• Home
  • »
  • News
  • »
  • lifestyle
  • »
  • Black Cardamom: ಕಪ್ಪು ಏಲಕ್ಕಿಯನ್ನು ಹೀಗೆ ತಿಂದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

Black Cardamom: ಕಪ್ಪು ಏಲಕ್ಕಿಯನ್ನು ಹೀಗೆ ತಿಂದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಪ್ಪು ದಪ್ಪ ಏಲಕ್ಕಿಯ ಮೂಲಿಕೆಯು ಕಪ್ಪು ಬಣ್ಣದ ಬೀಜ ಹೊಂದಿದೆ. ಇದನ್ನು ಚಹಾ ಹಾಗೂ ಖಾದ್ಯಗಳಲ್ಲಿ ಬಳಸುತ್ತಾರೆ. ಇದರ ಸಿಪ್ಪೆಯನ್ನು ವಿವಿಧ ಖಾದ್ಯಗಳಿಗೆ ಹಾಕುತ್ತಾರೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುತ್ತದೆ.

  • Share this:

    ನಾವು ಸಾಮಾನ್ಯವಾಗಿ ಹಸಿರು ಚಿಕ್ಕ ಏಲಕ್ಕಿಯನ್ನು (Green Small Cardamom) ವಿವಿಧ ಖಾದ್ಯಗಳಲ್ಲಿ (Verity Foods) ಬಳಕೆ ಮಾಡುತ್ತೇವೆ. ಹೆಚ್ಚಾಗಿ ಹಸಿರು ಏಲಕ್ಕಿಯ ಬಗ್ಗೆ ತುಂಬಾ ಜನರಿಗೆ (People) ಗೊತ್ತಿದೆ. ಆದರೆ ಕಪ್ಪು ಬಣ್ಣದ ದೊಡ್ಡ ಏಲಕ್ಕಿಯೂ (Black Color Big Cardamom) ಇದೆ. ಅದನ್ನೂ ಸಹ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ಕಪ್ಪು ದಪ್ಪ ಏಲಕ್ಕಿಯು ಹಲವು ಆರೋಗ್ಯ ಪ್ರಯೋಜನಗಳಿಗೆ ಹೆಸರಾಗಿದೆ. ದೊಡ್ಡ ಕಪ್ಪು ಏಲಕ್ಕಿಗೂ ಮತ್ತು ಚಿಕ್ಕ ಹಸಿರು ಏಲಕ್ಕಿಗೆ ಹೆಚ್ಚು ವ್ಯತ್ಯಾಸವಿಲ್ಲ. ಆದರೆ ಒಂದು ವ್ಯತ್ಯಾಸ ಅಂದ್ರೆ ಕಪ್ಪು ದೊಡ್ಡ ಏಲಕ್ಕಿ ಕಡಿಮೆ ರುಚಿ ಹೊಂದಿದೆ. ಕಪ್ಪು ದೊಡ್ಡ ಏಲಕ್ಕಿಯನ್ನು ತರಕಾರಿಗಳಲ್ಲಿ ಮಸಾಲೆಯಾಗಿ ಬಳಕೆ ಮಾಡಲಾಗುತ್ತದೆ.


    ಕಪ್ಪು ದೊಡ್ಡ ಏಲಕ್ಕಿ ಆರೋಗ್ಯ ಪ್ರಯೋಜನಗಳು


    ಕಪ್ಪು ದೊಡ್ಡ ಏಲಕ್ಕಿಯನ್ನು ಕಂದು ಏಲಕ್ಕಿ, ಕೆಂಪು ಏಲಕ್ಕಿ, ನೇಪಾಳಿ ಏಲಕ್ಕಿ ಹಾಗೂ ಬಂಗಾಳ ಏಲಕ್ಕಿ ಎಂದು ಕರೆಯುತ್ತಾರೆ. ಕಪ್ಪು ದೊಡ್ಡ ಏಲಕ್ಕಿ ಅಡುಗೆ ಮನೆಯ ವಿಶೇಷ ಮಸಾಲೆಯಾಗಿದೆ. ಖಾದ್ಯದ ರುಚಿ ಹೆಚ್ಚಿಸುತ್ತದೆ.


    ಕಪ್ಪು ದೊಡ್ಡ ಏಲಕ್ಕಿ ಪೂರ್ವ ಹಿಮಾಲಯ ಪ್ರದೇಶ, ನೇಪಾಳ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಮತ್ತು ಅಸ್ಸಾಂನಲ್ಲಿ ಕಂಡು ಬರುತ್ತದೆ. ಕಪ್ಪು ದೊಡ್ಡ ಏಲಕ್ಕಿಯನ್ನು ಹೆಚ್ಚಾಗಿ ಚಹಾಕ್ಕೆ ಹಾಗೂ ಖಾದ್ಯಗಳ ರುಚಿಗಾಗಿ ಬಳಸುತ್ತಾರೆ.




    ಯಾವುದಿದು ಕಪ್ಪು ದಪ್ಪ ಏಲಕ್ಕಿ?


    ಕಪ್ಪು ದಪ್ಪ ಏಲಕ್ಕಿಯ ಮೂಲಿಕೆಯು ಕಪ್ಪು ಬಣ್ಣದ ಬೀಜ ಹೊಂದಿದೆ. ಇದನ್ನು ಚಹಾ ಹಾಗೂ ಖಾದ್ಯಗಳಲ್ಲಿ ಬಳಸುತ್ತಾರೆ. ಇದರ ಸಿಪ್ಪೆಯನ್ನು ವಿವಿಧ ಖಾದ್ಯಗಳಿಗೆ ಹಾಕುತ್ತಾರೆ. ಇದು ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದು ಹಾಕುತ್ತದೆ. ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣ ಹೊಂದಿದೆ.


    ಕಪ್ಪು ದಪ್ಪ ಏಲಕ್ಕಿಯ ವಿಶೇಷತೆ ಏನು?


    ಕಪ್ಪು ದಪ್ಪ ಏಲಕ್ಕಿಯು ದೇಹದ ವಿವಿಧ ಅಂಗಗಳ ಆಂತರಿಕ ಶುಚಿತ್ವ ಮತ್ತು ಬಲ ಕಾಪಾಡುತ್ತದೆ. ಅನೇಕ ಔಷಧೀಯ ಗುಣ ಹೊಂದಿದೆ. ಪೋಷಕಾಂಶಗಳು ಮತ್ತು ಫೈಬರ್‌ ಹೊಂದಿದೆ. ಚಳಿಗಾಲದಲ್ಲಿ ಪ್ರಯೋಜನ ನೀಡುತ್ತದೆ. ದೇಹದ ಇತರೆ ಸಮಸ್ಯೆ ತೊಡೆದು ಹಾಕುತ್ತದೆ.


     ಜೀರ್ಣಾಂಗ ವ್ಯವಸ್ಥೆ ಬಲಪಡಿಸುತ್ತದೆ


    ಕಪ್ಪು ದಪ್ಪ ಏಲಕ್ಕಿಯನ್ನು ಖಾದ್ಯಗಳಲ್ಲಿ ಬಳಸಿದ್ರೆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ಗಂಟಲಿನಲ್ಲಿ ಉರಿಯೂತ ಸಂವೇದನೆ ನಿವಾರಿಸುತ್ತದೆ. ಇದರಲ್ಲಿರುವ ಉರಿಯೂತ ನಿವಾರಕ ಗುಣಗಳು ಹೊಟ್ಟೆಯೊಳಗಿನ ಊತ ತೆಗೆದು ಹಾಕುತ್ತದೆ. ಅಸಿಡಿಟಿ ಮತ್ತು ಹೊಟ್ಟೆ ತೊಂದರೆ ಸಮಸ್ಯೆ ನಿವಾರಿಸುತ್ತದೆ.


    ಒಂದು ಇಂಚಿನ ಶುಂಠಿಗೆ ಎರಡು ಲವಂಗ ಬೆರೆಸಿ, ಮೂರು ಏಲಕ್ಕಿ ಮತ್ತು ಒಂದು ಚಮಚ ಕೊತ್ತಂಬರಿ ಸೊಪ್ಪು ಎಲ್ಲವನ್ನೂ ರುಬ್ಬಿಕೊಂಡು ಒಂದು ಚಮಚ ನೀರಿನಲ್ಲಿ ಸೇವಿಸಿ. ಇದು ಜೀರ್ಣಕ್ರಿಯೆ ತೊಂದರೆ ನಿವಾರಣೆ ಮಾಡುತ್ತದೆ.


    ಸಾಂದರ್ಭಿಕ ಚಿತ್ರ


    ಕೂದಲ ಆರೋಗ್ಯಕ್ಕೆ ಸಹಕಾರಿ


    ಕಪ್ಪು ದೊಡ್ಡ ಏಲಕ್ಕಿ ಒಣ ಕೂದಲು, ಕೂದಲು ಉದುರುವಿಕೆ ತಡೆಯುತ್ತದೆ. ಕೂದಲಿನ ಬೇರುಗಳಿಗೆ ಪೋಷಣೆ ನೀಡುತ್ತದೆ. ಇದು ಕೂದಲನ್ನು ಬಲಪಡಿಸುತ್ತದೆ. ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡುತ್ತದೆ.


    ದೇಹದ ವಿಷ ತೆಗೆದು ಹಾಕುತ್ತದೆ


    ಕಪ್ಪು ಏಲಕ್ಕಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಇದೆ. ಇದು ದೇಹದಿಂದ ವಿಷ ತೆಗೆದು ಹಾಕುತ್ತದೆ. ದಪ್ಪ ಏಲಕ್ಕಿಯನ್ನು ಭಕ್ಷ್ಯಗಳು, ಕಷಾಯ ಅಥವಾ ಚಹಾದಲ್ಲಿ ಬೆರೆಸಿ ಸೇವಿಸಿ.


    ಏಲಕ್ಕಿಯು ಕ್ಯಾನ್ಸರ್ ವಿರೋಧಿ ಗುಣ ಹೊಂದಿದೆ. ದೇಹದಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆ ತಡೆಯುತ್ತದೆ. ಉತ್ಕರ್ಷಣ ನಿರೋಧಕ ಗ್ಲುಟಾಥಿಯೋನ್ ಮಟ್ಟ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಕರಿಬೇವು ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿದೆ ನೋಡಿ


    ಅಜವೈನ್ ನೀರನ್ನು ಪ್ರಯತ್ನಿಸಿ, ಕೇವಲ 15 ದಿನಗಳಲ್ಲಿ ಮ್ಯಾಜಿಕ್ ಆಗುತ್ತದೆ, ಬೊಜ್ಜು ಕಡಿಮೆಯಾಗುತ್ತದೆ. ಬಾಯಿಯ ದುರ್ವಾಸನೆ ಹೋಗಲಾಡಿಸುತ್ತದೆ. ಕಪ್ಪು ಏಲಕ್ಕಿ 14 ರೀತಿಯ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

    Published by:renukadariyannavar
    First published: