Holiday Plan: ಮೈಸೂರಿಗೆ ಒಂದು ದಿನದ ಟ್ರಿಪ್, ಈ ಎಲ್ಲಾ ಸ್ಥಳಗಳ ಸೌಂದರ್ಯ ಆಸ್ವಾದಿಸಬಹುದು!

Travel Places Near Me in Mysuru: ನೀವು ನಗರ ಜೀವನದ ಜಂಜಾಟದಿಂದ ಮುಕ್ತಿ ಪಡೆದು ವೀಕೆಂಡ್​ ಎಂಜಾಯ್ ಮಾಡೋಕೆ  ಈ ಮೈಸೂರು ಬೆಸ್ಟ್​ ಎನ್ನಬಹುದು. ಮೈಸೂರಿನಲ್ಲಿ ಒಂದು ದಿನದಲ್ಲಿ ಭೇಟಿ ನೀಡಬಹುದಾದ ಕೆಲವು ಸ್ಥಳಗಳಿದ್ದು, ಮಾಹಿತಿ ಇಲ್ಲಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಪ್ರಯಾಣ (Travel) ಮಾಡುವಾಗ, ನಿಮ್ಮ ಹೃದಯವನ್ನು ನೈಸರ್ಗಿಕ ಸೌಂದರ್ಯದಿಂದ (Natural Beauty) ಗೆಲ್ಲುವ ಸ್ಥಳಗಳನ್ನು ನೋಡಿರುತ್ತೀರಿ. ತೊರೆಗಳು, ಹಿಮದಿಂದ ಆವೃತವಾದ ಪರ್ವತಗಳು, ಮರಳಿನ ಕಡಲತೀರಗಳು (Sea) , ಹಚ್ಚ ಹಸಿರಿನ ಗಿರಿಧಾಮಗಳು ಹೀಗೆ. ಅಲ್ಲದೇ, ಹಳೆಯ ಪ್ರಪಂಚದ ನೆನಪು ಸಾರುವ ಹಾಗೂ ಇತಿಹಾಸಕ್ಕೆ (History) ಗೌರವವನ್ನು ನೀಡುವ ಸ್ಥಳಗಳು ಹೀಗೆ ಪ್ರವಾಸ ಮಾಡಲು ಹಲವು ಸ್ಥಳಗಳಿವೆ. ಅದಕ್ಕೆ ಕರ್ನಾಟಕದಲ್ಲಿ (Karnataka) ಸೂಕ್ತವಾದ ಉದಾಹರಣೆ ಎಂದರೆ ಮೈಸೂರು (Mysuru). ಗತಕಾಲದ ವೈಭವಗಳ ಬಗ್ಗೆ ಮಾತನಾಡುವ ಅರಮನೆಗಳು (Palace) ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಸ್ಥಳ ಮೊದಲಿಗೆ ಬರುತ್ತದೆ.  ಪೂಜಾ ಸ್ಥಳಗಳಿಂದ ಹಿಡಿದು ಭವ್ಯವಾದ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳವರೆಗೆ, ಮೈಸೂರಿನ ಪ್ರತಿಯೊಂದು ಮೂಲೆಯಲ್ಲಿ ಹೇಳಲು, ಕೇಳಲು ಒಂದು ಕಥೆ ಇದೆ. ನೀವು ನಗರ ಜೀವನದ ಜಂಜಾಟದಿಂದ ಮುಕ್ತಿ ಪಡೆದು ವೀಕೆಂಡ್​ (Weekend) ಎಂಜಾಯ್ ಮಾಡೋಕೆ  ಈ ಮೈಸೂರು ಬೆಸ್ಟ್​ ಎನ್ನಬಹುದು. ಮೈಸೂರಿನಲ್ಲಿ ಒಂದು ದಿನದಲ್ಲಿ ಭೇಟಿ ನೀಡಬಹುದಾದ ಕೆಲವು ಸ್ಥಳಗಳಿದ್ದು, ಮಾಹಿತಿ ಇಲ್ಲಿದೆ. 

ಲಿಂಗಾಬೂದಿ ಲೇಕ್

​ನಗರದ ಮಧ್ಯಭಾಗದಿಂದ 8 ಕಿಮೀ ದೂರದಲ್ಲಿರುವ ಶ್ರೀರಾಂಪುರದಲ್ಲಿರುವ ಲಿಂಗಾಬೂದಿ ಕೆರೆಯು ಸಿಹಿನೀರನ್ನು ಒಳಗೊಂಡಿದೆ. ಮೈಸೂರು ರಾಜ ಕೃಷ್ಣರಾಜ ಒಡೆಯರ್ III ರಿಂದ 1828 ರಲ್ಲಿ ನಿರ್ಮಿಸಲಾದ ಈ ಕೆರೆ ಮೈಸೂರಿನ ಅತ್ಯಂತ ಹಳೆಯ ಕೆರೆಗಳಲ್ಲಿ ಒಂದಾಗಿದೆ. ಇದು 260 ಎಕರೆ ವಿಸ್ತೀರ್ಣ ಹೊಂದಿರುವ ಮೈಸೂರಿನ ದೊಡ್ಡ ಕೆರೆ ಎಂದು ಹೇಳಲಾಗುತ್ತದೆ. ನೀವು ಒಂದು ಅಥವಾ ಎರಡು ಗಂಟೆಗಳ ಕಾಲ ನೆಮ್ಮದಿಯಿಂದ ಸಮಯ ಕಳೆಯಲು ಇದು ಬೆಸ್ಟ್​ ಎನ್ನಬಹುದು.

ಇದು ತನ್ನ ಮೋಡಿಮಾಡುವ ದೃಶ್ಯಾವಳಿಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದು ಮನುಷ್ಯರಷ್ಟೇ ಅಲ್ಲ, ಪಕ್ಷಿಗಳ ನಡುವೆಯೂ ಅಷ್ಟೇ ಜನಪ್ರಿಯ ಸ್ಥಳವಾಗಿದೆ ಎಂದರೆ ನೀವು ನಂಬುವುದಿಲ್ಲ.  ವರ್ಡಿಟರ್ ಫ್ಲೈಕ್ಯಾಚರ್, ಬ್ರೌನ್ ಹೆಡೆಡ್ ಗಲ್, ವೈಟ್ ಐಬಿಸ್, ಓಪನ್ ಬಿಲ್ಡ್ ಕೊಕ್ಕರೆಗಳು, ಲಿಟಲ್ ಕಾರ್ಮೊರಂಟ್‌ಗಳು, ಎಗ್ರೆಟ್ಸ್, ರಿವರ್ ಟರ್ನ್‌ಗಳು, ಪೈಡ್ ಅವೊಸೆಟ್ ಮತ್ತು ಕಾಮನ್ ಟೀಲ್ ಸೇರಿದಂತೆ ಲಿಂಗಾಬೂದಿ ಕೆರೆಯ ಸುತ್ತ ಸುಮಾರು 250 ಬಗೆಯ ಪಕ್ಷಿಗಳು ಕಂಡುಬರುತ್ತವೆ.ಕುಕ್ಕರಹಳ್ಳಿ ಕೆರೆ

1864 ರಲ್ಲಿ ನಿರ್ಮಿಸಲಾದ ಈ ಕೆರೆಯು ಕೃಷ್ಣರಾಜ ಒಡೆಯರ್ ಅವರ ಕಲ್ಪನೆಯ ಕೂಸು. 58 ಹೆಕ್ಟೇರ್‌ಗಳಷ್ಟು ವಿಸ್ತಾರವಾಗಿರುವ ಕುಕ್ಕರಹಳ್ಳಿ ಕೆರೆಗೆ ಪ್ರಕೃತಿ ಪ್ರಿಯರು ಆಗಾಗ ಭೇಟಿ ನೀಡುತ್ತಾರೆ. ಇದರ 5 ಕಿಮೀ ಉದ್ದದ ತೀರವು ಪಕ್ಷಿ ಪ್ರಾಣಿಗಳ ಹೊರತಾಗಿ ಪ್ರಮುಖ ಆಕರ್ಷಣೆಯಾಗಿದೆ. ಕೆರೆಯ ಸುತ್ತಲೂ ಸುಮಾರು 180 ಬಗೆಯ ಪಕ್ಷಿಗಳನ್ನು ಕಾಣಬಹುದು.

ಇದರ ರಮಣೀಯ ಸೌಂದರ್ಯವು ಕವಿಗಳ ಮನಸನ್ನು ಸಹ ಸೆಳೆದಿದೆ. ಗೋಪಾಲಕೃಷ್ಣ ಅಡಿಗ, ಎಸ್.ಎಲ್. ಭೈರಪ್ಪ, ಟಿ.ಎಸ್. ವೆಂಕಣ್ಣಯ್ಯ, ಎ.ಎನ್. ಮೂರ್ತಿರಾವ್, ಜಿ.ಎಸ್.ಶಿವರುದ್ರಪ್ಪ, ವಿ.ಸೀತಾರಾಮಯ್ಯ ಅವರು ಈ ಕೆರೆಯನ್ನು ತಮ್ಮ ಕವನ ಹಾಗೂ ಪುಸ್ತಕಗಳಲ್ಲಿ ಕೊಂಡಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯ ಇರುವ ಸರಸ್ವತಿಪುರಂನಲ್ಲಿರುವ ಈ ಕೆರೆ ವಾಕಿಂಗ್ ಮಾಡುವವರ ಫೇವರೇಟ್​ ಸ್ಥಳ. ಇದು ಮೈಸೂರು ರೈಲು ನಿಲ್ದಾಣದಿಂದ ಕೇವಲ 3 ಕಿ.ಮೀ ದೂರದಲ್ಲಿದೆ.ಮೈಸೂರು ರೈಲ್ ಮ್ಯೂಸಿಯಂ

ಮೈಸೂರು ರೈಲು ವಸ್ತುಸಂಗ್ರಹಾಲಯವು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಈ ರೀತಿಯ ವಸ್ತುಸಂಗ್ರಹಾಲಯವನ್ನು 1979 ರಲ್ಲಿ ಭಾರತೀಯ ರೈಲ್ವೇ ಸ್ಥಾಪಿಸಿತು. ಇನ್ನೊಂದು ರೀತಿಯ ಮ್ಯೂಸಿಯಂ ದೆಹಲಿಯಲ್ಲಿದೆ. ಈ ವಸ್ತುಸಂಗ್ರಹಾಲಯವು ಭಾರತೀಯ ರೈಲ್ವೇ ಅಭಿವೃದ್ಧಿಯ ವಿವಿಧ ಹಂತಗಳ ಚಿತ್ರಗಳು ಮತ್ತು ವಸ್ತುಗಳ ಜೊತೆಗೆ ಲೋಕೋಮೋಟಿವ್‌ಗಳ ಇಮೇಜ್​ ಪ್ರದರ್ಶಿಸುತ್ತದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಸ್ಟ್​ ಸೀಫುಡ್​ ಎಲ್ಲಿ ಸಿಗುತ್ತೆ? ಈ ರೆಸ್ಟೊರೆಂಟ್​ಗಳಲ್ಲೊಮ್ಮೆ ಟೇಸ್ಟ್ ಮಾಡಿ ನೋಡಿ

ಇದು ಪ್ರಾಚೀನ ಭಾಗಗಳಿಂದ ಹಿಡಿದು ಭಾರತೀಯ ರೈಲ್ವೇಯಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿರುವ ವಿಧಗಳವರೆಗೆ ನೋಡಲು ಹಲವಾರು ವಸ್ತುಗಳಿದೆ. ಕೆಆರ್‌ಎಸ್ ರಸ್ತೆಯಲ್ಲಿರುವ ಇದು ಮೈಸೂರು ರೈಲು ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ಸುಲಭವಾಗಿ ತಲುಪಬಹುದು. ಇದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಮೈಸೂರು ಮರಳು ಶಿಲ್ಪ ಸಂಗ್ರಹಾಲಯ

ಇಡೀ ದೇಶದ ಮೊದಲ ಮರಳು ಶಿಲ್ಪ ಸಂಗ್ರಹಾಲಯ, ಇದು ಮೈಸೂರಿನ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಗೆ ಹೊಸ ಸೇರ್ಪಡೆ ಎನ್ನಬಹುದು. 2014 ರಲ್ಲಿ ಉದ್ಘಾಟನೆಗೊಂಡ ಈ ವಸ್ತುಸಂಗ್ರಹಾಲಯವು ಅದ್ಭುತವಾದ ಕೆತ್ತಿದ ಮರಳಿನ ರಚನೆಗಳ ಪ್ರದರ್ಶನ ಮಾಡುತ್ತದೆ.  ಭಾರತದಲ್ಲಿನ ಪ್ರಕಾರಗಳಲ್ಲಿ ಒಂದಾದ ಮೈಸೂರು ಮರಳು ಶಿಲ್ಪ ಸಂಗ್ರಹಾಲಯವು ಮರಳು ಮತ್ತು ನೀರಿನಿಂದ ಮಾಡಿದ ಶಿಲ್ಪಗಳನ್ನು ಪ್ರಸ್ತುತಪಡಿಸುತ್ತದೆ, ಸಾಟಿಯಿಲ್ಲದ ಕರಕುಶಲತೆ, ನಿಖರತೆ ಮತ್ತು ಸೃಜನಶೀಲತೆಯನ್ನು ಸಾಬೀತು ಮಾಡುತ್ತದೆ.ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ/ ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿ

ಮೈಸೂರು ರಾಜಮನೆತನದ ಮತ್ತೊಂದು ಮನೆಯಾಗಿದ್ದ, ಜಗನ್ಮೋಹನ ಅರಮನೆಯನ್ನು 1915 ರಲ್ಲಿ, ಕೃಷ್ಣರಾಜ ಒಡೆಯರ್ IV ರ ಆಳ್ವಿಕೆಯ ಸಮಯದಲ್ಲಿ ಕಲಾ ಗ್ಯಾಲರಿಯಾಗಿ ಪರಿವರ್ತಿಸಲಾಯಿತು. ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರ ಗೌರವಾರ್ಥವಾಗಿ, ಈ ಕಲಾ ಗ್ಯಾಲರಿಯನ್ನು 1955 ರಲ್ಲಿ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಎಂದು ಮರುನಾಮಕರಣ ಮಾಡಲಾಯಿತು.

ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ ಮೇಕಪ್ ಮಾಡ್ಕೊಳ್ಳೋದು ಹೇಗೆ? ಬ್ಯೂಟಿಶಿಯನ್ ಹೇಳಿಕೊಡ್ತಾರೆ ನೋಡಿಭಾರತದ ಅತ್ಯುತ್ತಮ ಕಲಾ ಗ್ಯಾಲರಿಗಳಲ್ಲಿ ಒಂದಾದ ಇದು ಪ್ರಪಂಚದಾದ್ಯಂತದ ಹೆಸರಾಂತ ವರ್ಣಚಿತ್ರಕಾರರ ಕಲಾಕೃತಿಗಳು ಮತ್ತು ವರ್ಣಚಿತ್ರಗಳ ಶ್ರೀಮಂತ ಸಂಗ್ರಹವನ್ನು ಹೊಂದಿದೆ. ಎರಡು ಸಾವಿರಕ್ಕೂ ಹೆಚ್ಚು ವರ್ಣಚಿತ್ರಗಳು ಕಲಾಕೃತಿಗಳನ್ನು ಹೊಂದಿರುವ ಇದು ಕಲಾಭಿಮಾನಿಗಳು ಭೇಟಿ ನೀಡಲೇಬೇಕು. ಚಾಮರಾಜಪುರದ ದೇವರಾಜ ಮೊಹಲ್ಲಾದಲ್ಲಿರುವ ದೇಶಿಕಾ ರಸ್ತೆಯಲ್ಲಿರುವ ಈ ಕಲಾ ಗ್ಯಾಲರಿಯು ಬೆಳಗ್ಗೆ 8.20 ರಿಂದ ಸಂಜೆ 5.30ರ ವರೆಗೆ ಓಪನ್ ಇರುತ್ತದೆ.
Published by:Sandhya M
First published: