ಸೌಂದರ್ಯ ಮತ್ತು ತ್ವಚೆಯ ಆರೈಕೆಗೆ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ

Health Tips: ದೇಹದಲ್ಲಿ ಜೀವಸತ್ವಗಳ ಕೊರತೆಯಿದ್ದರೆ, ಮುಖದ ಮೇಲೆ ಕಪ್ಪು ಕಲೆಗಳು, ಸುಕ್ಕು ಗಟ್ಟುವುದು, ಒರಟು ತೇಪೆ ಉಂಟಾಗುವುದು ಮುಂತಾದ ಚರ್ಮದ ಸಮಸ್ಯೆಗಳು ಕಾಣಿಸುತ್ತವೆ.

zahir | news18-kannada
Updated:September 26, 2019, 3:19 PM IST
ಸೌಂದರ್ಯ ಮತ್ತು ತ್ವಚೆಯ ಆರೈಕೆಗೆ ಈ ಆಹಾರಗಳನ್ನು ಹೆಚ್ಚಾಗಿ ಸೇವಿಸಿ
ಸಾಂದರ್ಭಿಕ ಚಿತ್ರ
zahir | news18-kannada
Updated: September 26, 2019, 3:19 PM IST
ಸೌಂದರ್ಯವನ್ನು ಕಾಪಾಡಿಕೊಳ್ಳಲು ತ್ವಚೆಯ ಆರೈಕೆ ಅತ್ಯಾವಶ್ಯಕ. ಅದರಲ್ಲೂ ವಿಶಿಷ್ಟವಾಗಿ ಬೇಸಿಗೆಯಲ್ಲಿ ಜಾಸ್ತಿನೇ ಕಾಳಜಿವಹಿಸಬೇಕಾಗುತ್ತದೆ. ಏಕೆಂದರೆ ಬಿಸಿಲಿನ ದಗೆಯಿಂದ ಚರ್ಮದ ಹಲವು ಸಮಸ್ಯೆಗಳು ಕಾಡುತ್ತವೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಎಂದಿಗಿಂತ ಚರ್ಮವನ್ನು ಪೋಷಿಸುವ ಜೀವಸತ್ವಗಳಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು.

ದೇಹದಲ್ಲಿ ಜೀವಸತ್ವಗಳ ಕೊರತೆಯಿದ್ದರೆ, ಮುಖದ ಮೇಲೆ ಕಪ್ಪು ಕಲೆಗಳು, ಸುಕ್ಕು ಗಟ್ಟುವುದು, ಒರಟು ತೇಪೆ ಉಂಟಾಗುವುದು ಮುಂತಾದ ಚರ್ಮದ ಸಮಸ್ಯೆಗಳು ಕಾಣಿಸುತ್ತವೆ. ಇದನ್ನು ಹೋಗಲಾಡಿಸಲು ನಾವು ಸೇವಿಸುವ ದೈನಂದಿನ ಆಹಾರಗಳಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಸಾಕು. ಅಂತಹ ಕೆಲ ಆಹಾರಗಳ ಟಿಪ್ಸ್ ಇಲ್ಲಿ ನೀಡಲಾಗಿದೆ.

ವಿಟಮಿನ್ ಎ

ಇದನ್ನು ರೆಟಿನಾಲ್ ಎಂದೂ ಕರೆಯಲಾಗುತ್ತದೆ. ಇದು ಹೊಸ ಚರ್ಮದ ಕೋಶಗಳ ಉತ್ಪಾದನೆಯನ್ನು ಉತ್ತೇಜಿಸುವ ಜೀವಸತ್ವ. ಹಾಗೆಯೇ ಮೊಡವೆ ಮತ್ತು ಚರ್ಮದ ಸುಕ್ಕುಗಳು ಮತ್ತು ರೇಖೆಗಳ ರಚನೆಯಂತಹ ಅಧಿಕ ವಯಸ್ಸುನ್ನು ತೋರಿಸುವ ಚಿಹ್ನೆಗಳನ್ನು ತೊಡೆದು ಹಾಕಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತದೆ.

ವಿಟಮಿನ್ ಎ ಹೊಂದಿರುವ ಆಹಾರ: ಕ್ಯಾರೆಟ್, ಸಿಹಿ ಆಲೂಗಡ್ಡೆ, ಮೊಟ್ಟೆ, ಡೈರಿ ಉತ್ಪನ್ನಗಳು ಮತ್ತು ಪಾಲಕನಂತಹ ಆಹಾರಗಳಲ್ಲಿ ವಿಟಮಿನ್ ಎ ನೈಸರ್ಗಿಕವಾಗಿ ಹೇರಳವಾಗಿರುತ್ತವೆ. ಇವುಗಳನ್ನು ಆಹಾರ ಪದಾರ್ಥದಲ್ಲಿ ಹೆಚ್ಚಿಸುವ ಮೂಲಕ ತ್ವಚ್ಛೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.

ವಿಟಮಿನ್ ಬಿ 3
ನಿಯಾಸಿನಮೈಡ್ ಅಥವಾ ನಿಕೋಟಿನಮೈಡ್ ಒಂದು ರೀತಿಯ ವಿಟಮಿನ್ ಬಿ 3 ಜೀವಸತ್ವವಾಗಿದೆ. ಇದು ಉತ್ತಮ ಆರೋಗ್ಯವನ್ನು ಕಾಪಾಡುವ ಎಂಟು ಜೀವಸತ್ವಗಳಲ್ಲಿ ಒಂದಾಗಿದೆ. ಇದು ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು ಅದರ ವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದೆ. ಮೊಡವೆ, ಕಲೆಗಳು, ಹೈಪರ್ಪಿಗ್ಮೆಂಟೇಶನ್ ಮತ್ತು ರೊಸಾಸಿಯದಂತಹ ಚರ್ಮ ರೋಗಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.
Loading...

ವಿಟಮಿನ್ ಬಿ 3 ಹೊಂದಿರುವ ಆಹಾರ: ಚಿಕನ್ ಬ್ರೆಸ್ಟ್, ಟ್ಯೂನ, ಸಾಲ್ಮನ್, ಕಡಲೆಕಾಯಿ, ಹಸಿರು ಬಟಾಣಿ, ಅಣಬೆಗಳು ಮತ್ತು ಆಲೂಗಡ್ಡೆ ವಿಟಮಿನ್ ಬಿ 3 ಸಮೃದ್ಧವಾಗಿರುವ ಕೆಲವು ಆಹಾರಗಳು.

ವಿಟಮಿನ್ ಸಿ
ವಿಟಮಿನ್ ಸಿ ಯ ಆ್ಯಂಟಿ-ಆಕ್ಸಿಡೆಂಟ್ ಗುಣಲಕ್ಷಣಗಳನ್ನು ಹೊಂದಿರುವ ಜೀವಸತ್ವ. ಮೊಡವೆಗಳ ಸಮಸ್ಯೆ ದೂರ ಮಾಡಲು ಮತ್ತು ಕಾಲಜನ್ ರಚನೆಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಸಾಕಷ್ಟು ವಿಟಮಿನ್ ಸಿ ತೆಗೆದುಕೊಳ್ಳುವುದರಿಂದ ಚರ್ಮದ ಸಮಸ್ಯೆ  ಮತ್ತು ಸುಕ್ಕುಗಳನ್ನು ಕಡಿಮೆ ಮಾಡಿಕೊಳ್ಳಬಹುದು.

ವಿಟಮಿನ್ ಸಿ ಹೊಂದಿರುವ ಆಹಾರ:  ಸಿಟ್ರಸ್ ಹಣ್ಣುಗಳು, ಸ್ಟ್ರಾಬೆರಿಗಳು, ಟೊಮ್ಯಾಟೊ, ಮಾವಿನಹಣ್ಣು, ಬೆಲ್ ಪೆಪ್ಪರ್, ಕೋಸುಗಡ್ಡೆ ಮತ್ತು ಬ್ರಸೆಲ್ಸ್ ಮೊಗ್ಗುಗಳಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತವೆ.

ಇದನ್ನೂ ಓದಿ: ಧೋನಿ ನಿವೃತ್ತಿ ಘೋಷಿಸದಿರಲು ಟೀಂ ಇಂಡಿಯಾದ ಈ ಆಟಗಾರನೇ ಕಾರಣ..!

ವಿಟಮಿನ್ ಇ
ಈ ವಿಟಮಿನ್​ ಅನ್ನು ಟೋಕೋಫೆರಾಲ್ ಎಂದೂ ಕರೆಯುತ್ತಾರೆ. ವಿಟಮಿನ್ ಇ ಶಕ್ತಿಯುತವಾದ ಆ್ಯಂಟಿ-ಆಕ್ಸಿಡೆಂಟ್ ಆಗಿದ್ದು ಅದು ಚರ್ಮವನ್ನು ಕಾಲಜನ್ ರಾಡಿಕಲ್​ಗಳಿಂದ ರಕ್ಷಿಸುತ್ತದೆ. ಈ ಕಣಗಳು ಆಂತರಿಕ ಮತ್ತು ಬಾಹ್ಯ ಅಂಶಗಳಿಂದ ಉತ್ಪಾದಿಸಲ್ಪಡುತ್ತದೆ.

ವಿಟಮಿನ್ ಇ ಹೊಂದಿರುವ ಆಹಾರ: ನೈಸರ್ಗಿಕವಾಗಿ ವಿಟಮಿನ್ ಇ ಸಿಗುವ ಆಹಾರಗಳೆಂದರೆ ಬಾದಾಮಿ, ಹ್ಯಾಝೆಲ್​ ನೆಟ್, ಸೂರ್ಯಕಾಂತಿ ಬೀಜಗಳು, ಆಲಿವ್ ಎಣ್ಣೆ, ಪಾಲಕ, ಜೋಳ ಮತ್ತು ಮಾವಿನ ಹಣ್ಣಗಳು.
First published:September 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...