Black Rice Benefits: ತೂಕ ಇಳಿಸಲು ಕಪ್ಪು ಅಕ್ಕಿ ಬಹಳ ಸಹಕಾರಿ; ಇದರ ಮತ್ತಷ್ಟು ಪ್ರಯೋಜನಗಳು ಇಲ್ಲಿವೆ

ಈ ಅಕ್ಕಿಯಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆಯಂತೆ. ಈ ಕಪ್ಪು ಅಕ್ಕಿ ನಿಜಕ್ಕೂ ಸಖತ್​ ಫೇಮಸ್​ ಅಂತೆ. ಅಷ್ಟೇ ಅಲ್ಲದೇ ಈ ಅಕ್ಕಿಗೆ ಬೇರೆ ರಾಜ್ಯಗಳಲ್ಲಿ ಡಿಮ್ಯಾಂಡ್​ ಕೂಡ ಹೆಚ್ಚಿದೆ.

ಈ ಅಕ್ಕಿಯಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆಯಂತೆ. ಈ ಕಪ್ಪು ಅಕ್ಕಿ ನಿಜಕ್ಕೂ ಸಖತ್​ ಫೇಮಸ್​ ಅಂತೆ. ಅಷ್ಟೇ ಅಲ್ಲದೇ ಈ ಅಕ್ಕಿಗೆ ಬೇರೆ ರಾಜ್ಯಗಳಲ್ಲಿ ಡಿಮ್ಯಾಂಡ್​ ಕೂಡ ಹೆಚ್ಚಿದೆ.

ಈ ಅಕ್ಕಿಯಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆಯಂತೆ. ಈ ಕಪ್ಪು ಅಕ್ಕಿ ನಿಜಕ್ಕೂ ಸಖತ್​ ಫೇಮಸ್​ ಅಂತೆ. ಅಷ್ಟೇ ಅಲ್ಲದೇ ಈ ಅಕ್ಕಿಗೆ ಬೇರೆ ರಾಜ್ಯಗಳಲ್ಲಿ ಡಿಮ್ಯಾಂಡ್​ ಕೂಡ ಹೆಚ್ಚಿದೆ.

  • Share this:
    ದಕ್ಷಿಣ ಭಾರತ( South India)ದ ಆಹಾರ ಪದ್ಧತಿಯಲ್ಲಿ ಅಕ್ಕಿ(Rice) ಪ್ರಮುಖ ಪಾತ್ರ ವಹಿಸುತ್ತದೆ. ಬಗೆ ಬಗೆಯ ತಿಂಡಿ, ತಿನಿಸುಗಳನ್ನ ಅಕ್ಕಿ ಬಳಸಿ ಮಾಡಲಾಗುತ್ತೆ. ಬಗೆ ಬಗೆ ಭಕ್ಷ ತಿಂದರೂ, ಅನ್ನ ತಿಂದರೆ ಮಾತ್ರ ಮನಸ್ಸಿಗೆ ತೃಪ್ತಿ ಅನ್ನುತ್ತಾರೆ ಜನ. ಅಷ್ಟರ ಮಟ್ಟಿಗೆ ಅಕ್ಕಿ ಜನರ ಜೀವನದ ಜತೆ ಬೆರೆತು ಹೋಗಿದೆ. ಅಕ್ಕಿಯಲೂ ವಿಧ ವಿಧದ ಬಣ್ಣದ ಅಕ್ಕಿಗಳು ಸಿಗುತ್ತವೆ. ಕುಚಲಕ್ಕಿ(parboiled rice), ಬಿಳಿ ಅಕ್ಕಿ(white rice) , ಕಂದು ಬಣ್ಣದ ಅಕ್ಕಿ(brown rice) , ಬಾಸ್ಮತಿ ಅಕ್ಕಿ(basmathi rice) , ಕೆಂಪು ಅಕ್ಕಿ (red rice) ಹೀಗೆ ಬೇರೆ ಬೇರೆ ಕಲರ್​ಗಳಲ್ಲಿ ನೀವು ಅಕ್ಕಿಯನ್ನ ನೋಡಿರುತ್ತೀರಾ. ಆದರೆ ಕಪ್ಪು ಅಕ್ಕಿ(Black Rice) ಅಥವಾ ನೇರಳೆ ಅಕ್ಕಿ ಬಗ್ಗೆ ನಿಮಗೆಷ್ಟು ಗೊತ್ತು? ಬಹುತೇಕ ಜನರಿಗೆ ಕಪ್ಪು ಅಕ್ಕಿಯ ಬಗ್ಗೆ ಗೊತ್ತೆ ಇರುವುದಿಲ್ಲ. ಇದನ್ನು ಸೇವಿಸಿದವರ ಸಂಖ್ಯೆಯೂ ವಿರಳ. ಇದರ ಬಗ್ಗೆ ಕೇಳಿರುವವರ ಸಂಖ್ಯೆಯೂ ತುಂಬಾ ಕಡಿಮೆ. ಈ ವೈವಿಧ್ಯಮಯ ಅಕ್ಕಿ ಸೂಪರ್​ ಫುಡ್(Super food)ಗಿಂತ ಹೆಚ್ಚು ಉತ್ತಮ ಎಂದು ಪರಿಗಣಿಸಲಾಗಿದೆ. ಈ ಕಪ್ಪು ಅಕ್ಕಿಯನ್ನ ಈಶಾನ್ಯ ರಾಜ್ಯ ಮಣಿಪುರ(Manipur)ದಲ್ಲಿ ಹೆಚ್ಚಾಗಿ ಬೆಳಯಲಾಗುತ್ತೆ.

    ಈ ಕಪ್ಪು ಅಕ್ಕಿಗೆ, ನೇರಳೆ ಅಕ್ಕಿಎಂದು ಕರೆಯುತ್ತಾರೆ. ಮಣಿಪುರ(Manipur) ದಲ್ಲಿ ಇದನ್ನು ಚಕ್-ಹಾವ್(​Chakhao) ಎಂದು ಕರೆಯಲಾಗುತ್ತೆ. ತಜ್ಞರ ಪ್ರಕಾರ ಈ ಕಪ್ಪು ಅಕ್ಕಿಯನ್ನು ಬೆಳೆಯುವುದು ಸ್ವಲ್ಪ ಕಷ್ಟ. ಆದರೆ ಈ ಅಕ್ಕಿಯಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆಯಂತೆ. ಈ ಕಪ್ಪು ಅಕ್ಕಿ ನಿಜಕ್ಕೂ ಸಖತ್​ ಫೇಮಸ್​ ಅಂತೆ. ಅಷ್ಟೇ ಅಲ್ಲದೇ ಈ ಅಕ್ಕಿಗೆ ಬೇರೆ ರಾಜ್ಯಗಳಲ್ಲಿ ಡಿಮ್ಯಾಂಡ್​ ಕೂಡ ಹೆಚ್ಚಿದೆ. ಆದರೆ ಈ ಕಪ್ಪು ಅಕ್ಕಿಯ ಮಹತ್ವದ ಅನೇಕ ಜನರಿಗೆ ತಿಳಿದಿಲ್ಲ. ನಿಜಕ್ಕೂ ಕಪ್ಪು ಅಕ್ಕಿ ಆರೋಗ್ಯಕ್ಕೆ ಉತ್ತಮನಾ? ಕಪ್ಪು ಅಕ್ಕಿಯ ಆರೋಗ್ಯಕರ ಲಾಭಗಳು ಇಲ್ಲಿದೆ ನೋಡಿ.

    ಉತ್ತಮ ಕೊಲೆಸ್ಟ್ರಾಲ್​ ಹೆಚ್ಚಿಸುತ್ತೆ ಕಪ್ಪು ಅಕ್ಕಿ

    ಈ ಕಪ್ಪು ಅಕ್ಕಿಯಲ್ಲಿ ಫ್ಲೇವೊನೈಡ್ಸ್ ಸಮೃದ್ಧವಾಗಿದೆ. ಇದು ಉತ್ತಮ ಕೊಲೆಸ್ಟ್ರಾಲ್ (HDL) ಹೆಚ್ಚಿಸಲು ಬಹಳ ಉತ್ತಮವಾದ ಆಹಾರ. ಅಷ್ಟೇ ಅಲ್ಲದೇ ಕೆಟ್ಟ ಕೊಲೆಸ್ಟ್ರಾಲ್ (LDL) ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ ಕಪ್ಪು ಅಕ್ಕಿ

    ಕಪ್ಪು ಅಕ್ಕಿಯಲ್ಲಿ ಆಂಥೋಸಯಾನಿನ್‌ಗಳು ಸಮೃದ್ಧವಾಗಿವೆ. ಆಂಥೋಸಯಾನಿನ್ ಸಮೃದ್ಧವಾಗಿರುವ ಆಹಾರಗಳು ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ಬಗ್ಗೆ ಹಲವು ಸಂಶೋಧನೆಗಳು ನಡೆಸಿದ ಬಳಿಕ ಈ ಬಗ್ಗೆ ತಜ್ಞರೇ ಈ ಮಾಹಿತಿ ನೀಡಿದ್ದಾರೆ.

    ಆಂಟಿ ಆಕ್ಸಿಡೆಂಟ್ ಗಳ ಆಗರ ಕಪ್ಪು ಅಕ್ಕಿ

    ಕಪ್ಪು ಅಕ್ಕಿಯಲ್ಲಿ 23 ಬಗೆಯ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಯಾವುದೇ ರೀತಿಯ ಬೇರೆ ಅಕ್ಕಿಯಲ್ಲಿ ನಿಮಗೆ ಇಷ್ಟೊಂದು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗುಣಗಳು ಕಂಡುಬರುವುದಿಲ್ಲ. ಇದಲ್ಲದೆ ಕಪ್ಪು ಅಕ್ಕಿ ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಆಗರವಾಗಿದೆ. ಹಾಗೂ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಆಂಟಿ ಆಕ್ಸಿಡೆಂಟ್‌ಗಳು ಜೀವಕೋಶಗಳನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತವೆ.

    ತೂಕ ಇಳಿಸಿಲು ಬಹಳ ಸಹಾಯಕಾರಿ

    100 ಗ್ರಾಂ ಕಪ್ಪು ಅಕ್ಕಿಯಲ್ಲಿ 335 ಕ್ಯಾಲೋರಿಗಳಿವೆ, ತೂಕ ಇಳಿಸಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪ್ರಯತ್ನಿಸುವವರಿಗೆ ಇದು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಕಪ್ಪು ಅಕ್ಕಿ ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಇದನ್ನು ತಿನ್ನುವುದರಿಂದ, ನಿಮಗೆ ಪದೇ ಪದೇ ಹಸಿವಾಗುವುದಿಲ್ಲ. ಇನ್ನೂ ಈ ಕಪ್ಪು ಅಕ್ಕಿ ಕೆಜಿಗೆ 285 ರಿಂದ 300 ರೂಪಾಯಿ ಇದೆ.

    ವರದಿ - ವಾಸುದೇವ್. ಎಂ
    Published by:Latha CG
    First published: