• Home
  • »
  • News
  • »
  • lifestyle
  • »
  • Blend Cooking Oils: ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಅಡುಗೆಗೆ ಬಳಸಿದ್ರೆ ಹೃದಯದ ಸಮಸ್ಯೆ ಬರಲ್ವಂತೆ

Blend Cooking Oils: ಈ ಎಣ್ಣೆಗಳನ್ನು ಮಿಕ್ಸ್ ಮಾಡಿ ಅಡುಗೆಗೆ ಬಳಸಿದ್ರೆ ಹೃದಯದ ಸಮಸ್ಯೆ ಬರಲ್ವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Blend Cooking Oils Benefits: ಇಷ್ಟೇ ಅಲ್ಲದೇ, ಇದರಲ್ಲಿರುವ ಅಗತ್ಯವಾದ ಕೊಬ್ಬಿನಾಮ್ಲಗಳು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ.  ಕೀಲು, ಅಂಗಾಂಶಗಳ ಆರೋಗ್ಯ ಮತ್ತು ರಕ್ತ ಪರಿಚಲನೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಉರಿಯೂತವನ್ನು ಸಹ ಈ ಎಣ್ಣೆಗಳು ನಿಯಂತ್ರಿಸುತ್ತದೆ.

ಮುಂದೆ ಓದಿ ...
  • Share this:

ಅಡುಗೆಯಲ್ಲಿ ಬಳಸುವ ಎಣ್ಣೆಗಳು (cooking Oil) ಆಹಾರದ ರುಚಿಗೆ ಮಾತ್ರ ಅಲ್ಲ, ದೇಹದ ಆರೋಗ್ಯಕ್ಕೂ (Health Care) ಸಹ ಬಹಳ ಉಪಯೋಗವಿದೆ. ಭಾರತದಲ್ಲಿ ಬಳಸಲಾಗುವ ತುಪ್ಪ (Ghee), ಕಡಲೆಕಾಯಿ ಎಣ್ಣೆ, ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯಂತಹ (Coconut Oil) ಅಡುಗೆ ಎಣ್ಣೆಗಳು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಅಡುಗೆ ಎಣ್ಣೆಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಎಣ್ಣೆ ಒಳ್ಳೆಯ ಕೊಬ್ಬು, ದೇಹದಲ್ಲಿ ಶಕ್ತಿಯ ಶೇಖರಣೆ, ದೇಹದಲ್ಲಿ ವಿವಿಧ ಕಾರ್ಯಗಳಿಗೆ ಸಹಕಾರ, ಪ್ರಮುಖ ಅಂಗಗಳ ರಕ್ಷಣೆ ಮತ್ತು ಹಾರ್ಮೋನ್ ಉತ್ಪಾದನೆಯಂತಹ ಪ್ರಮುಖ ಕೆಲಸಗಳಿಗೆ ಸಹಕಾರಿಯಾಗಿದೆ ಎನ್ನುವುದರಲ್ಲಿ  ಯಾವುದೇ ಅನುಮಾನವಿಲ್ಲ.


ಇಷ್ಟೇ ಅಲ್ಲದೇ, ಇದರಲ್ಲಿರುವ ಅಗತ್ಯವಾದ ಕೊಬ್ಬಿನಾಮ್ಲಗಳು ಕೊಲೆಸ್ಟ್ರಾಲ್ ನಿಯಂತ್ರಿಸಲು ಸಹಾಯ ಮಾಡುತ್ತದೆ.  ಕೀಲು, ಅಂಗಾಂಶಗಳ ಆರೋಗ್ಯ ಮತ್ತು ರಕ್ತ ಪರಿಚಲನೆಯಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಉರಿಯೂತವನ್ನು ಸಹ ಈ ಎಣ್ಣೆಗಳು ನಿಯಂತ್ರಿಸುತ್ತದೆ. ಕೊಬ್ಬುಗಳು ನರಗಳ ಪ್ರಚೋದನೆ, ನೆನಪಿನ ಶಕ್ತಿ ಹೆಚ್ಚಿಸಲು ಮತ್ತು ಅಂಗಾಂಶ ರಚನೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ.


ಎಣ್ಣೆಗಳ ಮಿಶ್ರಣ ಮಾಡಿ ಬಳಸುವುದು ಸೂಕ್ತವಾ?


ಅಷ್ಟೇ ಅಲ್ಲ, ಇತ್ತೀಚೆಗೆ ವಿವಿಧ ಎಣ್ಣೆಗಳನ್ನು ಮಿಶ್ರಣ ಮಾಡಿ ಬಳಸುವ ಅಭ್ಯಾಸ ಆರಂಭವಾಗಿದೆ. ಈ ಮಿಶ್ರಿತ ತೈಲಗಳ ಬಳಕೆ ಹೆಚ್ಚುತ್ತಿದೆ. ಆಹಾರದಲ್ಲಿ ಕಬ್ಬನ್ನು ಕಡಿಮೆ ಮಾಡಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸಲು ನಾವು ಹೆಚ್ಚು ಗಮನಹರಿಸುತ್ತಿರುವುದರ ಲಕ್ಷಣ ಇದು. ಆದರೆ ಕೊಬ್ಬನ್ನು ಕಡಿಮೆ ಮಾಡುವತ್ತ ಗಮನ ಹರಿಸುವ ಬದಲು, ನಿಮ್ಮ ಆಹಾರದಲ್ಲಿ ಉತ್ತಮ ಗುಣಮಟ್ಟವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ನೀವು ಕಲಿಯಬೇಕು. ಈ ಎಣ್ಣೆಗಳನ್ನು ಮಿಶ್ರಣ ಮಾಡಿ ಬಳಕೆ ಮೂಲಕ ಇಂತಹ ಪ್ರಯೋಜನಗಳನ್ನು ಪಡೆಯಬಹುದು.


ಇದನ್ನೂ ಓದಿ: ಚಪಾತಿ ಇಷ್ಟ ಅಂತ ಜಾಸ್ತಿ ತಿನ್ಬೇಡಿ, ಈ ಸಮಸ್ಯೆಗಳು ಶುರುವಾಗುತ್ತೆ


ಉದಾಹರಣೆಗೆ, 5 ವರ್ಷಗಳಿಂದ ಅಡುಗೆ ಮಾಡುವಾಗ ಮಿಶ್ರಣ ತೈಲವನ್ನು ಬಳಸುತ್ತಿರುವವರು ಸಕಾರಾತ್ಮಕ ಬದಲಾವಣೆಗಳನ್ನು ಅನುಭವಿಸುತ್ತಿದ್ದಾರೆಂದು ವರದಿಯೊಂದು ತಿಳಿಸಿದೆ. ಈ ಮಿಶ್ರಿತ ಉತ್ತಮ ಮಾನಸಿಕ ಆರೋಗ್ಯ, ಚೈತನ್ಯ, ಹೆಚ್ಚು ಶಕ್ತಿ ಮತ್ತು ಉತ್ತಮ ಚರ್ಮ ಮತ್ತು ಚರ್ಮದ ಆರೋಗ್ಯವು ಬದಲಾಗುತ್ತದೆ. ಈ ರೀತಿ ವಿವಿಧ ಎಣ್ಣೆಗಳನ್ನು ಮಿಶ್ರಣ ಮಾಡುವುದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದು ಇಲ್ಲಿದೆ



ಹೃದಯದ ಆರೋಗ್ಯ:


ಹೃದ್ರೋಗ ಮತ್ತು ಸ್ಥೂಲಕಾಯತೆಯ ನಡುವಿನ ಸಂಬಂಧದ ಬಗ್ಗೆ ತಿಳಿಯಲು ಅನೇಕ ಅಧ್ಯಯನಗಳಿವೆ. ಹೆಚ್ಚು ಸ್ಯಾಚುರೇಟೆಡ್ ಕೊಬ್ಬನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ದೇಹವನ್ನು ಸೇರುತ್ತದೆ. ಆದರೆ ಮಿಶ್ರಿತ ಎಣ್ಣೆಯಲ್ಲಿ ಪಾಲಿ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳ ಅನುಪಾತ ಸರಿಯಾಗಿ ಇರುವುದು, ಇದನ್ನು ಬಳಸಲು ಉತ್ತಮವಾದ ಕಾರಣ, ಇದು ಹೃದಯದ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.


ಪೋಷಕಾಂಶಗಳು


ಸಾಮಾನ್ಯ ಅಡುಗೆ ಎಣ್ಣೆಯನ್ನು ಬಿಸಿ ಮಾಡುವುದರಿಂದ ಬೊಜ್ಜು, ಹೃದಯ ಹಾನಿ ಮತ್ತು ಕ್ಯಾನ್ಸರ್‌ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಮಿಶ್ರಿತ ಎಣ್ಣೆಯು ಭಾರತೀಯ ಅಡುಗೆಗೆ ಅಗತ್ಯವಾದ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದೆ.


ಇದನ್ನೂ ಓದಿ: ಕೆಮಿಕಲ್ಸ್​ ಇಲ್ಲದೇ ಮನೆಯಲ್ಲಿಯೇ ಪಾತ್ರೆ ತೊಳೆಯುವ ಲಿಕ್ವಿಡ್​ ನೀವೇ ಮಾಡಿ


ಹೀಗಾಗಿ, ಎಣ್ಣೆಯ ಪೋಷಕಾಂಶಗಳು ನಿಮ್ಮ ಆರೋಗ್ಯಕ್ಕೆ ಬಹಳ ಉಪಯುಕ್ತ.  ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಮಿಶ್ರಿತ ಎಣ್ಣೆ  ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೃದಯವನ್ನು ಮತ್ತು ಇಡೀ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

Published by:Sandhya M
First published: