HOME » NEWS » Lifestyle » BEST TIPS FOR SEXUAL HEALTH OF MEN STG KVD

sexual wellness: ಈ ಗುಟ್ಟುಗಳನ್ನು ಅರಿತ ಪುರುಷರ ಲೈಂಗಿಕ ಜೀವನ ಅತ್ಯುತ್ತಮವಾಗಿರುತ್ತೆ!

ಉತ್ತಮ ಲೈಂಗಿಕ ಆರೋಗ್ಯದ ಗುಟ್ಟು, ಆರೋಗ್ಯಪೂರ್ಣ ಅಭ್ಯಾಸಗಳಲ್ಲಿದೆ..!

Trending Desk
Updated:June 8, 2021, 10:14 PM IST
sexual wellness: ಈ ಗುಟ್ಟುಗಳನ್ನು ಅರಿತ ಪುರುಷರ ಲೈಂಗಿಕ ಜೀವನ ಅತ್ಯುತ್ತಮವಾಗಿರುತ್ತೆ!
ಸಾಂದರ್ಭಿಕ ಚಿತ್ರ
  • Share this:
ಲೈಂಗಿಕತೆ ಎಂಬುವುದು ಪ್ರತಿಯೊಬ್ಬರು ಬದುಕಿನ ಒಂದು ಭಾಗ. ದೇಹದ ಆರೋಗ್ಯ ಚನ್ನಾಗಿರಲು ಹಲವು ಮಾರ್ಗಗಳಿರುವಂತೆ, ಸೆಕ್ಸ್​ ಜೀವನ ಚನ್ನಾಗಿರಲು ಕೂಡ ಹಲವು ವಿಧಾನಗಳಿವೆ. ಪುರುಷರ ಲೈಂಗಿಕ ಆರೋಗ್ಯವು ಆರೋಗ್ಯಕರ ಜೀವನ ಶೈಲಿಯನ್ನು ಅವಲಂಭಿಸಿದೆ. ಸಂಫೂರ್ಣ ಆರೋಗ್ಯ ಸರಿಯಾದ ಹದದಲ್ಲಿ ಇಲ್ಲದಿದ್ದರೂ, ಇದೊಂದು ವಿಷಯದಲ್ಲಿ ಸ್ವಾಸ್ಥ್ಯವಾಗಿದ್ದರೆ ನಡೆಯುತ್ತದೆ ಎನ್ನುವ ಭ್ರಮೆ ಇದೆ. ಆದರೆ ಅದು ಹಾಗಲ್ಲ. ನೀವು ಎಷ್ಟು ಆರೋಗ್ಯವಾಗಿರುತ್ತೀರೋ ನಿಮ್ಮ ಸೆಕ್ಸ್​ ಲೈಫ್​ ಕೂಡ ಅಷ್ಟೇ ಸಮೃದ್ಧಿಯಾಗಿರುತ್ತದೆ.  

ಗುಣಮಟ್ಟದ ನಿದ್ದೆ ಮತ್ತು ನಿಯಮಿತ ವ್ಯಾಯಾಮ

ಮಿಸ್ಟರ್ಸ್ ಮಾಹಿತಿಯ ಪ್ರಕಾರ ಪ್ರತಿದಿನ ಏಳು ಗಂಟೆಗಳಿಗಿಂತ ಹೆಚ್ಚು ನಿದ್ದೆ ಮಾಡುವ 31.7 ಪ್ರತಿಶತದಷ್ಟು ಜನರು ಲೈಂಗಿಕತೆಯಲ್ಲಿ ಉತ್ತಮ ಆತ್ಮವಿಶ್ವಾಸದ ಹೊಂದಿದ್ದಾರೆ. ಆದರೆ ರಾತ್ರಿ ವೇಳೆ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿ ಕೇವಲ 18 ಪ್ರತಿಶತದಷ್ಟು ಜನರು ಮಾತ್ರ ಅದೇ ವಿಶ್ವಾಸ ಹೊಂದಿದ್ದಾರೆ.

ಅದೇ ರೀತಿ ನಿಯಮಿತವಾಗಿ ವ್ಯಾಯಾಮ ಮಾಡದ 19.5% ಪುರುಷರು ಸಂಭೋಗದ ಸಮಯದ ದೃಷ್ಟಿಯಿಂದ ಅತ್ಯುತ್ತಮ ಸ್ಖಲನ ಅನುಭವವನ್ನು ಹೊಂದಿದ್ದಾರೆ ಎನ್ನವುದು ವರದಿಯಲ್ಲಿದೆ. ಆದರೆ ನಿಯಮಿತವಾಗಿ ವ್ಯಾಯಾಮ ಮಾಡುವ ಶೇಕಡಾ 27 ರಷ್ಟು ಜನರು ಇದೇ ರೀತಿ ಯಶಸ್ವಿ ಲೈಂಗಿಕ ಜೀವನವನ್ನು ಹೊಂದಿದ್ದಾರೆಂದು ತಿಳಿಸುತ್ತಾರೆ. ಸಾಕಷ್ಟು ಕ್ಲಿನಿಕಲ್​ ಡೇಟಾಗಳು ಇದನ್ನು ಸಾಕ್ಷೀಕರಿಸಿವೆ.

ಈ ನಿಟ್ಟಿನಲ್ಲಿ ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಅಳವಡಿಸಿಕೊಂಡಿರುವ ಆರೋಗ್ಯಕರ ಜೀವನ ಶೈಲಿಯೂ ಲೈಂಗಿಕ ಆರೋಗ್ಯ ಸುಧಾರಣೆಯ ಮೇಲೂ ಪ್ರಭಾವ ಬೀರುತ್ತದೆ. ಆದ್ದರಿಂದ ‘ನಿಯಮಿತವಾಗಿ ಸಾಕಷ್ಟು ನಿದ್ರೆ ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳಿ’ ಎಂಬ ಸಲಹೆಯು ಲೈಂಗಿಕ ಆರೋಗ್ಯಕ್ಕೂ ಅನ್ವಯಿಸುತ್ತದೆ. ವ್ಯಾಯಾಮದಿಂದ ಗುಣಮಟ್ಟದ ನಿದ್ದೆ ಜೊತೆಗೆ ಒಳ್ಳೆಯ ಊಟವೂ ನಿದಿರೆಯನ್ನು ತರುತ್ತದೆ. ಕಾಫಿ, ಚಹಾ ಮತ್ತು ತಂಪುಪಾನೀಯ ಕಡಿಮೆ ಮಾಡುವುದು ಒಳಿತು.

ಉತ್ತಮ ಲೈಂಗಿಕ ಆರೋಗ್ಯ ಸುಧಾರಣೆಗೆ ಆಯುರ್ವೇದ ಸೂಕ್ತ

ಆಯುರ್ವೇದದಲ್ಲಿ ಲೈಂಗಿಕ ಆರೋಗ್ಯ ಸುಧಾರಣೆಗೆ ಅಶ್ವಗಂಧ ಸೇವನೆ ಬಗ್ಗೆ ತಿಳಿಸುತ್ತಾರೆ. ಒತ್ತಡ ನಿವಾರಣೆಗೆ ಮಾಡಿದ ಪ್ರಯೋಗದಲ್ಲಿ ಗುಣಮಟ್ಟದ ನಿದ್ದೆ ಮತ್ತು ಸರಾಗ ದಿನಚರಿಗೆ ಇದು ಪ್ರಯೋಜನಕಾರಿಯಾಗಿದೆ. ಅಶ್ವಗಂಧವನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಸೇವಿಸುವ ಮೂಲಕ ಉತ್ತಮ ಲೈಂಗಿಕ ಆರೋಗ್ಯವನ್ನು ಹೊಂದಬಹುದು.ಪುರುಷರಲ್ಲಿನ ನಿದ್ರೆಯ ಕೊರತೆಯು ಟೆಸ್ಟೋಸ್ಟೆರಾನ್ ಹಾರ್ಮೋನ್ ಇಳಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಸಂಬಂಧಗಳು ಹಾಳಾಗದಂತೆಯೂ ಜಗಳ ಮಾಡಬಹುದು: ಇವುಗಳನ್ನು ಗಮನದಲ್ಲಿ ಇಟ್ಟುಕೊಂಡರೆ ಸಾಕು!

ಪ್ರೌಢಾವಸ್ಥೆಯಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ತುಂಗದಲ್ಲಿದ್ದರೆ, 40 ರ ವಯಸ್ಸಿನಿಂದ ಶೇಕಡಾ 1 ರಷ್ಟು ಕಡಿಮೆಯಾಗುತ್ತಾ ಬರುತ್ತದೆ. ಇದು ಕಾಮಾಸಕ್ತಿ, ಮುಂಜಾವಿನ ಸಮಯದ ಲೈಂಗಿಕ ಕ್ರಿಯೆಯಲ್ಲಿ ಅಸಂತೃಪ್ತಿಗೆ ಕಾರಣವಾಗುತ್ತದೆ. ವಯಸ್ಸಾಗುವ ಪುರುಷರ ಲಕ್ಷಣಗಳು ಎನ್ನುವ ಪಟ್ಟಿಯ ಪ್ರಕಾರ ಒತ್ತಡ, ಆತಂಕ, ಶಕ್ತಿಯ ಕುಸಿತ, ನೋವು ಮತ್ತು ಮಂಡಿ ನೋವು ಸೇರಿದಂತೆ ಇನ್ನಿತರ ಕಾರಣಗಳು ಲೈಂಗಿಕ ಶಕ್ತಿಯ ಕೊರತೆಗೆ ಕಾರಣವಾಗಬಹುದು.

ಲೈಂಗಿಕ ಆರೋಗ್ಯ ಸುಧಾರಣೆಗೆ ಶಿಲಾಜಿತ್​ ಆಯುರ್ವೇದ ಸಾಮಗ್ರಿಯೂ ಹೆಚ್ಚಾಗಿ ಬಳಕೆಯಾಗುತ್ತಿದೆ. ಇದು ಟೆಸ್ಟೋಸ್ಟೆರಾನ್ ಗುಣಮಟ್ಟವನ್ನು ವೃದ್ಧಿ ಮಾಡುವುದು. ಅಲ್ಲದೇ ಆಹಾರ ಕ್ರಮವೂ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಯುರ್ವೇದ ತಜ್ಞರು ಸುದೀರ್ಘ ಮಾತುಕತೆಯ ಮೂಲಕ ಪಥ್ಯವನ್ನು ತಿಳಿಸುತ್ತಾರೆ. ಯಾವ ಆಹಾರ ಅಗತ್ಯ..? ಯಾವ ಆಹಾರ ತ್ಯಜಿಸಬೇಕು ಎನ್ನುವ ವಿವರಣೆ ನೀಡುತ್ತಾರೆ. ಇದು ದೈಹಿಕ, ಮಾನಸಿಕ ಮತ್ತು ಲೈಂಗಿಕ ಆರೋಗ್ಯಕ್ಕೆ ನೆರವಾಗುತ್ತದೆ.

ಯೋಗದಿಂದ ಸಮೃದ್ಧ ಲೈಂಗಿಕ ಆರೋಗ್ಯ

ನೀವು ಯಾವುದೇ ಆಯರ್ವೇದ ತಜ್ಞರನ್ನು ಕೇಳಿ ನೋಡಿ. ನಿಮ್ಮ ಸುಖಮಯ ದಾಂಪತ್ಯಕ್ಕೆ ಯೋಗವನ್ನು ಅಳವಡಿಸಿಕೊಳ್ಳಲು ತಿಳಿಸುತ್ತಾರೆ. ಕುಂಭಕಾಸನ (ಪ್ಲ್ಯಾಂಕ್ ಪೋಸ್), ಧನುರಾಸನ (ಬಿಲ್ಲು ಭಂಗಿ), ಉತ್ತಾನಪಾದಾಸನ (ಕಾಲಿನ ದೀರ್ಘ ಭಂಗಿ), ಪಶ್ಚಿಮೊತ್ತಾಸನ (ಮುಂದಾಕ್ಕೆ ಬೆಂಡಾಗುವಿಕೆ), ನೌಕಾಸನ (ದೋಣಿ ಭಂಗಿ) ಈ ರೀತಿ ಕೆಲವು ಯೋಗಾಸನಗಳು ತೃಪ್ತಿಕರ ಲೈಂಗಿಕ ಕ್ರಿಯೆಗೆ ನೆರವಾಗುತ್ತವೆ. ನಿಮ್ಮ ತಜ್ಞರ ಮಾರ್ಗದರ್ಶನಕ್ಕೆ ಅನುಗುಣವಾಗಿ ನೀವು ಇದನ್ನು ಅಳವಡಿಸಿಕೊಳ್ಳಬಹುದು. ಉತ್ತಮ ಲೈಂಗಿಕ ಆರೋಗ್ಯದ ಗುಟ್ಟು, ಆರೋಗ್ಯಪೂರ್ಣ ಅಭ್ಯಾಸಗಳಲ್ಲಿದೆ..!
Published by: Kavya V
First published: June 8, 2021, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories