ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ (Home) ಸಾಕಷ್ಟು ಆಹಾರ ಪದಾರ್ಥಗಳಿವೆ (Food Ingredients). ಊಟವನ್ನು ಸರಿಯಾದ ರೀತಿಯಲ್ಲಿ ರುಚಿಯಾಗಿಸಲು (Sweet) ಉಪ್ಪು ಬೇಕು. ಊಟದಲ್ಲಿ ಉಪ್ಪು (Salt) ಇಲ್ಲದಿದ್ದರೆ ಯಾವ ಪದಾರ್ಥವು ರುಚಿ ಎನಿಸುವುದಿಲ್ಲ. ಅದಾಗ್ಯೂ ಬಿಳಿ ಉಪ್ಪಿಗಿಂತ ಮನೆಯಲ್ಲಿ ಕಪ್ಪು ಉಪ್ಪು ಬಳಕೆ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಕಪ್ಪು ಉಪ್ಪು ನಮ್ಮೆಲ್ಲರ ಅಡುಗೆ ಮನೆಯಲ್ಲಿ ಕಂಡು ಬರುತ್ತದೆ. ಕಪ್ಪು ಉಪ್ಪನ್ನು ಪ್ರಾಚೀನ ಕಾಲದಿಂದಲೂ ಭಾರತೀಯ ಆಹಾರ ಮತ್ತು ದೈನಂದಿನ ಜೀವನದಲ್ಲಿ ಬಳಕೆ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಸಾಕಷ್ಟು ಅನುಕೂಲತೆ ತಂದು ಕೊಡುತ್ತದೆ. ಮತ್ತು ಆಹಾರದ ರುಚಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಣ್ಣಿನ ರಸ, ಒಣ ಹಣ್ಣುಗಳು ಹಾಗೂ ಆಹಾರದ ರುಚಿ ಹೆಚ್ಚಿಸಲು ಕಪ್ಪು ಉಪ್ಪನ್ನು ಬಳಕೆ ಮಾಡಲಾಗುತ್ತದೆ. ಆದರೆ ಕಪ್ಪು ಉಪ್ಪು ಆರೋಗ್ಯಕ್ಕೆ ಹಾಗೂ ರುಚಿಗೆ ತುಂಬಾ ಪ್ರಯೋಜನಕಾರಿ. ಇದು ನಮ್ಮೆಲ್ಲರ ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ಕಪ್ಪು ಉಪ್ಪಿನ ಔಷಧೀಯ ಗುಣಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಕಪ್ಪು ಉಪ್ಪನ್ನು ತೂಕ ನಷ್ಟಕ್ಕೆ ಮತ್ತು ಕೂದಲು ಮತ್ತು ಚರ್ಮದ ಆರೋಗ್ಯಕ್ಕೆ ಬಳಕೆ ಮಾಡಲಾಗುತ್ತದೆ. ಹಾಗಾದರೆ ಕಪ್ಪು ಉಪ್ಪಿನ ಪ್ರಯೋಜನಗಳ ಬಗ್ಗೆ ಇಲ್ಲಿ ನಾವು ತಿಳಿಯೋಣ.
ಇದನ್ನೂ ಓದಿ: ಮುಖದ ಕ್ಲೆನ್ಸಿಂಗ್ ಗೆ ದುಬಾರಿ ವಸ್ತುಗಳ ಮೊರೆ ಹೋಗುವುದು ಬಿಡಿ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ನೋಡಿ
ಕಪ್ಪು ಉಪ್ಪು ಸೇವನೆ ಮಾಡುವುದರಿಂದ ಯಾವ ಪ್ರಯೋಜನಗಳು ಲಭ್ಯವಾಗುತ್ತದೆ?
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ಕಪ್ಪು ಉಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತವೆ. ಇದು ನಿಮ್ಮ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ಕಪ್ಪು ಉಪ್ಪನ್ನು ಬಳಸಬೇಕೆಂದಿದ್ದರೆ ಬಿಸಿ ನೀರಿಗೆ ಕಪ್ಪು ಉಪ್ಪನ್ನು ಬೆರೆಸಿ ಕುಡಿಯಿರಿ.
ಅದರ ಪರಿಣಾಮ ಹೆಚ್ಚಿಸಲು ನೀರಿನಲ್ಲಿ ನಿಂಬೆ ಮಿಶ್ರಣ ಮಾಡಿ. ಹೆಚ್ಚುತ್ತಿರುವ ತೂಕ ನೀವು ಶೀಘ್ರದಲ್ಲೇ ತೊಡೆದು ಹಾಕುತ್ತೀರಿ.
ಕಪ್ಪು ಉಪ್ಪು ಚರ್ಮದ ಆರೋಗ್ಯಕ್ಕೆ ಸಹಕಾರಿ
ಕಪ್ಪು ಉಪ್ಪಿನಲ್ಲಿ ಉರಿಯೂತದ ಗುಣ ಲಕ್ಷಣಗಳು ಕಂಡು ಬರುತ್ತವೆ. ಇದು ಚರ್ಮವನ್ನು ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ನಿಮ್ಮ ಚರ್ಮವು ಬಿರುಕು ಬಿಟ್ಟಿದ್ದರೆ, ಬೆಚ್ಚಗಿನ ನೀರಿನಲ್ಲಿ ಕಪ್ಪು ಉಪ್ಪನ್ನು ಬೆರೆಸಿ ಹಚ್ಚಿ.
ಇದು ಚರ್ಮವನ್ನು ಶೀಘ್ರವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಚರ್ಮಕ್ಕೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿ ರ್ವಹಿಸುತ್ತದೆ. ತ್ವಚೆಯಲ್ಲಿರುವ ಕೊಳೆ ತೆಗೆದು ಹಾಕುವ ಮೂಲಕ ಚರ್ಮವನ್ನು ಒಳಗಿನಿಂದ ತಾಜಾ ಮತ್ತು ಆರೋಗ್ಯಕರವಾಗಿಸಲು ಇದು ಸಹಾಯ ಮಾಡುತ್ತದೆ.
ಕೂದಲನ್ನು ಬಲವಾಗಿಸುತ್ತದೆ
ನಿಮ್ಮ ಕೂದಲು ಶುಷ್ಕ ಮತ್ತು ನಿರ್ಜೀವವಾಗಿದ್ದರೆ, ಅದನ್ನು ಬಲಪಡಿಸಲು ನೀವು ಕಪ್ಪು ಉಪ್ಪು ಬಳಸಬಹುದು. ಕೂದಲು ಸೀಳುವ ಸಮಸ್ಯೆ ಇದ್ದರೆ ನಿಮ್ಮ ಹೇರ್ ಪ್ಯಾಕ್ನಲ್ಲಿ ಕಪ್ಪು ಉಪ್ಪನ್ನು ಹಚ್ಚಿಕೊಳ್ಳಿ. ಕಪ್ಪು ಉಪ್ಪಿನೊಂದಿಗೆ, ಕೂದಲು ಎಲ್ಲಾ ಅಗತ್ಯ ಪೋಷಕಾಂಶ ಪಡೆಯುತ್ತದೆ. ಇದರಿಂದ ಕೂದಲು ಸ್ಟ್ರಾಂಗ್ ಮತ್ತು ಹೊಳೆಯುತ್ತದೆ.
ಇದನ್ನೂ ಓದಿ: ಮಹಿಳೆಯರಲ್ಲಿ ಅತಿಯಾಗಿ ಕಂಡು ಬರುವ ಈ ಕಾಯಿಲೆಗಳು ಸಾಕಷ್ಟು ಸಂಕಷ್ಟ ತಂದೊಡ್ಡುತ್ತವೆ!
ಜೀರ್ಣಕ್ರಿಯೆ ಬಲಪಡಿಸಲು ಕಪ್ಪು ಉಪ್ಪು
ನಿಮಗೆ ಜೀರ್ಣಕ್ರಿಯೆಯ ಸಮಸ್ಯೆ ಇದ್ದರೆ, ನಿಮ್ಮ ಆಹಾರದಲ್ಲಿ ಕಪ್ಪು ಉಪ್ಪನ್ನು ಸೇರಿಸಿ. ಇದು ಹೊಟ್ಟೆಯಲ್ಲಿ ಹೆಚ್ಚುವರಿ ಆಮ್ಲ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ರೀತಿ ಕಪ್ಪು ಉಪ್ಪು ನಿಮ್ಮ ಅಸಿಡಿಟಿ ಸಮಸ್ಯೆ ಹೋಗಲಾಡಿಸುತ್ತದೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ ಕಪ್ಪು ಉಪ್ಪು ಬೆರೆಸಿದ ಬಿಸಿ ನೀರು ಕುಡಿಯಿರಿ. ಈ ಸಮಸ್ಯೆ ದೂರವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ