• Home
  • »
  • News
  • »
  • lifestyle
  • »
  • Black Pepper Tea: ಚುಮು ಚುಮು ಚಳಿಗೆ ಕರಿಮೆಣಸಿನ ಚಹಾ ಕುಡಿಯಿರಿ, ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ!

Black Pepper Tea: ಚುಮು ಚುಮು ಚಳಿಗೆ ಕರಿಮೆಣಸಿನ ಚಹಾ ಕುಡಿಯಿರಿ, ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರಿಮೆಣಸಿನ ಚಹಾವು ಶೀತ ಮತ್ತು ಕೆಮ್ಮನ್ನು ನಿವಾರಿಸುವಲ್ಲಿ ತ್ವರಿತವಾಗಿ ಸಹಾಯ ಮಾಡುತ್ತದೆ. ಇದರ ಜೊತೆಗೆ ದೇಹದಲ್ಲಿನ ಅತಿಯಾದ ತೂಕವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

  • Trending Desk
  • Last Updated :
  • Karnataka, India
  • Share this:

ಈಗಂತೂ ಚಳಿಗಾಲ (Winter) ಶುರುವಾಗಿದ್ದು, ದಿನದ ಬಹುತೇಕ ಸಮಯ ಕೊರೆಯುವ ಚಳಿ ಇದ್ದೇ ಇರುತ್ತದೆ ಮತ್ತು ನಾವು ನಮ್ಮ ದೇಹವನ್ನು ಈ ಕೊರೆಯುವ ಚಳಿಯಲ್ಲಿ ಬೆಚ್ಚಗೆ ಇರಿಸಿಕೊಳ್ಳಲು ಅನೇಕ ರೀತಿಯ ಬಿಸಿ ಬಿಸಿ ಪಾನೀಯಗಳನ್ನು (Drink) ಮತ್ತು ಆಹಾರಗಳನ್ನು(Food) ತಯಾರಿಸಿಕೊಂಡು ತಿನ್ನುತ್ತಿರುತ್ತೇವೆ. ಹೀಗೆ ಮನೆಯಲ್ಲಿಯೇ ನಾವು ಲಭ್ಯವಿರುವ ಮಸಾಲೆಗಳನ್ನು (Masala) ಬಳಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ.


ಕರಿಮೆಣಸಿನ ಟೀ ಅರೋಗ್ಯಕರ


ನೀವು ಕರಿಮೆಣಸಿನ ಚಹಾದ ಬಗ್ಗೆ ಕೇಳಿರುತ್ತೀರಿ ಅಲ್ಲವೇ? ಕರಿಮೆಣಸು ದೈನಂದಿನ ಅಡುಗೆಯಲ್ಲಿ ಬಳಸುವ ಅತ್ಯಂತ ಸಾಮಾನ್ಯ ಮಸಾಲೆಗಳಲ್ಲಿ ಒಂದಾಗಿದೆ. ನಿಮ್ಮ ಊಟಕ್ಕೆ ಸೇರಿಸುವ ಮೊದಲು ನೀವು ಸಂಪೂರ್ಣ ಕರಿಮೆಣಸನ್ನು ಬಳಸಿದರೂ ಅಥವಾ ಪುಡಿ ಮಾಡಿದರೂ, ಈ ಶಕ್ತಿಯುತ ಮಸಾಲೆಯಿಂದ ನೀವು ಅದೇ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ. ಹವಾಮಾನ ಬದಲಾವಣೆ ಆಗುತ್ತಿರುವುದರಿಂದ ಋತುಮಾನದ ಸೋಂಕುಗಳ ತೀವ್ರತೆಯನ್ನು ಎದುರಿಸಲು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿಕೊಳ್ಳುವುದು ಸಹ ತುಂಬಾನೇ ಮುಖ್ಯವಾಗುತ್ತದೆ.


Black Pepper Tea Recipe And Benefits For Weight Los Immunity Sore Throat And More stg pvn


ಕರಿಮೆಣಸಿನ ಚಹಾದಿಂದ ಏನೆಲ್ಲಾ ಪ್ರಯೋಜನಗಳಿವೆ?


ಕರಿಮೆಣಸಿನ ಚಹಾವು ಶೀತ ಮತ್ತು ಕೆಮ್ಮನ್ನು ನಿವಾರಿಸುವಲ್ಲಿ ತ್ವರಿತವಾಗಿ ಸಹಾಯ ಮಾಡುತ್ತದೆ. ಇದರ ಜೊತೆಗೆ ದೇಹದಲ್ಲಿನ ಅತಿಯಾದ ತೂಕವನ್ನು ಸಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ತಯಾರಿಸುವುದು ಸುಲಭ ಮತ್ತು ಇತರ ಪದಾರ್ಥಗಳೊಂದಿಗೆ ಇದು ಉತ್ತಮ ರುಚಿಯನ್ನು ಸಹ ಹೊಂದಿರುತ್ತದೆ.


  • ಕರಿಮೆಣಸಿನ ಚಹಾದ ಆರೋಗ್ಯ ಪ್ರಯೋಜನಗಳು ಹೀಗಿವೆ..


1. ಜೀರ್ಣಕ್ರಿಯೆಗೆ ಒಳ್ಳೆಯದು: ಪೌಷ್ಟಿಕ ತಜ್ಞೆ ಶಿಲ್ಪಾ ಅರೋರಾ ಅವರು "ಕರಿಮೆಣಸಿನಲ್ಲಿ ಪೈಪರಿನ್ ಎಂಬ ಸಂಯುಕ್ತದ ಉಪಸ್ಥಿತಿಯು ಸುಗಮ ಜೀರ್ಣಕ್ರಿಯೆಗೆ ಅತ್ಯುತ್ತಮ ಆಹಾರವಾಗಿದೆ" ಎಂದು ಹೇಳುತ್ತಾರೆ. ಪೈಪ್ರಿನ್ ಹೊಟ್ಟೆಯೊಳಗಿನ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದು ಉತ್ತಮ ಪ್ರಮಾಣದ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಇದು ಆಹಾರದಲ್ಲಿನ ಪ್ರೋಟೀನ್ ಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.


2. ತೂಕವನ್ನು ಕಡಿಮೆ ಮಾಡುತ್ತದೆ: ಪೈಪರೀನ್ ಚಯಾಪಚಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಈಗಾಗಲೇ ಹೇಳಿದ್ದು, ಇದು ದೇಹದಲ್ಲಿ ಅತಿಯಾದ ಕೊಬ್ಬು ಶೇಖರಣೆಯನ್ನು ಕಡಿಮೆ ಮಾಡುತ್ತದೆ ಎಂದು ಶಿಲ್ಪಾ ಅರೋರಾ ಹೇಳುತ್ತಾರೆ. ವಾಸ್ತವವಾಗಿ, ಕರಿಮೆಣಸಿನ ಅತ್ಯಂತ ಹೊರ ಪದರವು ಫೈಟೋನ್ಯೂಟ್ರಿಯೆಂಟ್ ಗಳನ್ನು ಹೊಂದಿರುತ್ತದೆ, ಇದು ಕೊಬ್ಬಿನ ಕೋಶಗಳನ್ನು ಒಡೆಯುವಲ್ಲಿ ಸಹಾಯ ಮಾಡುತ್ತದೆ.


3. ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಮತ್ತು ಪ್ರಕೃತಿಯ ಸಹಜ ಪ್ರತಿಜೀವಕವಾಗಿದೆ. ಇದು ದೇಹದಲ್ಲಿ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಪ್ರೇರೇಪಿಸುತ್ತದೆ, ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಕರಿಮೆಣಸಿನಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶವಿದ್ದು ಇದನ್ನು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನಾಗಿ ಮಾಡುತ್ತದೆ.


ಇದನ್ನೂ ಓದಿ: ಬಲಿಷ್ಠ ಮೂಳೆಗಳಿಗಾಗಿ ಬೇಕು ಕ್ಯಾಲ್ಶಿಯಂ ಮತ್ತು ವಿಟಮಿನ್ ಡಿ, ಇವು ಹೇಗೆ ಕೆಲಸ ಮಾಡುತ್ತವೆ?


4. ಖಿನ್ನತೆಯನ್ನು ದೂರ ಮಾಡುತ್ತೆ: ಪೈಪರೀನ್ ಅಂಶವು ಮೆದುಳನ್ನು ಉತ್ತೇಜಿಸುತ್ತದೆ, ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಕರಿಮೆಣಸು ಚಹಾವು ಒಂದು ಪರಿಪೂರ್ಣವಾದ ಪಾನೀಯವಾಗಿದೆ.


5. ಗಂಟಲು ಕೆರೆತವನ್ನು ನಿವಾರಿಸುತ್ತೆ: ಕೆಮ್ಮು ಮತ್ತು ಗಂಟಲು ಕೆರೆತವನ್ನು ನಿರ್ವಹಿಸಲು ಬಹುತೇಕರು ಬಳಸುವ ಅತ್ಯಂತ ಸಾಮಾನ್ಯ ಮನೆಮದ್ದುಗಳಲ್ಲಿ ಕರಿಮೆಣಸು ಒಂದಾಗಿದೆ. ನೀವು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವಾಗ ಈ ಕರಿಮೆಣಸಿನ ಚಹಾವನ್ನು ಮಾಡಿಕೊಂಡು ಕುಡಿಯಿರಿ.


  • ಕರಿಮೆಣಸಿನ ಚಹಾ ತಯಾರಿಸುವುದು ಹೇಗೆ?


- ಒಂದು ಕಪ್ ಚಹಾ ಮಾಡಲು, ಒಂದೂವರೆ ಕಪ್ ನೀರನ್ನು ಮೊದಲು ಕುದಿಸಿಕೊಳ್ಳಿರಿ.


- ನಂತರ ಅರ್ಧ ಟೀ ಚಮಚದಷ್ಟು ಕರಿಮೆಣಸಿನ ಪುಡಿ, 1 ಟೀ ಚಮಚದಷ್ಟು ನಿಂಬೆ ರಸ ಮತ್ತು ಅರ್ಧ ಟೀ ಚಮಚದಷ್ಟು ತುರಿದ ಶುಂಠಿಯನ್ನು ಅದಕ್ಕೆ ಸೇರಿಸಿಕೊಳ್ಳಿರಿ.


- ಸ್ಟೋವ್ ಆರಿಸಿ, ಬಾಣಲೆಯನ್ನು ಮುಚ್ಚಿ, ಚಹಾವನ್ನು 5 ರಿಂದ 6 ನಿಮಿಷಗಳ ಕಾಲ ಹಾಗೆಯೇ ಬಿಡಿ.


- ನಂತರ ಆ ಚಹಾವನ್ನು ಸೋಸಿ ಕಪ್ ಗೆ ಹಾಕಿಕೊಂಡು ಬೆಚ್ಚಗೆ ಕುಡಿಯಿರಿ.


ನಿಮಗೆ ಇಷ್ಟವಿದ್ದರೆ ಅದರಲ್ಲಿ ನೀವು ಏಲಕ್ಕಿ ಮತ್ತು ಸೋಂಪುಗಳಂತಹ ಇತರ ಮಸಾಲೆಗಳನ್ನು ಸಹ ನೀವು ಸೇರಿಸಿಕೊಳ್ಳಬಹುದು.

Published by:ಪಾವನ ಎಚ್ ಎಸ್
First published: