Diabetes Skin Problem: ಚರ್ಮದಲ್ಲಿ ಕಪ್ಪು ಕಲೆ, ಕಣ್ಣುಗಳ ಊತ ಮಧುಮೇಹ ರೋಗದ ಲಕ್ಷಣ ಆಗಿರಬಹುದು ಎಚ್ಚರಿಕೆ!

ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವುದು ಬಹಳ ಮುಖ್ಯ. ದೇಹದ ಹೊರತಾಗಿ ರಕ್ತದ ಸಕ್ಕರೆ ಮಟ್ಟ ಹೆಚ್ಚಾದರೆ ಚರ್ಮದ ಮೇಲೆ ಕಪ್ಪು ವಲಯ, ಚರ್ಮ ಸಡಿಲಗೊಳ್ಳುತ್ತದೆ. ಮತ್ತು ಕಣ್ಣುಗಳ ಊತ ಸೇರಿದಂತೆ ಕೆಲ ಸಂಕೇತಗಳು ಕಂಡು ಬರುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಧುಮೇಹ (Sugar) ರೋಗಿಗಳಲ್ಲಿ (Patients) ಹಲವು ತರಹದ ಸಂಕೇತಗಳು (Signs) ಕಾಣಿಸಿಕೊಳ್ಳುತ್ತವೆ. ಮಧುಮೇಹ (Diabetes) ರೋಗಿಗಳ ದೇಹದ (Body) ಸಕ್ಕರೆ ಪ್ರಮಾಣ ಹೆಚ್ಚಾಗಲು ಪ್ರಾರಂಭಿಸುತ್ತದೆ. ರಕ್ತದ ಸಕ್ಕರೆ ಮಟ್ಟ (Blood Sugar Level) ವಿಪರೀತ ಏರಿಕೆ ಕಂಡಾಗ  ನರಗಳಿಗೆ ಅಗತ್ಯ ಪೋಷಕಾಂಶ ಸಾಗಿಸುವ ನಾಳಗಳಿಗೆ ಹಾನಿ ಉಂಟಾಗುತ್ತದೆ. ನರಗಳಿಗೆ ಅಗತ್ಯ ಪೋಷಕಾಂಶಗಳು ಸಮಸ್ಯೆಗೆ ಒಳಗಾದರೆ ತುಂಬಾ ಅಪಾಯ ತಂದೊಡ್ಡುತ್ತವೆ. ಅಂತಹ ಸ್ಥಿತಿಯಲ್ಲಿ, ನೀವು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುವುದು ಬಹಳ ಮುಖ್ಯ. ದೇಹದ ಹೊರತಾಗಿ ರಕ್ತದ ಸಕ್ಕರೆ ಮಟ್ಟ ಹೆಚ್ಚಾದರೆ ಚರ್ಮದ ಮೇಲೆ ಕಪ್ಪು ವಲಯ, ಚರ್ಮ ಸಡಿಲಗೊಳ್ಳುತ್ತದೆ. ಮತ್ತು ಕಣ್ಣುಗಳ ಊತ ಸೇರಿದಂತೆ ಕೆಲ ಸಂಕೇತಗಳು ಕಂಡು ಬರುತ್ತವೆ.

    ದೇಹದ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಿರುವುದರ ಸಂಕೇತ

    ಈ ಎಲ್ಲಾ ವಿಷಯಗಳು ನಿಮ್ಮ ದೇಹದ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗಿರುವುದರ ಸಂಕೇತ ಎಂದು ಸೂಚನೆ ನೀಡುತ್ತದೆ. ಮಧುಮೇಹ ನಿರ್ವಹಣೆ ತುಂಬಾ ಕಷ್ಟವಾದಾಗ ಮತ್ತು ರಕ್ತದ ಸಕ್ಕರೆ ಮಟ್ಟ ವಿಪರೀತ ಹೆಚ್ಚಾದರೆ ಚರ್ಮದಲ್ಲಿ ಅನೇಕ ಬದಲಾವಣೆ ಉಂಟಾಗುತ್ತವೆ.

    ಮಧುಮೇಹದ ಸಾಮಾನ್ಯ ಲಕ್ಷಣಗಳು

    ಚರ್ಮ ಒಣಗುವುದು ಮಧುಮೇಹ ಕಾಯಿಲೆಯ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿದೆ. ರಕ್ತದ ಸಕ್ಕರೆ ಜೀವಕೋಶಗಳಿಂದ ದ್ರವ ಎಳೆಯಲು ಪ್ರಾರಂಭಿಸುತ್ತವೆ. ಹೀಗಾದಾಗ ಚರ್ಮ ಒಣಗುವಿಕೆ ಸಮಸ್ಯೆ ಉಂಟಾಗುತ್ತದೆ. ಅಂತಹ ಸ್ಥಿತಿಯಲ್ಲಿ, ಹೆಚ್ಚಿನ ಪ್ರಮಾಣದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು  ತೆಗೆದು ಹಾಕಲು ದೇಹವು ಮೂತ್ರವನ್ನು ಉತ್ಪಾದನೆ ಮಾಡುತ್ತದೆ.

    ಇದನ್ನೂ ಓದಿ: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ

    ದೇಹದಿಂದ ಸಕ್ಕರೆ ಪ್ರಮಾಣವನ್ನು ಹೊರಕ್ಕೆ ಹಾಕಲು ನೀರು ಬೇಕು. ಮತ್ತು ಸಾಕಷ್ಟು ನೀರು ಸಿಗದೇ ಹೋದರೆ ನಿರ್ಜಲೀಕರಣ ಸಮಸ್ಯೆ ಉಂಟಾಗುತ್ತದೆ. ಇದರಿಂದಾಗಿ ಚರ್ಮದಲ್ಲಿ ಸಡಿಲತೆ ಮತ್ತು ಕಣ್ಣುಗಳಲ್ಲಿ ಊತ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

    ಮಧುಮೇಹವು ಗ್ಲೈಕೇಶನ್ ಪ್ರಕ್ರಿಯೆಗೆ ಹಾನಿ ಉಂಟು ಮಾಡುತ್ತದೆ

    ಮಧುಮೇಹವು ಗ್ಲೈಕೇಶನ್ ಪ್ರಕ್ರಿಯೆಗೆ ಹಾನಿ ಉಂಟು ಮಾಡುತ್ತದೆ. ಈ ಕಾರಣದಿಂದ ಚರ್ಮದ ಹಿಗ್ಗಿಸುವಿಕೆ ಕಡಿಮೆಯಾಗಲು ಆರಂಭಿಸುತ್ತದೆ. ಮತ್ತು ಕಣ್ಣುಗಳ ಸುತ್ತಲೂ ಕಪ್ಪು ವಲಯ ಕಾಣಿಸಿಕೊಳ್ಳುತ್ತವೆ. ಕಡಿಮೆ ಹಿಗ್ಗಿಸುವಿಕೆ ಚರ್ಮವನ್ನು ತುಂಬಾ ಸಡಿಲಗೊಳ್ಳುವಂತೆ ಮಾಡುತ್ತದೆ. ಚರ್ಮದ ಮೇಲೆ ಮಧುಮೇಹದ ಇತರೆ ಲಕ್ಷಣಗಳು ಗೋಚರಿಸುತ್ತವೆ.

    ಕುತ್ತಿಗೆಯ ಸುತ್ತಲಿನ ಚರ್ಮ ಕಪ್ಪಾಗುವುದು

    ನಿಮ್ಮ ಕತ್ತಿನ ಸುತ್ತಲಿನ ಚರ್ಮದ ಬಣ್ಣ ಕಪ್ಪಾಗಲು ಪ್ರಾರಂಭಿಸಿದರೆ, ನಿಮ್ಮ ರಕ್ತದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗಿದೆ ಎಂದರ್ಥ. ಈ ಚರ್ಮದ ಸ್ಥಿತಿಯ ವೈದ್ಯಕೀಯ ಹೆಸರು ಅಕಾಂತೋಸಿಸ್ ನಿಗ್ರಿಕನ್ಸ್. ಅಕಾಂತೋಸಿಸ್ ನಿಗ್ರಿಕಾನ್ಸ್ ಸಹ ಮಧುಮೇಹದ ಚಿಹ್ನೆ ಆಗಿರಬಹುದು.

    ಗುಳ್ಳೆಗಳು ಆಗುವುದು

    ಇದು ಕೆಲವೇ ಜನರಲ್ಲಿ ಕಂಡು ಬರುತ್ತದೆ. ಆದರೆ ಮಧುಮೇಹ ರೋಗಿಗಳು ಚರ್ಮದ ಮೇಲೆ ಹುಣ್ಣುಗಳ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಕಾಯಿಲೆಯಲ್ಲಿ ದೇಹದ ಯಾವುದೇ ಭಾಗದಲ್ಲಿ ಗುಳ್ಳೆಗಳು ಏಳಲು ಶುರು ಆಗುತ್ತದೆ.

    ಚರ್ಮದ ಸೋಂಕಿನ ಸಮಸ್ಯೆ

    ಮಧುಮೇಹ ರೋಗಿಗಳು ಚರ್ಮದ ಸೋಂಕಿನ ಸಮಸ್ಯೆ ಎದುರಿಸುತ್ತಾರೆ. ಮಧುಮೇಹದಿಂದ ಉಂಟಾಗುವ ಈ ಚರ್ಮದ ಸೋಂಕು ದೇಹದ ಯಾವುದೇ ಭಾಗದಲ್ಲಿ ಬೇಕಾದರೂ ಸಂಭವಿಸಬಹುದು.

    ಚರ್ಮ ಗಟ್ಟಿ ಆಗುವುದು

    ಮಧುಮೇಹದಿಂದ ನಿಮ್ಮ ದೇಹದ ಕೆಲವು ಭಾಗಗಳ ಚರ್ಮ ತುಂಬಾ ಗಟ್ಟಿಯಾಗುತ್ತದೆ ಇದರಿಂದಾಗಿ ಚಲನೆಯಲ್ಲಿ ಸಾಕಷ್ಟು ಸಮಸ್ಯೆ ಇರುತ್ತದೆ.

    ಇದನ್ನೂ ಓದಿ: ನೀವು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಹಗ್ಗದ ಜಂಪಿಂಗ್ ಪ್ರಯೋಜನಕಾರಿ

    ಮಧುಮೇಹವನ್ನು ದೀರ್ಘಕಾಲದವರೆಗೆ ನಿಯಂತ್ರಿಸದೇ ಹೋದರೆ ಬೆರಳುಗಳ ಚರ್ಮವು ಕಲ್ಲಿನಂತೆ ಗಟ್ಟಿಯಾಗುತ್ತದೆ. ಮೊಣಕಾಲು, ಮೊಣಕೈ ಮತ್ತು ಕಣಕಾಲು ಸುತ್ತಲಿನ ಚರ್ಮವು ತುಂಬಾ ಗಟ್ಟಿಯಾಗುತ್ತದೆ.
    Published by:renukadariyannavar
    First published: