ಉಗುರು ಕಚ್ಚುವ ಅಭ್ಯಾಸ ನಿಮಗೆ ಇದ್ಯಾ? ಹಾಗಾದ್ರೆ ಈ ಸಮಸ್ಯೆ ನಿಮ್ಮನ್ನು ಕಾಡುತ್ತಿರಬೇಕು

ಉಗುರು ಕಚ್ಚುವುದು ಒಂದು ಅಭ್ಯಾಸವಲ್ಲ ಒಮ್ಮೊಮ್ಮೆ ಇದು ಕೆಟ್ಟ ಅಭ್ಯಾಸವಾಗಿ ಕೂಡ ಬದಲಾಗುವ ಸಾಧ್ಯತೆ ಇರುತ್ತದೆ

ಉಗುರು ಕಚ್ಚುವುದು ಒಂದು ಅಭ್ಯಾಸವಲ್ಲ ಒಮ್ಮೊಮ್ಮೆ ಇದು ಕೆಟ್ಟ ಅಭ್ಯಾಸವಾಗಿ ಕೂಡ ಬದಲಾಗುವ ಸಾಧ್ಯತೆ ಇರುತ್ತದೆ

ಉಗುರು ಕಚ್ಚುವುದು ಒಂದು ಅಭ್ಯಾಸವಲ್ಲ ಒಮ್ಮೊಮ್ಮೆ ಇದು ಕೆಟ್ಟ ಅಭ್ಯಾಸವಾಗಿ ಕೂಡ ಬದಲಾಗುವ ಸಾಧ್ಯತೆ ಇರುತ್ತದೆ

  • Share this:

ಉಗುರು ಕಚ್ಚದಿರಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನೀವು ಮಾಡಿದ್ದೀರಾ? ಆದರೂ ಈ ದುರಾಭ್ಯಾಸ ನಿಮ್ಮನ್ನು ಬಿಟ್ಟು ಹೋಗಿಲ್ಲವೇ? ಚಿಂತೆ ಬೇಡ ಈ ರೀತಿಯ ಸಮಸ್ಯೆ ನಿಮ್ಮೊಬ್ಬರದ್ದೇ ಅಲ್ಲ ಹಲವು ಮಂದಿ ಉಗುರುಗಳನ್ನು ಕಚ್ಚುವ ಅಭ್ಯಾಸವನ್ನು ಹೊಂದಿದ್ದಾರೆ. ಇದು ಸತ್ಯ, ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರು ತಮ್ಮ ಉಗುರುಗಳನ್ನು ಕಚ್ಚುತ್ತಾರೆ.ಇದು ಗಂಭೀರ ಅಭ್ಯಾಸವಾಗಿದ್ದರೂ, ಉಗುರು ಕಚ್ಚದೇ ಇರಲು ಆಗುವುದೇ ಇಲ್ಲ. ಉಗುರು ಕಚ್ಚುವುದು ಒಂದು ಅಭ್ಯಾಸವಲ್ಲ ಒಮ್ಮೊಮ್ಮೆ ಇದು ಕೆಟ್ಟ ಅಭ್ಯಾಸವಾಗಿ ಕೂಡ ಬದಲಾಗುವ ಸಾಧ್ಯತೆ ಇರುತ್ತದೆ. ಹಾಗಾದರೆ ಸರಿ, ಇದರ ಹಿಂದಿನ ಹಲವು ಕಾರಣಗಳನ್ನು ನಾವು ಇಲ್ಲಿ ವ್ಯಾಖ್ಯಾನಿಸುತ್ತೇವೆ ಬನ್ನಿ ಈ ಅಭ್ಯಾಸವನ್ನು ಕುರಿತು ಇನ್ನಷ್ಟು ತಿಳಿಯೋಣ
  • ನೀವು ಪರಿಪೂರ್ಣತಾವಾದಿಯಾಗಿರಬಹುದು:ಸೈಂಟಿಫಿಕ್ ಅಮೇರಿಕನ್ ಮೈಂಡ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಭಾಗವಹಿಸಿದ ಜನರು ತಮ್ಮ ನಡವಳಿಕೆಯನ್ನು ಅಧ್ಯಯನ ಮಾಡಲು ಒತ್ತಡದಿಂದ ಪ್ರಚೋದಿಸಲ್ಪಟ್ಟರು.ಅ ಅಧ್ಯಯನದಲ್ಲಿ ಭಾಗವಹಿಸಿದ ಜನರಲ್ಲಿ ಪರಿಪೂರ್ಣತೆಯ ಮಟ್ಟದಲ್ಲಿ ಹೆಚ್ಚು ಅಂಕ ಗಳಿಸಿದ ಜನರು ಇತರರಿಗೆ ಹೋಲಿಸಿದರೆ ತಮ್ಮ ಉಗುರುಗಳನ್ನು ಹೆಚ್ಚು ಕಚ್ಚುತ್ತಿದ್ದರು ಎಂದು ಅಮೇರಿಕನ್ ಮೈಂಡ್ ಜರ್ನಲ್‌ ತಿಳಿಸಿದೆ. ಪರಿಪೂರ್ಣತಾವಾದಿಗಳು ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದ್ದಾರೆ, ಮತ್ತು ಇದು ಹೆಚ್ಚಾಗಿ ಒತ್ತಡ ಮತ್ತು ಆತಂಕಕ್ಕೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಉಗುರುಗಳನ್ನು ಕಚ್ಚುವ ಬಗ್ಗೆ ಹೆಚ್ಚು ಚಿಂತೆಬೇಡ!

  • ನೀವು ಒಸಿಡಿ ಹೊಂದಿರಬಹುದು:ಉಗುರು ಕಚ್ಚುವುದು ಗೀಳು-ಕಂಪಲ್ಸಿವ್ ಅಥವಾ ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್‌ಗೆ(ಒಸಿಡಿ) ಸಂಬಂಧಿಸಿರಬಹುದು ಎಂದು ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ​​ತಿಳಿಸಿದೆ. ಇದು ವಿವಾದಾತ್ಮಕ ಅಂಶದಂತೆ ಕಾಣಿಸಬಹುದು, ಆದರೆ ಕೆಲವು ವಿಜ್ಞಾನಿಗಳು ಗೀಳು-ಕಂಪಲ್ಸಿವ್ ಅಸ್ವಸ್ಥತೆಯಿಂದ ಉಗುರು ಕಚ್ಚುವಿಕೆಯ ಸಮಸ್ಯೆಯು ಉಂಟಾಗುತ್ತದೆ ಎಂದು ವಿಜ್ಞಾನಿಗಳು ಒಪ್ಪುವುದಿಲ್ಲ, ಇದು ಪ್ರಚೋದನೆ ನಿಯಂತ್ರಣ ವೈಫಲ್ಯದಿಂದ ಉಂಟಾಗುತ್ತದೆ. ಉಗುರು ಕಚ್ಚುವಿಕೆಗೆ ಹಾಗೂ ಒಸಿಡಿಗೆ ಯಾವುದೇ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

  • ನೀವು ಮಾನಸಿಕ ಅಸ್ವಸ್ಥತೆಯನ್ನು ಹೊಂದಿರಬಹುದು:ನಿಮ್ಮ ಉಗುರುಗಳನ್ನು ಕಚ್ಚುತ್ತಿದ್ದರೆ, ನೀವು ಮಾನಸಿಕ ಅಸ್ವಸ್ಥತೆಯನ್ನು ಹೊಂದುವ ಸಾಧ್ಯತೆಯಿದೆ. ಇರಾನಿನ ಜರ್ನಲ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು ಮಾನಸಿಕ ಅಸ್ವಸ್ಥತೆ ಹೊಂದಿರುವ 80% ಮಕ್ಕಳು ಉಗುರು ಕಚ್ಚುವವರು ಎಂದು ತಿಳಿಸಿದೆ.

  • ನೀವು ನಿರಾಶೆಗೊಳ್ಳಬಹುದು:ಜರ್ನಲ್ ಆಫ್ ಬಿಹೇವಿಯರಲ್ ಥೆರಪಿ ಮತ್ತು ಪ್ರಾಯೋಗಿಕ ಮನೋವೈದ್ಯಶಾಸ್ತ್ರದಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಸಂಶೋಧಕರು ಖಿನ್ನತೆ ಸೇರಿದಂತೆ ನಾಲ್ಕು ಭಾವನೆಗಳನ್ನು ಕುರಿತು ಅಧ್ಯಯನ ನಡೆಸಿದರು. ಅ ಅಧ್ಯಯನದಿಂದ ತಿಳಿದುಬಂದ ಸಂಗತಿಯೆಂದರೆ ಖಿನ್ನತೆಗೆ ಒಳಗಾದ ಜನರು ಉಗುರುಗಳನ್ನು ಕಚ್ಚುತ್ತಲೇ ಇರುತ್ತಾರೆ! ನಿಮ್ಮ ಉಗುರುಗಳನ್ನು ಕಚ್ಚುವ ಪ್ರವೃತ್ತಿಯನ್ನು ನೀವು ಗಮನಿಸಿದ್ದೀರಾ, ವಿಶೇಷವಾಗಿ ನೀವು ಒತ್ತಡಕ್ಕೊಳಗಾದಾಗ ಅಥವಾ ಖಿನ್ನತೆಗೆ ಒಳಗಾದಾಗ? ಜನರು ಆ ಸಮಯದಲ್ಲಿ ಏನನ್ನಾದರೂ ಮಾಡಬೇಕಾಗಿರುವುದರಿಂದ ಅ ಸಮಯದಲ್ಲಿ ಅವರು ಉಗುರುಗಳನ್ನು ಕಚ್ಚಲು ಆರಂಭಿಸುತ್ತಾರೆ ಎಂದು ಅಧ್ಯಯನವು ತಿಳಿಸಿದೆ.

  • ನಿಮ್ಮ ಮಾನಸಿಕ ಬೆಳವಣಿಗೆಯಲ್ಲಿ ದೋಷವಿರಬಹುದು: ಆಸ್ಟ್ರೇಲಿಯಾದ ನರವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್, ಉಗುರು ಕಚ್ಚುವುದು ಮಾನಸಿಕ ಲೈಂಗಿಕ ಬೆಳವಣಿಗೆಯಲ್ಲಿನ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. ಉಗುರು ಕಚ್ಚುವವರು ಮೌಖಿಕ ಸ್ಥಿರೀಕರಣದಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ, ಈ ಸ್ಥಿತಿಯು ತಿನ್ನುವುದು, ಕುಡಿಯುವುದು ಅಥವಾ ಧೂಮಪಾನದಂತಹ ಮೌಖಿಕ ಚಟುವಟಿಕೆಗಳು ಒತ್ತಡವನ್ನು ಕಡಿಮೆ ಮಾಡುತ್ತದೆ. ಉಗುರು ಕಚ್ಚುವುದು ಅಭ್ಯಾಸ ಮಾತ್ರವಲ್ಲ ಒಂದು ಸಮಸ್ಯೆಯು ಕೂಡ ನೀವು ಇದರಿಂದ ಹೊರಬರಲು ಈ ಮೇಲಿನ ಹಂಶಗಳು ಸಹಾಯ ಮಾಡುತ್ತವೆ ಎಂದು ನಾವು ಭಾವಿಸುತ್ತೇವೆ.


First published: