Betel Leaf: ವೀಳ್ಯದೆಲೆಯನ್ನು ಹೀಗೆ ತಿಂದ್ರೆ ಪ್ರಯೋಜನಗಳು ಹಲವಾರು

Health Tips: ವೀಳ್ಯದೆಲೆ ಅಥವಾ ಪಾನ್ ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಮಧ್ಯಮ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ. ಇದು ಅಯೋಡಿನ್, ಪೊಟ್ಯಾಶಿಯಮ್, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿಂದ ಕೂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಸಂಸ್ಕೃತಿಯಲ್ಲಿ (Indian Tradition) ವೀಳ್ಯದೆಲೆ (Betel Leaf) ಪ್ರಮುಖ ಸ್ಥಾನವನ್ನು ಹೊಂದಿದೆ ಮತ್ತು ಧಾರ್ಮಿಕ ಸಮಾರಂಭಗಳು, ಮದುವೆಗಳು ಮತ್ತು ಪೂಜೆಗಳಲ್ಲಿ ಮಂಗಳಕರವೆಂದು ಪರಿಗಣಿಸಲಾಗಿದೆ. ಆರನೇ ಶತಮಾನದಷ್ಟು ಹಿಂದಿನ ಸ್ಕಂದ ಪುರಾಣದಲ್ಲಿ ಹೃದಯದ ಆಕಾರದ ಎಲೆಯ ಉಲ್ಲೇಖವನ್ನು ಕಾಣಬಹುದು. ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ಅಸುರರಿಂದ ಸಾಗರಗಳ ಮಂಥನದಿಂದ ಹೊರಬಂದ ವಸ್ತುಗಳಲ್ಲಿ ವೀಳ್ಯದೆಲೆ ಒಂದು ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ತುಂಬಾ ಪೂಜ್ಯನೀಯವೆಂದು ಪರಿಗಣಿಸುತ್ತಾರೆ.

ತಾಂಬೂಲ, ತಮಲಪಾಕು, ನಾಗವಲ್ಲಿ ಮತ್ತು ನಾಗರಬೆಲ್ ಎಂದೂ ಕರೆಯಲ್ಪಡುವ ಪಾನ್ ಅನ್ನು ಸಾಂಪ್ರದಾಯಿಕವಾಗಿ ಊಟದ ನಂತರ ತಿನ್ನಲಾಗುತ್ತದೆ, ಅದರ ಪರಿಮಳಯುಕ್ತ ಸುವಾಸೆಯು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಅದೆಷ್ಟೋ ಭಾರತೀಯ ಮನೆಗಳಲ್ಲಿ ಹಿರಿಯರು ಪ್ರತಿನಿತ್ಯವು ಊಟವಾದ ಬಳಿಕ ಎಲೆ ಅಡಿಕೆ ಜಗಿಯುತ್ತಾರೆ. ಇದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎನ್ನುವುದು ನಂಬಿಕೆ.

ಕಾರಣವಿಲ್ಲದೆ ಪಾನ್ ಜನಪ್ರಿಯವಾಗಿಲ್ಲ. ಆಯುರ್ವೇದದ ಪ್ರಕಾರ, ವೀಳ್ಯದೆಲೆಯು ಔಷಧೀಯ ಮತ್ತು ಇತರ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಆಯುರ್ವೇದವು ವೀಳ್ಯದೆಲೆಗಳ ಅನೇಕ ಆರೋಗ್ಯ ಪ್ರಯೋಜನಗಳನ್ನು ಉಲ್ಲೇಖಿಸಿದೆ.

ಪಾನ್ ಅಥವಾ ವೀಳ್ಯದೆಲೆಯ ಅದ್ಭುತ ಪ್ರಯೋಜನಗಳ ಬಗ್ಗೆ ಆಯುರ್ವೇದ ತಜ್ಞ ಡಾ. ದೀಕ್ಷಾ ಭಾವಸರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಷಯ ಹಂಚಿಕೊಂಡಿದ್ದಾರೆ.

ವೀಳ್ಯದೆಲೆಯ ಪ್ರಯೋಜನ ಮತ್ತು ಅದರ ಜೀವಸತ್ವಗಳು

ದೀಕ್ಷಾ ಭಾವಸರ್ ಹೇಳುವ ಪ್ರಕಾರ "ಕೆಮ್ಮು, ಆಸ್ತಮಾ, ತಲೆನೋವು, ಶೀತ, ಸಂಧಿವಾತದ ಕೀಲು ನೋವು, ಅನೋರೆಕ್ಸಿಯಾ ಇತ್ಯಾದಿಗಳ ಚಿಕಿತ್ಸೆಯಲ್ಲಿ ವೀಳ್ಯದೆಲೆಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ನೋವು, ಉರಿಯೂತ ಮತ್ತು ಊತವನ್ನು ನಿವಾರಿಸುತ್ತದೆ. ಇದನ್ನು ಕಫಾ ಅಸ್ವಸ್ಥತೆಗಳಂತಹ ಸಮಸ್ಯೆಗಳನ್ನು ನಿವಾರಿಸಲು ಉತ್ತಮವಾಗಿದೆ.

ವೀಳ್ಯದೆಲೆ ಅಥವಾ ಪಾನ್ ಹೆಚ್ಚಿನ ನೀರಿನ ಅಂಶ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಕಡಿಮೆ ಪ್ರಮಾಣದ ಕೊಬ್ಬು ಮತ್ತು ಮಧ್ಯಮ ಪ್ರಮಾಣದ ಪ್ರೋಟೀನ್ ಅನ್ನು ಸಹ ಹೊಂದಿದೆ. ಇದು ಅಯೋಡಿನ್, ಪೊಟ್ಯಾಶಿಯಮ್, ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 ಮತ್ತು ನಿಕೋಟಿನಿಕ್ ಆಮ್ಲದಂತಹ ಪೋಷಕಾಂಶಗಳಿಂದ ಕೂಡಿದೆ. ಮತ್ತು ಈ ಎಲೆಗಳು ವಿಟಮಿನ್ ಸಿ, ಥಯಾಮಿನ್, ನಿಯಾಸಿನ್, ರೈಬೋಫ್ಲಾವಿನ್ ಮತ್ತು ಕ್ಯಾರೋಟಿನ್‌ನಂತಹ ವಿಟಮಿನ್‌ಗಳಿಂದ ತುಂಬಿವೆ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.

ವೀಳ್ಯದೆಲೆಯು ಸುಗಂಧಭರಿತ ಬಳ್ಳಿಯಾಗಿರುವುದರಿಂದ, ನೀವು ಅದನ್ನು ನಿಮ್ಮ ಮನೆಗಳಲ್ಲಿ ಅಲಂಕಾರಿಕ ಸಸ್ಯವಾಗಿ ಸುಲಭವಾಗಿ ಬೆಳೆಸಬಹುದು ಮತ್ತು ಗರಿಷ್ಠ ಆರೋಗ್ಯವನ್ನು ಪಡೆಯಬಹುದು ಎನ್ನುತ್ತಾರೆ ದೀಕ್ಷಾ.

ಇದನ್ನೂ ಓದಿ: ನಿಮ್ಮ ಬ್ಲೌಸ್-ಡ್ರೆಸ್​ಗೆ ಸಖತ್ ಎಂಬ್ರಾಯ್ಡರಿ ಮಾಡಿಸ್ಬೇಕಾ? ಬೆಂಗ್ಳೂರಿನ ಈ ಏರಿಯಾಗಳಲ್ಲಿ ಸೂಪರ್​ ಆಗಿ ಮಾಡ್ತಾರೆ ನೋಡಿ!

ಬೇಸಿಗೆಯಲ್ಲಿ ನೀವು ಪಾನ್ ಅನ್ನು ಹೀಗೆ ಸೇವಿಸಬಹುದು..

ನೀವು ಪಾನ್ ತಿನ್ನಲು ಇಷ್ಟಪಡದಿದ್ದರೂ ಅದರ ಶಕ್ತಿಯುತವಾದ ಪರಿಮಳವನ್ನು ಅನುಭವಿಸಲು ಮತ್ತು ಅದರ ಅದ್ಭುತ ಪ್ರಯೋಜನಗಳನ್ನು ಪಡೆಯಲು ಪಾನ್ ಅನ್ನು ತಿನ್ನಲೇ ಬೇಕು. ಬೇಸಿಗೆಯಲ್ಲಿಯೂ ಸಹ ಉತ್ತಮವಾದ ಬಾಯಲ್ಲಿ ನೀರೂರಿಸುವ ಪಾನ್ ಪಾಕವಿಧಾನ ಇಲ್ಲಿದೆ.

"ಪಾನ್ ಉಷ್ಣಾಂಶ ಹೊಂದಿದ್ದರೂ ಸಹ ಗುಲ್ಕನ್‌, ತೆಂಗಿನಕಾಯಿ ಮತ್ತು ಫೆನ್ನೆಲ್ ಬೀಜಗಳನ್ನು ಹೊಂದಿರುವ ಪಾನ್ ಸೇವಿಸುವುದರಿಂದ ಬೇಸಿಗೆಯಲ್ಲಿ ನಿಮ್ಮನ್ನು ತಂಪುಗೊಳಿಸುತ್ತದೆ.

ಪಾನ್ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು

• 4 ವೀಳ್ಯದೆಲೆ,

• 4 ಟೀಸ್ಪೂನ್ ಗುಲ್ಕನ್‌

• 1 ಟೀಸ್ಪೂನ್ ಫೆನ್ನೆಲ್ ಬೀಜಗಳು

• 1 ಟೀಸ್ಪೂನ್ ತುರಿದ ತೆಂಗಿನಕಾಯಿ

• 1 ಚಮಚ ಕಲ್ಲು ಸಕ್ಕರೆ/ಮಿಸ್ರಿ

• 1/4 ಕಪ್ ನೀರು

ಇದನ್ನೂ ಓದಿ: Exam ಹತ್ರ ಬಂತು ಅಂತ ಹೆದರಿಕೆ ಬಿಡಿ - ಪರೀಕ್ಷೆಗೆ ರೆಡಿಯಾಗೋಕೆ ಈ ಟಿಪ್ಸ್ ಫಾಲೋ ಮಾಡಿ

ಪಾಕವಿಧಾನ:

* ಮೊದಲು ವೀಳ್ಯದೆಲೆಗಳನ್ನು ಮಿಕ್ಸಿಯಲ್ಲಿ ಹಾಕಿ.

* ನಂತರ ನೀರನ್ನು ಹೊರತುಪಡಿಸಿ ಉಳಿದ ಎಲ್ಲಾ ಪದಾರ್ಥಗಳನ್ನು ಸೇರಿಸಿ ಮತ್ತು ಕೆಲವು ಸೆಕೆಂಡುಗಳ ಕಾಲ ಅವುಗಳನ್ನುರುಬ್ಬಿಕೊಳ್ಳಿ

* ನಂತರ ನೀರು ಸೇರಿಸಿ ಮತ್ತು ನಯವಾಗಿ ರುಬ್ಬಿಕೊಂಡರೆ ಮುಗಿಯಿತು

ಈಗ ಅದ್ಭುತವಾದ ಪಾನ್ ಶಾಟ್‌ಗಳು ಸವಿಯಲು ಸಿದ್ಧ
Published by:Sandhya M
First published: