Winter Health Tips: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡುತ್ತೆ ಹಾಗಲಕಾಯಿ ಸೇವನೆ

ಚಳಿಗಾಲ (Winter) ಮತ್ತೆ ಬಂದಿದೆ, ಮೂಳೆ ನಡುಗಿಸುವಂತಹ ಚಳಿ ಮತ್ತು ಋತುಕಾಲಿಕ ಸೋಂಕುಗಳು (Seasonal infections and allergies) ಹಾಗೂ ಅಲರ್ಜಿಗಳಿಂದ ರಕ್ಷಿಸಿಕೊಳ್ಳಲು ನಮ್ಮ ದೇಹಕ್ಕೆ ಅತ್ಯುತ್ತಮ ಆರೈಕೆ ಮಾಡಬೇಕಾದ ಕಾಲವಿದು.

ಹಾಗಲಕಾಯಿ ಜ್ಯೂಸ್

ಹಾಗಲಕಾಯಿ ಜ್ಯೂಸ್

  • Share this:

ಚಳಿಗಾಲ (Winter) ಮತ್ತೆ ಬಂದಿದೆ, ಮೂಳೆ ನಡುಗಿಸುವಂತಹ ಚಳಿ ಮತ್ತು ಋತುಕಾಲಿಕ ಸೋಂಕುಗಳು (Seasonal infections and allergies) ಹಾಗೂ ಅಲರ್ಜಿಗಳಿಂದ ರಕ್ಷಿಸಿಕೊಳ್ಳಲು ನಮ್ಮ ದೇಹಕ್ಕೆ ಅತ್ಯುತ್ತಮ ಆರೈಕೆ ಮಾಡಬೇಕಾದ ಕಾಲವಿದು. ಇದು ದೇಹಕ್ಕೆ ಶಕ್ತಿ ಮತ್ತು ಸಾಕಷ್ಟು ಉಷ್ಣತೆಯ ಅಗತ್ಯ ಇರುವಂಹ ಕಾಲವು ಕೂಡ. ನೀವು ಈ ಚಳಿಗಾಲದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ನಿಮ್ಮ ಬೆಳಗ್ಗಿನ ದಿನಚರಿಯಲ್ಲಿ ಹಾಗಲಕಾಯಿ (Bitter gourd) ರಸದ ಸೇವನೆಯನ್ನು ಸೇರಿಸಿಕೊಂಡು, ಅದರಿಂದ ಅನೇಕ ಲಾಭಗಳನ್ನು ಪಡೆಯಲು ಸುಸಮಯವಿದು.


ಹಾಗಲಕಾಯಿ ಏಕೆ ಸೇವಿಸಬೇಕು?


ಹಾಗಲಕಾಯಿ ಒಂದು ಜನಪ್ರಿಯ ತರಕಾರಿ. ಆದರೆ ಅದರ ಕಹಿ ರುಚಿಯಿಂದಾಗಿ ಬಹಳಷ್ಟು ಮಂದಿಗೆ ಅದು ಇಷ್ಟವಾಗುವುದಿಲ್ಲ. ಫಿಟ್‍ನೆಸ್ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಉಳ್ಳವರು ಮಾತ್ರ ಹಾಗಲಕಾಯಿಯನ್ನು ಕಂಡು ಮುಖ ಮುರಿಯುವುದಿಲ್ಲ, ಏಕೆಂದರೆ ಅದರ ಮಹತ್ವವನ್ನು ಅವರು ಬಲ್ಲರು. ಬೇರೆ ಋತುವಿನಲ್ಲಿ ಅಲ್ಲದಿದ್ದರೂ, ಚಳಿಗಾಲದಲ್ಲಿ ಹಾಗಲಕಾಯಿ ರಸ ಕುಡಿಯುವುದನ್ನು ರೂಢಿ ಮಾಡಿಕೊಳ್ಳಿ. ಹಾಗಲಕಾಯಿ ರಸವನ್ನು ಚಳಿಗಾಲದಲ್ಲೇ ಮುಖ್ಯವಾಗಿ ಏಕೆ ಕುಡಿಯಬೇಕು ಎಂಬುದಕ್ಕೆ ಇಲ್ಲಿವೆ ಒಂದಷ್ಟು ಮಾಹಿತಿಗಳು.


ರಕ್ತದ ಮಟ್ಟವನ್ನು ನಿರ್ವಹಿಸುತ್ತದೆ Manages sugar levels


ಇನ್ಸುಲಿನ್ ಮಟ್ಟ ಮತ್ತು ರಕ್ತ ಸಕ್ಕರೆ ಮಟ್ಟ ನಿರ್ವಹಿಸಲು ಹಾಗಲಕಾಯಿ ರಸ ನೈಸರ್ಗಿಕವಾಗಿ ಸಹಾಯ ಮಾಡುತ್ತದೆ. ಏಕೆಂದರೆ ಹಾಗಲಕಾಯಿ ರಸವು ಇನ್ಸುಲಿನ್‍ನಂತೆ ಕೆಲಸ ಮಾಡುವ ಸಂಯುಕ್ತಗಳನ್ನು ಹೊಂದಿದೆ.


ಇದನ್ನೂ ಓದಿ:  Bitter Gourd Benefits: ಹಾಗಲಕಾಯಿ ಕಹಿ ಅಂತಾ ಮೂಗು ಮುರಿಯಬೇಡಿ - ಇದರಲ್ಲಿದೆ ಹಲವಾರು ಆರೋಗ್ಯಕರ ಪ್ರಯೋಜನಗಳು

ರಕ್ತದ ಮಟ್ಟವನ್ನು ಸುಧಾರಿಸುತ್ತದೆ  Improves blood levels


ಹಾಗಲಕಾಯಿ ರಸವನ್ನು ನಿಮ್ಮ ಆಹಾರ ಕ್ರಮಕ್ಕೆ ಸೇರಿಸುವುದರಿಂದ , ರಕ್ತದಲ್ಲಿರುವ ಕಲ್ಮಶಗಳನ್ನು ಶುದ್ಧೀಕರಿಸಲು ಮತ್ತು ಡಿಟಾಕ್ಸಿಫೈ ಮಾಡಲು ಸಹಾಯ ಆಗುತ್ತದೆ. ಈ ರಸವನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಾಧ್ಯವಿದೆ ಮತ್ತು ಕಬ್ಬಿಣಾಂಶದ ಮಟ್ಟ ಸುಧಾರಿಸುತ್ತದೆ , ಅದರಿಂದಾಗಿ ಒಟ್ಟಾರೆ ಆರೋಗ್ಯ ಮತ್ತು ಚರ್ಮ ಅರೋಗ್ಯ ಉತ್ತಮಗೊಳ್ಳುತ್ತದೆ.


ಜೀರ್ಣಾಂಗ ವ್ಯವಸ್ಥೆಯ ಶುದ್ಧೀಕರಣ Cleanses the digestive system


ಚಯಾಪಚಯವನ್ನು ಸರಿಯಾಗಿ ಇರಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಯನ್ನು ನೈಸರ್ಗಿಕವಾಗಿ ಶುದ್ಧೀಕರಿಸುವುದು ಅಗತ್ಯ. ಹಾಗಲಕಾಯಿ ರಸ ಯಕೃತ್ತಿಗೆ ಅತ್ಯುತ್ತಮ, ಏಕೆಂದರೆ ಅದು ಯಕೃತ್ತಿನ ಕ್ಲೆನ್ಸರ್‌ನಲ್ಲಿ ಕೆಲಸ ಮಾಡುತ್ತದೆ. ಅದರಿಂದ ಯಕೃತ್ತಿನ ಕಿಣ್ವಗಳನ್ನು ಹೆಚ್ಚಿಸುತ್ತದೆ ಮತ್ತು ಡಿಟಾಕ್ಸಿಫೈ ಮಾಡಲು ಸಹಾಯ ಮಾಡುತ್ತದೆ, ಹಾಗೂ ಕ್ರಮೇಣ ಯಕೃತ್ತಿನ ಮೇಲಿರುವ ವಿಷ ತೆಗೆದು ಹಾಕಲು ಸಹಾಯ ಮಾಡುತ್ತದೆ.


ಮನೆಯಲ್ಲಿ ಹಾಗಲಕಾಯಿ ರಸವನ್ನು ಮಾಡುವುದು ಹೇಗೆ?


ಹಾಗಲಕಾಯಿ ರಸ ಬೇಗನೆ ತಯಾರಿಸಬೇಕು ಎಂದಾದಲ್ಲಿ, ಮೊದಲು ಅದನ್ನು ಚೆನ್ನಾಗಿ ತೊಳೆಯಿರಿ ಮತ್ತು ಒಳಗಿರುವ ಬೀಜಗಳನ್ನು ತೆಗೆದು ಹಾಕಿ. ಕತ್ತರಿಸಿದ ಹಾಗಲಕಾಯಿ ತುಂಡುಗಳನ್ನು ಮಿಕ್ಸಿಯೊಳಗೆ ಹಾಕಿ ಮತ್ತು ಒಂದು ಇಂಚು ಶುಂಠಿ, ಒಂದು ಚಿಟಿಕೆ ಅರಶಿನ, ಕರಿಮೆಣಸು, 4-5 ಪುದೀನ ಎಲೆಗಳು ಮತ್ತು ಒಂದು ಚಿಟಿಕೆ ಕಪ್ಪು ಉಪ್ಪನ್ನು ಸೇರಿಸಿ, ಚೆನ್ನಾಗಿ ರುಬ್ಬಿರಿ.


ಇದನ್ನೂ ಓದಿ:  Health Tips: ಹಾಗಲಕಾಯಿ ಬೀಜಗಳು, ಬೇರುಗಳು ಮತ್ತು ಎಲೆಗಳು ಹೇಗೆ ಪ್ರಯೋಜನಕಾರಿ, ಇಲ್ಲಿದೆ ಮಾಹಿತಿ

ಅದಕ್ಕೆ ಮೂರು ಚಮಚ ನಿಂಬೆ ರಸ ಸೇರಿಸಿ, ಮತ್ತೆ ಚೆನ್ನಾಗಿ ರುಬ್ಬಿರಿ. ಈ ಜ್ಯೂಸನ್ನು ಕುಡಿದರೆ ನಿಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಸಿಗುವುದು ಖಂಡಿತಾ. ಆದರೆ ಇದನ್ನು ನಿಮಗೆ ಇನ್ನಷ್ಟು ಪೌಷ್ಟಿಕಾಂಶಯುಕ್ತವಾಗಿ ಮಾಡಬೇಕೆಂದು ಇಚ್ಚೆ ಇದ್ದಲ್ಲಿ, ರಸವನ್ನು ತಯಾರಿಸುವಾಗ ಕೆಲವು ಬೀಟ್‍ರೂಟ್ ಹೋಳುಗಳನ್ನು ಕೂಡ ಸೇರಿಸಿಕೊಳ್ಳಬಹುದು.


ಹಾಗಲಕಾಯಿಯಲ್ಲಿ ಪೌಷ್ಟಿಕಾಂಶ


Published by:Mahmadrafik K
First published: