ಭೂಲೋಕದ ಸ್ವರ್ಗ ಭೂತಾನ್​ನ ಪ್ರವಾಸಿ ತಾಣಗಳು

zahir | news18
Updated:June 26, 2018, 4:37 PM IST
ಭೂಲೋಕದ ಸ್ವರ್ಗ ಭೂತಾನ್​ನ ಪ್ರವಾಸಿ ತಾಣಗಳು
zahir | news18
Updated: June 26, 2018, 4:37 PM IST
ಹಿಮಾಲಯದ ತಪ್ಪಲಿನಲ್ಲಿರುವ ಸುಂದರ ದೇಶ ಭೂತಾನ್. ಈ ದೇಶದಲ್ಲಿ ಪ್ರವಾಸವನ್ನು ಆರಂಭಿಸಲು ಅತ್ಯುತ್ತಮ ಸ್ಥಳವೆಂದರೆ ಬಾಗ್ಡೋಗ್ರ. ಈ ಪ್ರದೇಶದಲ್ಲಿ ಭೂತಾನಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಕಣ್ತುಂಬಿಕೊಳ್ಳಬಹುದು.

ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸುವ ಈ ದೇಶದಲ್ಲಿ ಸುಂದರ ವಾಸ್ತುಶಿಲ್ಪ ಮತ್ತು ಪ್ರಾಚೀನ ದೇವಸ್ಥಾನಗಳು ಕಂಡು ಬರುತ್ತದೆ. ಪೀಕ್ಸ್ ನ್ಯಾಶನಲ್ ಮೆಮೋರಿಯಲ್ ಚೋರ್ಟೆನ್, ಕ್ವೆನ್ಸೆಲ್ ಪೊಡ್ರಾಂಗ್ ಉದ್ಯಾನವನ, ಟ್ಯಾಂಗೋ ಮೊನಾಸ್ಟರಿ, ಚಿಮಿ ಲಹಾಂಗ್, ಪುನಾಕಾ ಡಿಜಾಂಗ್, ಪಾರೋ ಡಿಜಾಂಗ್, ಟೈಗರ್ ನಸ್ಟ್ ಮಠ ಮುಂತಾದವುಗಳು ಪ್ರವಾಸದ ವೇಳೆ ನೋಡಬಹುದಾದ ಆಕರ್ಷಕ ಸ್ಥಳಗಳು.


ಕ್ಯಾಂಪಿಂಗ್ - ಭೂತಾನ್ ದೇಶದಲ್ಲಿ ಮನಮೋಹಕ ಬೆಟ್ಟ ಗುಡ್ಡಗಳ ನಡುವೆ ಕ್ಯಾಂಪ್​ ಮಾಡಿ ನೆಲೆಸುವ ಅವಕಾಶ ನೀಡಲಾಗುತ್ತದೆ. ತಕಿನ್ ಅಭಯಾರಣ್ಯ, ಸ್ಯಾಂಟೈಗಾಂಗ್ ವೀವ್​ ಪಾಯಿಂಟ್, ಚಂಗಂಗ್ಖಾ ಲಖಾಂಗ್, ಕೃಷಿ ಮಾರುಕಟ್ಟೆ ಮುಂತಾದ ಸ್ಥಳಗಳು ಪ್ರವಾಸದ ಖುಷಿಯನ್ನು ಹೆಚ್ಚಿಸುತ್ತದೆ. ದೊಚು ಲಾ ಪಾಸ್ ಮೂಲಕ ಸಂಚರಿಸುವಾಗ ಸಿಗುವ ಪುನಾಖಾ ಮತ್ತು ಚಿಮಿ ಲಹಕಾಂಗ್​ ಪ್ರವಾಸಿ ತಾಣಗಳು ಭೂತಾನ್ ಪ್ರಕೃತಿಯ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.


ಮಹಿಳಾ ಸುರಕ್ಷತೆ - ಮಹಿಳೆಯರೊಂದಿಗೆ ಪ್ರವಾಸ ಕೈಗೊಳ್ಳಲು ಬಯಸಿದರೆ ಅತ್ಯಂತ ಸುರಕ್ಷತೆಯ ತಾಣ ಭೂತಾನ್ ಆಗಿದೆ. ತಿಂಪು, ದೊಚು-ಲಾ ಪಾಸ್, ಪುನಾಖಾ ಡಿಜಾಂಗ್, ಪುನಾಖಾ, ಡ್ರುಕ್ಜೀಲ್ ಡಿಜಾಂಗ್ ಮತ್ತು ಕೈಚು ಲಹಕಾಂಗ್ ಪ್ರವಾಸಿ ತಾಣಗಳಲ್ಲಿ ಕಟುಂಬದೊಂದಿಗೆ ಅಥವಾ ಸಂಗಾತಿಯೊಂದಿಗೆ ವಿಹರಿಸುವುದು ಅತ್ಯಂತ ಥ್ರಿಲ್​ ನೀಡುತ್ತದೆ.


ಬೈಕ್ ಟ್ರಿಪ್ - ಬೈಕ್ ಬೆನ್ನೇರಿ ಪ್ರವಾಸಕ್ಕೆ ಹೊರಡುವವರಿಗೆ ಭೂತಾನ್ ರಮಣೀಯ ಪ್ರದೇಶಗಳು ಹೊಸ ಅನುಭವ ನೀಡುವುದರಲ್ಲಿ ಸಂಶಯವೇ ಇಲ್ಲ. ಭೂತಾನಿ ಸುಂದರ ತಾಣಗಳಿಗೆ  ಬೈಕ್​ ನಲ್ಲಿ ಭೇಟಿ ಕೊಡಲು ಎರಡು ವಾರಗಳು ಬೇಕಾಗುತ್ತದೆ. ಪಾರೊದಿಂದ ತಿಂಪು, ಪುನಾಖಾ, ದೊಚು ಲಾ ಪಾಸ್ ಮೊದಲಾದ ಭಾಗಗಳಿಗೆ ಸಂಚರಿಸುವಾಗ ಸಿಗುವ ಕಣಿವೆ ಮಾರ್ಗಗಳು ಬೈಕ್​ ಸವಾರಿಗೆ ಹೊಸ ಚಾಲೆಂಜ್ ನೀಡುತ್ತದೆ.


ರಾಫ್ಟಿಂಗ್ ಮತ್ತು ಟ್ರೆಕ್ಕಿಂಗ್ - ಭೂತಾನಿನ ಬೆಟ್ಟಗಳ ತಪ್ಪಲಿನಲಿರುವ ನದಿಗಳಲ್ಲಿ ರಾಫ್ಟಿಂಗ್ ನಡೆಸುವ ಮೂಲಕ ಪ್ರವಾಸದ ಮಜಾವನ್ನು ಹೆಚ್ಚಿಸಬಹುದು. ಹಿಮಾಲಯದಿಂದ ಹರಿಯುವ ತಣ್ಣನೆಯ ನದಿ ನೀರು ರಾಫ್ಟಿಂಗ್ ಸಾಹಸದ ನಡುವೆ ಹೊಸ ಉಲ್ಲಾಸ ನೀಡುತ್ತದೆ. ಇದಲ್ಲದೆ ಟ್ರೆಕ್ಕಿಂಗ್ ಮಾಡುವ ಹವ್ಯಾಸವಿದ್ದರೆ ಬೆಟ್ಟ ಗುಡ್ಡಗಳನ್ನು ಹತ್ತಬಹುದು. ಹಾಗೆಯೇ ಪಾದ ಸಂಚಾರದ ಮೂಲಕ  ಫುಂಟ್ಸೊಲಿಂಗ್, ಟೈಗರ್ಸ್ ನೆಸ್ಟ್ ಪಾರೋ, ತಿಂಪು, ಪುನಾಖಾ, ಫೊ ಚು ಮುಂತಾದ ಪ್ರಕೃತಿ ರಮಣೀಯ ತಾಣಗಳನ್ನು ವೀಕ್ಷಿಸಬಹುದು.
First published:June 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ