• Home
  • »
  • News
  • »
  • lifestyle
  • »
  • Menstrual Blood Clot: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ

Menstrual Blood Clot: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಟ್ಟಿನ ಸಮಯದಲ್ಲಿ ಗರ್ಭಾಶಯವು ಹೆಪ್ಪುಗಟ್ಟಿದ ರಕ್ತ ಅಂಗಾಂಶ ಮತ್ತು ರಕ್ತದ ಜೆಲ್ ತರಹದ ಗಡ್ಡೆಯನ್ನು ಬಿಡುಗಡೆ ಮಾಡುತ್ತದೆ. ಹೆಪ್ಪುಗಟ್ಟುವಿಕೆ ದೊಡ್ಡ ಪ್ರಮಾಣದಲ್ಲಿ ಆಗಿದ್ದರೆ ಇದು ಇತರೆ ಕೆಲವು ವೈದ್ಯಕೀಯ ಸಮಸ್ಯೆಗಳ ಕಾರಣದಿಂದಲೂ ಆಗಿರಬಹುದು. ಹಾಗಾಗಿ ಅದನ್ನು ನಿರ್ಲಕ್ಷ್ಯ ಮಾಡಬಾರದು.

ಮುಂದೆ ಓದಿ ...
  • Share this:

    ಮುಟ್ಟಿನ ಸಮಯದಲ್ಲಿ (Periods Time) ಅನೇಕ ಮಹಿಳೆಯರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ (Blood Clot Problem) ಎದುರಿಸುತ್ತಾರೆ. ಇದನ್ನು ಮುಟ್ಟಿನ ರಕ್ತ ಹೆಪ್ಪುಗಟ್ಟುವಿಕೆ (Menstrual Blood Clot) ಎಂದು ಕರೆಯುತ್ತಾರೆ. ಋತುಚಕ್ರ ಸಮಯದಲ್ಲಿ ತುಂಬಾ ಮಹಿಳೆಯರು (Women’s) ತಮ್ಮ ಅವಧಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಾರೆ. ಇದು ಸಾಮಾನ್ಯ ಸಮಸ್ಯೆ ಆಗಿದೆ . ಆದರೆ ಇದು ದೊಡ್ಡ ಪ್ರಮಾಣದಲ್ಲಿ ಉಂಟಾದರೆ, ನೀವು ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಯಾಕೆಂದರೆ ಇದು ಹೆಚ್ಚಿನ ಆರೋಗ್ಯ ಸಮಸ್ಯೆಗೆ ಕಾರಣ ಆಗುತ್ತದೆ. ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವೇನು ಎಂಬುದನ್ನು ತಿಳಿಯುವುದು ತುಂಬಾ ಮುಖ್ಯ.


    ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ


    ಮುಟ್ಟಿನ ಸಮಯದಲ್ಲಿ ಗರ್ಭಾಶಯವು ಹೆಪ್ಪುಗಟ್ಟಿದ ರಕ್ತ, ಅಂಗಾಂಶ ಮತ್ತು ರಕ್ತದ ಜೆಲ್ ತರಹದ ಗಡ್ಡೆಯನ್ನು ಬಿಡುಗಡೆ ಮಾಡುತ್ತದೆ. ಹೆಪ್ಪುಗಟ್ಟುವಿಕೆ ದೊಡ್ಡ ಪ್ರಮಾಣದಲ್ಲಿ ಆಗಿದ್ದರೆ, ಇದು ಇತರೆ ಕೆಲವು ವೈದ್ಯಕೀಯ ಸಮಸ್ಯೆಗಳ ಕಾರಣದಿಂದ ಆಗಿರಬಹುದು. ಹಾಗಾಗಿ ಅದನ್ನು ನಿರ್ಲಕ್ಷ್ಯ ಮಾಡಬಾರದು.


    ಇದು ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಅಥವಾ ನೋವನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಅದಾಗ್ಯೂ ಮುಟ್ಟಿನ ಸಮಯದಲ್ಲಿ ಸಂಭವಿಸುವ ರಕ್ತ ಹೆಪ್ಪುಗಟ್ಟುವಿಕೆ ಅಪಾಯಕಾರಿ ಅಲ್ಲ ಎನ್ನುತ್ತಾರೆ ತಜ್ಞರು.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಋತುಚಕ್ರ ಸಮಯದಲ್ಲಿ ಅಧಿಕ ರಕ್ತಸ್ರಾವವಾಗಿದ್ದರೆ, ಇದು ಏಳು ದಿನಗಳಿಗಿಂತ ಹೆಚ್ಚು ಇದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಇದಕ್ಕಾಗಿ ನೀವು ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನ ಮಾಡಬಹುದು.


    ಕೆಂಪು ರಾಸ್ಪ್ಬೆರಿ ಎಲೆ ಚಹಾ


    ಒಂದು ಟೀಚಮಚ ಕೆಂಪು ರಾಸ್ಪ್ಬೆರಿ ಚಹಾ ಮಾಡಲು, ಒಂದು ಕಪ್ ನೀರು ಮತ್ತು 1 ಚಮಚ ಜೇನುತುಪ್ಪ ಬೇಕು. ಒಂದು ಚಮಚ ಕೆಂಪು ರಾಸ್ಪ್ಬೆರಿ ಚಹಾವನ್ನು ಒಂದು ಕಪ್ ನೀರಿನಲ್ಲಿ ಮಿಶ್ರಣ ಮಾಡಿ. ಇದನ್ನು 5 ನಿಮಿಷ ಕುದಿಸಿ.


    ಸ್ಟ್ರೈನ್ ಮಾಡಿ ಮತ್ತು ಚಹಾವನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಮತ್ತು ಅದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ 2 ರಿಂದ 3 ಬಾರಿ ಇದನ್ನು ಕುಡಿಯಿರಿ.


    ಮಸಾಜ್ ಮಾಡುವುದು


    ಮಸಾಜ್‌ನಲ್ಲಿ ಹಲವಾರು ವಿಧಗಳಿವೆ. ಇದು ಸಂತಾನೋತ್ಪತ್ತಿ ವ್ಯವಸ್ಥೆಯ ಆರೋಗ್ಯ ಸುಧಾರಿಸಲು ಮತ್ತು ಗರ್ಭಾಶಯದ ಸುತ್ತ ರಕ್ತ ಪರಿಚಲನೆ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತದ ಹರಿವನ್ನು ಸುಧಾರಿಸುವುದು ಮುಟ್ಟಿನ ರಕ್ತ ಹೆಪ್ಪುಗಟ್ಟುವಿಕೆ ತೆಗೆದು ಹಾಕುತ್ತದೆ.


    ಕೋಲ್ಡ್ ಕಂಪ್ರೆಸ್ ಮಾಡುವುದು


    NCBI ಯ ವರದಿ ಪ್ರಕಾರ ಕೋಲ್ಡ್ ಕಂಪ್ರೆಸ್ ಮಾಡಲು ಐಸ್ ಪ್ಯಾಕ್ ಬೇಕು. ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಕೋಲ್ಡ್ ಪ್ಯಾಕ್ ಅನ್ನು ಅನ್ವಯಿಸಿ. ಇದನ್ನು 1 ರಿಂದ 2 ನಿಮಿಷ ಬಿಡಿ. ನಂತರ ತೆಗೆಯಿರಿ. ಪ್ರತಿ ಐದು ನಿಮಿಷಗಳ ನಂತರ ಇದನ್ನು ಮೂರು ಬಾರಿ ಪುನರಾವರ್ತಿಸಿ. ನಿಮ್ಮ ಅವಧಿಯ ಸಮಯದಲ್ಲಿ ಅಥವಾ ಸ್ವಲ್ಪ ಮೊದಲು ರಕ್ತ ಹೆಪ್ಪುಗಟ್ಟುವಿಕೆ ಕಂಡಾಗ ನೀವು ಇದನ್ನು ಮಾಡಿ.


    ವಿಟಮಿನ್ಸ್ ಸೇವನೆ


    ವಿಟಮಿನ್ ಎ, ಬಿ, ಡಿ ಮತ್ತು ಸಿ ರಕ್ತಸ್ರಾವ ಅಥವಾ ಹೆಪ್ಪುಗಟ್ಟುವಿಕೆ ನಿವಾರಿಸಲು ಸಹಾಯ ಮಾಡುತ್ತದೆ. ವಿಟಮಿನ್ ಎ ಕೆಂಪು ರಕ್ತ ಕಣ ಸುಧಾರಿಸುತ್ತದೆ. ಮತ್ತು ಅದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಜೀವಕೋಶಗಳನ್ನು ಹಾನಿಯಾಗದಂತೆ ತಡೆಯುತ್ತದೆ.


    B ಜೀವಸತ್ವಗಳು ಅದರಲ್ಲೂ ವಿಶೇಷವಾಗಿ ವಿಟಮಿನ್ B6, ಪ್ರೋಸ್ಟಗ್ಲಾಂಡಿನ್‌ಗಳ ಉತ್ಪಾದನೆಗೆ ಅವಶ್ಯಕ. ಇದು ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡಲು ಸಹಕಾರಿ. ವಿಟಮಿನ್ ಡಿ ಮತ್ತು ವಿಟಮಿನ್ ಸಿ ರಕ್ತನಾಳಗಳನ್ನು ಬಲಪಡಿಸಲು ಸಹಕಾರಿ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಶುಂಠಿ ಚಹಾ


    ಶುಂಠಿ ಚಹಾ ಸೇವನೆ ನಿಮಗೆ ವಿಶ್ರಾಂತಿ ಪಡೆಯಲು ಸಹಕಾರಿ. ಫೈಟೊಥೆರಪಿ ರಿಸರ್ಚ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ನಿಯಮಿತವಾಗಿ ಶುಂಠಿ ಸೇವನೆ ಭಾರೀ ರಕ್ತದ ಹರಿವು ಮತ್ತು ಮುಟ್ಟಿನ ಸಮಯದಲ್ಲಿ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುತ್ತದೆ.

    Published by:renukadariyannavar
    First published: