• Home
  • »
  • News
  • »
  • lifestyle
  • »
  • Health Care: ರಕ್ತಹೀನತೆ ಸಮಸ್ಯೆ ತಡೆಯಲು ಈ ಒಂದು ಆಹಾರ ಇದ್ರೆ ಸಾಕಂತೆ

Health Care: ರಕ್ತಹೀನತೆ ಸಮಸ್ಯೆ ತಡೆಯಲು ಈ ಒಂದು ಆಹಾರ ಇದ್ರೆ ಸಾಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಕ್ತಹೀನತೆ ಸಮಸ್ಯೆಗೆ ದೊಡ್ಡ ಕಾರಣ ಅಂದ್ರೆ ತಪ್ಪು ಆಹಾರ ಪದ್ಧತಿ. ಹಾಗೂ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುವುದು. ಆರೋಗ್ಯಕರ ಆಹಾರ ಮತ್ತು ಸರಿಯಾದ ಜೀವನಶೈಲಿ ಫಾಲೋ ಮಾಡಿದ್ರೆ ಅತ್ಯಂತ ಮುಖ್ಯ. ರಕ್ತಹೀನತೆಗೆ ದೊಡ್ಡ ಕಾರಣ ಅಂದ್ರೆ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಕೆಂಪು ರಕ್ತ ಕಣಗಳ ಕೊರತೆ ಉಂಟಾಗುವುದು.

ಮುಂದೆ ಓದಿ ...
  • Share this:

    ದೇಹದಲ್ಲಿ ರಕ್ತದ ಕೊರತೆ (Blood Deficiency) ಇದ್ದಾಗ ರಕ್ತಹೀನತೆ ಸಮಸ್ಯೆ (Anemia Problem) ಕಂಡು ಬರುತ್ತದೆ. ಈ ರಕ್ತಹೀನತೆ ಸಮಸ್ಯೆ ಉಂಟಾದಾಗ ದೇಹದಲ್ಲಿ ಹಿಮೋಗ್ಲೋಬಿನ್ (Hemoglobin) ಕಡಿಮೆ ಅಥವಾ ಕೊರತೆ ಉಂಟಾಗುತ್ತದೆ. ಹಾಗೂ ಕೆಂಪು ರಕ್ತ ಕಣಗಳು (Red Blood Cells) ಕಡಿಮೆ ಆಗಲು ಶುರುವಾಗುತ್ತದೆ. ಹೀಗಾಗಿ ಸ್ವಲ್ಪ ಕೆಲಸ ಮಾಡಿದರೂ, ನಡೆದರೂ ಸುಸ್ತಾಗುವುದು, ದಣಿವು, ತಲೆನೋವು, ಎದೆನೋವು, ತಲೆಸುತ್ತು, ಕೈಕಾಲು ನಡುಗುವುದು, ತಣ್ಣಗಾಗುವುದು, ಮರಗಟ್ಟುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ರಕ್ತಹೀನತೆ ಸಮಸ್ಯೆಯನ್ನು ಸಮಯಕ್ಕೆ ನಿಯಂತ್ರಿಸದೇ ಹೋದರೆ ಇದು ಇತರೆ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಇಲ್ಲಿ ನಾವು ರಕ್ತಹೀನತೆ ಸಮಸ್ಯೆಗೆ ಪರಿಹಾರ ನೀಡುವ ಆಹಾರಗಳ ಬಗ್ಗೆ ತಿಳಿಯೋಣ.


    ರಕ್ತಹೀನತೆ ಸಮಸ್ಯೆಗೆ ಪರಿಹಾರ


    ರಕ್ತಹೀನತೆ ಸಮಸ್ಯೆಗೆ ದೊಡ್ಡ ಕಾರಣ ಅಂದ್ರೆ ತಪ್ಪು ಆಹಾರ ಪದ್ಧತಿ. ಹಾಗೂ  ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುವುದು. ಆರೋಗ್ಯಕರ ಆಹಾರ ಮತ್ತು ಸರಿಯಾದ ಜೀವನಶೈಲಿ ಫಾಲೋ ಮಾಡಿದ್ರೆ ಅತ್ಯಂತ ಮುಖ್ಯ.


    ರಕ್ತಹೀನತೆಗೆ ಮುಖ್ಯ ಕಾರಣಗಳು


    ರಕ್ತಹೀನತೆಗೆ ದೊಡ್ಡ ಕಾರಣ ಅಂದ್ರೆ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಕೆಂಪು ರಕ್ತ ಕಣಗಳ ಕೊರತೆ ಉಂಟಾಗುವುದು. ತಪ್ಪಾದ ಆಹಾರ ಸೇವನೆ ದೇಹಕ್ಕೆ ಅಗತ್ಯ ಪೋಷಕಾಂಶಗಳ ಕೊರತೆ, ಪಿರಿಯಡ್ಸ್ ಸಮಯದಲ್ಲಿ ಅಧಿಕ ರಕ್ತಸ್ರಾವ ಮತ್ತು ಪೈಲ್ಸ್ ಸ್ಥಿತಿಯು ರಕ್ತಹೀನತೆ ಸಮಸ್ಯೆಗೆ ಕಾರಣವಾಗುತ್ತದೆ.




    ಜೀರ್ಣಾಂಗ ವ್ಯವಸ್ಥೆಯ ಅಸಮತೋಲನದಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ಸಿಗುವುದಿಲ್ಲ. ಭಾರತೀಯ ಯೋಗ ಗುರು ಡಾ. ಹಂಸಜಿ ಯೋಗೇಂದ್ರ ಅವರು ರಕ್ತಹೀನತೆ ತೊಂದರೆ ತಪ್ಪಿಸಲು ಕೆಲವು ಪ್ರಮುಖ ಆಹಾರಗಳ ಬಗ್ಗೆ ಹೇಳಿದ್ದಾರೆ.


    ಜೇನುತುಪ್ಪ


    ಹಂಸಾ ಜಿ ಅವರ ಪ್ರಕಾರ, ಕಬ್ಬಿಣ, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ತಾಮ್ರವು ಜೇನುತುಪ್ಪದಲ್ಲಿದೆ. ನಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್ ಹಣ್ಣುಗಳಲ್ಲಿ ಸಾಕಷ್ಟು ವಿಟಮಿನ್ ಸಿ ಇದೆ. ಇದು ದೇಹದಲ್ಲಿ ಕಬ್ಬಿಣದ ಪ್ರಮಾಣ ಇರಿಸುತ್ತದೆ. ಇದು ರಕ್ತಹೀನತೆ ಸ್ಥಿತಿ ತಡೆಯುತ್ತದೆ. ಪ್ರತಿದಿನ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ರಸ ಕುಡಿದರೆ ಉತ್ತಮ.


    ಬೀಟ್ರೂಟ್ ಜ್ಯೂಸ್ ಸೇವನೆ


    ನಿಯಮಿತವಾಗಿ ಒಂದು ಗ್ಲಾಸ್ ಬೀಟ್ರೂಟ್ ರಸ ಸೇವಿಸುವುದು ರಕ್ತಹೀನತೆ ಸಮಸ್ಯೆ ತೊಡೆದು ಹಾಕಲು ಸಹಾಯ ಮಾಡುತ್ತದೆ. ಬೀಟ್ರೂಟ್ ಕಬ್ಬಿಣ, ಕ್ಯಾಲ್ಸಿಯಂ ಅತ್ಯುತ್ತಮ ಮೂಲ. ಬೀಟ್ರೂಟ್ನಲ್ಲಿರುವ ಹಳದಿ ಪೋಷಕಾಂಶಗಳು ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ. ಕೆಂಪು ರಕ್ತ ಕಣಗಳು ರೂಪುಗೊಳ್ಳುತ್ತವೆ. ರಕ್ತಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.


    ಹಸಿರು ಸೊಪ್ಪು


    ರಕ್ತಹೀನತೆ ತೊಡೆದು ಹಾಕಲು ಪಾಲಕ್ ಹಾಗೂ ಹಸಿರು ಸೊಪ್ಪು ತರಕಾರಿ ಸೇವಿಸಿ. ಕಬ್ಬಿಣಾಂಶ ಹೇರಳವಾಗಿದೆ. ದೇಹದಲ್ಲಿ ಹಿಮೋಗ್ಲೋಬಿನ್  ಕಾಪಾಡುತ್ತದೆ. ಕೆಂಪು ರಕ್ತ ಕಣಗಳು ಸುಧಾರಿಸುತ್ತವೆ. ಪಾಲಕನ್ನು ರಸ, ಸಲಾಡ್ ಮತ್ತು ತರಕಾರಿ ರೂಪದಲ್ಲಿ ಸೇವಿಸಿ.


    ಖರ್ಜೂರ ಮತ್ತು ಒಣದ್ರಾಕ್ಷಿ


    ಖರ್ಜೂರದಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸತುವು ಸಮೃದ್ಧವಾಗಿದೆ. ಇದರೊಂದಿಗೆ ಸಾಕಷ್ಟು ವಿಟಮಿನ್ ಎ, ವಿಟಮಿನ್ ಕೆ, ಮೆಗ್ನೀಸಿಯಮ್ ಮತ್ತು ಫೋಲೇಟ್ ಇದೆ.


    ಒಣದ್ರಾಕ್ಷಿ ಕಬ್ಬಿಣ ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ. ದೇಹದಲ್ಲಿ ಕಬ್ಬಿಣವನ್ನು ನಿರ್ವಹಿಸುತ್ತದೆ. ಹಾಗಾಗಿ ನೀವು ಖರ್ಜೂರ ಮತ್ತು ಒಣದ್ರಾಕ್ಷಿಗಳನ್ನು ಉಪಹಾರ ಮತ್ತು ತಿಂಡಿಗಳಲ್ಲಿ ಸೇವನೆ ಮಾಡಿ.


    ದಾಳಿಂಬೆ ಹಣ್ಣು


    ದಾಳಿಂಬೆ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ. ದಾಳಿಂಬೆಯಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣದ ಜೊತೆಗೆ ಹಲವು ಪೋಷಕಾಂಶಗಳಿವೆ. ದಾಳಿಂಬೆಯಲ್ಲಿ ಆಸ್ಕೋರ್ಬಿಕ್ ಆಮ್ಲವಿದೆ. ದೇಹದಲ್ಲಿ ಆಸ್ಕೋರ್ಬಿಕ್ ಆಮ್ಲದ ಪ್ರಮಾಣ ರಕ್ತದ ಕಬ್ಬಿಣದ ಮಟ್ಟ ಹೆಚ್ಚಿಸುತ್ತದೆ. ಪಪ್ಪಾಯಿ, ಕಲ್ಲಂಗಡಿ ಇತ್ಯಾದಿಗಳು ಕಬ್ಬಿಣದ ಉತ್ತಮ ಮೂಲ.


    ಇದನ್ನೂ ಓದಿ: ಮದುವೆಯಲ್ಲಿ ಮದುಮಗಳು ಚಂದ್ರನಂತೆ ಹೊಳೆಯಬೇಕೇ? ನಿಮಗೆ ಗೊತ್ತಿರಲಿ ಈ ರಹಸ್ಯ!


    ಕಪ್ಪು ಎಳ್ಳು ಬೀಜಗಳು


    ಕಪ್ಪು ಎಳ್ಳಿನಲ್ಲಿ ಕಬ್ಬಿಣ, ತಾಮ್ರ ಮತ್ತು ಸತುವು ಹೇರಳವಾಗಿದೆ. ವಿಟಮಿನ್ ಇದೆ. ಇದು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Published by:renukadariyannavar
    First published: