• Home
  • »
  • News
  • »
  • lifestyle
  • »
  • Eye Problem: ಕಣ್ಣಿನಿಂದ ಬರತ್ತೆ ರಕ್ತ! ಈ ಅಪರೂಪದ ರೋಗದ ಬಗ್ಗೆ ತಿಳಿಯಿರಿ

Eye Problem: ಕಣ್ಣಿನಿಂದ ಬರತ್ತೆ ರಕ್ತ! ಈ ಅಪರೂಪದ ರೋಗದ ಬಗ್ಗೆ ತಿಳಿಯಿರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಿಮೋಲಾಕ್ರಿಯಾ ಎಂಬ ಕಾಯಿಲೆಯ ಬಗ್ಗೆ ಬಹುಶಃ ನೀವು ಕೇಳಿರದೇ ಇರಬಹುದು. ಹಿಮೋಲಾಕ್ರಿಯಾ ಕಾಯಿಲೆ ಲಕ್ಷಣಗಳು ನಿಮಗೆ ಆಶ್ಚರ್ಯ ಉಂಟು ಮಾಡಬಹುದು. ಹಿಮೋಲಾಕ್ರಿಯಾ ಅಪರೂಪದ ಕಾಯಿಲೆ ಆಗಿದೆ. ಈ ರೋಗಿಯ ಕಣ್ಣುಗಳಿಂದ ರಕ್ತದ ಕಣ್ಣೀರು ಬರುತ್ತದೆ.

  • Share this:

    ಸಿನಿಮಾಗಳಲ್ಲಿ (Cinema) ರಕ್ತ ಕಣ್ಣೀರು ಬರುವುದನ್ನು ನೋಡಿರ್ತೀರಿ. ಆದ್ರೆ ನಿಜ ಜೀವನದಲ್ಲೂ (Life) ರಕ್ತ ಕಣ್ಣೀರು ಬರುತ್ತದೆ. ಇದು ಕಾಯಿಲೆಯ ಸಂಕೇತ (Disease Sign). ಕೆಲವು ಕಾಯಿಲೆಗಳ ಲಕ್ಷಣಗಳು (Symptoms) ಸೌಮ್ಯವಾಗಿರುತ್ತವೆ. ಕೆಲವು ಕಾಯಿಲೆಗಳ ಲಕ್ಷಣಗಳು ದೇಹದ (Body) ಮೇಲೆ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ (Effect) ಬೀರುವ ಮೂಲಕ ಗೋಚರಿಸುತ್ತವೆ. ಆದರೆ ಕೆಲವು ಸಂದರ್ಭದಲ್ಲಿ ಕಾಯಿಲೆಗಳ ಸಂಕೇತಗಳು ಬಾಧಿಸುತ್ತವೆ. ಹಿಮೋಲಾಕ್ರಿಯಾ ಎಂಬ ಕಾಯಿಲೆಯ ಬಗ್ಗೆ ಬಹುಶಃ ನೀವು ಕೇಳಿರದೇ ಇರಬಹುದು. ಹಿಮೋಲಾಕ್ರಿಯಾ ಕಾಯಿಲೆ ಲಕ್ಷಣಗಳು ನಿಮಗೆ ಆಶ್ಚರ್ಯ ಉಂಟು ಮಾಡಬಹುದು. ಹಿಮೋಲಾಕ್ರಿಯಾ ಅಪರೂಪದ ಕಾಯಿಲೆ ಆಗಿದೆ.  


    ಹಿಮೋಲಾಕ್ರಿಯಾ ಅಪರೂಪದ ಕಾಯಿಲೆ


    ಹಿಮೋಲಾಕ್ರಿಯಾ ಅಪರೂಪದ ಕಾಯಿಲೆ ಹೊಂದಿರುವ ರೋಗಿಯ ಕಣ್ಣುಗಳಿಂದ ರಕ್ತದ ಕಣ್ಣೀರು ಬರುತ್ತದೆ. ಈ ರೋಗ ಲಕ್ಷಣ ಕಂಡು ಬಂದಾಗ ಜನರು ಮಾಟ, ತಂತ್ರ, ದೆವ್ವ ಹಿಡಿದಿದೆ ಎಂದು ಭಾವಿಸುತ್ತಾರೆ. ತಂತ್ರ ವಾಮಾಚಾರ ಎಂದು ಹೆಸರಿಟ್ಟು ಆಲೋಚನೆ ಮಾಡುತ್ತಾರೆ.


    ಆದರೆ ಹಿಮೋಲಾಕ್ರಿಯಾ ಅಪರೂಪದ ಕಾಯಿಲೆಯ ಬಗ್ಗೆ ಈ ರೀತಿಯ ತಪ್ಪನ್ನು ಮಾಡಬೇಡಿ. ನಿಮ್ಮ ಸುತ್ತಮುತ್ತಲಿನ ಯಾರಾದರೂ ಈ ರೋಗ ಲಕ್ಷಣದಿಂದ ಬಳಲುತ್ತಿದ್ದರೆ ತಕ್ಷಣ ವೈದ್ಯರ ಬಳಿಗೆ ಕರೆದೊಯ್ಯಿರಿ. ಚಿಕಿತ್ಸೆ ಕೊಡಿಸಿರಿ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಹಿಮೋಲಾಕ್ರಿಯಾ ಕಾಯಿಲೆ ಎಂದರೇನು?


    ದಿಲ್ಲಿಯ ಸೆಂಟರ್ ಫಾರ್ ಸೈಟ್ ಐ ಹಾಸ್ಪಿಟಲ್‌ ನ ಅಧ್ಯಕ್ಷರಾದ ಡಾ. ಮಹಿಪಾಲ್ ಸಿಂಗ್ ಸಚ್‌ದೇವ್ ಅವರು ಕಣ್ಣೀರಿನಲ್ಲಿ ರಕ್ತ ಸ್ರಾವವು ಹಿಮೊಲಾಕ್ರಿಯಾ ಎಂಬ ವೈದ್ಯಕೀಯ ಸ್ಥಿತಿ ಆಗಿದೆ ಎಂದು ಹೇಳುತ್ತಾರೆ. ಇದನ್ನು ರಕ್ತಸಿಕ್ತ ಕಣ್ಣೀರು ಎಂದು ಕರೆಯುತ್ತಾರೆ. ಇದೊಂದು ಅಪರೂಪದ ಸನ್ನಿವೇಶ. ಈ ಕಣ್ಣೀರು ಸ್ವಲ್ಪ ಕೆಂಪು ಬಣ್ಣದ್ದಾಗಿರಬಹುದು. ಸಂಪೂರ್ಣವಾಗಿ ರಕ್ತಸ್ರಾವ ಆಗಬಹುದು.


    ಹಿಮೋಲಾಕ್ರಿಯಾ ಉಂಟು ಮಾಡಲು ಕಾರಣಗಳು ಯಾವವು?


    ಹಿಮೋಲಾಕ್ರಿಯಾ ಕಾಯಿಲೆ ಸಂಭವಿಸಲು ಹಲವು ಕಾರಣಗಳು ಇವೆ ಎಂದು ನೇತ್ರ ತಜ್ಞರು ಹೇಳುತ್ತಾರೆ. ಅವುಗಳಲ್ಲಿ ಹಾರ್ಮೋನ್ ಬದಲಾವಣೆ, ಉರಿಯೂತ, ಕಂಜಂಕ್ಟಿವಲ್ ಗಾಯ, ಗಾಯ ಮತ್ತು ಆಘಾತ, ಮೂಗಿನ ರಕ್ತಸ್ರಾವ, ತೀವ್ರ ರಕ್ತದೊತ್ತಡ, ಗಡ್ಡೆ, ಹಿಮೋಫಿಲಿಯಾ, ರಕ್ತ ರೋಗಗಳು, ಬ್ಲಾಕ್ ಕಣ್ಣೀರಿನ ನಾಳ ಕಾರಣ ಆಗಬಹುದು.


    ಹಿಮೊಲಾಕ್ರಿಯಾ ಗುಣಪಡಿಸಬಹುದೇ?


    ಡಾ.ಮಹಿಪಾಲ್ ಸಿಂಗ್ ಸಚ್‌ದೇವ್ ಅವರು ರಕ್ತಸಿಕ್ತ ಕಣ್ಣೀರಿಗೆ ಚಿಕಿತ್ಸೆ ಅಗತ್ಯವಿಲ್ಲ. ಮತ್ತು ಯಾವುದೇ ಸಮಯದಲ್ಲಿ ಅವು ತಾವಾಗಿಯೇ ಗುಣವಾಗಬಹುದು. ಆದರೆ ಇದು ದೀರ್ಘ ಕಾಲದವರೆಗೆ ಗುಣವಾಗದೇ ಹೋದರೆ ನಂತರ ಚಿಕಿತ್ಸೆ ಅಗತ್ಯವಿದೆ. ಇದನ್ನು ಅವಲಂಬಿಸಿ ವೈದ್ಯರು ಸೋಂಕಿಗೆ ಔಷಧ ಮತ್ತು ಕಣ್ಣಿನ ಹನಿ ನೀಡುತ್ತಾರೆ. ಅಲ್ಲದೇ ತೀವ್ರತರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿದೆ.


    ಹಿಮೊಲಾಕ್ರಿಯಾ ಎಷ್ಟು ಅಪಾಯಕಾರಿ?


    ಕಣ್ಣುಗಳಿಂದ ಹರಿದು ಹೋಗುವುದು ಮೊದಲ ನೋಟದಲ್ಲಿ ಭಯಾನಕ ಮತ್ತು ಆಘಾತಕಾರಿ ಎಂದು ಕಾಣಿಸುತ್ತದೆ. ಹಿಮೊಲಾಕ್ರಿಯಾ ಆಗಾಗ್ಗೆ ತನ್ನಂಗೆ ತಾನೇ ಸರಿ ಹೋಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ. ಇದು ಅಂದುಕೊಂಡಷ್ಟು ಅಪಾಯಕಾರಿ ಅಲ್ಲ.


    ಇದನ್ನು ವಿವಿಧ ರೋಗಗಳು ಅಥವಾ ಅಸ್ವಸ್ಥತೆಗಳ ಚಿಹ್ನೆ ಅಥವಾ ರೋಗ ಲಕ್ಷಣವಾಗಿ ಬಳಸಲಾಗುತ್ತದೆ. ಕಣ್ಣಿನ ಅಸ್ವಸ್ಥತೆ ಅಥವಾ ನೋವಿನಂತಹ ರಕ್ತ ಸಿಕ್ತ ಕಣ್ಣೀರನ್ನು ಹೊರತುಪಡಿಸಿ ನೀವು ಯಾವುದೇ ರೋಗ ಲಕ್ಷಣಗಳನ್ನು ಅನುಭವಿಸಿದರೆ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಿರಿ.


    ಹಿಮೋಲಾಕ್ರಿಯಾ ತಡೆಯುವುದು ಹೇಗೆ?


    ನಿಯಮಿತ ಕಣ್ಣಿನ ಪರೀಕ್ಷೆ ಮಾಡಿಸುವ ಮೂಲಕ ಮತ್ತು ಸೂಕ್ತ ನಿಯಮಿತ ವೈದ್ಯರ ನಿರ್ದೇಶನದಂತೆ ಯಾವುದೇ ಆಧಾರವಾಗಿರುವ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುವ ಮೂಲಕ ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಬೇಕು.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಮತ್ತು ವೈದ್ಯರು ಶಿಫಾರಸು ಮಾಡುವ ಮೂಲಕ ಹಿಮೋಲಾಕ್ರಿಯಾ ತಡೆಯಬಹುದು. ಯಾವುದೇ ರೀತಿಯ ಗಾಯವಾಗವಿಕೆ ಇಂದ ಕಣ್ಣುಗಳನ್ನು ರಕ್ಷಿಸಿ. ಅಲ್ಲದೆ ನಿಮ್ಮ ಕಣ್ಣುಗಳನ್ನು ತುಂಬಾ ಬಲವಾಗಿ ಉಜ್ಜುವುದನ್ನು ತಪ್ಪಿಸಿ.

    Published by:renukadariyannavar
    First published: