• Home
  • »
  • News
  • »
  • lifestyle
  • »
  • Blood Sugar: ರಕ್ತದ ಸಕ್ಕರೆ ಪ್ರಮಾಣ ವಯಸ್ಸಿಗೆ ಅನುಗುಣವಾಗಿ ಎಷ್ಟಿರಬೇಕು?

Blood Sugar: ರಕ್ತದ ಸಕ್ಕರೆ ಪ್ರಮಾಣ ವಯಸ್ಸಿಗೆ ಅನುಗುಣವಾಗಿ ಎಷ್ಟಿರಬೇಕು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಧಿಕ ರಕ್ತದ ಸಕ್ಕರೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಪೆಟ್ಟು ನೀಡುತ್ತದೆ. ಅಂದರೆ ರಕ್ತದ ಸಕ್ಕರೆ ಪ್ರಮಾಣವನ್ನು ದುರ್ಬಲಗೊಳಿಸುತ್ತದೆ. ಇದು ಕಣ್ಣಿನ ರಕ್ತನಾಳಗಳೀಗೆ ಹಾನಿ ಉಂಟು ಮಾಡುತ್ತದೆ. ಇದು ಮಧುಮೇಹ ರೆಟಿನೋಪತಿ ಮತ್ತು ಕುರುಡುತನ ಉಂಟು ಮಾಡುತ್ತದೆ.

  • Share this:

    ರಕ್ತದ (Blood) ಸಕ್ಕರೆಯ ಪ್ರಮಾಣವು (Sugar Level) ನೀವು ಸೇವಿಸುವ ಆಹಾರ (Eating Food) ಸಿಗುವ ಮತ್ತು ಆಹಾರದಿಂದ ಬರುವ ದೇಹದ ಗ್ಲೂಕೋಸ್‌ (Body Glucose) ಮಟ್ಟ ಆಗಿದೆ. ಮತ್ತು ಇದು ಶಕ್ತಿಯ (Energy) ಮುಖ್ಯ ಮೂಲವೂ ಆಗಿದೆ. ಆದರೆ ಈ ಮಟ್ಟವು ಹೆಚ್ಚಾಗಲು ಪ್ರಾರಂಭಿಸಿದರೆ, ಮಧುಮೇಹ ಮತ್ತು ಪ್ರಿಡಿಯಾಬಿಟಿಸ್‌ನ ಸ್ಥಿತಿಯು ರೂಪುಗೊಳ್ಳಲು ಆರಂಭ ಆಗುತ್ತದೆ. ಪೂರ್ವ ಮಧುಮೇಹ ಎಂದರೇನು ಎಂದು ಮೊದಲು ತಿಳಿಯುವುದು ತುಂಬಾ ಮುಖ್ಯ. ಇದರಲ್ಲಿ ರಕ್ತದ ಸಕ್ಕರೆ ಹೆಚ್ಚುತ್ತದೆ. ಆದರೆ ಮಧುಮೇಹದ ವರ್ಗದಲ್ಲಿ ಇಡಬೇಕಾದಷ್ಟು ಅಲ್ಲ. ವಯಸ್ಸಿಗೆ ಅನುಗುಣವಾಗಿ ರಕ್ತದ ಸಕ್ಕರೆ ಹೇಗಿರಬೇಕು ಎಂಬುದನ್ನು ತಜ್ಞರು ಹೇಳುತ್ತಾರೆ.


    ವಯಸ್ಸಿಗೆ ಅನುಗುಣವಾಗಿ ರಕ್ತದ ಸಕ್ಕರೆ ಪ್ರಮಾಣ ಹೇಗಿರಬೇಕು?


    6 ವರ್ಷದೊಳಗಿನ ಮಕ್ಕಳಿಗೆ 110 ರಿಂದ 200 mg/dL,


    6-12 ವರ್ಷ ವಯಸ್ಸಿನ ಮಕ್ಕಳಿಗೆ 100 ರಿಂದ 180 mg/dL,


    13-19 ವರ್ಷ ವಯಸ್ಸಿನ ಮಕ್ಕಳಿಗೆ 90 ರಿಂದ 150 mg/dL.


    ಇದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಸಾಮಾನ್ಯ ಮಟ್ಟವು 90 ರಿಂದ 150 mg/dL ಆಗಿದೆ. ಇದಕ್ಕಿಂತ ಅಧಿಕ ರಕ್ತದ ಸಕ್ಕರೆಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಪೆಟ್ಟು ನೀಡುತ್ತದೆ. ಅಂದರೆ ರಕ್ತದ ಸಕ್ಕರೆ ಪ್ರಮಾಣವನ್ನು ದುರ್ಬಲಗೊಳಿಸುತ್ತದೆ. ಇದು ಕಣ್ಣಿನ ರಕ್ತನಾಳಗಳೀಗೆ ಹಾನಿ ಉಂಟು ಮಾಡುತ್ತದೆ. ಇದು ಮಧುಮೇಹ ರೆಟಿನೋಪತಿ ಮತ್ತು ಕುರುಡುತನ ಉಂಟು ಮಾಡುತ್ತದೆ.


    ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳೋಕೆ ಈ ಆಹಾರಗಳು ಬೆಸ್ಟ್! ಪೋಷಕಾಂಶವೂ ಸಿಗುತ್ತೆ


    ಪ್ರಿಡಿಯಾಬಿಟಿಕ್ ಜನರಿಗೆ ಆಹಾರ ಸಲಹೆ


    ಪೌಷ್ಟಿಕತಜ್ಞ ಲವನೀತ್ ಬಾತ್ರಾ ಅವರು ಮಧುಮೇಹ ಮತ್ತು ಪ್ರಿಡಿಯಾಬಿಟಿಕ್ ಜನರಿಗೆ ಅಸಮತೋಲಿತ ರಕ್ತದ ಸಕ್ಕರೆಯ ಸಮಸ್ಯೆ ಎದುರಿಸುವ ಕೆಲವು ಆಹಾರ ಸಲಹೆ ಶೇರ್ ಮಾಡಿದ್ದಾರೆ. ಮಧುಮೇಹದ ಅಪಾಯದಲ್ಲಿ ಫೈಬರ್ ಸೇವನೆ ನಿಮಗೆ ವರದಾನದವಿದ್ದಂತೆ ಎಂದು ತಿಳಿಸಿದ್ದಾರೆ. ಏಕೆಂದರೆ ಕರಗುವ ಫೈಬರ್ ರಕ್ತದೊತ್ತಡ ಹೆಚ್ಚಾಗುವುದನ್ನು ತಡೆಯುತ್ತದೆ. ಮತ್ತು ಸಕ್ಕರೆಯ ಹೀರಿಕೊಳ್ಳುವಿಕೆ ನಿಧಾನ ಮಾಡಲು ಸಹಕಾರಿ ಆಗಿದೆ.


    ಅಧಿಕ ರಕ್ತದ ಸಕ್ಕರೆಯ ಲಕ್ಷಣಗಳು ಹೀಗಿವೆ


    ಆಗಾಗ್ಗೆ ಮೂತ್ರ ವಿಸರ್ಜನೆ


    ಆಯಾಸ


    ಹೆಚ್ಚಿದ ಬಾಯಾರಿಕೆ


    ಮಂದ ದೃಷ್ಟಿ


    ತಲೆನೋವು


    ಕಡಲೆ ಹಿಟ್ಟು


    ಪೌಷ್ಠಿಕಾಂಶ ತಜ್ಞರು ಹೇಳುವ ಪ್ರಕಾರ, ಕಡಲೆ ಹಿಟ್ಟಿನಲ್ಲಿ ಆಹಾರದ ಫೈಬರ್ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ರಾಫಿನೋಸ್ ಎಂಬ ಕರಗಬಲ್ಲ ಫೈಬರ್, ಇದು ರಕ್ತದ ಸಕ್ಕರೆ ಕಡಿಮೆ ಮಾಡಲು ಕೆಲಸ ಮಾಡುತ್ತದೆ.


    ಸೇಬು


    ಪ್ರತಿದಿನ ಒಂದು ಸೇಬು ಸೇವನೆ, ಅನೇಕ ರೋಗಗಳನ್ನು ದೂರವಿಡುವ ಕೆಲಸ ಮಾಡುತ್ತದೆ. ಈ ಕಾಯಿಲೆಗಳಲ್ಲಿ ಮಧುಮೇಹವೂ ಸಹ ಒಂದಾಗಿದೆ. ವಾಸ್ತವದಲ್ಲಿ ಸೇಬು ಕರಗುವ ಫೈಬರ್ ಪೆಕ್ಟಿನ್ ನ ಉತ್ತಮ ಮೂಲ ಆಗಿದೆ. ಇದು ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನ ಮಾಡುತ್ತದೆ. ಮತ್ತು ರಕ್ತದ ಸಕ್ಕರೆ ಹೆಚ್ಚಳ ತಡೆಯುತ್ತದೆ.


    ಓಟ್ಸ್


    ಓಟ್ಸ್ ಕರಗದ ಮತ್ತು ಕರಗುವ ಫೈಬರ್ ಹೊಂದಿದೆ. ಆದರೆ ಕರಗುವ ಫೈಬರ್ ವಿಶೇಷವಾಗಿ ಪ್ರಯೋಜನಕಾರಿ. ದೇಹವು ಕರಗುವ ಫೈಬರ್ ಒಡೆಯಲು ಸಾಧ್ಯವಿಲ್ಲ. ಅದು ನಿಮ್ಮ ರಕ್ತದಿಂದ ಹೀರಲ್ಪಡದೆ. ನಿಮ್ಮ ಹೊಟ್ಟೆಗೆ ಹಾದು ಹೋಗುತ್ತದೆ. ಇದು ನಿಮ್ಮ ರಕ್ತದ ಸಕ್ಕರೆ ಮಟ್ಟ ಹೆಚ್ಚಿಸದೆ ನಿಮ್ಮ ಹೊಟ್ಟೆ ತುಂಬಿರುತ್ತದೆ. ಇದು ಕರುಳಿನ ಬ್ಯಾಕ್ಟೀರಿಯಾಕ್ಕೆ ಸಹಾಯಕವಾದ ಪ್ರಿಬಯಾಟಿಕ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ.


    ಬಾರ್ಲಿ


    ಬಾರ್ಲಿಯಲ್ಲಿರುವ ಸುಮಾರು 6 ಗ್ರಾಂ ಫೈಬರ್ ಹೆಚ್ಚಾಗಿ ಕರಗುವ ಫೈಬರ್ ಆಗಿದೆ. ಇದು ಕೊಲೆಸ್ಟ್ರಾಲ್ ಮತ್ತು ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಇದು ಉರಿಯೂತ ಕಡಿಮೆ, ರಕ್ತದ ಸಕ್ಕರೆ ಮಟ್ಟ ಸ್ಥಿರಗೊಳಿಸುತ್ತದೆ.


    ಇದನ್ನೂ ಓದಿ: ಆರೋಗ್ಯಕರ ಜೀವಕೋಶ ಹೊಂದಲು ದಿನಕ್ಕೆಷ್ಟು ಪ್ರೋಟೀನ್ ಬೇಕು ಗೊತ್ತೇ?


    ಸಬ್ಜಾ ಬೀಜ


    ತುಳಸಿ ಬೀಜಗಳು ಅಂದರೆ ಸಬ್ಜಾ ಬೀಜಗಳು ಹೆಚ್ಚಿನ ಫೈಬರ್‌ನ ಮೂಲವಾಗಿದೆ. ಇದು ಚಯಾಪಚಯವನ್ನು ನಿಧಾನಗೊಳಿಸುತ್ತದೆ. ಕಾರ್ಬೋಹೈಡ್ರೇಟ್‌ ಗ್ಲೂಕೋಸ್ ಆಗಿ ಪರಿವರ್ತಿಸುವುದನ್ನು ತಡೆಯುತ್ತದೆ.

    Published by:renukadariyannavar
    First published: