Itching Problem: ಚರ್ಮದ ವಿವಿಧ ಭಾಗಗಳಲ್ಲಿ ತುರಿಕೆ! ಇದಕ್ಕೇನು ಪರಿಹಾರ?

ನಿಮ್ಮ ತುರಿಕೆಗೆ ಕಾರಣ ಏನು ಎಂಬುದನ್ನು ನೀವು ಮೊದಲು ಕಂಡುಕೊಳ್ಳಬೇಕು. ನಿಮ್ಮ ಚರ್ಮವು ಸಾಮಾನ್ಯ, ಕೆಂಪು, ಒರಟು ಕಾಣಿಸಬಹುದು. ಹೆಚ್ಚು ಹಾಗೂ ಪದೇ ಪದೇ ತುರಿಸುವುದು ಚರ್ಮ ಒರಟಾಗಲು ಕಾರಣವಾಗುತ್ತದೆ. ರಕ್ತಸ್ರಾವ ಉಂಟಾಗಲು ಕಾರಣವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ತುರಿಕೆ (Itching) ಚರ್ಮವು (Skin) ಅಹಿತಕರ, ಕಿರಿಕಿರಿ ಉಂಟು ಮಾಡುವ ಕೆಟ್ಟ ಸಂವೇದನೆಯಾಗಿದೆ. ಹಲವು ರೀತಿಯ ಚರ್ಮ ಕಾಯಿಲೆಗಳು (Skin Disease), ಹೆಚ್ಚು ತುರಿಕೆ ಉಂಟು ಮಾಡುತ್ತವೆ. ಸಂವೇದನೆ ಉಂಟಾದಾಗ ಕೆರೆಯುವುದು ಸ್ವಲ್ಪ ಸಮಾಧಾನ ನೀಡುತ್ತದೆ. ಆದರೆ ಕೆರೆತ ಚರ್ಮದ ಗಾಯ, ತುರಿಕೆಯನ್ನು ಮತ್ತಷ್ಟು ಹರಡುತ್ತಾ ಹೋಗುತ್ತದೆ. ಇದು ಕಾಯಿಲೆ ವಾಸಿಯಾಗುವ ಬದಲು ಹೆಚ್ಚಾಗಲು ಕಾರಣವಾಗುತ್ತದೆ. ಚರ್ಮ ಸಮಸ್ಯೆಗೆ ತುರಿಸಿದಾಗ ಅದು ನೀವು ಸ್ವಲ್ಪ ಸಮಯದವರೆಗೆ ಪರಿಹಾರ ಅನುಭವಿಸಲು ಸಹಾಯ ಮಾಡುತ್ತದೆ. ಇದನ್ನು ಪ್ರುರಿಟಸ್ (ಪ್ರೂ-RIE-tus) ಎಂದೂ ಕರೆಯುತ್ತಾರೆ. ಚರ್ಮದ ತುರಿಕೆ ಹೆಚ್ಚಾಗಿ ಶುಷ್ಕತೆಯಿಂದ ಉಂಟಾಗುತ್ತದೆ.

  ಐದು ಪ್ರಕಾರದ ತುರಿಕೆಗಳಿವೆ

  ವಯಸ್ಸಾದವರಲ್ಲಿ ಚರ್ಮದ ತುರಿಕೆ ಸಮಸ್ಯೆ ಸಾಮಾನ್ಯವಾಗಿ ಇರುತ್ತದೆ. ಏಕೆಂದರೆ ವಯಸ್ಸಾದಂತೆ ಚರ್ಮವು ಒಣಗುತ್ತದೆ. ಇದು ತುರಿಕೆಗೆ ಕಾರಣವಾಗುತ್ತದೆ. NCBI ವರದಿ ಪ್ರಕಾರ, ಐದು ವಿಧದ ತುರಿಕೆಗಳಿವೆ. ಇದರಲ್ಲಿ ನ್ಯೂರೋಜೆನಿಕ್, ಸೈಕೋಜೆನಿಕ್,

  ನ್ಯೂರೋಪತಿಕ್ ಮತ್ತು ಪ್ರುರಿಟೋಸೆಪ್ಟಿವ್ ವಿಧದ ತುರಿಕೆ ಇವೆ. ಇದು ಅನೇಕ ಗಂಭೀರ ಕಾಯಿಲೆಗಳ ಸಂಕೇತ ಆಗಿದೆ. ಇದರ ಹೊರತಾಗಿ ಉರಿಯೂತ ಅಥವಾ ಯಾವುದೇ ಚರ್ಮದ ಹಾನಿ ಉಂಟಾದಾಗಲೂ ತುರಿಕೆ ಉಂಟಾಗುತ್ತದೆ.

  ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

  ನಿಮ್ಮ ತುರಿಕೆಗೆ ಕಾರಣ ಏನು ಎಂಬುದನ್ನು ನೀವು ಮೊದಲು ಕಂಡುಕೊಳ್ಳಬೇಕು. ನಿಮ್ಮ ಚರ್ಮವು ಸಾಮಾನ್ಯ, ಕೆಂಪು, ಒರಟು ಕಾಣಿಸಬಹುದು. ಹೆಚ್ಚು ಹಾಗೂ ಪದೇ ಪದೇ ತುರಿಸುವುದು ಚರ್ಮದ ಒರಟು ಪ್ರದೇಶಕ್ಕೆ ಕಾರಣವಾಗುತ್ತದೆ.

  ಅದು ರಕ್ತಸ್ರಾವ ಉಂಟಾಗಲು ಕಾರಣವಾಗುತ್ತದೆ. ಅಥವಾ ಸೋಂಕಿಗೆ ಒಳಗಾಗಬಹುದು. ಇದಕ್ಕೆ ನೀವು ಮನೆಯಲ್ಲಿ ಚಿಕಿತ್ಸೆ ನೀಡಬಹುದು. ಇದರ ನಂತರವೂ ತುರಿಕೆ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆಯಿರಿ.

  ಚರ್ಮದ ತುರಿಕೆ ಯಾವ ಗಂಭೀರ ಕಾಯಿಲೆಗಳ ಸಂಕೇತ?

  ಜೆರೋಸಿಸ್, ಎಸ್ಜಿಮಾ, ಸೋರಿಯಾಸಿಸ್, ಪಿತ್ತಜನಕಾಂಗದ ಕಾಯಿಲೆ, ಮೂತ್ರಪಿಂಡ ಕಾಯಿಲೆ, ರಕ್ತಹೀನತೆ, ಮಧುಮೇಹ, ಥೈರಾಯ್ಡ್, ಮಲ್ಟಿಪಲ್ ಮೈಲೋಮಾ ಅಥವಾ ಲಿಂಫೋಮಾ, ಮಲ್ಟಿಪಲ್ ಸ್ಕ್ಲೆರೋಸಿಸ್, ಆತಂಕ, ಖಿನ್ನತೆ, ಸುಟ್ಟ ಗಾಯ ಮತ್ತು ಅಲರ್ಜಿ.

  ಅಡುಗೆ ಸೋಡಾ ತುರಿಕೆಗೆ ಮನೆಮದ್ದು

  ಒಂದು ಅಧ್ಯಯನದ ಪ್ರಕಾರ, ಅಡಿಗೆ ಸೋಡಾ ನೀರಿನಿಂದ ಸ್ನಾನ ಮಾಡುವುದು ತುರಿಕೆಗೆ ಪರಿಹಾರ ನೀಡುತ್ತದೆ. ವಾಸ್ತವದಲ್ಲಿ ಇದು ಮೊಡವೆ ನಿವಾರಿಸುತ್ತದೆ. ಉರಿಯೂತದ ಗುಣಲಕ್ಷಣ ಹೊಂದಿದೆ. ಈ ನೈಸರ್ಗಿಕ ಆಮ್ಲಗಳು ತುರಿಕೆ ತೊಡೆದು ಹಾಕಲು ಕೆಲಸ ಮಾಡುವ ನ್ಯೂಟ್ರಾಲೈಸರ್‌ಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಅಧ್ಯಯನ ಹೇಳಿದೆ.

  ತುಳಸಿ ತುರಿಕೆಗೆ ಪರಿಹಾರ ನೀಡುತ್ತದೆ

  ಸಂಶೋಧನೆಯೊಂದರ ಪ್ರಕಾರ, ತುಳಸಿಯ ಬಳಕೆ ತುರಿಕೆ ಸಮಸ್ಯೆ ಕಡಿಮೆ ಮಾಡುತ್ತದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಸೋಂಕಿನ ಅಪಾಯ ಕಡಿಮೆ ಮಾಡುತ್ತದೆ. ತುಳಸಿಯಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಚರ್ಮವನ್ನು ರಕ್ಷಿಸುತ್ತವೆ. ತುಳಸಿ ಎಲೆಗಳನ್ನು ಪುಡಿಮಾಡಿ ಅಥವಾ ನೀರಿನಲ್ಲಿ ಕುದಿಸಿ ತುರಿಕೆ ಇರುವ ಜಾಗಕ್ಕೆ ಹಚ್ಚಿ ತಕ್ಷಣದ ಪರಿಹಾರ ಸಿಗುತ್ತದೆ.

  ತುರಿಕೆಗೆ ಬೇವು ಪರಿಣಾಮಕಾರಿ

  ವೈದ್ಯಕೀಯ ಸಂಶೋಧನೆ ಪ್ರಕಾರ, ತುರಿಕೆ ನಿವಾರಿಸುವ ಮೂಲಕ ನೋವು ತಡೆಗೆ ಬೇವು ಕೆಲಸ ಮಾಡುತ್ತದೆ. ಬೇವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣ ಹೊಂದಿದೆ. ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ ಸೋಂಕು ಮತ್ತು ಅವುಗಳಿಂದ ಉಂಟಾಗುವ ತುರಿಕೆಯಿಂದ ಚರ್ಮವನ್ನು ರಕ್ಷಿಸುತ್ತದೆ. ಬೇವಿನ ಸೊಪ್ಪನ್ನು ನೀರಿನೊಂದಿಗೆ ರುಬ್ಬಿ ಪೇಸ್ಟ್ ಮಾಡಿ, ತುರಿಕೆಯಿರುವ  ಇರುವ ಜಾಗಕ್ಕೆ ಹಚ್ಚಿ. ಬೇವಿನ ಸೊಪ್ಪನ್ನು ನೀರಿನಲ್ಲಿ ಕುದಿಸಿದರೆ ಬೇಗ ಪರಿಹಾರ ದೊರೆಯುತ್ತದೆ.

  ತುರಿಕೆಗೆ ಕಡಿಮೆ ಮಾಡಲು ಯಾವ ಪದಾರ್ಥ ಸೇವನೆ ಉತ್ತಮ?

  ತುರಿಕೆ ವೇಳೆ ನೀವು ಚಿಕನ್ ಸೂಪ್, ಒಮೆಗಾ -3 ಸಮೃದ್ಧ ಆಹಾರ, ಬಾಳೆಹಣ್ಣು, ಹಣ್ಣು, ತಾಜಾ ತರಕಾರಿ ಇತ್ಯಾದಿ ಸೇವಿಸಿ. ಇದರ ಪೋಷಕಾಂಶಗಳು ತುರಿಕೆ ನೋವು ಕಡಿಮೆ ಮಾಡುತ್ತದೆ.

  ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು  

  ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

  ನಿಮ್ಮ ತುರಿಕೆ ಎರಡು ವಾರಗಳಿಗಿಂತ ಹೆಚ್ಚು ಕಾಲವಿದ್ದಾಗ ಹಾಗೂ ಮನೆಮದ್ದುಗಳಿಂದ ಪರಿಹಾರ ಸಿಗದಿದ್ದಾಗ, ದೈನಂದಿನ ದಿನಚರಿಯಲ್ಲಿ ಅಡಚಣೆ, ನಿದ್ರೆಗೆ ತೊಂದರೆ, ದೇಹದಾದ್ಯಂತ ತುರಿಕೆ, ತೂಕ ನಷ್ಟ, ಜ್ವರ ಅಥವಾ ರಾತ್ರಿ ಬೆವರುವಿಕೆ ಲಕ್ಷಣಗಳಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
  Published by:renukadariyannavar
  First published: