ಸಮೋಸಾ, ಕಚೋರಿ, ಬಜ್ಜಿ ಬೋಂಡ ಮತ್ತಿತರ ಕರಿದ ತಿಂಡಿಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಕೆಲವರಂತೂ ನಿತ್ಯವೂ ಚಹಾದ ಜೊತೆ ಕರಿದ ತಿಂಡಿಗಳನ್ನು ಸೇವಿಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಆದರೆ, ಪ್ರತಿನಿತ್ಯ ಕರಿದ ತಿಂಡಿಗಳನ್ನು ತಿನ್ನುವುದು ಸರಿಯಲ್ಲ. ಅವು ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು ಮತ್ತು ಅಧಿಕ ರಕ್ತದೊತ್ತಡಕ್ಕೆ (Blood Pressure) ಕಾರಣವಾಗಬಹುದು. ಅಧಿಕ ರಕ್ತದೊತ್ತಡ , ವಿಶ್ವದಾದ್ಯಂತ ಅಸಂಖ್ಯ ಜನರನ್ನು ಕಾಡುತ್ತಿರುವ, ಸಾಮಾನ್ಯ ಜೀವನ ಶೈಲಿ (Life Style) ಸಂಬಂಧಿತ ಕಾಯಿಲೆಗಳಲ್ಲಿ ಒಂದಾಗಿದೆ. ತೂಕ (Weight) ಇಳಿಸುವುದು, ಸೋಡಿಯಂ ನಿರ್ಬಂಧ ಮತ್ತು ಆಹಾರ ಕ್ರಮದ ಬದಲಾವಣೆಗಳಂತಹ ಜೀವನ (Life) ಶೈಲಿಗೆ ಸಂಬಂಧಿಸಿದ ಮಾರ್ಪಾಡುಗಳನ್ನು ಮಾಡಿಕೊಂಡಾಗ, ಅನೇಕ ಪ್ರಕರಣಗಳಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುವುದು ಸಾಧ್ಯವಾಗಿದೆ.
ಅದೇ ರೀತಿ, ಪೊಟ್ಯಾಶಿಯಂ ಮತ್ತು ಕ್ಯಾಲ್ಸಿಯಂ ಅಂಶಗಳನ್ನು ಹೊಂದಿರುವ ತಿನಿಸುಗಳನ್ನು ಆಹಾರ ಕ್ರಮಕ್ಕೆ ಸೇರಿಸಬೇಕು. ನಿಮಗೆ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುವ ಮನಸ್ಸಿದ್ದರೂ, ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬ ಗೊಂದಲವಿದ್ದರೆ, ನಿಮಗಾಗಿ ಇಲ್ಲಿ ಅದಕ್ಕೆ ಸಂಬಂಧಿಸಿದ 5 ಭಾರತೀಯ ರೆಸಿಪಿಗಳ ಮಾಹಿತಿ ನೀಡಲಾಗಿದೆ.
ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಲ್ಲ 5 ಭಾರತೀಯ ರೆಸಿಪಿಗಳು
1. ಜೋಳದ ರೊಟ್ಟಿ:
ಜೋಳ ಅತ್ಯಧಿಕ ಮಿನರಲ್ಗಳು, ಫೈಬರ್, ಪ್ರೋಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್ಗಳನ್ನು ಹೊಂದಿದೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಅಂಶ ರಕ್ತದೊತ್ತಡ ನಿವಾರಣೆಗೆ ಸಹಾಯ ಮಾಡಬಹುದು. ನೀವು ದಿನನಿತ್ಯ ಸೇವಿಸುವ ಗೋಧಿ ಹಿಟ್ಟಿನ ಚಪಾತಿ ಅಥವಾ ರೊಟ್ಟಿಗಳಿಗೆ ಹೋಲಿಸಿದರೆ, ಜೋಳದ ರೊಟ್ಟಿ ಹೆಚ್ಚು ಪೌಷ್ಟಿಕಾಂಶವನ್ನು ಹೊಂದಿದೆ ಮತ್ತು ಹೊಟ್ಟೆ ತುಂಬಿಸುತ್ತದೆ.
ಇದನ್ನೂ ಓದಿ: Blood Levels: ರಕ್ತದ ಮಟ್ಟ ಸುಧಾರಿಸಲು ಪ್ರತಿನಿತ್ಯ ಈ 3 ಹಣ್ಣುಗಳನ್ನು ಸೇವಿಸಿ
2. ಸೌತೆಕಾಯಿ ರಾಯತ:
ಬೇಸಿಗೆ ಕಾಲದಲ್ಲಿ ಮೊಸರನ್ನು ಕಡ್ಡಾಯವಾಗಿ ಸೇವಿಸುವುದನ್ನು ರೂಢಿ ಮಾಡಿಕೊಳ್ಳಿ. ಇನ್ನು ಅದಕ್ಕೆ ಸೌತೆಕಾಯಿಯನ್ನು ಸೇರಿಸಿದರಂತೂ ಇನ್ನಷ್ಟು ತಾಜಾತನವನ್ನು ನೀಡುತ್ತದೆ. ಸೌತೆಕಾಯಿಯಲ್ಲಿ ಶೇಕಡಾ 95 ರಷ್ಟು ನೀರು ಇದೆ. ಹಾಗಾಗಿ ಸೌತೆಕಾಯಿಯನ್ನು ಸೇವಿಸಿದಾಗ ನಮ್ಮ ದೇಹವನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ದೇಹದಲ್ಲಿನ ಕಲ್ಮಶವನ್ನು ಹೊರ ಹಾಕುತ್ತದೆ, ಜೊತೆಗೆ ಉತ್ತಮ ಜೀರ್ಣ ಕ್ರಿಯೆಗೂ ಸಹಾಯ ಮಾಡುತ್ತದೆ. ಸೌತೆಕಾಯಿ ರಾಯತವನ್ನು ಸುಲಭವಾಗಿ ಮತ್ತು ದಿಢೀರಾಗಿ ತಯಾರಿಸಬಹುದು, ಇದಕ್ಕೆ ಹತ್ತು ನಿಮಿಷಕ್ಕಿಂತಲೂ ಕಡಿಮೆ ಅವಧಿ ಸಾಕು.
3. ದಹಿ ಬಿಂಡಿ:
ರಾಜಸ್ಥಾನಿ ದಹಿ ಬಿಂಡಿ ಒಂದು ಜನಪ್ರಿಯ ಖಾದ್ಯ (ಮೊಸರು ಹಾಗೂ ಬೆಂಡೆಕಾಯಿ ಉಪಯೋಗಿಸಿ ಮಾಡುವ ಪಲ್ಯ). ಇದನ್ನು ಮಾಡುವುದು ಸುಲಭ ಮತ್ತು 30 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ ಇದು ಸಿದ್ಧವಾಗುತ್ತದೆ. ಬೆಂಡೆಕಾಯಿಯು ರಕ್ತದ ಒತ್ತಡವನ್ನು ನಿಯಂತ್ರಿಸುವ ಹಲವಾರು ಅಗತ್ಯ ಅಂಶಗಳನ್ನು ಹೊಂದಿದೆ ಎನ್ನಲಾಗುತ್ತದೆ. ದಹಿ ಬಿಂಡಿಯನ್ನು ತಯಾರಿಸುವಾಗ ಸಾಧ್ಯವಾದಷ್ಟು ಕಡಿಮೆ ಎಣ್ಣೆಯನ್ನು ಬಳಸಿ.
ಇದನ್ನೂ ಓದಿ: Pizza ಸೇವನೆ ಒಳ್ಳೆಯದ್ದಾ ಅಥವಾ ಕೆಟ್ಟದ್ದಾ? ಇದರ ಬಗ್ಗೆ ಆಯುರ್ವೇದ ಏನು ಹೇಳುತ್ತೆ
4. ಹೆಸರು ಬೇಳೆಯ ದೋಸೆ:
ಹೆಸರು ಬೇಳೆಯಲ್ಲಿ ಅತ್ಯಧಿಕ ಫೈಬರ್, ಪೊಟ್ಯಾಶಿಯಂ ಮತ್ತು ಕಬ್ಬಿಣಾಂಶ ಇದೆ. ಹೆಸರು ಬೇಳೆಯ ದೋಸೆ ಅತ್ಯುತ್ತಮ ದೇಸಿ ತಿನಿಸಾಗಿದ್ದು, ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ನಮ್ಮ ದೇಶದಲ್ಲಿ ಇದು ಬೆಳಗ್ಗಿನ ಉಪಾಹಾರವಾಗಿ ಕೂಡ ಬಳಸಲ್ಪಡುತ್ತದೆ. ಹೆಸರು ಬೇಳೆ, ಈರುಳ್ಳಿ, ಹಸಿಮೆಣಸಿನಕಾಯಿ ಮತ್ತಿತರ ಸಾಮಾಗ್ರಿಗಳನ್ನು ಹಾಕಿ ಈ ತಿನಿಸನ್ನು ತಯಾರಿಸಲಾಗುತ್ತದೆ.
5. ರಾಜ್ಮಾ ಸಲಾಡ್:
ನಿಮ್ಮ ಮನೆಯಲ್ಲಿ , ಬಳಸಿ ಉಳಿದ ರಾಜ್ಮಾ ಇದ್ದರೆ, ಈ ರೆಸಿಪಿಯನ್ನು ಖಂಡಿತಾ ತಯಾರಿಸಿ. ಕೇವಲ ಅರ್ಧ ಕಪ್ ರಾಜ್ಮಾ, ಈರುಳ್ಳಿ, ಟೊಮ್ಯಾಟೋ, ಕ್ಯಾಬೇಜ್ , ಸ್ಪಿಂಗ್ ಆನಿಯನ್, ವಾಲ್ನಟ್ ಮತ್ತು ಶೇಂಗಾ ಬೀಜಗಳಿದ್ದರೆ ಸಾಕು, ರಾಜ್ಮಾ ಸಲಾಡ್ ತಯಾರಿಸಬಹುದು. ನಿಮಗೆ ಬೇಕಿದ್ದರೆ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆ ರಸ ಮತ್ತು ಕರಿ ಮೆಣಸನ್ನು ಸೇರಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ