• Home
  • »
  • News
  • »
  • lifestyle
  • »
  • Black Kalonji: ಕಪ್ಪು ಕಲೋಂಜಿ ಬೀಜಗಳನ್ನು ಹೀಗೆ ತಿಂದ್ರೆ ತೂಕ ಇಳಿಸೋದು ಸುಲಭ

Black Kalonji: ಕಪ್ಪು ಕಲೋಂಜಿ ಬೀಜಗಳನ್ನು ಹೀಗೆ ತಿಂದ್ರೆ ತೂಕ ಇಳಿಸೋದು ಸುಲಭ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಪ್ಪಿನಕಾಯಿ ತಯಾರಿಕೆಯಲ್ಲಿ ಹಲವು ತರಹದ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲಿ ಕಲೋಂಜಿ ಪದಾರ್ಥವೂ ಕೂಡ ಒಂದಾಗಿದೆ. ಈ ಸಣ್ಣ ಕಪ್ಪು ಕಲೋಂಜಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಎಂಬುದು ತುಂಬಾ ಜನರಿಗೆ ಗೊತ್ತಿರದ ಸಂಗತಿ. ಕಲೋಂಜಿ ಬೀಜಗಳು ನಿಮಗೆ ಪೋಷಣೆ ನೀಡುತ್ತದೆ. ಜೊತೆಗೆ ತೂಕ ಇಳಿಕೆಗೆ ತುಂಬಾ ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

    ಭಾರತೀಯ (Indian) ಪಾಕ ಪದ್ಧತಿಯಲ್ಲಿ ಹಲವು ಪದಾರ್ಥಗಳನ್ನು (Ingredients) ಆರೋಗ್ಯ (Health) ವರ್ಧಕವಾಗಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ವಿಶಿಷ್ಟ ಪದಾರ್ಥಗಳಿವೆ. ಅವುಗಳು ದೇಹದ (Body) ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ (Benefits) ನೀಡುತ್ತವೆ. ಅಂತಹ ಪದಾರ್ಥಗಳಲ್ಲಿ ದಿನವೂ ಊಟದ ಜೊತೆ ಸವಿಯಲು ಎಲ್ಲರೂ ಉಪ್ಪಿನಕಾಯಿ ಬಳಕೆ ಮಾಡುತ್ತಾರೆ. ಮಾವಿನಕಾಯಿ, ನಿಂಬೆಕಾಯಿ, ಹಾಗಲಕಾಯಿ, ತರಕಾರಿ ಹೀಗೆ ಹಲವು ತರಹದ ಉಪ್ಪಿನಕಾಯಿ ನೀವು ಸೇವನೆ ಮಾಡಿರಬಹುದು. ಇನ್ನು ಉಪ್ಪಿನಕಾಯಿ ತಯಾರಿಕೆಯಲ್ಲಿ ಹಲವು ತರಹದ ಪದಾರ್ಥಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲಿ ಕಲೋಂಜಿ ಪದಾರ್ಥವೂ ಕೂಡ ಒಂದಾಗಿದೆ. ಕೇವಲ ಉಪ್ಪಿನಕಾಯಿ ಮಾತ್ರವಲ್ಲದೇ ಬೇರೆ ರೆಸಿಪಿಗಳಲ್ಲೂ ಕಲೋಂಜಿಯನ್ನು ಬಳಕೆ ಮಾಡ್ತಾರೆ.


    ಆರೋಗ್ಯ ವರ್ಧಕ ಕಲೋಂಜಿ ಸೇವನೆ


    ತುಂಬಾ ಜನರು ಸಂಜೆಯಾದ್ರೆ ಸಾಕು ಸ್ಟ್ರೀಟ್ ಫುಡ್ ತಿನ್ನಲು ಇಷ್ಟ ಪಡ್ತಾರೆ. ನಾನ್, ಪಾಪಡ್, ಅನೇಕ ತರಕಾರಿಗಳು ಮತ್ತು ಸಮೋಸಾ ಮತ್ತು ಕಚೋರಿಗಳಲ್ಲಿ ಕಲೋಂಜಿ ಸೇವನೆ ಮಾಡಿರಬಹುದು. ಅಂದ ಹಾಗೇ ಕಲೋಂಜಿಯು ಆರೋಗ್ಯ ಪ್ರಯೋಜನ ನೀಡುತ್ತವೆ.


    ಈ ಸಣ್ಣ ಕಪ್ಪು ಕಲೋಂಜಿ ಬೀಜಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ ಎಂಬುದು ತುಂಬಾ ಜನರಿಗೆ ಗೊತ್ತಿರದ ಸಂಗತಿ. ಕಲೋಂಜಿ ಬೀಜಗಳು ನಿಮಗೆ ಪೋಷಣೆ ನೀಡುತ್ತದೆ. ಜೊತೆಗೆ ತೂಕ ಇಳಿಕೆಗೆ ತುಂಬಾ ಸಹಾಯ ಮಾಡುತ್ತದೆ. ಹಾಗಾದ್ರೆ ನಾವು ಇಂದು ತೂಕ ನಷ್ಟದಲ್ಲಿ ಕಲೋಂಜಿಯನ್ನು ಹೇಗೆ ಬಳಕೆ ಮಾಡಬಹುದು ಎಂಬುದನ್ನು ನೋಡೋಣ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಕಪ್ಪು ಕಲೋಂಜಿ ಬೀಜಗಳ ಆರೋಗ್ಯ ಪ್ರಯೋಜನಗಳು


    ಕಲೋಂಜಿ ಬೀಜಗಳು ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು, ಜ್ಞಾಪಕಶಕ್ತಿ, ಹೃದಯದ ಆರೋಗ್ಯ ಮತ್ತು ಏಕಾಗ್ರತೆ ಸುಧಾರಿಸುವಲ್ಲಿ ಸಹಕಾರಿ ಆಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿ ಇಡುತ್ತದೆ. ಇದು ಕೀಲು ನೋವು ಮತ್ತು ತಲೆನೋವಿಗೆ ನೈಸರ್ಗಿಕ ನೋವು ನಿವಾರಕ ಆಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಹೇಗೆ ಎಂದು ತಿಳಿಯೋಣ.



    ತೂಕ ನಷ್ಟಕ್ಕೆ ಕಲೋಂಜಿ ಪ್ರಯೋಜನಕಾರಿ


    ಕಲೋಂಜಿ ಬೀಜಗಳು ತೂಕ ನಷ್ಟಕ್ಕೆ ಸಹಕಾರಿಯಾಗಿವೆ. ಈ ಬೀಜಗಳಲ್ಲಿ ಫೈಬರ್ ಅಧಿಕವಾಗಿದೆ. ಮತ್ತು ಅತಿಯಾಗಿ ತಿನ್ನುವ ಹಸಿವು ಮತ್ತು ಬಯಕೆಯನ್ನು ತಡೆಯುತ್ತದೆ. ಇದು ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರಲು ಸಹಾಯ ಮಾಡುತ್ತದೆ. ಇದು ನಿಮಗೆ ಕಡಿಮೆ ಹಸಿವು ಉಂಟು ಮಾಡುತ್ತದೆ.


    ತೂಕ ನಷ್ಟಕ್ಕೆ ಕಲೋಂಜಿ ಬೀಜಗಳನ್ನು ಬಳಸುವುದು ಹೇಗೆ?


    ಮೊದಲ ಮಾರ್ಗ


    ಒಂದು ಪಿಂಚ್ ಕಲೋಂಜಿ ಬೀಜಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪುಡಿ ಮಾಡಿ. ನಂತರ ಒಂದು ಲೋಟ ಬೆಚ್ಚಗಿನ ನೀರಿಗೆ ಕಲೋಂಜಿ ಪುಡಿ ಸೇರಿಸಿ. ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ. ಮತ್ತು ಅರ್ಧ ನಿಂಬೆಹಣ್ಣಿನ ರಸ ಹಿಂಡಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ.


    ಎರಡನೇ ಮಾರ್ಗ


    ಒಂದು ಬಟ್ಟಲಿನಲ್ಲಿ 8 ರಿಂದ 10 ಕಲೋಂಜಿ ಬೀಜಗಳನ್ನು ತೆಗೆದುಕೊಂಡು ಅದರಲ್ಲಿ ಅರ್ಧ ನಿಂಬೆಹಣ್ಣಿನ ರಸ ಹಿಂಡಿ. ಈಗ ಈ ಕಲೋಂಜಿಯನ್ನು 2 ದಿನ ಬಿಸಿಲಿನಲ್ಲಿ ಇರಿಸಿ. ತೂಕ ಇಳಿಕೆಗೆ ದಿನಕ್ಕೆ ಎರಡು ಬಾರಿ 2 ರಿಂದ 4 ಸೋಂಪು ಬೀಜ ಸೇರಿಸಿ ಸೇವಿಸಿ.


    ಮೂರನೇ ಮಾರ್ಗ


    ಕೆಲವು ಕಲೋಂಜಿ ಬೀಜಗಳನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಿಂದ ನುಂಗಲು ಅಥವಾ 8 ರಿಂದ 10 ಕಲೋಂಜಿ ಬೀಜಗಳನ್ನು ಗಾಜಿನಲ್ಲಿ ಹಾಕಿರಿಸಿ. ಮತ್ತು ರಾತ್ರಿಯಿಡೀ ನೆನೆಯಲು ಬಿಡಿ. ಬೆಳಿಗ್ಗೆ ಬೀಜಗಳನ್ನು ತೆಗೆದುಕೊಂಡು ಕಲೋಂಜಿ ನೀರು ಕುಡಿಯಿರಿ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಒಂದು ಸಮಯದಲ್ಲಿ ಹೆಚ್ಚು ಕಲೋಂಜಿ ತಿನ್ನಬೇಡಿ. ಏಕೆಂದರೆ ಅದು ದೇಹದಲ್ಲಿ ಹೆಚ್ಚುವರಿ ಉಷ್ಣತೆ ಉಂಟು ಮಾಡುತ್ತದೆ.

    Published by:renukadariyannavar
    First published: