Blue Tea:ಕೂದಲಿನ ಬೆಳವಣಿಗೆಯಿಂದ ಹಿಡಿದು ತೂಕ ಇಳಿಸುವುದರವರೆಗೆ- ಎಷ್ಟೆಲ್ಲ ಇದೆ ಗೊತ್ತಾ ಈ ಬ್ಲೂ ಟೀ ಪ್ರಯೋಜನಗಳು ?

Health Benefits Of Blue Tea: ನೀಲಿ ಚಹಾದಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ಇದು ಅದ್ಭುತವಾದ ತೂಕ ಇಳಿಸುವ ಪಾನೀಯ ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ದೇಹವನ್ನು ತಂಪಾಗಿಸುವ ರಿಫ್ರೆಶ್ ಪಾನೀಯ ಕೂಡ ಹೌದು. ನೈಸರ್ಗಿಕವಾಗಿ ಕೆಫೀನ್ ರಹಿತ ಮತ್ತು ಸಂಪೂರ್ಣವಾಗಿ ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ಗ್ರೀನ್ ಟೀಯಂತೆಯೇ  ಬ್ಲೂ ಟೀ ಸಹ ಆ್ಯಂಟಿ ಆ್ಯಂಕ್ಸಿಡೆಂಟ್​ಗಳನ್ನು ಹೊಂದಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀಲಿ ಚಹಾವು(Blue Tea) ಹೆಸರೇ ಸೂಚಿಸುವಂತೆ, ಪ್ರಮುಖ ನೀಲಿ ಬಣ್ಣವನ್ನು ಹೊಂದಿರುವ ಪಾನೀಯ(Juice). ಇದನ್ನು ಕ್ಲಿಟೋರಿಯಾ ಟೆರ್ನೇಟಿಯಾ (Clitoria Ternatea )ಗಿಡದ ಹೂವುಗಳಿಂದ ತಯಾರಿಸಲಾಗುತ್ತದೆ. ಆಗ್ನೇಯ ಏಷ್ಯಾದಲ್ಲಿ ಈ ಸಸ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಬ್ಲೂ ಟೀ ಹೆಚ್ಚಿನ ಜನರ ಆಹಾರದ ಭಾಗವಾಗಿದ್ದು, ಇದರ ಅದ್ಭುತ ಪ್ರಯೋಜನಗಳಿಂದಾಗಿ,(Health Benefits)ದೇಹದ ಆರೋಗ್ಯಕ್ಕೆ, ತೂಕ ಇಳಿಸಿಕೊಳ್ಳಲು,ದೇಹವನ್ನು ನಿರ್ವಿಷಗೊಳಿಸಲು ಹಾಗೂ  ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಚರ್ಮದ ಆರೋಗ್ಯವನ್ನು ಕಾಪಾಡುವುದಲ್ಲದೆ,ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  

ಕ್ಲಿಟೋರಿಯಾ ಟೆರ್ನಾಟಿಯಾವು ಫ್ಯಾಬಾಸೇ ಕುಟುಂಬಕ್ಕೆ ಸೇರಿದ ಸಸ್ಯವಾಗಿದ್ದು,ಇದು ಸಾಮಾನ್ಯವಾಗಿ ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಭಾರತ ಮತ್ತು ಶ್ರೀಲಂಕಾದ ಆಗ್ನೇಯ ಏಷ್ಯಾದ ದೇಶಗಳಲ್ಲಿ  ಹೆಚ್ಚು ಬೆಳೆಯಲಾಗುತ್ತದೆ.  ಈ  ನೀಲಿ ದಳಗಳನ್ನು  ಹಲವಾರು ದಿನಗಳಿಂದ ಗಿಡಮೂಲಿಕೆ ಚಹಾ ಪಾನೀಯಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೇ ಅಡುಗೆಯಲ್ಲಿ ಸಹ ಬಳಸಲಾಗುತ್ತದೆ. ನೀಲಿ ಹೂವನ್ನು ಬೆಚ್ಚಗಿನ ಅಥವಾ ಬಿಸಿ ನೀರಿನಲ್ಲಿ ಹಾಕಿದಾಗ ಅದರ ನೀಲಿ ಬಣ್ಣ ಬಿಡುತ್ತದೆ. ಇದನ್ನು ಹೇರ್ ಡೈ ಅಥವಾ ವಿಭಿನ್ನ ಆಹಾರ ಪದಾರ್ಥಗಳಲ್ಲಿ ಬಳಕೆ ಮಾಡಲಾಗುತ್ತದೆ.

ನೀಲಿ ಚಹಾದಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ಇದು ಅದ್ಭುತವಾದ ತೂಕ ಇಳಿಸುವ ಪಾನೀಯ ಎಂದು ಕರೆಯಲಾಗುತ್ತದೆ. ಅಲ್ಲದೇ ಇದು ದೇಹವನ್ನು ತಂಪಾಗಿಸುವ ರಿಫ್ರೆಶ್ ಪಾನೀಯ ಕೂಡ ಹೌದು. ನೈಸರ್ಗಿಕವಾಗಿ ಕೆಫೀನ್ ರಹಿತ ಮತ್ತು ಸಂಪೂರ್ಣವಾಗಿ ಗಿಡಮೂಲಿಕೆಗಳ ಮಿಶ್ರಣವಾಗಿದ್ದು, ಗ್ರೀನ್ ಟೀಯಂತೆಯೇ  ಬ್ಲೂ ಟೀ ಸಹ ಆ್ಯಂಟಿ ಆ್ಯಂಕ್ಸಿಡೆಂಟ್​ಗಳನ್ನು ಹೊಂದಿದೆ.  ಇದು ಹೆಚ್ಚಿನ ಪ್ರಮಾಣದ ಕ್ಯಾಟೆಚಿನ್ ಇಜಿಸಿಜಿ-ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ ಅನ್ನು ಹೊಂದಿರುತ್ತದೆ, ಜೊತೆಗೆ ಫ್ಲೇವನಾಯ್ಡ್‌ಗಳು, ಟ್ಯಾನಿನ್‌ಗಳು ಮತ್ತು ಪಾಲಿಫೆನಾಲ್‌ಗಳಂತಹ ಉರಿಯೂತದ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳನ್ನು ಹೊಂದಿದೆ.

ಇದನ್ನೂ ಓದಿ: ನವರಾತ್ರಿ ವೇಳೆ ಗರ್ಭಿಣಿಯರು ಉಪವಾಸ ಮಾಡಬಹುದೇ? ಕಾರ್ಬೋಹೈಡ್ರೇಟ್‌ ಸೇವನೆ ಆರೋಗ್ಯಕರವೇ?

ಬ್ಲೂ ಟೀ ತಯಾರಿಸುವುದು ಹೇಗೆ:

ಕೆಲವು ನೀಲಿ ಹೂವಿನ ದಳಗಳನ್ನು ಒಣಗಿದ ನಿಂಬೆಹಣ್ಣಿನ ಜೊತೆ ಹಾಕಿ  5 - 10 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ಈ ಗಿಡಮೂಲಿಕೆ ಮಿಶ್ರಣಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಮತ್ತು ಊಟಕ್ಕೆ ಮುಂಚೆ  ಸೇವನೆ ಮಾಡಿ. ಹಾಗೆಯೇ  ಜೀರ್ಣಕ್ರಿಯೆಗೆ ಸಹಾಯ ಮಾಡಲು ಮತ್ತು ಆರೋಗ್ಯಕರ ನಿದ್ರೆಯನ್ನು ಪಡೆಯಲು ನೀಲಿ ಚಹಾವನ್ನು ಊಟದ ನಂತರ ಸೇವಿಸಬಹುದು.

ಬ್ಲೂ ಟೀ ಆರೋಗ್ಯ ಪ್ರಯೋಜನಗಳು

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್​ ಸಮೃದ್ಧವಾಗಿದೆ,ಇದು ನಿಮ್ಮ ದೇಹವನ್ನು ಡಿಟಾಕ್ಸ್  ಮಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಸೇವನೆ ಮಾಡಲು ಉತ್ತಮ ಪಾನೀಯವಾಗಿದೆ.ಆ್ಯಂಟಿ ಆಕ್ಸಿಡೆಂಟ್ ದೇಹವನ್ನು ಸ್ವತಂತ್ರ ರಾಡಿಕಲ್ ಕ್ರಿಯೆಯಿಂದ ರಕ್ಷಿಸುತ್ತವೆ. ಅವು ದೇಹದಲ್ಲಿನ ಆರೋಗ್ಯಕರ ಕೋಶಗಳನ್ನು ಹಾನಿಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಒಂದು ಕಪ್ ನೀಲಿ ಚಹಾವನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯನ್ನು ಸುಲಭಗೊಳಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

ತೂಕ ಇಳಿಸಲು ಸಹಾಯ ಮಾಡುತ್ತದೆ

ಬ್ಲೂ ಟೀಯಲ್ಲಿ ಕೆಫೀನ್ ಇರುವುದಿಲ್ಲ, ಜೊತೆಗೆ ಕಾರ್ಬ್ಸ್, ಕೊಬ್ಬುಗಳು ಮತ್ತು ಕೊಲೆಸ್ಟ್ರಾಲ್​ಗಳು ಸಹ ಇರುವುದಿಲ್ಲ. ಇದು ತೂಕ ಇಳಿಸಲು ಡಯೆಟ್ ಮಾಡುತ್ತಿರುವವರಿಗೆ ಸೂಕ್ತವಾಗಿದೆ. ಏಕೆಂದರೆ ಇದು ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ಹಸಿವನ್ನು ನಿಯಂತ್ರಿಸುತ್ತದೆ. ಜಂಕ್ ಫುಡ್‌ ಸೇವನೆ ಮಾಡದಂತೆ ನಿಯಂತ್ರಿಸುತ್ತದೆ.

ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಈ ಚಹಾದಲ್ಲಿರುವ ಫ್ಲೇವನಾಯ್ಡ್‌ಗಳು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ, ಚರ್ಮದ  ಆರೋಗ್ಯವನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡುತ್ತದೆ. ಒಂದು ಕಪ್ ಬೆಚ್ಚಗಿನ ಚಹಾವನ್ನು ನಿಯಮಿತವಾಗಿ ಕುಡಿಯುವುದರಿಂದ ಹೊಟ್ಟೆ, ಯಕೃತ್ತು ಮತ್ತು ಮೂತ್ರಪಿಂಡಗಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುತ್ತದೆ. ಇದು ದೇಹವನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಹಾಳಾದ ಚರ್ಮವನ್ನು ಹೊಳೆಯುತ್ತದೆ, ಕಪ್ಪು ಕಲೆಗಳು, ಸುಕ್ಕು, ಚರ್ಮದ ಟೋನ್​ಗಳನ್ನು ಸರಿಪಡಿಸುತ್ತದೆ.

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ

ಇದನ್ನೂ ಓದಿ: ಮನೆಯ ವಾಸ್ತುದೋಷ ಪರಿಹಾರಕ್ಕೆ ಹೀಗೆ ಮಾಡಿ.

ಈ ನೀಲಿ ಹೂವು ಕೂದಲಿಗೆ ಅತ್ಯುತ್ತಮವಾಗಿದೆ, ಏಕೆಂದರೆ ಇದರಲ್ಲಿ ಆಂಥೋಸಯಾನಿನ್ ಇದೆ.ಇದು ತಲೆಯಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು ಮತ್ತು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು  ಸಹಾಯ ಮಾಡುತ್ತದೆ.
Published by:Sandhya M
First published: