Health: ಬೆಂಡೆಕಾಯಿಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು!

ಸ್ಥೂಲಕಾಯದವರು ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಯೋಚಿಸಿದರೆ ನಿಮ್ಮ ಡಯೆಟ್‍ನಲ್ಲಿ ಬೆಂಡೆಕಾಯಿ ಸೇರಿಸಿಕೊಳ್ಳಿ

ಸ್ಥೂಲಕಾಯದವರು ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಯೋಚಿಸಿದರೆ ನಿಮ್ಮ ಡಯೆಟ್‍ನಲ್ಲಿ ಬೆಂಡೆಕಾಯಿ ಸೇರಿಸಿಕೊಳ್ಳಿ

ಸ್ಥೂಲಕಾಯದವರು ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಯೋಚಿಸಿದರೆ ನಿಮ್ಮ ಡಯೆಟ್‍ನಲ್ಲಿ ಬೆಂಡೆಕಾಯಿ ಸೇರಿಸಿಕೊಳ್ಳಿ

  • Share this:

ಬೆಂಡೆಕಾಯಿ ಆಹಾರ ಪ್ರಿಯರ ತುಂಬಾ ಇಷ್ಟದ ತರಕಾರಿ. ಇದು ಲೋಳೆಯಾಗಿದ್ದರೂ ಹಲವು ಪೋಷಕಾಂಶಗಳ ಆಗರ. ಇದರಿಂದ ಪಲ್ಯ, ಸಾಂಬಾರು, ಗೊಜ್ಜು, ಬೆಂಡೇ ಫ್ರೈ ಹೀಗೆ ಹಲವಾರು ರೀತಿಯ ರುಚಿ ರುಚಿಯಾದ ಆಹಾರ ಪದಾರ್ಥಗಳನ್ನು ತಯಾರಿಸಬಹುದು. ಒಟ್ಟಿನಲ್ಲಿ ಅಡುಗೆ ಮನೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಇದನ್ನು ಒಕ್ರಾ, ಲೇಡಿಸ್ ಫಿಂಗರ್ ಎಂದೂ ಕರೆಯುತ್ತಾರೆ. ಇದರಲ್ಲಿ ಫೈಬರ್ ಅಂಶದ ಜೊತೆಗೆ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ, ವಿಟಮಿನ್ ಎ, ಪೊಟ್ಯಾಷಿಯಂ, ಆಂಟಿಆಕ್ಸಿಡೆಂಟ್ಸ್, ಹೆಚ್ಚಾಗಿದ್ದು, ಬಹಳಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.


1. ತೂಕ ಇಳಿಕೆಗೆ ಪರಿಣಾಮಕಾರಿ
ಸ್ಥೂಲಕಾಯದವರು ತೂಕ ಕಡಿಮೆ ಮಾಡಿಕೊಳ್ಳಬೇಕೆಂದು ಯೊಚಿಸಿದ್ದಲ್ಲಿ ನಿಮ್ಮ ಡಯೆಟ್‍ನಲ್ಲಿ ಬೆಂಡೆಕಾಯಿ ಸೇರಿಸಿಕೊಳ್ಳಿ. ಏಕೆಂದರೆ ಇದರಲ್ಲಿ ನಾರಿನ ಅಂಶ ಜೀರ್ಣಕ್ರಿಯೆಗೆ ಸಹಕಾರಿಯಾಗುವುದಲ್ಲದೆ, ಕಡಿಮೆ ಕ್ಯಾಲೋರಿಯನ್ನು ಸಹ ಹೊಂದಿದೆ. ಇದು ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುವುದರಿಂದ ಇನ್ನಿತರ ಜಂಕ್ ಫುಡ್‍ಗಳಿಂದ ದೂರ ಇರುವಂತೆ ಮಾಡುತ್ತದೆ.


2. ಮಧುಮೇಹ ತಡೆಗಟ್ಟುತ್ತದೆ
ಬೆಂಡೆಕಾಯಿ ಕಡಿಮೆ ಗ್ಲೈಸೆಮಿಕ್ ಅಂಶವನ್ನು ಹೊಂದಿದೆ, ಇದು ರಕ್ತದಲ್ಲಿ ಗರಿಷ್ಠ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ಇದರಲ್ಲಿ ಮೈರಿಸೆಟಿನ್ ಎಂಬ ವಸ್ತು ಸಹ ಇದೆ, ಇದು ಸ್ನಾಯುಗಳಿಂದ ಸಕ್ಕರೆ ಹೀರಿಕೊಳ್ಳುವಿಕೆಯನ್ನು ಸುಧಾರಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.


3. ಹೃದಯ ಆರೋಗ್ಯ ಕಾಪಾಡುತ್ತದೆ
ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತಿದ್ದಂತೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಾರೆ. ಅಂತಹವರು ಬೆಂಡೇಕಾಯಿ ಸೇವಿಸಿದರೆ ಒಳ್ಳೆಯದು. ಸಸ್ಯಾಹಾರದಲ್ಲಿನ ಪೆಕ್ಟಿನ್, ಕರಗಬಲ್ಲ ಫೈಬರ್ ಅಂಶವು ಕರುಳಿನಲ್ಲಿರುವ ಪಿತ್ತರಸ ರಸ ಉತ್ಪಾದನೆಯನ್ನು ಮಾರ್ಪಡಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇನ್ನು ಇದರಲ್ಲಿ ಪಾಲಿಫಿನಾಲ್‍ಗಳಂತಹ ಸಂಯುಕ್ತ ಸಾಕಷ್ಟು ಸಮೃದ್ಧವಾಗಿದೆ, ಇದು ಕೊಲೆಸ್ಟ್ರಾಲ್ ಮತ್ತು ಅಪಧಮನಿ ಅಡಚಣೆಗಳ ಆಕ್ಸಿಡೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ, ಇದರಿಂದಾಗಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.


4. ಕ್ಯಾನ್ಸರ್ ತಡೆಯುತ್ತದೆ
ಅಧ್ಯಯನದ ಪ್ರಕಾರ ಬೆಂಡೆ1ಕಾಯಿಯು ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಯಥೇಚ್ಛವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಶೇ 65ರಷ್ಟು ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಶಕ್ತಿ ಇದೆ. ಇದರಲ್ಲಿನ ನಾರಿನಾಂಶವು ಜೀರ್ಣಕ್ರಿಯೆಗೂ ಸಹಕಾರಿಯಾಗುತ್ತದೆ. ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


5. ಚರ್ಮ ಸೌಂದರ್ಯ ಕಾಯ್ದುಕೊಳ್ಳುತ್ತದೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಚರ್ಮದ ಆರೈಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕ್ಯಾರೊಟಿನಾಯ್ಡ್ಗಳು ಚರ್ಮದ ಕೋಶಗಳ ಬೆಳವಣಿಗೆ ಮತ್ತು ದುರಸ್ತಿಗೆ ಅತ್ಯಗತ್ಯ ಅಂಶವಾಗಿದೆ, ಇದು ಚರ್ಮದ ಹಾನಿಯನ್ನು ಹಿಮ್ಮೆಟ್ಟಿಸಲು ಮತ್ತಷ್ಟು ಸಹಾಯ ಮಾಡುತ್ತದೆ.


ಇದನ್ನು ಓದಿ: ಕೋವಿಡ್​ ಬಳಿಕ ಹಿತ್ತಾಳೆ, ಕಂಚು, ಮಣ್ಣಿನ ಪಾತ್ರೆಗಳಿಗೆ ಹೆಚ್ಚಿದ ಡಿಮ್ಯಾಂಡ್

6. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಬೆಂಡೇಕಾಯಿಯಲ್ಲಿರುವ ನಾರು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ಕರಗಬಲ್ಲ ಫೈಬರ್ ನೈಸರ್ಗಿಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ, ಇದು ಮಲಬದ್ಧತೆ, ಅಜೀರ್ಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.


7. ಗರ್ಭೀಣಿಯರಿಗೆ ಸಹಾಯಕ
ಇದರಲ್ಲಿರುವ ವಿಟಮಿನ್ ಬಿ9 ಗರ್ಭಿಣಿಯರಿಗೆ ಉತ್ತಮ ಜೀವಸತ್ವವಾಗಿದೆ. ಗರ್ಭಿಣಿಯರಿಗೆ ಇದು ಒಂದು ಪ್ರಮುಖ ಪೋಷಕಾಂಶವಾಗಿದೆ, ಏಕೆಂದರೆ ಇದು ನವಜಾತ ಶಿಶುವಿನಲ್ಲಿ ನರಕ್ಕೆ ಸಂಬಂಧಿಸಿದ ಜನನ ದೋಷಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


8. ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ
ಬೆಂಡೇಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಲವಾರು ರೋಗಗಳು ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.


Published by:Seema R
First published: