• ಹೋಂ
  • »
  • ನ್ಯೂಸ್
  • »
  • ಲೈಫ್ ಸ್ಟೈಲ್
  • »
  • Health Tips: ಮಾನಸಿಕ ಆರೋಗ್ಯಕ್ಕೆ "ಪಕ್ಷಿ" ಮದ್ದು; ಹಕ್ಕಿಗಳನ್ನು ನೋಡುವುದರಿಂದ ಆರೋಗ್ಯಕ್ಕೆ ಲಾಭ ಇದೆ ಎನ್ನುತ್ತಿದೆ ಸಂಶೋಧನೆ

Health Tips: ಮಾನಸಿಕ ಆರೋಗ್ಯಕ್ಕೆ "ಪಕ್ಷಿ" ಮದ್ದು; ಹಕ್ಕಿಗಳನ್ನು ನೋಡುವುದರಿಂದ ಆರೋಗ್ಯಕ್ಕೆ ಲಾಭ ಇದೆ ಎನ್ನುತ್ತಿದೆ ಸಂಶೋಧನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಸರ್ಗ ಚಿಕಿತ್ಸೆ ಹಲವು ರೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ ಅನ್ನೋದು ಹಳೆಯ ವಿಚಾರ. ಆದರೆ ಇತ್ತೀಚಿನ ಹೊಸ ಸಂಶೋಧನೆ, ಪಕ್ಷಿಗಳನ್ನು ನೋಡುವುದು ಮತ್ತು ಅವುಗಳ ಕೂಗು ಕೇಳುವುದು ಮಾನಸಿಕ ಆರೋಗ್ಯ ಮತ್ತು ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಮುಂದೆ ಓದಿ ...
  • Share this:

    ಮಾನವನ ಕೆಲ ಮಾನಸಿಕ (mentally), ದೈಹಿಕ ಸಮಸ್ಯೆಗಳಿಗೆ ನಮ್ಮ ಸುತ್ತಮುತ್ತಲಿನ ಪರಿಸರ, ಪ್ರಕೃತಿಯೇ ಕೆಲವೊಮ್ಮೆ ಚಿಕಿತ್ಸೆ (Treatment) ನೀಡುತ್ತದೆ ಎನ್ನಬಹುದು.ಅದರಲ್ಲೂ ಮಾನಸಿಕ ಆರೋಗ್ಯದ ಮೇಲೆ ಪರಿಸರ, ಹವಮಾನ ಎಲ್ಲವೂ ಪರಿಣಾಮ ಬೀರುತ್ತದೆ. ಯಾಕೋ ಮನಸ್ಸೇ ಸರಿ ಇಲ್ಲ, ಕೆಲಸ ಮಾಡೋ ಉತ್ಸಾಹ ಇಲ್ಲ ಎಂದಾಗ ವೈದ್ಯರು (Doctor) ಸೇರಿ ಹಲವರು ಎಲ್ಲಾದರೂ ಬೇರೆ ಸ್ಥಳಕ್ಕೆ ಹೋಗಿ ಬಾ ಅನ್ನೋ ಸಲಹೆ ನೀಡ್ತಾರೆ. ಈ ಸಲಹೆ ಉದ್ದೇಶ, ಬೇರೆ ಸ್ಥಳಕ್ಕೆ ಹೋಗಿ ಬಂದಲ್ಲಿ ವಾತಾವರಣ, ಪರಿಸರ ಎಲ್ಲವೂ ಮನಸ್ಸಿನ ಮೇಲೆ ಪರಿಣಾಮ ಬೀರಿ ನಮ್ಮನ್ನು ಮಾನಸಿಕವಾಗಿ ಸದೃಢಗೊಳಿಸುತ್ತದೆ ಎನ್ನುವುದು.


    ಮಾನಸಿಕ ಆರೋಗ್ಯಕ್ಕೆ ʼಪಕ್ಷಿʼ ಮದ್ದು


    ನಿಸರ್ಗ ಚಿಕಿತ್ಸೆ ಹಲವು ರೋಗಗಳಲ್ಲಿ ಉತ್ತಮ ಫಲಿತಾಂಶ ನೀಡಿದೆ ಅನ್ನೋದು ಹಳೆಯ ವಿಚಾರ. ಆದರೆ ಇತ್ತೀಚಿನ ಹೊಸ ಸಂಶೋಧನೆ, ಪಕ್ಷಿಗಳನ್ನು ನೋಡುವುದು ಮತ್ತು ಅವುಗಳ ಕೂಗು ಕೇಳುವುದು ಮಾನಸಿಕ ಆರೋಗ್ಯ ಮತ್ತು ನಮ್ಮ ಒಟ್ಟಾರೆ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದೆ.


    ಇಂಗ್ಲೆಂಡ್‌ನ ಎಕ್ಸೆಟರ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಬಯೋಸೈನ್ಸ್‌ನಲ್ಲಿ 2017 ರಲ್ಲಿ ಪ್ರಕಟಿಸಿದ ಅಧ್ಯಯನವು ಯಾರು ಹೆಚ್ಚು ಪಕ್ಷಿಗಳನ್ನು ನೋಡುತ್ತಾರೋ, ಅವುಗಳ ಚಿಲಿಪಲಿಯನ್ನು ಆಲಿಸುತ್ತಾರೋ ಅಂಥವರು ಮಾನಸಿಕವಾಗಿ ಆರೋಗ್ಯವಾಗಿರುತ್ತಾರೆ. ಖಿನ್ನತೆ, ಒತ್ತಡ ಮತ್ತು ಆತಂಕವನ್ನು ತುಂಬಾನೆ ಕಡಿಮೆ ಅನುಭವಿಸುತ್ತಾರೆ ಎಂದು ತಿಳಿಸಿದೆ.




    ಸಮೀಕ್ಷೆಯಲ್ಲಿ ಜನ ಏನಂದಿದ್ದಾರೆ?


    ಪಕ್ಷಿಗಳನ್ನು ಅಳಿವಿನಿಂದ ರಕ್ಷಿಸಲು 1889 ರಲ್ಲಿ ಪ್ರಾರಂಭವಾದ ಆರ್‌ಎಸ್‌ಪಿಬಿ ಎಂಬ ಬ್ರಿಟಿಷ್ ಸಂಸ್ಥೆಯು ನಿಯೋಜಿಸಿದ ಯುಗೋವ್ ಸಮೀಕ್ಷೆಯಲ್ಲಿ 88% ಯುಕೆಯ ವಯಸ್ಕರು ನಿಸರ್ಗವನ್ನು ಆನಂದಿಸಲು ಹೊರಗೆ ಬರುವುದು ಮತ್ತು ಪ್ರಕೃತಿ ಜೊತೆ ಸಮಯ ಕಳೆಯುವುದು ಉತ್ತಮ ಜೀವನಶೈಲಿಗೆ ಮುಖ್ಯವಾಗಿದೆ ಎಂದಿದ್ದಾರೆ.


    ಹಾಗೆಯೇ 53% ಜನ ಇದೇ ಹೇಳಿಕೆಯನ್ನು ನೀಡಿದ್ದಾರೆ. ಮತ್ತು 91% ಜನರು ಪಕ್ಷಿಗಳನ್ನು ನೋಡುವುದು ಮತ್ತು ಪಕ್ಷಿಗಳ ಹಾಡು, ಕೂಗನ್ನು ಕೇಳುವುದು ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.


    ಪಕ್ಷಿಗಳನ್ನು ಗಮನಿಸುವುದು, ಅವುಗಳ ಶಬ್ದಗಳನ್ನು ಆಲಿಸುವುದು, ಅವುಗಳನ್ನು ನಿಯಮಿತವಾಗಿ ವೀಕ್ಷಿಸುವುದು, ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ನಮ್ಮ ಒತ್ತಡದ ಜೀವನಕ್ಕೆ ಒಂದೊಳ್ಳೆ ವಿರಾಮ ಕೂಡ ಹೌದು ಎಂದು ಸಮೀಕ್ಷೆಯಲ್ಲಿ ಜನ ಪ್ರತಿಕ್ರಿಯಿಸಿದ್ದಾರೆ.


    ಪಕ್ಷಿಗಳ ಜೊತೆ ಕಾಲಕಳೆಯಲು ಇರುವ ಮಾರ್ಗಗಳು


    ದಿನದಲ್ಲಿ ಒಂದಿಷ್ಟು ಹೊತ್ತಾದರೂ ಪಕ್ಷಿಗಳನ್ನು ನೋಡುವುದಕ್ಕೆ ಸಮಯ ಮೀಸಲಿಡುವುದು ಮಾನಸಿಕಾಗಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.


    ಸಾಂದರ್ಭಿಕ ಚಿತ್ರ


    ಹಾಗೆಯೇ ಹೇಗೆ ಈ ಆರೋಗ್ಯ ಪ್ರಯೋಜನ ಪಡೆಯಬಹುದು ಎಂದಬುದಕ್ಕೂ ಸಹ ಸಂಶೋಧನೆ ಕೆಲ ಮಾರ್ಗಗಳನ್ನು ಸೂಚಿಸಿದೆ. ಅವು ಈ ಕೆಳಕಂಡಂತಿವೆ.


    * ನಿಮ್ಮ ಸ್ಥಳೀಯ ಉದ್ಯಾನವನದಲ್ಲಿ ಪಕ್ಷಿಗಳನ್ನು ನೋಡಲು ಹೋಗಿ
    ಹಲವು ಉದ್ಯಾನವನಗಳು ಬಾತುಕೋಳಿಗಳು, ಹೆಬ್ಬಾತುಗಳು ಮತ್ತು ಇತರ ಪಕ್ಷಿಗಳನ್ನು ಹೊಂದಿರುತ್ತವೆ. ಹೀಗಾಗಿ ನಿಮಗೆ ಸಾಧ್ಯವಾದಷ್ಟು ಇಲ್ಲಿಗೆ ಭೇಟಿ ನೀಡಿ ಪಕ್ಷಿಗಳ ಚಲನವಲನ, ಅವುಗಳ ಸ್ವರ ಆಲಿಸುವುದು ಸೇರಿ ಅಲ್ಲಿಯೇ ಸ್ವಲ್ಪ ಹೊತ್ತು ಸಮಯ ಕಳೆಯಿರಿ ಎನ್ನುತ್ತದೆ ಸಂಶೋಧನೆ.


    * ನಿಮ್ಮ ಸುತ್ತಮುತ್ತಲಿನ ಸ್ಥಳೀಯ ಪಕ್ಷಿಗಳ ಬಗ್ಗೆ ತಿಳಿಯಿರಿ
    ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲೂ ಕಾಗೆ, ಪಾರಿವಾಳದಂತಹ ಕೆಲ ಪಕ್ಷಿಗಳು ಇರುತ್ತವೆ. ಅವುಗಳ ಹೊರತಾಗಿ ಸಹ ನಾವು ಕೆಲ ಪಕ್ಷಿಗಳನ್ನು ನೋಡಬಹುದು.


    ಅವುಗಳ ಬಗ್ಗೆ ನಿಮಗೆ ತಿಳಿಯದಿದ್ದರೆ ಹೆಚ್ಚಿನ ಮಾಹಿತಿಗಾಗಿ ಲೈಬ್ರರಿ, ಆನ್‌ಲೈನ್‌ ಮೊರೆ ಹೋಗಬಹುದು. ನೀವು ನೋಡುವ ಪಕ್ಷಿಗಳನ್ನು ಗುರುತಿಸಲು ನೀವು ಮಾರ್ಗದರ್ಶಿಯನ್ನು ಸಹ ಬಳಸಬಹುದು.


    * ಬೈನಾಕ್ಯುಲರ್‌ಗಳನ್ನು ಖರೀದಿ ಮಾಡಿ
    ಪಕ್ಷಿಗಳು ಮತ್ತು ಅವುಗಳ ಸಂಕೀರ್ಣ ಮಾದರಿಗಳನ್ನು ಕಂಡುಹಿಡಿಯಲು ಬೈನಾಕ್ಯುಲರ್‌ಗಳನ್ನು ಖರೀದಿ ಮಾಡಿ. ಇದರಿಂದ ದೂರದ ಪಕ್ಷಿಗಳನ್ನು ಸಹ ನೋಡಬಹುದು.


    ಇದನ್ನೂ ಓದಿ: ಈ ಬಾರಿಯ ವ್ಯಾಲೆಂಟೈನ್ಸ್​ ದಿನವನ್ನು ನಿಮ್ಮ ಸಂಗಾತಿಯೊಂದಿಗೆ ಈ 5 ಸ್ಥಳಗಳಲ್ಲಿಆಚರಿಸಿ


    * ಹೊರಗೆ ವಾಕ್‌ ಮಾಡಿ
    ಪಕ್ಷಿಗಳ ಸದ್ದು ಹೆಚ್ಚಾಗಿ ಬೆಳಗ್ಗೆ ಇಲ್ಲಾ ಸಂಜೆ ಕೇಳುತ್ತದೆ. ಹೀಗಾಗಿ ವಾಕಿಂಗ್‌ ಅನ್ನು ಹೆಚ್ಚು ಈ ಸಮಯದಲ್ಲಿ ಮಾಡಿ.


    * ಹಕ್ಕಿ ಗೂಡು ಕಟ್ಟಿ
    ಮನೆ ಅಥವಾ ಹೊಲಗಳಲ್ಲಿ ಹಕ್ಕಿ ಗೂಡುಗಳನ್ನು ನೇತು ಹಾಕಿ. ಇದನ್ನು ನೋಡಿ ಹಕ್ಕಿಗಳು ಬರಬಹುದು. ಆಗ ನೀವು ಸಹ ಸುಂದರ ಪಕ್ಷಿಗಳನ್ನು ಕಣ್ತುಂಬಿಕೊಳ್ಳಬಹುದು.

    Published by:Prajwal B
    First published: