• Home
  • »
  • News
  • »
  • lifestyle
  • »
  • Bitter Food: ಮಧುಮೇಹ ನಿಯಂತ್ರಿಸುವಲ್ಲಿ ಕಹಿ ಪದಾರ್ಥಗಳ ಸೇವನೆ ಎಷ್ಟು ಸಹಕಾರಿ?

Bitter Food: ಮಧುಮೇಹ ನಿಯಂತ್ರಿಸುವಲ್ಲಿ ಕಹಿ ಪದಾರ್ಥಗಳ ಸೇವನೆ ಎಷ್ಟು ಸಹಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆಯುರ್ವೇದದ ಪ್ರಕಾರ ಕಹಿ ಆಹಾರ ಪದಾರ್ಥಗಳು ಕಫ ಮತ್ತು ಪಿತ್ತ ದೋಷ ಸಮತೋಲನ ಮಾಡುತ್ತವೆ. ಈ ಕಹಿ ಆಹಾರಗಳು ದೇಹದಿಂದ ವಿಷ ಮತ್ತು ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಕಹಿ ಪದಾರ್ಥಗಳು ಸಕ್ಕರೆಯ ಕಡು ಬಯಕೆ ಕಡಿಮೆ ಮಾಡಲು ಸಹಕಾರಿ ಆಗಿವೆ.

  • Share this:

    ಮಧುಮೇಹವು (Diabetes) ಒಮ್ಮೆ ಅಂಟಿಕೊಂಡರೆ ಜೀವನಪೂರ್ತಿ (Lifelong) ಈ ಕಾಯಿಲೆಯ (Disease) ವಿರುದ್ಧ ಹೋರಾಡುತ್ತಾ ಬದುಕುವ ಸ್ಥಿತಿ ಇದೆ. ಇದೊಂದು ಜೀವನಶೈಲಿಯ ಕಾಯಿಲೆ (Lifestyle Disease) ಎಂದು ಹೇಳಲಾಗುತ್ತದೆ. ಸರಿಯಾದ ಜೀವನಶೈಲಿ ಅಳವಡಿಕೆ ಮಾಡಿಕೊಳ್ಳುವ ಮೂಲಕ ಇದನ್ನು ನಿಯಂತ್ರಣ ಮಾಡಬಹುದು. ಜೀವನಶೈಲಿ ಜೊತೆಗೆ ನಿಮ್ಮ ಆಹಾರ (Food) ಕ್ರಮವೂ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಗಳಿಂದ ಮಧುಮೇಹ ಕಾಯಿಲೆ ತಡೆಯಬಹುದು. ಉತ್ತಮ ಆಹಾರ ಸೇವನೆಯಿಂದ ನೀವು ಪ್ರತಿಯೊಂದು ಕಾಯಿಲೆ ಅಪಾಯ ಕಡಿಮೆ ಮಾಡಬಹುದು ಅಥವಾ ನಿಯಂತ್ರಣ ಮಾಡಬಹುದು. ಹಾಗಾಗಿ ಜನರು ಮಧುಮೇಹ ಆರಂಭದ ತಕ್ಷಣ ಹಾಗಲಕಾಯಿ ತಿನ್ನಲು ಪ್ರಾರಂಭಿಸುತ್ತಾರೆ.


    ಯಾಕಂದ್ರೆ ಕಹಿ ಪದಾರ್ಥ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ತುಂಬಾ ಜನರು ಹಾಗಲಕಾಯಿ ಸೇವನೆ ಮಾಡ್ತಾರೆ. ಆದರೆ ಇದು ನಿಜವೇ? ಕಹಿ ಪದಾರ್ಥಗಳ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದೇ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಬಂದಿದ್ದರೆ ಇಲ್ಲಿ ಅದಕ್ಕೆ ಉತ್ತರ ಏನು ಅನ್ನೋದನ್ನ ನೋಡೋಣ.


    ಮಧುಮೇಹ ನಿಯಂತ್ರಿಸುವಲ್ಲಿ ಕಹಿ ಪದಾರ್ಥಗಳ ಸೇವನೆ ಎಷ್ಟು ಸಹಕಾರಿ?


    ಆಯುರ್ವೇದದ ಪ್ರಕಾರ, ಕಹಿ ಆಹಾರ ಪದಾರ್ಥಗಳು ಕಫ ಮತ್ತು ಪಿತ್ತ ದೋಷ ಸಮತೋಲನ ಮಾಡುತ್ತದೆ. ಈ ಕಹಿ ಆಹಾರಗಳು ದೇಹದಿಂದ ವಿಷ ಮತ್ತು ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ. ಜೊತೆಗೆ ಕಹಿ ಪದಾರ್ಥಗಳು ಸಕ್ಕರೆ ಕಡು ಬಯಕೆ ಕಡಿಮೆ ಮಾಡಲು ಸಹಕಾರಿ ಆಗಿವೆ.


    ದೇಹದಲ್ಲಿ ಕಫ ದೋಷ ಅಸಮತೋಲನ ಮಧುಮೇಹಕ್ಕೆ ಕಾರಣ ಆಗಬಹುದು. ಅದಕ್ಕಾಗಿ ಆಯುರ್ವೇದ ಕಹಿ ಆಹಾರನ್ನು ಸೇವಿಸಲು ಸೂಚನೆ ನೀಡುತ್ತದೆ.


    ವಿಜ್ಞಾನ ಏನು ಹೇಳುತ್ತದೆ?


    ನ್ಯಾಷನಲ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚು ಕಹಿ ಆಹಾರಗಳು ಪಾಲಿಪೆಪ್ಟೈಡ್-ಪಿ ನ್ನು ಹೊಂದಿವೆ. ಇದು ಇನ್ಸುಲಿನ್‌ ಗೆ ಬದಲಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ನೀವು ನಿಮ್ಮ ಆಹಾರದಲ್ಲಿ ಕಹಿ ಪದಾರ್ಥ ಸೇರಿಸಿ.


    ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಮಾಹಿತಿಯ ಪ್ರಕಾರ, ಗ್ಯಾಲಕ್ಟೋಮನ್ನನ್ ಎಂಬ ಫೈಬರ್ ಹೊಂದಿರುವ ಆಹಾರವು ರಕ್ತದ ಸಕ್ಕರೆ ಕಡಿಮೆ ಮಾಡಲು ಸಹಕಾರಿ ಆಗಿವೆ. ಈ ಫೈಬರ್ ರಕ್ತದ ಸಕ್ಕರೆ ಹೀರಿಕೊಳ್ಳುವಿಕೆ ತಡೆಯುತ್ತದೆ.


    ಅಮೈನೋ ಆಮ್ಲ 4


    ಅಮಿನೊ ಆಸಿಡ್ 4 ಅಂದರೆ ಹೈಡ್ರಾಕ್ಸಿ ಐಸೊಲ್ಯೂಸಿನ್ ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆ ಹೆಚ್ಚಿಸಲು ಮತ್ತು ಜೀವಕೋಶಗಳಿಂದ ಸಕ್ಕರೆ ಹೀರಿಕೊಳ್ಳುವುದನ್ನು ಸುಧಾರಿಸಲು ಸಹಕಾರಿ ಆಗಿದೆ. ಇದು ರಕ್ತದ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ತಡೆಯುತ್ತದೆ.


    ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸಲು ಈ ಪದಾರ್ಥಗಳು ಸಹಕಾರಿ


    ಹಾಗಲಕಾಯಿ


    ಹಾಗಲಕಾಯಿ ಪಾಲಿಪೆಪ್ಟೈಡ್-ಪಿ ಮತ್ತು ಆಂಟಿ ಆಕ್ಸಿಡೆಂಟ್‌ ಹೊಂದಿದೆ. ಇದು ಮಧುಮೇಹ ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಲಕಾಯಿ ರಸ ಸೇವನೆ ಮಾಡುವುದು ಮಧುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಸೇರಿಸಿ.


    ಇದನ್ನೂ ಓದಿ: ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೇಕು ಪೇರಳೆ ಹಣ್ಣಿನ ಪಂಚ್ ಪಾನೀಯ, ಸುಲಭದ ರೆಸಿಪಿ ಹೀಗಿದೆ ನೋಡಿ


    ಕಲೋಂಜಿ ಮತ್ತು ಮೆಂತ್ಯ


    ಕಲೋಂಜಿ ಸಂಕೋಚಕ ಗುಣ ಹೊಂದಿದೆ. ರಕ್ತದ ಸಕ್ಕರೆ ಮಟ್ಟ ಏರಿಕೆ ತಡೆಯುತ್ತದೆ. ಮೆಂತ್ಯ ಬೀಜಗಳು ಗ್ಯಾಲಕ್ಟೋಮನ್ನನ್ ಎಂಬ ಫೈಬರ್‌ ಹೊಂದಿವೆ. ಇದು ಮಧುಮೇಹ ನಿಯಂತ್ರಿಸುತ್ತದೆ. ದೈನಂದಿನ ಆಹಾರದಲ್ಲಿ ಈ ಕಹಿ ಆಹಾರ ಪದಾರ್ಥ ಸೇರಿಸುವುದು ಪ್ರಯೋಜನ ತರುತ್ತದೆ.

    Published by:renukadariyannavar
    First published: