ಈ ವಡಾ ಪಾವ್ (Vadapav) ಸಾಂಪ್ರದಾಯಿಕ ಭಾರತೀಯ ಸಸ್ಯಾಹಾರಿ ಬರ್ಗರ್ (Burger) ಆಗಿದ್ದು, ಮುಂಬೈನಲ್ಲಿ (Mumbai) ಅತ್ಯಂತ ಜನಪ್ರಿಯ ಬೀದಿ ಆಹಾರ. ವಡಾ ಪಾವ್ ಅನ್ನು ಹಸಿರು ಚಟ್ನಿ ಮತ್ತು ಮೆಣಸಿನಕಾಯಿ ಹಾಗೂ ಬನ್ಗಳ ನಡುವೆ ಸ್ಯಾಂಡ್ವಿಚ್ ಮಾಡಿದ ಮಸಾಲೆಯುಕ್ತ ಆಲೂಗಡ್ಡೆ ಡಂಪ್ಲಿಂಗ್ನಿಂದ ತಯಾರಿಸಲಾಗುತ್ತದೆ. ಇನ್ನು ಬೆಂಗಳೂರಿನಲ್ಲಿ (Bengaluru) ಅನೇಕ ಅಂಗಡಿಗಳಲ್ಲಿ ವಡಾಪಾವ್ ದೊರೆಯುವುದಾದರೂ ಮುಂಬಯಿ ಮೂಲದವರು ಇಟ್ಟ ಅಂಗಡಿಯಲ್ಲಿ ವಡಾಪಾವ್ ತಿಂದರೆ ರುಚಿ ಸ್ವಲ್ಪ ಬೇರೆ ಅನಿಸುತ್ತದೆ. ನೀವು ಸಹ ಬೆಂಗಳೂರಿನಲ್ಲಿ ವಡಾ ಪಾವ್ ಅಂಗಡಿಯನ್ನು ಹುಡುಕುತ್ತಿದ್ರೆ ಟೇಸ್ಟೀ ವಡಾ ಪಾವ್ ಸಿಗುವ ಅಂಗಡಿಗಳ ಲಿಸ್ಟ್ ಇಲ್ಲಿದೆ.
ಮಹಾರಾಜ ವಡಾಪಾವ್ , ರಾಜರಾಜೇಶ್ವರಿ ನಗರ
ರಾಜರಾಜೇಶ್ವರಿ ನಗರದ ಬೆಸ್ಟ್ ವಡಾ ಪಾವ್ ಸೆಂಟರ್ಗಳಲ್ಲಿ ಒಂದು ಇದು ಎನ್ನಬಹುದು. ಇಲ್ಲಿ ವಡಾಪಾವ್ , ಸ್ಯಾಂಡ್ವಿಚ್, ಫ್ರೈಸ್ ಜೊತೆಗೆ ಮೋಯಿಟೋಗಳು ಲಭ್ಯವಿದೆ. ಇಲ್ಲಿ ಕಾರ್ನ್ ವಡಾ ಪಾವ್, ಪನ್ನೀರ್ ವಡಾ ಪಾವ್, ಸ್ಪೈಸಿ ವಡಾ ಪಾವ್ ಹೀಗೆ ವಿವಿಧ ರೀತಿಯ ವಡಾ ಪಾವ್ಗಳು ಲಭ್ಯವಿದೆ.
ಸ್ಥಳ: 8ನೇ ಮುಖ್ಯ ರಸ್ತೆ, ರಾಮ್ಕೋ BHEL ಲೇಔಟ್, ಐಡಿಯಲ್ ಹೋಮ್ಸ್ ಟಾಪ್, RR ನಗರ, ಬೆಂಗಳೂರು, ಕರ್ನಾಟಕ 560098
ಸಮಯ: ಬೆಳಗ್ಗೆ 10 ರಿಂದ ರಾತ್ರಿ 10
ಭವಾನಿ ವಡಾ ಪಾವ್, ಮತ್ತಿಕೆರೆ
ಇದನ್ನೂ ಓದಿ: ಜಾಮೂನ್, ಜಲೇಬಿ ಭಾರತದ್ದಲ್ಲ.. ನಾವೆಲ್ಲಾ ಇಷ್ಟಪಡುವ ಅನೇಕ ಖಾದ್ಯಗಳು ಎಲ್ಲಿಂದ ಬಂದಿವೆ ನೋಡಿ!
ಇಲ್ಲಿನ ವಡಾ ಪಾವ್ ಎಂದರೆ ಬಹಳಷ್ಟು ಜನರಿಗೆ ಇಷ್ಟ. ಭವಾನಿ ವಡಾ ಪಾವ್ನ ವೈಶಿಷ್ಟ್ಯವೆಂದರೆ ಟೇಸ್ಟಿ ಟರ್ಕಿ, ವಡಾ ಮತ್ತು ವಡಾ ಪಾವ್ ನೀವು ಅವರ ಆಹಾರವನ್ನು ಆನಂದಿಸುವುದು ಸತ್ಯ. ವಿಶೇಷವಾಗಿ ಇಲ್ಲಿನ ಜಿಲೇಬಿ ಕೂಡ ಎಲ್ಲರ ಫೇವರೇಟ್.
ಸ್ಥಳ: ರಾಮಯ್ಯ ಕಾಲೇಜು ಬಸ್ ನಿಲ್ದಾಣದ ಹತ್ತಿರ, ಕೆ.ಎನ್. ಹೆಚ್ ಗುರುಮೂರ್ತಿ ರೆಡ್ಡಿ ಕಾಲೋನಿ ಎಂಎಸ್ ಆರ್ ನಗರ, ಗೋಕುಲ 1ನೇ ಹಂತ, ಮತ್ತಿಕೆರೆ ವಿಸ್ತರಣೆ, ಮತ್ತಿಕೆರೆ, ಬೆಂಗಳೂರು, ಕರ್ನಾಟಕ 560022
ಬಾಂಬೆ ವಡಾ ಪಾವ್ ಸೆಂಟರ್ , ಯಶವಂತಪುರ
ಬಾಂಬೆ ವಡಾ ಪಾವ್ ಎಂದರೆ ಸಾಕು ಬಾಯಲ್ಲಿ ನೀರೂರುತ್ತದೆ. ಇಲ್ಲಿನ ಸಂಜೆಯ ಹೊತ್ತು ಜನರ ಗುಂಪೇ ಸೇರಿಸುತ್ತದೆ. ಇಲ್ಲಿ ವಿವಿಧ ರೀತಿಯ ವಾಡಾಪಾವ್ಗಳು ಸಹ ಲಭ್ಯವಿದೆ. ಮಹಾರಾಜ ವಡಾ ಪಾವ್, ಕ್ಲಾಸಿಕ್ ವಡಾ ಪಾವ್ ಹೀಗೆ ಹಲವಾರು.
ಸ್ಥಳ: ನಂಜಪ್ಪ ರೆಡ್ಡಿ ಕಾಲೋನಿ, , 556, ಬಿ ನಾರಾಯಣಸ್ವಾಮಪ್ಪ ರಸ್ತೆ, ಲೇನ್ ಕಾಲೋನಿ, ಜಿಲ್ಲೆ ಯಶವಂತಪುರ. ಬೆಂಗಳೂರು.
ಪ್ರತಿದಿನ 08:00-20:00
ಗೋಲಿ ವಡಾ ಪಾವ್ , ಗಾಂಧಿನಗರ
ವಡಾ ಪಾವ್ ಎಂದರೆ ಸಾಕು ಗೋಲಿ ವಡಾ ಪಾವ್ ಎನ್ನುವಷ್ಟು ಈ ಚೈನ್ ಅಂಗಡಿಗಳು ಫೇಮಸ್. ಈ ಗೋಲಿ ವಡಾ ಪಾವ್ ಹಲವಾರು ಶಾಖೆಗಳನ್ನು ಹೊಂದಿದೆ. ಇಲ್ಲಿನ ಮಹಾರಾಜ ವಡಾ ಪಾವ್ ಎಲ್ಲರ ನೆಚ್ಚಿನ ವಡಾ ಪಾವ್ ಎಂದರೆ ತಪ್ಪಾಗಲಾರದು.
ಸ್ಥಳ: 3/2 1ನೇ ಅಡ್ಡರಸ್ತೆ ಗಾಂಧಿನಗರ, ಮೆಜೆಸ್ಟಿಕ್, ಹ್ಯಾಟ್ರಿಕ್ ಸ್ಪೋರ್ಟ್ ಪಕ್ಕ, ಬೆಂಗಳೂರು 560009
ಮಹಾರಾಜ ವಡಾ ಪಾವ್ , ವಿಜಯನಗರ
ಈ ಮಹಾರಾಜ ವಡಾ ಪಾವ್ ಹಲವಾರು ಶಾಖೆಯನ್ನು ಹೊಂದಿದ್ದು, ರಾಜರಾಜೇಶ್ವರಿ ನಗರ ಮತ್ತು ವಿಜಯ ನಗರ ಶಾಖೆಗಳು ಸಹ ಒಂದು. ಇಲ್ಲಿನ ಅದ್ಭುತ ವಡಾ ಪಾವ್ ಎಲ್ಲರ ಫೇವರೇಟ್. ನೀವು ಇಲ್ಲಿ ಸಹ ವಿವಿಧ ರೀತಿಯ ವಡಾ ಪಾವ್ಗಳನ್ನು ಟ್ರೈ ಮಾಡಬಹುದು.
ಇದನ್ನೂ ಓದಿ: ಬಾಯಿ ನೀರೂರಿಸುವ ಬೆಸ್ಟ್ ಬಿರಿಯಾನಿ ಸಿಗುವ ಬೆಂಗಳೂರಿನ ಟಾಪ್ 5 ಸ್ಥಳಗಳಿವು
ಸ್ಥಳ: ಡೈಮಂಡ್ ಕಾರ್ನರ್ ಸಿಟಿ ಶಾಪಿಂಗ್ ಸೆಂಟರ್ ಬೇಸ್ಮೆಂಟ್ ಸಂಗಮ್ ಸರ್ಕಲ್, ಕರ್ನಾಟಕ 580001
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ