Blood Thinner Foods: ರಕ್ತ ದಪ್ಪವಾಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹೀಗಿವೆ

ರಕ್ತ ತೆಳುವಾಗಿರುವ ಆಂಟಿಪ್ಲೇಟ್‌ ಲೆಟ್‌ ಗಳು ರಕ್ತ ಕಣಗಳು ಹೆಪ್ಪುಗಟ್ಟುವಿಕೆ ತಡೆಯಲು ಒಟ್ಟಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ದಪ್ಪ ರಕ್ತದ ಲಕ್ಷಣಗಳು ಹಲವು ಗಂಭೀರ ಕಾಯಿಲೆಗಳನ್ನು ತಂದೊಡ್ಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜನ್ಮಜಾತ ಹೃದಯ (Heart) ದೋಷ ಸೇರಿದಂತೆ ಕೆಲವು ವೈದ್ಯಕೀಯ ಪರಿಸ್ಥಿತಿ, ಹೃದಯಾಘಾತ (Heart Attack) ಅಥವಾ ಪಾರ್ಶ್ವವಾಯು ಅಪಾಯ (Danger) ಕಡಿಮೆ ಮಾಡಲು ರಕ್ತವನ್ನು (Blood) ತೆಳುಗೊಳಿಸುವುದು (Thinner) ತುಂಬಾ ಮುಖ್ಯ. ಮಾರುಕಟ್ಟೆಯಲ್ಲಿ ರಕ್ತವನ್ನು ತೆಳುಗೊಳಿಸುವ ಹಲವು ಔಷಧಿಗಳ ಅಗತ್ಯತೆ ಇದೆ. ಇವುಗಳನ್ನು ರಕ್ತ ತೆಳುಗೊಳಿಸುವಿಕೆಗೆ ಸಹಾಯ ಮಾಡುತ್ತವೆ. ರಕ್ತ ತೆಳುವಾಗಿರುವ ಆಂಟಿಪ್ಲೇಟ್‌ ಲೆಟ್‌ ಗಳು ರಕ್ತ ಕಣಗಳು ಹೆಪ್ಪುಗಟ್ಟುವಿಕೆ ತಡೆಯಲು ಒಟ್ಟಿಗೆ ಅಂಟಿಕೊಳ್ಳದಂತೆ ತಡೆಯುತ್ತದೆ. ದಪ್ಪ ರಕ್ತದ ಲಕ್ಷಣಗಳು ಹಲವು ಗಂಭೀರ ಕಾಯಿಲೆಗಳನ್ನು ತಂದೊಡ್ಡುತ್ತದೆ. ದೇಹದಲ್ಲಿ ರಕ್ತ ದಪ್ಪ ಆಗಲು ಶುರುವಾದರೆ ನಿಮ್ಮ ದೇಹವು ಹಲವು ರೀತಿಯಲ್ಲಿ ಅದರ ಸಂಕೇತ ನೀಡಲು ಪ್ರಾರಂಭಿಸುತ್ತದೆ.

  ರಕ್ತ ದಪ್ಪವಾಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು

  ರಕ್ತ ದಪ್ಪವಾಗುವುದು ಗಂಭೀರ ಕಾಯಿಲೆಯಾದ

  ತಲೆ ತಿರುಗುವಿಕೆ,

  ಮುಟ್ಟಿನ ಸಮಯದಲ್ಲಿ ಹೆಚ್ಚಿದ ರಕ್ತದ ಹರಿವು,

  ತಲೆನೋವು,

  ಅಧಿಕ ರಕ್ತದೊತ್ತಡ,

  ಚರ್ಮದ ತುರಿಕೆ,

  ಮಸುಕಾದ ದೃಷ್ಟಿ,

  ಸಂಧಿವಾತ ಮತ್ತು ಗೌಟ್  ಸೇರಿವೆ.

  ದೇಹದಲ್ಲಿ ರಕ್ತ ದಪ್ಪವಾಗುವುದನ್ನು ಮತ್ತು ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಅನೇಕ ರೀತಿಯ ನೈಸರ್ಗಿಕ ವಸ್ತು ಸಹ ಬಳಸಬಹುದು. ಆದಾಗ್ಯೂ, ಅವುಗಳನ್ನು ಬಳಸುವ ಮೊದಲು ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

  ಇದನ್ನೂ ಓದಿ: ದೇಹದಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳ ಕೊರತೆಯ ಲಕ್ಷಣಗಳು ಮತ್ತು ಪದಾರ್ಥಗಳು ಯಾವವು?

  ಬೆಳ್ಳುಳ್ಳಿ ತಿಂದರೆ ರಕ್ತ ತೆಳುವಾಗುತ್ತದೆಯೇ?

  ಬೆಳ್ಳುಳ್ಳಿ ರುಚಿಯ ಆಹಾರಕ್ಕೆ ಸೇರಿಸಲಾಗುತ್ತದೆ. ನೈಸರ್ಗಿಕ ಪ್ರತಿ ಜೀವಕ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿದೆ. ಆಹಾರ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನದಲ್ಲಿ 2018 ರ ಅಧ್ಯಯನವು ಬೆಳ್ಳುಳ್ಳಿ ಪುಡಿಯು ಇಲಿಗಳಲ್ಲಿ ಆಂಟಿಥ್ರಂಬೋಟಿಕ್ ಚಟುವಟಿಕೆ ಹೊಂದಿದೆ ಎಂದು ತೋರಿಸಿದೆ ಒಂದು ವರದಿ. ಆಂಟಿಥ್ರಂಬೋಟಿಕ್ ಏಜೆಂಟ್ ರಕ್ತದಲ್ಲಿ ಹೆಪ್ಪುಗಟ್ಟುವಿಕೆ ತಡೆಯುವ ವಸ್ತು ಆಗಿದೆ.

  ವಿಟಮಿನ್ ಇ - ಪಾಲಕ್, ಬಾದಾಮಿ, ಸೂರ್ಯಕಾಂತಿ ರಕ್ತ ತೆಳುಗೊಳಿಸುವಿಕೆ

  ವಿಟಮಿನ್ ಇ ರಕ್ತದಲ್ಲಿ ಹೆಪ್ಪುಗಟ್ಟುವಿಕೆ ಚಟುವಟಿಕೆ ಕಡಿಮೆ ಮಾಡುತ್ತದೆ. ಈ ಪರಿಣಾಮ ವ್ಯಕ್ತಿಯು ತೆಗೆದುಕೊಳ್ಳುವ ವಿಟಮಿನ್ ಇ ಪ್ರಮಾಣ ಅವಲಂಬಿಸಿರುತ್ತದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಡಯೆಟರಿ ಸಪ್ಲಿಮೆಂಟ್ಸ್ ಕಛೇರಿಯು ರಕ್ತ ತೆಳುವಾಗಿಸುವ ಔಷಧಿ ತೆಗೆದುಕೊಳ್ಳುತ್ತಿರುವ ಜನರು ವಿಟಮಿನ್ ಇ ಮಿತಿ ಮೀರಿದ ಪ್ರಮಾಣ ಸೇವನೆ ತಪ್ಪಿಸಬೇಕು.

  ರಕ್ತ ತೆಳುವಾಗಲು ಅರಿಶಿನ ಸೇವಿಸಿ

  ಜನರು ಬಹಳ ಹಿಂದಿನಿಂದ ಅರಿಶಿನ ಔಷಧೀಯವಾಗಿ ಬಳಕೆ ಮಾಡುತ್ತಿದ್ದಾರೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ನಿವಾರಕ ಮತ್ತು ರಕ್ತ ತೆಳುವಾಗಿಸುವ ಅಥವಾ ಹೆಪ್ಪುರೋಧಕ ಗುಣ ಹೊಂದಿದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯಲು ಇದು ಕೆಲಸ ಮಾಡುತ್ತದೆ.

  ಇಪಿಎಂಎ ಜರ್ನಲ್‌ನಲ್ಲಿನ 2019 ರ ವಿಮರ್ಶೆಯು ಅರಿಶಿನವು ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ರಕ್ತ ತೆಳುಗೊಳಿಸುವಿಕೆಗೆ ಅರಿಶಿನ ಸೇವನೆ ಶಿಫಾರಸು ಮಾಡುವುದಿಲ್ಲ. ನೀವು ಅರಿಶಿನ ಕರಿಗಳಲ್ಲಿ, ಸೂಪ್‌ಗಳಲ್ಲಿ ಸೇವಿಸಬಹುದು ಮತ್ತು ಅದನ್ನು ಬಿಸಿ ನೀರಿನೊಂದಿಗೆ ಬೆರೆಸಿ ಸೇವಿಸಬಹುದು.

  ಶುಂಠಿ ತಿಂದರೆ ರಕ್ತ ತೆಳುವಾಗುತ್ತದೆಯೇ?

  ಶುಂಠಿಯು ಉರಿಯೂತ ನಿವಾರಕ ಮಸಾಲೆಯಾಗಿದೆ. ಅದು ರಕ್ತದಲ್ಲಿ ಹೆಪ್ಪುಗಟ್ಟುವಿಕೆ ತಡೆಯುತ್ತದೆ. ಇದು ಸ್ಯಾಲಿಸಿಲೇಟ್ ಎಂಬ ನೈಸರ್ಗಿಕ ಆಮ್ಲ ಹೊಂದಿದೆ. ಆಸ್ಪಿರಿನ್ ಸ್ಯಾಲಿಸಿಲೇಟ್ ಅನ್ನು ಅಸಿಟೈಲ್ಸಲಿಸಿಲಿಕ್ ಆಮ್ಲ ಎಂದು ಕರೆಯುತ್ತಾರೆ. ಇದು ಸಂಶ್ಲೇಷಿತ ಗುಣಲಕ್ಷಣ ಜೊತೆ ಶಕ್ತಿಯುತ ರಕ್ತ ತೆಳುವಾಗಿಸುತ್ತದೆ. ನೈಸರ್ಗಿಕ ಸ್ಯಾಲಿಸಿಲೇಟ್‌ಗಳ ಹೆಪ್ಪುರೋಧಕ ಪರಿಣಾಮ ಪಡೆಯಲು, ಜನರು ನಿಯಮಿತವಾಗಿ ತಾಜಾ ಅಥವಾ ಒಣಗಿದ ಶುಂಠಿ ಬೇಕಿಂಗ್, ಅಡುಗೆ ಮತ್ತು ಜ್ಯೂಸ್‌ನಲ್ಲಿ ಬಳಕೆ ಮಾಡಬಹುದು.

  ಇದನ್ನೂ ಓದಿ: ಹಿಮೋಗ್ಲೋಬಿನ್ ಕೊರತೆ ತಪ್ಪಿಸಲು ಈ ಪದಾರ್ಥಗಳ ಸೇವನೆ ಅಗತ್ಯ, ಮಿಸ್ ಮಾಡಬೇಡಿ

  ರಕ್ತ ತೆಳುಗೊಳಿಸುವುದು ಹೇಗೆ?

  ಕಾಳು ಮೆಣಸು ರಕ್ತ ತೆಳುಗೊಳಿಸಲು ಸಹಾಯ ಮಾಡುವ ಗುಣಗಳಿಂದ ಸಮೃದ್ಧವಾಗಿದೆ. ಕೆಂಪು ಮೆಣಸಿನಕಾಯಿಯಲ್ಲಿ ಸ್ಯಾಲಿಸಿಲೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ. ಇದು ಶಕ್ತಿಯುತ ರಕ್ತ ತೆಳುವಾಗುವಂತೆ ಕಾರ್ಯ ನಿರ್ವಹಿಸುತ್ತದೆ. ಆಹಾರದಲ್ಲಿ ಕೆಂಪು ಮೆಣಸಿನಕಾಯಿ ಸೇರಿಸುವುದು ರಕ್ತದೊತ್ತಡ ಕಡಿಮೆ ಮಾಡುತ್ತದೆ. ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ.
  Published by:renukadariyannavar
  First published: