• Home
  • »
  • News
  • »
  • lifestyle
  • »
  • Dates Benefits: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ

Dates Benefits: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಖರ್ಜೂರ ಹಣ್ಣು ಸ್ವಾಭಾವಿಕ ಮಾಧುರ್ಯ ಹೊಂದಿದೆ. ಖರ್ಜೂರ ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಖರ್ಜೂರ ಹಣ್ಣಿನಲ್ಲಿ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳು ಇವೆ. ಖರ್ಜೂರ ಸೇವನೆ ಸಾಕಷ್ಟು ಪ್ರಯೋಜನ ನೀಡುತ್ತದೆ.

  • Share this:

    ಆರೋಗ್ಯ (Health) ಕಾಪಾಡಲು ಹಣ್ಣುಗಳ (Fruits) ಸೇವನೆ ಮಾಡುವಂತೆ ವೈದ್ಯರು ಮತ್ತು ಪೌಷ್ಟಿಕ ತಜ್ಞರು ಸೂಚನೆ ನೀಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ದೇಹದ (Body) ಸದೃಢ ಮತ್ತು ಅತ್ಯುತ್ತಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು (Nutrients) ಹಣ್ಣುಗಳಲ್ಲಿ ಕಂಡು ಬರುತ್ತವೆ. ಇದು ದೇಹದ ಉತ್ತಮ ಕೆಲಸ ನಿರ್ವಹಣೆಗೆ ಇದು ಅತ್ಯಂತ ಅವಶ್ಯಕ ಆಗಿದೆ. ಸಾಕಷ್ಟು ತರಹದ ಹಣ್ಣುಗಳು ಇವೆ. ಅಂತಹ ಹಣ್ಣುಗಳಲ್ಲಿ ಒಂದು ಅದ್ಭುತ ಹಣ್ಣು ಖರ್ಜೂರ. ಖರ್ಜೂರ ಹಣ್ಣು ಸ್ವಾಭಾವಿಕ ಮಾಧುರ್ಯ ಹೊಂದಿದೆ. ಹಾಗೂ ಈ ಕಾರಣದಿಂದ ಅವುಗಳನ್ನು ಸಕ್ಕರೆಗೆ ಆರೋಗ್ಯಕರ ಬದಲಿ ಪದಾರ್ಥವಾಗಿ ಬಳಕೆ ಮಾಡಬಹುದು.


    ಖರ್ಜೂರ ಸೇವನೆಯ ಆರೋಗ್ಯ ಪ್ರಯೋಜನಗಳು


    ಖರ್ಜೂರವು ಕಾರ್ಬೋಹೈಡ್ರೇಟ್‌, ಫೈಬರ್, ಪ್ರೋಟೀನ್, ಬಿ ವಿಟಮಿನ್‌, ವಿಟಮಿನ್ ಕೆ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸತು ಮತ್ತು ಮ್ಯಾಂಗನೀಸ್ ಸೇರಿದಂತೆ ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದೆ.


    ಖರ್ಜೂರ ಸೇವನೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಖರ್ಜೂರ ಹಣ್ಣಿನಲ್ಲಿ ವಿವಿಧ ರೀತಿಯ ಉತ್ಕರ್ಷಣ ನಿರೋಧಕಗಳು ಇವೆ. ಖರ್ಜೂರ ಸೇವನೆ ಸಾಕಷ್ಟು ಪ್ರಯೋಜನ ನೀಡುತ್ತದೆ.


    ಇದನ್ನೂ ಓದಿ: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ


    ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸುತ್ತದೆ


    ಖರ್ಜೂರ ಹಣ್ಣು ಜೀರ್ಣಕ್ರಿಯೆಯ ಆರೋಗ್ಯ ಸುಧಾರಿಸುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ. ರಕ್ತದ ಸಕ್ಕರೆ ನಿಯಂತ್ರಿಸುತ್ತದೆ. ಮೆದುಳಿನ ಕಾರ್ಯ ಹೆಚ್ಚಿಸುತ್ತದೆ. ಆಯುರ್ವೇದದಲ್ಲಿ ಖರ್ಜೂರದ ಹಲವು ಪ್ರಯೋಜನಗಳಿವೆ.


    ಖರ್ಜೂರವು ಪ್ರಕೃತಿಯಲ್ಲಿ ಬಿಸಿಯಲ್ಲ. ಅದರ ಸ್ವಭಾವವು ತುಂಬಾ ತಂಪಾಗಿರುತ್ತದೆ ಮತ್ತು ಹಿತಕರ ಎಂದು ಆಯುರ್ವೇದ ವೈದ್ಯ ದೀಕ್ಷಾ ಭಾವಸರ್ ಹೇಳ್ತಾರೆ.


    ಆಯುರ್ವೇದದ ಪ್ರಕಾರ ಖರ್ಜೂರ ತಿನ್ನುವುದರ ಪ್ರಯೋಜನಗಳು


    ಮಲಬದ್ಧತೆ ತಡೆಯುತ್ತದೆ, ಹೃದಯದ ಆರೋಗ್ಯ ಸುಧಾರಿಸುತ್ತದೆ, ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ, ಮೂಳೆಯ ಆರೋಗ್ಯ ಸುಧಾರಿಸುತ್ತದೆ, ರಕ್ತದೊತ್ತಡ ನಿಯಂತ್ರಿಸುತ್ತದೆ, ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ, ಮೆದುಳಿನ ಆರೋಗ್ಯ ಉತ್ತೇಜಿಸುತ್ತದೆ, ಆಯಾಸ ನಿವಾರಿಸುತ್ತದೆ, ರಕ್ತಹೀನತೆ ಕಡಿಮೆ ಮಾಡುತ್ತದೆ.


    ಆರೋಗ್ಯಕರ ತೂಕ ಕಾಪಾಡುತ್ತದೆ, ಮೂಲವ್ಯಾಧಿ ತಡೆಗೆ. ಉರಿಯೂತ ತಡೆಯುತ್ತದೆ, ಆರೋಗ್ಯಕರ ಗರ್ಭಾವಸ್ಥೆಗೆ ಸಹಕಾರಿ, ಚರ್ಮ ಮತ್ತು ಕೂದಲಿಗೆ ಉತ್ತಮ ಕಾಳಜಿಗೆ ಬೇಕು, ಶಕ್ತಿ ಮತ್ತು ತ್ರಾಣ ಹೆಚ್ಚಿಸುತ್ತದೆ.


    ಖರ್ಜೂರದ ಆಯುರ್ವೇದ ಗುಣಲಕ್ಷಣಗಳು


    ರುಚಿ, ಸಿಹಿ, ಗುಣಮಟ್ಟ, ಜೀರ್ಣಕ್ರಿಯೆಗೆ ಭಾರ, ಸ್ನಿಗ್ಧ, ವಿಪಾಕ, ವೀರ್ಯ, ಶಕ್ತಿ, ಶೀತ, ಕ್ರಿಯೆ, ಉಗ್ರವಾದ ವಾತ ಮತ್ತು ಪಿತ್ತ ಕಡಿಮೆ ಮಾಡುತ್ತದೆ, ಬಲ ನೀಡುತ್ತದೆ.


    ಖರ್ಜೂರ ತಿನ್ನಲು ಉತ್ತಮ ಸಮಯ ಯಾವುದು?


    ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು, ಊಟದ ಮೊದಲು, ಸಿಹಿ ತಿನ್ನುವ ಬಯಕೆಯಾದಾಗ, ತೂಕ ಹೆಚ್ಚಳಕ್ಕೆ ಮಲಗುವ ಸಮಯದಲ್ಲಿ ತುಪ್ಪದ ಜೊತೆ ಸೇವನೆ ಮಾಡಬಹುದು.


    ದಿನಕ್ಕೆ ಎಷ್ಟು ಖರ್ಜೂರ ತಿನ್ನಬೇಕು?


    ಯಾವುದೇ ಪದಾರ್ಥವಾಗಲಿ ಅತಿಯಾಗಿ ಸೇವನೆ ಮಾಡಬಾರದು. ಯಾಕೆಂದರೆ ಅದು ಪ್ರಯೋಜನಕ್ಕೆ ಬದಲಾಗಿ ಹಾನಿ ಉಂಟು ಮಾಡುತ್ತದೆ. ಆಯುರ್ವೇದ ವೈದ್ಯರ ಪ್ರಕಾರ, ನೀವು ದಿನಕ್ಕೆ ಎರಡರಿಂದ ಮೂರು ಖರ್ಜೂರ ತಿನ್ನಬೇಕು. ತೂಕ ಹೆಚ್ಚಳಕ್ಕೆ ದಿನಕ್ಕೆ 4 ಖರ್ಜೂರ ಸೇವಿಸಿ.


    ನೆನೆಸಿದ ಖರ್ಜೂರ ಸೇವನೆಯ ಲಾಭ


    ಖರ್ಜೂರ ನೆನೆಸಿ ಸೇವನೆ ಮಾಡುವುದು ಟ್ಯಾನಿನ್ ಅಥವಾ ಫೈಟಿಕ್ ಆಮ್ಲ ತೆಗೆದು ಹಾಕುತ್ತದೆ. ಇದು ಅದರ ಪೋಷಕಾಂಶಗಳನ್ನು ಹೀರಿಕೊಳ್ಳಲು ಸುಲಭ ಆಗುತ್ತದೆ. ನೆನೆಸುವುದರಿಂದ ಅವುಗಳನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.


    ಹಾಗಾಗಿ ಖರ್ಜೂರ ಸವಿಯಲು ಮತ್ತು ಅವುಗಳಿಂದ ಪೌಷ್ಟಿಕಾಂಶ ಹೀರಿಕೊಳ್ಳಲು ಬಯಸಿದರೆ, ಅವುಗಳನ್ನು ತಿನ್ನುವ ಮೊದಲು ರಾತ್ರಿಯಿಡೀ ನೆನೆಸಿ ನಂತರ ಬೆಳಗ್ಗೆ ಸೇವಿಸಿ.


    ಇದನ್ನೂ ಓದಿ: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!


    ಮಕ್ಕಳ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಖರ್ಜೂರ ಅತ್ಯುತ್ತಮ ಆಗಿದೆ. ಕಡಿಮೆ ತೂಕ, ಕಡಿಮೆ ಹಿಮೋಗ್ಲೋಬಿನ್ ಮತ್ತು ಕಡಿಮೆ ರೋಗ ನಿರೋಧಕ ಶಕ್ತಿ ಹೊಂದಿರುವ ಮಕ್ಕಳು ಪ್ರತಿದಿನ ಒಂದು ಸಿಹಿ ಖರ್ಜೂರ ತಿನ್ನಬೇಕು.

    Published by:renukadariyannavar
    First published: