Eye Health: ಮಂದ ದೃಷ್ಟಿ- ಕಣ್ಣಿನ ಸಮಸ್ಯೆಗೆ ಮನೆ ಮದ್ದು

ಡಿಜಿಟಲ್ ಪರದೆ ಮತ್ತು ಗಿಜ್ಮೋಸ್‌ಗಳ ಮೇಲೆ ಅತಿಯಾದ ಅವಲಂಬನೆ ಕಣ್ಣಿನ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ದೃಷ್ಟಿ ಮಂದವಾಗುವ ಸಾಮಾನ್ಯ ಕಣ್ಣಿನ ದೂರುಗಳು ಇದು ರೋಗದ ಆರಂಭಿಕ ಚಿಹ್ನೆ ಆಗಿರಬಹುದು. ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಮತ್ತು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸುವುದು ತುಂಬಾ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೀರ್ಘಕಾಲ (Long Time) ಮತ್ತು ತಡರಾತ್ರಿಯವರೆಗೆ (Late Night) ಮೊಬೈಲ್ (Mobile) ನೋಡುವುದು, ಕಂಪ್ಯೂಟರ್ (Computer) ಮತ್ತು ಲ್ಯಾಪ್‌ಟಾಪ್‌ನಲ್ಲಿ ದೀರ್ಘಕಾಲದ ಅವಧಿಯವರೆಗೆ ಕೆಲಸ (Work) ಮಾಡುವುದು, ಹೆಚ್ಚಿನ ಸಮಯ ಮೊಬೈಲ್ ಪರದೆ ನೋಡುವುದು, ಕಳಪೆ ಆಹಾರ ಸೇವನೆ ನಿಮ್ಮ ಕಣ್ಣಿನ (Eye) ದೃಷ್ಟಿಯನ್ನು ಅತ್ಯಂತ ಕೆಟ್ಟ ರೀತಿ ಪರಿಣಾಮ ಬೀರುತ್ತದೆ. ವಯಸ್ಸಾದಂತೆ ದೃಷ್ಟಿ ಹದಗೆಡುವುದು ಸಾಮಾನ್ಯ. ಆದರೆ ಇಂದಿನ ಕಾಲದಲ್ಲಿ ಚಿಕ್ಕವಯಸ್ಸಿನಲ್ಲೇ ದಪ್ಪ ಕನ್ನಡಕ ಬರುವುದು, ಕಣ್ಣಿನ ಆರೋಗ್ಯ ಹಾಳು ಮಾಡುತ್ತದೆ. ಅದೇ ವೇಳೆ  ಹೆಚ್ಚಿನ ವಯಸ್ಕರರು ತಮ್ಮ 30 ಅಥವಾ 40 ರ ದಶಕದ ಮಧ್ಯದಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆ ಹೊಂದಿರುವುದು ತುಂಬಾ ಸಾಮಾನ್ಯ.

  ಕಣ್ಣುಗಳಲ್ಲಿ ಕಂಡು ಬರುವ ನೋವು

  ಸಾಂಕ್ರಾಮಿಕ ಸಮಯದಲ್ಲಿ ಡಿಜಿಟಲ್ ಪರದೆ ಮತ್ತು ಗಿಜ್ಮೋಸ್‌ಗಳ ಮೇಲೆ ಅತಿಯಾದ ಅವಲಂಬನೆ ಸಮಸ್ಯೆಯನ್ನು ಮತ್ತಷ್ಟು ಹದಗೆಡಿಸುತ್ತದೆ. ದೃಷ್ಟಿ ಮಂದ, ಕಣ್ಣುಗಳ ಮೇಲೆ ಕಲೆ, ರಾತ್ರಿ ಹೊಳಪು, ಮಿನುಗುವ ದೀಪಗಳು ನೋಡಿದಾಗ ನೋವು, ಕಣ್ಣುಗಳಲ್ಲಿ ಚುಚ್ಚುವುದು, ಕಣ್ಣುಗಳಲ್ಲಿ ನೀರು ಬರುವುದು, ನೋವು ಕಣ್ಣಿನ ಅಸ್ವಸ್ಥತೆಯ ಎಚ್ಚರಿಕೆಯ ಚಿಹ್ನೆಗಳಾಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು.

  ಇದನ್ನೂ ಓದಿ: ರಾತ್ರಿ ಊಟದಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಬೇಡ ಎನ್ನುತ್ತೆ ಆಯುರ್ವೇದ; ಕಾರಣ ಇದು

  ಕಣ್ಣಿನ ಆರೋಗ್ಯಕ್ಕೆ ಪರಿಣಾಮಕಾರಿ ನೈಸರ್ಗಿಕ ವಿಧಾನ

  ಇಂತಹ ಸಾಮಾನ್ಯ ಕಣ್ಣಿನ ದೂರುಗಳು ಇದು ರೋಗದ ಆರಂಭಿಕ ಚಿಹ್ನೆ ಸಹ ಆಗಿರಬಹುದು. ಅದಾಗ್ಯೂ ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ವಹಿಸುವುದು ಮತ್ತು ನಿಯಮಿತವಾಗಿ ಕಣ್ಣಿನ ಪರೀಕ್ಷೆ ಮಾಡಿಸುವುದು ತುಂಬಾ ಮುಖ್ಯ. ಮಂದ ದೃಷ್ಟಿ ಸುಧಾರಿಸಲು ಮತ್ತು ರಕ್ಷಿಸಲು ಕೆಲವು ಸುರಕ್ಷಿತ ಮತ್ತು ಪರಿಣಾಮಕಾರಿ ನೈಸರ್ಗಿಕ ವಿಧಾನಗಳ ಬಗ್ಗೆ ನಾವು ಇಲ್ಲಿ ನೋಡೋಣ.

  ಆಯುರ್ವೇದ ವೈದ್ಯೆ ಐಶ್ವರ್ಯ ಸಂತೋಷ್ ಇತ್ತೀಚೆಗೆ ಕಣ್ಣಿನ ಆರೋಗ್ಯಕ್ಕೆ ಸಂಬಂಧಿತ ಸಮಸ್ಯೆಗಳನ್ನು ತೊಡೆದು ಹಾಕಲು ಮತ್ತು ತಡೆಗಟ್ಟಲು ನೈಸರ್ಗಿಕ ಮಾರ್ಗ ಶೇರ್ ಮಾಡಿದ್ದಾರೆ. ಇದನ್ನು ಅನುಸರಿಸುವ ಮೂಲಕ ನಿಮ್ಮ ಕಣ್ಣಿನ ಆರೋಗ್ಯ ಸುಧಾರಿಸಬಹುದು.

  ಕಲ್ಲುಪ್ಪು

  ಕಲ್ಲು ಉಪ್ಪು ಮಾತ್ರ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು. ಹಾಗಾಗಿ ಅಡುಗೆಯಲ್ಲಿ ಕಲ್ಲು ಉಪ್ಪಿನ ಬಳಕೆ ಕಣ್ಣಿನ ಆರೋಗ್ಯ ಉತ್ತಮಗೊಳಿಸುತ್ತದೆ.

  ತ್ರಿಫಲ

  ತ್ರಿಫಲ ಕಣ್ಣುಗಳ ಆರೋಗ್ಯಕ್ಕೆ ಉತ್ತಮ. ಇದು ಔಷಧವಾಗಿ ಕೆಲಸ ಮಾಡುತ್ತದೆ. ಇದು ಕಣ್ಣಿನ ಪೊರೆಯ ಅಪಾಯ ಕಡಿಮೆ ಮಾಡುತ್ತದೆ. ಆಯುರ್ವೇದ ತಜ್ಞರು ತುಪ್ಪ ಮತ್ತು ಜೇನುತುಪ್ಪದ ಜೊತೆ ಸಮಾನ ಪ್ರಮಾಣದಲ್ಲಿ ತ್ರಿಫಲ ಚೂರ್ಣ ಬೆರೆಸಿ ರಾತ್ರಿಯಲ್ಲಿ ಸೇವಿಸುವಂತೆ ಶಿಫಾರಸು ಮಾಡುತ್ತಾರೆ. ತ್ರಿಫಲ ಚೂರ್ಣ ದೀರ್ಘಕಾಲ ಸೇವಿಸಬಾರದು.

  ಬೆಟ್ಟದ ನೆಲ್ಲಿಕಾಯಿ

  ಬೆಟ್ಟದ ನೆಲ್ಲಿಕಾಯಿ ಸೇವನೆಯು ಕಣ್ಣಿನ ಕಾಯಿಲೆ ಕಾಂಜಂಕ್ಟಿವಿಟಿಸ್ ಮತ್ತು ಗ್ಲುಕೋಮಾದಲ್ಲಿ ಪರಿಹಾರ ನೀಡುತ್ತದೆ. ಇದರಲ್ಲಿರುವ ವಿಟಮಿನ್ ಸಿ ರೆಟಿನಾ ಕೋಶಗಳನ್ನು ಕಾಪಾಡುವಲ್ಲಿ ಮತ್ತು ಆರೋಗ್ಯಕರ ಕ್ಯಾಪಿಲ್ಲರಿಗಳನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಡಯಾಬಿಟಿಕ್ ರೆಟಿನೋಪತಿ ವೇಳೆ.

  ಒಣದ್ರಾಕ್ಷಿ

  ಒಣದ್ರಾಕ್ಷಿಯಲ್ಲಿರುವ ಪಾಲಿಫಿನಾಲಿಕ್ ಫೈಟೊನ್ಯೂಟ್ರಿಯೆಂಟ್‌ಗಳು ದೃಷ್ಟಿಗೆ ಹಾನಿ ಮಾಡುವ ಮತ್ತು ಕಣ್ಣಿನ ಸ್ನಾಯುಗಳ ಅವನತಿಗೆ ಕಾರಣವಾಗುವ ಸ್ವತಂತ್ರ ರಾಡಿಕಲ್‌ ತೊಡೆದು ಹಾಕಲು ಸಹಾಯ ಮಾಡುತ್ತದೆ. ಹಾಗಾಗಿ ಒಣದ್ರಾಕ್ಷಿ ಸೇವನೆ ಕಣ್ಣಿನ ಆರೋಗ್ಯ ಕಾಪಾಡುತ್ತದೆ.

  ಜೇನು

  ನಿಮಗೆ ಕಣ್ಣುಗಳಿಗೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳಿದ್ದರೆ ಜೇನುತುಪ್ಪವು ನಿಮಗೆ ಪ್ರಯೋಜನಕಾರಿ. ಉತ್ತಮವಾದ ಜೇನು ಚಕ್ಷ್ಯ ಗುಣಮಟ್ಟದಲ್ಲಿ ಅಂದರೆ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

  ಇದನ್ನೂ ಓದಿ: ತಲೆಹೊಟ್ಟು ಹೆಚ್ಚಾಗೋಕೆ ನೀವ್ ಮಾಡೋ ಈ ತಪ್ಪೇ ಕಾರಣವಂತೆ

  ತುಪ್ಪ

  ವಿಟಮಿನ್ ಎ ತುಪ್ಪದಲ್ಲಿ ಹೇರಳವಾಗಿದೆ. ಇದರ ಕೊರತೆಯು ದೃಷ್ಟಿಯ ಮೇಲೆ ಪರಿಣಾಮ ಬೀರುತ್ತದೆ. ತುಪ್ಪವು ತನ್ನ ಕೊರತೆ ಪೂರೈಸಲು ಕಣ್ಣುಗಳ ಆರೋಗ್ಯ ಕಾಪಾಡುತ್ತದೆ. ಆಯುರ್ವೇದವು ಕಣ್ಣಿನ ಆರೋಗ್ಯಕ್ಕಾಗಿ ವಿಶೇಷವಾಗಿ ರೂಪಿಸಲಾದ ಅನೇಕ ಔಷಧೀಯ ತುಪ್ಪ ಹೊಂದಿದೆ.
  Published by:renukadariyannavar
  First published: