Weight Loss: 15 ಕೆಜಿ ತೂಕ ಇಳಿಸಿದ Bharti Singh: ವೇಗವಾಗಿ ತೂಕ ಇಳಿಸಲು ಈ ನಾಲ್ಕು ಕ್ರಮಗಳನ್ನು ಅನುಸರಿಸಿ..!

ಸೆಲೆಬ್ರಿಟಿಗಳು ಸಾಮಾನ್ಯವಾಗಿ ಡಯಟ್​ ಹಾಗೂ ನಿಯಮಿತ ವ್ಯಾಯಾಮ ಮಾಡುವ ಮೂಲಕ ತೂಕವನ್ನು ಇಳಿಸಿಕೊಳ್ಳುತ್ತಾರೆ. ಜೊತೆಗೆ ವ್ಯಾಯಾಮ ಮಾಡುವ ಮೂಲಕ ಫಿಟ್ನೆಸ್​ ಕಾಯ್ದುಕೊಳ್ಳುತ್ತಾರೆ. ಈಗ ಹಾಸ್ಯ ಕಲಾವಿದೆ ಭಾರತಿ ಸಹ ತಮ್ಮ ದೇಹದ ತೂಕ ಇಳಿಸಿಕೊಂಡ ಜರ್ನಿ ಹಾಗೂ ಹೇಗೆ ವೇಗವಾಗಿ ತೂಕ ಕಡಿಮೆ ಮಾಡಿಕೊಂಡರು ಎಂದು ಬಹಿರಂಗಪಡಿಸಿದ್ದಾರೆ.

ಕಾಮಿಡಿಯನ್​ ಭಾರತಿ ಸಿಂಗ್​

ಕಾಮಿಡಿಯನ್​ ಭಾರತಿ ಸಿಂಗ್​

  • Share this:
ಕಳೆದ ಒಂದೂವರೆ ವರ್ಷದಿಂದ ಹಲವಾರು ತಾರೆಯರು ಲಾಕ್‍ಡೌನ್‍ನಲ್ಲಿ ತೂಕ ಹೆಚ್ಚಾದ ಬಗ್ಗೆ ಅಥವಾ ತೂಕ ಇಳಿಸಿಕೊಂಡ ಬಗ್ಗೆ ಮಾತನಾಡುವುದನ್ನು ಕೇಳಿಸಿಕೊಳ್ಳುತ್ತಿದ್ದೇವೆ. ಲಾಕ್‍ಡೌನ್ ಸಂದರ್ಭವನ್ನು ಸರಿಯಾಗಿ ಬಳಸಿಕೊಂಡು ತೂಕ ಇಳಿಸಿಕೊಂಡ ಕಿರುತೆರೆ ತಾರೆಯರ ಪಾಲಿಗೆ ಮತ್ತೊಂದು ಸೇರ್ಪಡೆ ಭಾರತಿ ಸಿಂಗ್. ದ ಕಪಿಲ್ ಶರ್ಮಾ ಶೋ ಖ್ಯಾತಿಯ ಭಾರತಿ ಸಿಂಗ್ (Bharati Singh), ಬರೋಬ್ಬರಿ 15 ಕೆಜಿ ತೂಕ (15 KG Weight Loss) ಇಳಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಅಪಾರ ಮೆಚ್ಚುಗೆ ಪಡೆಯುತ್ತಿವೆ. ಅದರಲ್ಲೂ ಎಲ್ಲರೂ ಇಷ್ಟು ಕಡಿಮೆ ಸಮಯದಲ್ಲಿ ತೂಕ ಇಳಿಸಲು ಕಾರಣವೇನೆಂದು ಕೇಳುತ್ತಿದ್ದಾರೆ. 

ಸೆಲೆಬ್ರಿಟಿಗಳು ಸಾಮಾನ್ಯವಾಗಿ ಡಯಟ್​ ಹಾಗೂ ನಿಯಮಿತ ವ್ಯಾಯಾಮ ಮಾಡುವ ಮೂಲಕ ದೇಹದ ತೂಕವನ್ನು ಇಳಿಸಿಕೊಳ್ಳುತ್ತಾರೆ. ಜೊತೆಗೆ ವ್ಯಾಯಾಮ ಮಾಡುವ ಮೂಲಕ ಫಿಟ್ನೆಸ್​ ಕಾಯ್ದುಕೊಳ್ಳುತ್ತಾರೆ. ಈಗ ಹಾಸ್ಯ ಕಲಾವಿದೆ ಭಾರತಿ ಸಹ ತಮ್ಮ ದೇಹದ ತೂಕ ಇಳಿಸಿಕೊಂಡ ಜರ್ನಿ ಹಾಗೂ ಹೇಗೆ ವೇಗವಾಗಿ ತೂಕ ಕಡಿಮೆ ಮಾಡಿಕೊಂಡರು ಎಂದು ಬಹಿರಂಗಪಡಿಸಿದ್ದಾರೆ.


ಒಂದೊಮ್ಮೆ 96 ಕೆಜಿ ತೂಕ ಹೊಂದಿದ್ದ ಭಾರತಿ ಈಗ ಫಿಟ್ ಆಗಿ ಕಾಣಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಮನರಂಜನ ಮಾಧ್ಯಮದಲ್ಲಿ ಅತ್ಯಂತ ಜನಪ್ರಿಯವಾಗಿದ್ದರೂ, ಆಕೆ ತೂಕ ಇಳಿಸಲು ನಿರ್ಧರಿಸಿದ್ದು ಇತ್ತೀಚೆಗೆ.

ಇದನ್ನೂ ಓದಿ: Happy Birthday: ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ನಮ್ಮನೆ ಯುವರಾಣಿ ಧಾರಾವಾಹಿಯ ನಟ ರಘು..!

ಭಾರತಿ ಸಿಂಗ್ ತೂಕ ಇಳಿಸಲು ಕಾರಣವೇನು?

“ಕಳೆದ 30-32 ವರ್ಷಗಳಿಂದ ನಾನು ನನ್ನ ಬಗ್ಗೆ ಕಾಳಜಿ ತೆಗೆದುಕೊಂಡಿರಲಿಲ್ಲ ಮತ್ತು ಯಾವುದೋ ಸಮಯದಲ್ಲಿ ತಿನ್ನುತ್ತಿದ್ದೆ. ಅದರಿಂದ ಅನೇಕ ಸಮಸ್ಯೆಗಳು ಉಂಟಾದವು ಮತ್ತು ನಾನು ಡಯಾಬಿಟೀಸ್‍ನ ಬಾರ್ಡರ್ ಲೈನ್‍ಗೂ ತಲುಪಿದ್ದೆ. ಕತ್ರೋಂಕಾ ಕಿಲಾಡಿಯ ಸಂದರ್ಭದಲ್ಲಿ ಸ್ಟಂಟ್‍ಗಳನ್ನು ಮಾಡುವಾಗ ನನಗೆ ಅಸ್ತಮಾ ಕೂಡ ಬಂತು ಹಾಗೂ ನಾನು ಬಹಳ ಬೇಗ ಸುಸ್ತಾಗುತ್ತಿದ್ದೆ. ಈಗ ತೂಕ ಇಳಿಸಿಕೊಂಡ ನಂತರ ಹಗುರ ಎನಿಸುತ್ತಿದೆ ಮತ್ತು ಯಾವುದೇ ಆರೋಗ್ಯ ಸಮಸ್ಯೆಗಳು ಕೂಡ ಇಲ್ಲ” ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ತಮ್ಮ ಸಹ ಕಲಾವಿದರಿಂದ , ಉಪವಾಸ ಮತ್ತು ಅದರಿಂದ ಸಿಗುವ ಆರೋಗ್ಯದ ಲಾಭಗಳ ಬಗ್ಗೆ ತಿಳಿದುಕೊಂಡದ್ದೇ, ತೂಕ ಇಳಿಸಲು ತಮಗೆ ಸ್ಪೂರ್ತಿ ಎಂದೂ ಹೇಳಿಕೊಂಡಿದ್ದಾರೆ.

ಜಿಮ್‍ಗೆ ಹೋಗದೆ ನಟಿ ತೂಕ ಇಳಿಸಿದ್ದು ಹೇಗೆ?

ಸ್ಥೂಲಕಾಯಿಯಾಗಿದ್ದ ಭಾರತಿ ದಿಢೀರನೆ ತೂಕ ಇಳಿಸಿದ್ದು ಹೇಗೆಂಬುದು ಬಹಳಷ್ಟು ಮಂದಿಯಲ್ಲಿ ಸೋಜಿಗ ಹುಟ್ಟಿಸಿದೆ. ಬಹಳಷ್ಟು ಮಂದಿ ಆಕೆಯಲ್ಲಿ ಆ ಕುರಿತು ಸಲಹೆಯನ್ನೂ ಕೇಳಿದ್ದಾರೆ. ಆದರೆ ಭಾರತಿ ತಾನು ತೂಕ ಇಳಿಸಲು ಕಟ್ಟುನಿಟ್ಟಿನ ಆಹಾರ ಕ್ರಮ ಅಥವಾ ಕಠಿಣ ವ್ಯಾಯಾಮ ಅಥವಾ ಯೋಗ ಅನುಸರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಆಹಾರ ಕ್ರಮವನ್ನು ಬದಲಾಯಿಸಿದ್ದೇ, ತಾನು 15 ತೂಕ ಇಳಿಸಲು ಸಾಧ್ಯವಾಗಿದ್ದರ ಹಿಂದಿನ ರಹಸ್ಯ ಎಂದು ತಿಳಿಸಿದ್ದಾರೆ.

ಭಾರತಿಗೆ ತೂಕ ಇಳಿಸಲು ಸಹಾಯವಾದ 4 ಸರಳ ಹಂತಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ನೀವು ಕೂಡ ಅದನ್ನು ಅನುಸರಿಸಬಹುದು.

1. ಮಧ್ಯಂತರ ಉಪವಾಸ ಕ್ರಮ

ಉಪವಾಸ ಆರಂಭಿಸಲು ಮತ್ತು ಅದರಿಂದ ಸಿಗುವ ಆರೋಗ್ಯದ ಲಾಭಗಳನ್ನು ಪಡೆಯಲು ತಾರೆಯರೇ ತಮಗೆ ಸ್ಪೂರ್ತಿ ಎಂದು ಭಾರತಿ ಒಪ್ಪಿಕೊಂಡಿದ್ದಾರೆ. ಯಾವುದೇ ವ್ಯಾಯಾಮವಿಲ್ಲದೆ ತೂಕ ಇಳಿಸಲು ಭಾರತಿ ಅನುಸರಿಸಿದ್ದು, ವಿಜ್ಞಾನ ಬೆಂಬಲಿತ ತಂತ್ರವಾದ ಮಧ್ಯಂತರ ಉಪವಾಸವನ್ನು. ಆ ಉಪವಾಸ ವಿಧಾನದಲ್ಲಿ ವ್ಯಕ್ತಿ ಅನುಸರಿಸುವ ಆಹಾರ ಯೋಜನೆಯನ್ನು ಉಪವಾಸ ಇರುವ ಮತ್ತು ಉಪವಾಸ ರಹಿತ ಸಮಯ ಎಂದು ವಿಂಗಡಿಸಲಾಗುತ್ತದೆ.

ಇದನ್ನೂ ಓದಿ: 51 ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿರಯೌವ್ವನೆ Ramya Krishnan..!

ವರದಿಗಳ ಪ್ರಕಾರ, ಭಾರತಿ ಸಂಜೆ 7 ಗಂಟೆಯ ನಂತರ ಏನನ್ನೂ ತಿನ್ನುತ್ತಿರಲಿಲ್ಲ. ಅವರ ಮುಂದಿನ ಆಹಾರ ಸೇವನೆ ಮರುದಿನ ಮಧ್ಯಾಹ್ನ ಇರುತ್ತಿತ್ತು. ದೀರ್ಘ ಉಪವಾಸ ಅವಧಿಗಳು (16:8) ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ, ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಕ್ಯಾಲೋರಿ ಸೇವನೆ ಕಡಿಮೆ ಇರುತ್ತದೆ. ಅದರಿಂದ ಆರೋಗ್ಯಕ್ಕೂ ಲಾಭ ಇರುತ್ತದೆ. ಈ ಉಪವಾಸ ಪದ್ಧತಿಯನ್ನು ಬಾಲಿವುಡ್ ಮತ್ತು ಹಾಲಿವುಡ್‍ನ ಬಹಳಷ್ಟು ತಾರೆಯರು ನಂಬುತ್ತಾರೆ.

2. ಊಟ ತಪ್ಪಿಸದೆ ಇರುವುದು

ತಾನು ಮಹಾ ಭೋಜನಪ್ರಿಯೆ ಎಂಬುದನ್ನು ಸ್ವತಃ ಭಾರತಿ ಹಲವಾರು ಭಾರಿ ಹೇಳಿಕೊಂಡು, ತನ್ನ ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ತಿಂಡಿಪೋತಿ ವ್ಯಕ್ತಿತ್ವವನ್ನು ಹಲವಾರು ಬಗೆಯಲ್ಲಿ ವ್ಯಕ್ತಪಡಿಸಿದ್ದಾರೆ ಕೂಡ. ಹಾಗಾಗಿ ಭಾರತಿ ಸಿಂಗ್ , ತೂಕ ಇಳಿಸಲು ಹೊಟ್ಟೆಗೆ ಏನೂ ಕೊರತೆ ಆಗದಂತಹ ಆಹಾರ ಕ್ರಮವನ್ನೇ ಅನುಸರಿಸಿದರು. ಅದರ ಪ್ರಕಾರ, ಉಪವಾಸದ ಹಂತದಲ್ಲಿ ಆಕೆ ಕಟ್ಟು ನಿಟ್ಟಿನ ಆಹಾರ ಕ್ರಮ ಅನುಸರಿಸುತ್ತಿದ್ದರೇ ಹೊರತು, ಆಹಾರವನ್ನು ನಿರ್ಬಂಧಿಸಬೇಕಾಗಿರಲಿಲ್ಲ. ಇನ್‍ಸ್ಟಾಗ್ರಾಂನಲ್ಲಿ ಬೆಣ್ಣೆ, ಪರೋಟ ಮುಂತಾದವುಗಳ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದದ್ದು ಮಾತ್ರವಲ್ಲ, ವಾಸ್ತವದಲ್ಲಿ ಅವನ್ನು ಸೇವಿಸುತ್ತಿದ್ದೆ ಕೂಡ ಎಂದು ಭಾರತಿ ಹೇಳಿದ್ದಾರೆ. ಮಧ್ಯಂತರ ಉಪವಾಸಕ್ಕೆ ಧನ್ಯವಾದಗಳು. ವಿಶೇಷ ಸಲಹೆಯ ಹೊರತು, ಊಟ ತಪ್ಪಿಸುವುದು ಪ್ರಯೋಜನಕಾರಿ ಅಲ್ಲ. ಅದು ಪೌಷ್ಟಿಕಾಂಶದ ನಷ್ಟಕ್ಕೆ ಕಾರಣವಾಗುತ್ತದೆ.

3. ಆಹಾರದ ಪ್ರಮಾಣ ನಿಯಂತ್ರಣ ಅಭ್ಯಾಸ

ಆಹಾರದಲ್ಲಿನ ಬದಲಾವಣೆಯ ಜೊತೆಗೆ ಆಹಾರದ ಪ್ರಮಾಣದ ನಿಯಂತ್ರಣದ ಅಭ್ಯಾಸ ಕೂಡ ಲಾಭದಾಯಕ. ಮಿತವಾದ ಮತ್ತು ಸೀಮಿತ ಆಹಾರ ಕ್ರಮದ ಜೊತೆ, ದಿನದಲ್ಲಿ ನಿಗದಿತ ಪ್ರಮಾಣದ ಆಹಾರ ತಿನ್ನುವುದರಿಂದ ಅತಿ ಹೆಚ್ಚು ಕ್ಯಾಲೋರಿ ಸೇವಿಸುವುದು ತಪ್ಪುತ್ತದೆ. ಆಹಾರದ ಪ್ರಮಾಣದ ನಿಯಂತ್ರಣ ತೂಕ ಇಳಿಸಲು ತುಂಬಾ ಅಗತ್ಯ. ಈ ಮೂಲಕ ನಿಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟೇ ತಿನ್ನುತ್ತೀರಿ.

4. ಊಟದ ಸಮಯ ಕಾಪಾಡಿಕೊಳ್ಳುವುದು

ನಟನಟಿಯರ ಜೀವನ ಒತ್ತಡದ ಶೂಟಿಂಗ್ ವೇಳಾಪಟ್ಟಿ ಮತ್ತು ಅನಿಯಮಿತ ಜೀವನಶೈಲಿ ನಡುವೆ ಕಳೆಯುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮುಖ್ಯವಾದ್ದರಿಂದ, ಭಾರತಿ ಜೀವನ ಶೈಲಿಯಲ್ಲಿ ಬದಲಾವಣೆ ತಂದರು ಮತ್ತು ಸಮಯಕ್ಕೆ ಸರಿಯಾಗಿ ಊಟ ಮಾಡುವುದನ್ನು ರೂಢಿಸಿಕೊಂಡರು. ಉಪವಾಸದ ನಿಯಮಗಳನ್ನು ಪಾಲಿಸುತ್ತಿದ್ದಾಗಲೂ, ನಿರ್ದಿಷ್ಟ ಸಮಯದಲ್ಲಿ ಮತ್ತು ನಿಗದಿತ ಪ್ರಮಾಣದ ಆಹಾರ ಸೇವಿಸುವ ಬಗ್ಗೆ ಗಮನ ನೀಡಿದ್ದರು. ನಿರಂತರವಾಗಿ ಮತ್ತು ಅತಿಯಾಗಿ ತಿನ್ನುವುದನ್ನು ನಿಲ್ಲಿಸಿದರು.
Published by:Anitha E
First published: