• Home
  • »
  • News
  • »
  • lifestyle
  • »
  • Breast Cancer: ಮಹಿಳೆಯರೇ, ಸ್ತನ ಕ್ಯಾನ್ಸರ್‌ ಬಗ್ಗೆ ಇರಲಿ ಎಚ್ಚರ; ತಡೆಗಟ್ಟುವ 6 ಕ್ರಮಗಳು

Breast Cancer: ಮಹಿಳೆಯರೇ, ಸ್ತನ ಕ್ಯಾನ್ಸರ್‌ ಬಗ್ಗೆ ಇರಲಿ ಎಚ್ಚರ; ತಡೆಗಟ್ಟುವ 6 ಕ್ರಮಗಳು

 ಸ್ತನ ಕ್ಯಾನ್ಸರ್‌

ಸ್ತನ ಕ್ಯಾನ್ಸರ್‌

ಸ್ತನ ಕ್ಯಾನ್ಸರ್‌ಗೆ ಇಂತಹದೇ ಕಾರಣ ಎಂದು ಇದುವರೆಗೂ ಹೇಳಲೂ ಸಾಧ್ಯವಾಗುತ್ತಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ನಾವು ಆರೋಗ್ಯದಿಂದ ಜೀವನ ನಡೆಸಬಹುದು. ಹಾಗಿದ್ರೆ ಬನ್ನಿ ಸ್ತನ ಕ್ಯಾನ್ಸರ್‌ ತಡೆಗಟ್ಟುವ 6 ಕ್ರಮಗಳನ್ನು ನಾವಿಂದು ಚರ್ಚೆ ಮಾಡೋಣ.

  • Share this:

 ವಿಶ್ವದಾದ್ಯಂತ ಸ್ತನ ಕ್ಯಾನ್ಸರ್‌ಗೆ (Breast Cancer) ಒಳಗಾಗುವ ಮಹಿಳೆಯರ ಸಂಖ್ಯೆಯು ಬೆಳೆಯುತ್ತಿದೆ. ಸರಿಯಾದ ಅರಿವಿನ ಕೊರತೆಯಿಂದಾಗಿ ಸ್ತನ ಕ್ಯಾನ್ಸರ್‌ನಿಂದ ಸಾಯುವವರ (Death) ಸಂಖ್ಯೆಯೂ ಹೆಚ್ಚುತ್ತಿದೆ. ಆದರೂ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮಹಿಳೆಯರು ತಮ್ಮ ಜೀವಗಳನ್ನು ಉಳಿಸಿಕೊಳ್ಳಬಹುದು. ಕಳೆದ ದಶಕದಿಂದ ಭಾರತೀಯ ಮಹಿಳೆಯರನ್ನು (Women's) ಸ್ತನ ಕ್ಯಾನ್ಸರ್ ರೋಗವು ವಿಪರೀತವಾಗಿ ಬಾಧಿಸುತ್ತಿದೆ. ಆದರೆ ವಾಸ್ತವವಾಗಿ, ಭಾರತದಲ್ಲಿ ಪ್ರತಿ 4 ನೇ ಮಹಿಳಾ ಕ್ಯಾನ್ಸರ್ ರೋಗಿಗೆ ಸ್ತನ ಕ್ಯಾನ್ಸರ್ ಇದೆ ಎಂಬುದನ್ನು ದತ್ತಾಂಶಗಳು ಸೂಚಿಸುತ್ತಿವೆ. ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ ಆರೋಗ್ಯಕರ ಅಭ್ಯಾಸಗಳೊಂದಿಗೆ ಪ್ರಾರಂಭವಾಗುತ್ತದೆ. ಅಂದರೆ ಮದ್ಯಪಾನ ಸೇವನೆ ಕಡಿಮೆ ಮಾಡುವುದು ಮತ್ತು ದೈಹಿಕವಾಗಿ ಸಕ್ರಿಯವಾಗಿರುವುದು.


ನಿಮ್ಮ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ನೀವು ಏನು ಮಾಡಬಹುದು ಎಂಬುದನ್ನು ಅರ್ಥಮಾಡಿಕೊಳ್ಳಿ. ನೀವು ಸ್ತನ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಬಗ್ಗೆ ಆತಂಕ ಪಡುತ್ತಿದ್ದರೆ, ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟಲು ನೀವು ತೆಗೆದುಕೊಳ್ಳಬಹುದಾದ ಹಂತಗಳ ಬಗ್ಗೆ ನೀವು ಆಶ್ಚರ್ಯಪಡಬಹುದು.


“ತಂಬಾಕು ಜಗಿಯುವುದರಿಂದ ತಲೆ ಮತ್ತು ಕತ್ತಿನ ಕ್ಯಾನ್ಸರ್‌ ರೋಗಕ್ಕೆ ಕಾರಣವಾಗುತ್ತದೆ ಮತ್ತು ಧೂಮಪಾನವು ಶ್ವಾಸಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಸ್ತನ ಕ್ಯಾನ್ಸರ್‌ಗೆ ಇಂತಹದೇ ಕಾರಣ ಎಂದು ಇದುವರೆಗೂ ಹೇಳಲೂ ಸಾಧ್ಯವಾಗುತ್ತಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ನಾವು ಆರೋಗ್ಯದಿಂದ ಜೀವನ ನಡೆಸಬಹುದು. ಹಾಗಿದ್ರೆ ಬನ್ನಿ ಸ್ತನ ಕ್ಯಾನ್ಸರ್‌ ತಡೆಗಟ್ಟುವ 6 ಕ್ರಮಗಳನ್ನು ನಾವಿಂದು ಚರ್ಚೆ ಮಾಡೋಣ.


ಸ್ತನ ಕ್ಯಾನ್ಸರ್‌ ತಡೆಗಟ್ಟುವ 6 ಕ್ರಮಗಳು ಇಂತಿವೆ
1) ತೂಕವನ್ನು ನಿಯಂತ್ರಣದಲ್ಲಿರಿಸಿಕೊಳ್ಳಿ
ನಿಮ್ಮ ತೂಕ ಆರೋಗ್ಯಕರವಾಗಿದ್ದರೆ, ಆ ತೂಕವನ್ನು ಕಾಪಾಡಿಕೊಳ್ಳಲು ವರ್ಕೌಟ್‌ ಮಾಡಿ. ನೀವು ತೂಕವನ್ನು ಕಳೆದುಕೊಳ್ಳಬೇಕಾದರೆ, ಇದನ್ನು ಸಾಧಿಸಲು ಆರೋಗ್ಯಕರ ತಂತ್ರಗಳ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ. ನೀವು ಪ್ರತಿದಿನ ಸೇವಿಸುವ ಕ್ಯಾಲೊರಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಮತ್ತು ವ್ಯಾಯಾಮದ ಪ್ರಮಾಣವನ್ನು ನಿಧಾನವಾಗಿ ಹೆಚ್ಚಿಸಿ.


ಇದನ್ನೂ ಓದಿ:  Weight Loss Tips: ಬೆಳ್ಳುಳ್ಳಿಯನ್ನು ಇದರ ಜೊತೆ ತಿಂದ್ರೆ ಬೇಗ ತೂಕ ಇಳಿಯತ್ತಂತೆ


2) ಸಮತೋಲಿತ ಆಹಾರ
ನೀವು ಸೇವಿಸುವ ಆಹಾರದಲ್ಲಿ ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು ಮತ್ತು ವಿಟಮಿನ್‌ ಇರುವುದನ್ನು ಖಚಿತಪಡಿಸಿಕೊಳ್ಳಿ, ನಿಮ್ಮ ಆರೋಗ್ಯವನ್ನು ಸಮತೋಲನದಲ್ಲಿರಿಸಿಕೊಳ್ಳಿ. ಹೆಚ್ಚು ಸಂಸ್ಕರಿಸಿದ ಆಹಾರವನ್ನು ಸೇವಿಸಿಬಾರದು. ಆಹಾರದಲ್ಲಿ ಹೆಚ್ಚಿನ ಉಪ್ಪು ಮತ್ತು ಸಕ್ಕರೆ ಪ್ರಮಾಣವನ್ನು ತಪ್ಪಿಸಬೇಕು. ನಿಮ್ಮ ದೈನಂದಿನ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆ ಹೆಚ್ಚಿರಲಿ.


3) ಸಕ್ರಿಯ ಜೀವನಶೈಲಿ
ದಿನಾಲೂ ಎಷ್ಟೆ ಕೆಲಸ ಇರಲಿ, ಕನಿಷ್ಟ 30 ನಿಮಿಷಗಳ ಕಾಲ ವ್ಯಾಯಾಮವನ್ನು ಮಾಡಬೇಕು. ಇದರರ್ಥ ನೀವು ಜಿಮ್‌ಗೆ ಹೋಗಬೇಕು ಎಂದೇನು ಅಲ್ಲ. ಆಫೀಸ್‌ಗೆ ಹೋಗಬೇಕಾದರೆ ಲಿಫ್ಟ್‌ ಬದಲು ಮೆಟ್ಟಿಲುಗಳನ್ನು ಬಳಸಬಹುದು. ಮನೆಯಿಂದ ಮಾರ್ಕೆಟ್‌ಗೆ ಹೋಗಬೇಕಾದರೆ ಬೈಕ್‌ ಬಳಸುವ ಬದಲು ನಡೆದುಕೊಂಡು ಹೋಗುವುದು ಒಳ್ಳೆಯದು.


4)ತಡವಾದ ಗರ್ಭಧಾರಣೆಯನ್ನು ತಪ್ಪಿಸಿ
30 ವರ್ಷ ವಯಸ್ಸಿನ ನಂತರ ಆಗುವ ಹೆರಿಗೆಯು ಸ್ತನ ಕ್ಯಾನ್ಸರ್‌ ಅನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಾಧ್ಯವಾದರೆ, ನೀವು 30 ವರ್ಷ ವಯಸ್ಸಿನೊಳಗೆ ಮದುವೆಯಾಗಿ, ಗರ್ಭ ಧರಿಸುವುದು ಸ್ತನ ಕ್ಯಾನ್ಸರ್‌ನಿಂದ ನಿಮ್ಮನ್ನು ದೂರವಿರಿಸುತ್ತದೆ.


5)ಸ್ತನ್ಯಪಾನ ಮಾಡಿಸಿ
ಸ್ತನ್ಯಪಾನವು ಸ್ತನ ಕ್ಯಾನ್ಸರ್‌ಗೆ ರಕ್ಷಣೆಯನ್ನು ನೀಡುತ್ತದೆ ಎಂದು ಕಂಡುಬಂದಿದೆ. ಇದು ಮಗು ಮತ್ತು ತಾಯಿಯ ಆರೋಗ್ಯಕ್ಕೂ ಒಳ್ಳೆಯದು. ಆದ್ದರಿಂದ ಸ್ತನ್ಯಪಾನವನ್ನು ಶಿಫಾರಸು ಮಾಡಲಾಗಿದೆ.


ಇದನ್ನೂ ಓದಿ:  Weight Loss Tips: ತೂಕ ಇಳಿಸಬೇಕು ಅಂತ ಇವನ್ನೆಲ್ಲಾ ಕುಡಿತೀರಾ? ಹುಷಾರ್, ಈಗಲೇ ಈ ಅಭ್ಯಾಸ ಬಿಟ್ಟುಬಿಡಿ!


6) ಹಾರ್ಮೋನ್ ಚಿಕಿತ್ಸೆಯನ್ನು ಮಿತಿಗೊಳಿಸಿ
ಸಂಯೋಜಿತ ಹಾರ್ಮೋನ್ ಚಿಕಿತ್ಸೆಯು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಹಾರ್ಮೋನ್ ಚಿಕಿತ್ಸೆಯ ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ. ಹಾರ್ಮೋನ್ ಅಲ್ಲದ ಚಿಕಿತ್ಸೆಗಳು ಮತ್ತು ಔಷಧಿಗಳೊಂದಿಗೆ ನಿಮ್ಮ ರೋಗಲಕ್ಷಣಗಳನ್ನು ನಿರ್ವಹಿಸಲು ನಿಮಗೆ ಸಾಧ್ಯವಾಗಬಹುದು.

Published by:Ashwini Prabhu
First published: