಕೆಯನ್ನು ಮಾಡಬಹುದು. ಶುಷ್ಕ ಚರ್ಮಕ್ಕೆ ಬಾಡಿ ಆಯಿಲ್ ಸೂಕ್ತವಾಗಿದ್ದರೂ, ಲೋಷನ್‌’ಗಳು ಹೆಚ್ಚು ಪ್ರಯೋಜನ ನೀಡುತ್ತದೆ.  ಮತ್ತು ಯಾರು ಬೇಕಾದರೂ ಬಳಸಬಹುದು. ಬಾಡಿ ಆಯಿಲ್ ಚರ್ಮದ ಶೀತ ವಾತಾವರಣವಿರುವ ಸ್ಥಳಗಳಲ್ಲಿ ಇರುವ ವ್ಯಕ್ತಿಗಳು ಹೆಚ್ಚು ಬಳಸಬೇಕು ಎಂದು ವೈದ್ಯರು  ಸಲಹೆ ನೀಡುತ್ತಾರೆ.

ಇದನ್ನೂ ಓದಿ: ನೀವು ಸಂತೋಷವಾಗಿರಬೇಕಾ ? ಹಾಗಾದ್ರೆ ಹಣ್ಣು -ತರಕಾರಿ ಹೆಚ್ಚು ತಿನ್ನಿ..

ಆದರೆ ಒಣ ಚರ್ಮದವರು ವಾಟರ್-ಇನ್-ಆಯಿಲ್ ಆಧಾರಿತ ಲೋಷನ್ ಮತ್ತು ಸಾಮಾನ್ಯದಿಂದ ಎಣ್ಣೆಯುಕ್ತ ಚರ್ಮದವರು ಆಯಿಲ್-ಇನ್-ವಾಟರ್ ಆಧಾರಿತ ಲೋಷನ್ ಅನ್ನು ಬಳಸುವುದು ಉತ್ತಮ ಎಂದು ವೈದ್ಯರು ಹೆಚ್ಚು ಸಲಹೆ ನೀಡುತ್ತಾರೆ.
Published by:Sandhya M
First published: