ನಿಮ್ಮ ಕೂದಲಿಗೆ ನಿಮ್ಮ ಚರ್ಮದಂತೆಯೇ ಸಾಕಷ್ಟು ತೇವಾಂಶದ ಅಗತ್ಯವಿರುತ್ತದೆ, ಅದು ನಮ್ಮ ಕೂದಲು ಒಣಗಿ ಹೋಗದಂತೆ ತಡೆಯುತ್ತದೆ. ನಾವು ಹೆಚ್ಚಾಗಿ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುತ್ತೇವೆ. ಇದು ಕೂದಲನ್ನು ಹೈಡ್ರೇಟ್ ಮಾಡುತ್ತದೆ, ಆದರೆ ಎಣ್ಣೆ ಬಿಟ್ಟು ಮನೆಯಲ್ಲಿಯೇ ಬೇರೆ ಪದಾರ್ಥಗಳನ್ನು ತಯಾರಿಸಿಕೊಂಡು ಬಳಸಿ ನೋಡಿ. ನೈಸರ್ಗಿಕ ಪದಾರ್ಥಗಳನ್ನು ಬಳಕೆ ಮಾಡುವುದರಿಂದ ಕೂದಲ ಬೆಳವಣಿಗೆ ಕೂಡ ಉತ್ತಮವಾಗುತ್ತದೆ.
ಹಾಗಾದ್ರೆ ಯಾವ ಹೇರ್ ಪ್ಯಾಕ್ಗಳು ಉತ್ತಮ ಎಂಬುದು ಇಲ್ಲಿದೆ.
ಮೊಸರು
ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲ ಈ ಮೊಸರು, ಇದರಲ್ಲಿ ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಹೆಚ್ಚಿವೆ. ಇವೆಲ್ಲವೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಮೊಸರು ಕೂದಲು ಉದುರುವುದನ್ನು ಕೂಡ ಕಡಿಮೆ ಮಾಡುತ್ತದೆ ಮತ್ತು ಕೂದಲನ್ನು ಮೃದುಗೊಳಿಸುತ್ತದೆ. ಮೊಸರು ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು ಇದು ತಲೆಹೊಟ್ಟಿಗೆ ಉತ್ತಮವಾದ ಆಯ್ಕೆಯಾಗಿದೆ. ಅಲ್ಲದೆ ಕೂದಲಿನ ತೇವಾಂಶವನ್ನು ಕಾಪಾಡುತ್ತದೆ.
ಬೆಣ್ಣೆ ಹಣ್ಣು
ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳಿಂದ ಕೂಡಿದ ಬೆಣ್ಣೆ ಹಣ್ಣುಗಳು ಉತ್ತಮ ಕೊಬ್ಬಿನ ಅಂಶದಿಂದಾಗಿ ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯ ಆಯ್ಕೆ. ಇದರಲ್ಲಿರುವ ಅಂಶಗಳು ಶುಷ್ಕ ಮತ್ತು ನಿರ್ಜಲೀಕರಣಗೊಂಡ ಕೂದಲಿಗೆ ಪ್ರಯೋಜನಕಾರಿ ಮಾತ್ರವಲ್ಲದೇ, ಎಲ್ಲಾ ರೀತಿಯ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರಲ್ಲಿ ಕೂದಲಿಗೆ ಬಹಳಷ್ಟು ಪ್ರಯೋಜನಗಳಿವೆ. ನೀವು ಹಣ್ಣಿನ ತಿರುಳನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಅದನ್ನ ನಿಯಮಿತವಾಗಿ ತಲೆಗೆ ಹಚ್ಚಿ ಸುಮಾರು 30 ನಿಮಿಷಗಳ ನಂತರ ತೊಳೆಯುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ , ವಿಟಮಿನ್ ಮತ್ತು ಪೊಟ್ಯಾಸಿಯಂಗಳು ಸಮೃದ್ಧವಾಗಿದೆ. ಈ ಸೂಪರ್ ಪೋಷಕಾಂಶಗಳು ಕೂದಲಿನ ಎಳೆಗಳನ್ನು ಮೃದುಗೊಳಿಸಲು ಮತ್ತು ಅವುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಕೂದಲು ಸೀಳು ಒಡೆಯುವುದು, ಹೊಟ್ಟಿನ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ನೀವು 2 ರಿಂದ 3 ಬಾಳೆಹಣ್ಣುಗಳನ್ನು ತೆಗೆದುಕೊಂಡು, ಅದನ್ನು ಪೇಸ್ಟ್ ಮಾಡಿ ತಲೆಗೆ ವಾರಕ್ಕೆ 3 ಬಾರಿ ಪ್ಯಾಕ್ ಹಾಕುವುದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಜೇನುತುಪ್ಪ
ಜೇನುತುಪ್ಪವು ಮೃದುವಾಗಿರುವುದರಿಂದ ಕೂದಲಿಗೆ ಹೊಳಪನ್ನು ನೀಡುತ್ತದೆ. ಜೇನುತುಪ್ಪವು ಹ್ಯೂಮೆಕ್ಟಂಟ್ ಆಗಿದ್ದು, ಒಣ ಕೂದಲನ್ನು ತೇವಗೊಳಿಸಲು ಸಹಾಯ ಮಾಡುತ್ತದೆ. ಇದರ ಜೊತೆಯಲ್ಲಿ, ಜೇನುತುಪ್ಪವು ಕೂದಲಿನ ಆರೋಗ್ಯವನ್ನು ಹೆಚ್ಚಿಸುವ ಪೋಷಕಾಂಶಗಳನ್ನು ಹೊಂದಿದೆ. ಈ ನೈಸರ್ಗಿಕ ನಂಜುನಿರೋಧಕವಾಗಿರುವುದರಿಂದ ತಲೆಹೊಟ್ಟು ಮತ್ತು ಚರ್ಮರೋಗಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಮೊಟ್ಟೆ
ಮೊಟ್ಟೆ ಕೂದಲನ್ನು ತೇವಗೊಳಿಸುವುದಲ್ಲದೆ, ಕೂದಲ ಸಮಸ್ಯೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಮೊಟ್ಟೆಗಳಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಸಮೃದ್ಧವಾಗಿವೆ ಮತ್ತು ನಿಮ್ಮ ನೆತ್ತಿ ಮತ್ತು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಕೂದಲ ಬೆಳವಣಿಗೆಗೆ ಸಹಕಾರಿಯಾಗುವುದಲ್ಲದೆ,ಕೂದಲಿನ ಬಲವನ್ನು ಹೆಚ್ಚಿಸುತ್ತದೆ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ