Vitamin B6 Food: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ

ದೇಹದ ಉತ್ತಮ ರಚನೆಗೆ ಮತ್ತು ಕಾರ್ಯಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶವೆಂದರೆ ಅದು ವಿಟಮಿನ್ ಬಿ 6. ಇದನ್ನು ಪಿರಿಡಾಕ್ಸಿನ್ ಎಂದೂ ಕರೆಯುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು ನಿಮ್ಮ ದೇಹಕ್ಕೆ ಹಲವು ಕಾರ್ಯಗಳನ್ನು ಮಾಡಲು ತುಂಬಾ ಅಗತ್ಯವಾಗಿರುವ ಜೀವಸತ್ವ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೇಹದ (Body) ಆರೋಗ್ಯಕ್ಕೆ (Health) ಮತ್ತು ದೇಹ ಫಿಸಿಕಲಿ ಮತ್ತು ಮೆಂಟಲಿ ಸ್ಟ್ರಾಂಗ್ (Strong) ಆಗಿರಲು ಜೀವಸತ್ವಗಳು (Nutrients) ಮತ್ತು ಪ್ರೊಟೀನ್ (Protein) ಬೇಕು. ದೇಹದ ಪ್ರತಿಯೊಂದು ಅಂಗಗಳು ಚೆನ್ನಾಗಿ ಕಾರ್ಯ ನಿರ್ವಹಿಸಿದಾಗ ವ್ಯಕ್ತಿಯು ಆರೋಗ್ಯಕರವಾಗಿ ಮತ್ತು ಉತ್ತಮ ಜೀವನ ನಡೆಸಲು ಸಾಧ್ಯ. ಯಾಕೆಂದರೆ ಆರೋಗ್ಯವೇ ಭಾಗ್ಯ. ಹಾಗಾಗಿ ದೇಹದ ಎಲ್ಲಾ ಅಂಗಗಳು ಚೆನ್ನಾಗಿ ಮತ್ತು ಉತ್ತಮವಾಗಿ ಕಾರ್ಯ ನಿರ್ವಹಿಸಲು ಎಲ್ಲಾ ರೀತಿಯ ಜೀವಸತ್ವಗಳು ಬೇಕು. ಜೀವಸತ್ವಗಳ ಕೊರತೆಯು ದೇಹದಲ್ಲಿ ಅನೇಕ ಆರೋಗ್ಯ ಸಮಸ್ಯೆ ಹುಟ್ಟು ಹಾಕುತ್ತದೆ. ದೇಹಕ್ಕೆ ಬೇಕಾದ ತುಂಬಾ ಮುಖ್ಯವಾದ ಜೀವಸತ್ವಗಳಲ್ಲಿ ವಿಟಮಿನ್ ಬಿ 6 ಕೂಡ ಒಂದು.

    ದೇಹಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶ ವಿಟಮಿನ್ ಬಿ 6

    ದೇಹದ ಉತ್ತಮ ರಚನೆಗೆ ಮತ್ತು ಕಾರ್ಯಕ್ಕೆ ಬೇಕಾದ ಅತ್ಯಗತ್ಯ ಪೋಷಕಾಂಶವೆಂದರೆ ಅದು ವಿಟಮಿನ್ ಬಿ 6. ಇದನ್ನು ಪಿರಿಡಾಕ್ಸಿನ್ ಎಂದೂ ಕರೆಯುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದೆ. ಇದು ನಿಮ್ಮ ದೇಹಕ್ಕೆ ಹಲವು ಕಾರ್ಯಗಳನ್ನು ಮಾಡಲು ತುಂಬಾ ಅಗತ್ಯವಾಗಿರುವ ಜೀವಸತ್ವ ಆಗಿದೆ.

    ದೇಹದ ಚಯಾಪಚಯ ಕ್ರಿಯೆಗೆ ವಿಟಮಿನ್ ಬಿ 6 ಅವಶ್ಯಕ

    ವಿಟಮಿನ್ B6 ಪ್ರೋಟೀನ್ಗಳು, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ಗಳ ದೇಹದ ಚಯಾಪಚಯ ಕ್ರಿಯೆಗೆ ಮತ್ತು ಕೆಂಪು ರಕ್ತ ಕಣಗಳು ಮತ್ತು ನರಪ್ರೇಕ್ಷಕಗಳ ರಚನೆಗೆ ಅವಶ್ಯಕ ಆಗಿದೆ. ಈ ಪೋಷಕಾಂಶದ ಕೊರತೆ ನೀವು ಚರ್ಮದ ದದ್ದು,

    ಇದನ್ನೂ ಓದಿ: ಹಸೆಮಣೆ ಏರುವ ಮೊದಲು ವಧು ಈ ವಿಷಯ ತಿಳಿದರೆ ದಾಂಪತ್ಯ ಮತ್ತಷ್ಟು ಸುಂದರ

    ತುಟಿ ಒಡೆಯುವುದು, ಗಂಟಲು ಊದಿಕೊಳ್ಳುವಿಕೆ, ರೋಗ ನಿರೋಧಕ ಶಕ್ತಿ ದುರ್ಬಲವಾಗುವುದು, ಆಯಾಸ, ಕೈ ಮತ್ತು ಕಾಲುಗಳಲ್ಲಿ ನೋವು, ರೋಗಗ್ರಸ್ತವಾಗುವಿಕೆ ಅನೇಕ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ.

    ವ್ಯಕ್ತಿಯ ದೇಹವು ವಿಟಮಿನ್ ಬಿ 6 ನ್ನು ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ನೀವು ಅದನ್ನು ಆಹಾರ ಅಥವಾ ಪೂರಕಗಳಿಂದ ಪಡೆಯಬೇಕು. ವಿಟಮಿನ್ ಬಿ 6 ಕೊರತೆ ನಿವಾರಿಸಲು ನೀವು ಯಾವ ಪದಾರ್ಥಗಳ ಸೇವನೆ ಮಾಡಬೇಕು ಎಂಬುದನ್ನು ನಾವು ಇಲ್ಲಿ ನೋಡೋಣ.

    ಕ್ಯಾರೆಟ್

    ಒಂದು ವರದಿಯ ಪ್ರಕಾರ, ವಿಟಮಿನ್ ಬಿ 6 ಕ್ಯಾರೆಟ್‌ನಲ್ಲಿ ಸಮೃದ್ಧವಾಗಿ ಕಂಡು ಬರುತ್ತದೆ. ಈ ತರಕಾರಿ ವಿಟಮಿನ್ ಸಿ, ಎ, ಕಬ್ಬಿಣ, ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳ ಆಗರವಾಗಿದೆ. ಕ್ಯಾರೆಟ್ ಒಂದು ಲೋಟ ಹಾಲಿಗಿಂತ ಹೆಚ್ಚು ವಿಟಮಿನ್ ಬಿ 6 ನ್ನು ಹೊಂದಿದೆ. ಜೊತೆಗೆ ಕ್ಯಾರೆಟ್ ಫೈಬರ್ ಮತ್ತು ವಿಟಮಿನ್ ಎ ಯ ಉತ್ತಮ ಮೂಲವಾಗಿದೆ.

    ಹಾಲು

    ಹಾಲು ಕ್ಯಾಲ್ಸಿಯಂನ ಉತ್ತಮ ಮೂಲ. ಆದರೆ ಇದು ವಿಟಮಿನ್ ಬಿ 6 ನ ಉಗ್ರಾಣವಾಗಿದೆ. ಪ್ರತಿದಿನ ಹಾಲು ಸೇವಿಸುವುದು ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸಲು ಮತ್ತು ಜೀರ್ಣಕಾರಿ ಸಮಸ್ಯೆ ತಪ್ಪಿಸಲು ಸಹಾಯ ಮಾಡುತ್ತದೆ.

    ಬಾಳೆಹಣ್ಣು

    ನೀವು ತೂಕ ಹೆಚ್ಚಿಸಲು ಬಯಸಿದರೆ ಬಾಳೆಹಣ್ಣು ನಿಮಗೆ ಉತ್ತಮ ಆಯ್ಕೆಯಾಗಿದೆ. ವಿಟಮಿನ್ ಬಿ 6 ಜೊತೆಗೆ ಬಾಳೆಹಣ್ಣು ವಿವಿಧ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ಒದಗಿಸುತ್ತದೆ.

    ಸೊಪ್ಪು

    ಹಸಿರು ಎಲೆಗಳ ತರಕಾರಿ ಕಬ್ಬಿಣ, ಫೋಲೇಟ್ ಮತ್ತು ಪೊಟ್ಯಾಸಿಯಮ್ನ ಹೊಂದಿದೆ. ಇದು ರಕ್ತಹೀನತೆ ಮತ್ತು ದುರ್ಬಲ ಮೂಳೆ ಸಮಸ್ಯೆ ನಿವಾರಿಸುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಸೊಪ್ಪನ್ನು ಸೇರಿಸಿ.

    ಇದನ್ನೂ ಓದಿ: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

    ಕೋಳಿ ಯಕೃತ್ತು

    ವಿಟಮಿನ್ ಬಿ 6 ಕೊರತೆ ಪೂರೈಸಲು ನೀವು ನಿಯಮಿತವಾಗಿ ಚಿಕನ್ ಲಿವರ್ ಸೇವಿಸಬೇಕು. ವಿಟಮಿನ್ B6 ಜೊತೆಗೆ ಇದು ಫೋಲೇಟ್ ಮತ್ತು ಕಬ್ಬಿಣದಂಶ ನೀಡುತ್ತದೆ. ಇದರ ಸೇವನೆ ಅನೇಕ ಪ್ರಯೋಜನ ನೀಡುತ್ತದೆ.
    Published by:renukadariyannavar
    First published: