• Home
 • »
 • News
 • »
 • lifestyle
 • »
 • Meghalaya: ಮೇಘಾಲಯಕ್ಕೆ ಭೇಟಿ ನೀಡಲು ಈ ಸೀಸನ್ ಬೆಸ್ಟ್!

Meghalaya: ಮೇಘಾಲಯಕ್ಕೆ ಭೇಟಿ ನೀಡಲು ಈ ಸೀಸನ್ ಬೆಸ್ಟ್!

ಮೇಘಾಲಯ

ಮೇಘಾಲಯ

ಬಹುತೇಕರು ಹೇಳುವಂತೆ ಮೇಘಾಲಯದ ಅತ್ಯುನ್ನತ ಸೀಸನ್ ಮೇಘಾಲಯನ್ ಬೇಸಿಗೆ ಕಾಲವಾದ ಏಪ್ರಿಲ್‌ನಿಂದ ಜೂನ್‌ವರೆಗೆ ಇರುತ್ತದೆ.

 • News18 Kannada
 • 2-MIN READ
 • Last Updated :
 • Meghalaya, India
 • Share this:

  ತನ್ನ ಹಚ್ಚಹಸಿರಿನ ಕಣಿವೆಗಳು, ಅರಣ್ಯ ಪ್ರದೇಶಗಳು, ಮನಮೋಹಕ ಜಲಪಾತಗಳು ಮತ್ತು ಮಂಜು ಮುಸುಕಿದ ಬೆಟ್ಟಗಳನ್ನು ಹೊಂದಿರುವ ಮೋಡಗಳ ತವರೂರು ಮೇಘಾಲಯ, ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.


  ತನ್ನ ಹಚ್ಚಹಸಿರಿನ ಕಣಿವೆಗಳು, ಅರಣ್ಯ ಪ್ರದೇಶಗಳು, ಮನಮೋಹಕ ಜಲಪಾತಗಳು ಮತ್ತು ಮಂಜು ಮುಸುಕಿದ ಬೆಟ್ಟಗಳನ್ನು ಹೊಂದಿರುವ ಮೋಡಗಳ ತವರೂರು ಮೇಘಾಲಯ, ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಥ್ರಿಲ್ ಬಯಸುವವರು, ನವೋಲ್ಲಾಸ ಮರಳಿ ಪಡೆಯಲು ಬಯಸುವವರು ಮತ್ತು ಇದೆಲ್ಲವನ್ನೂ ಅಥವಾ ಇದರಲ್ಲಿ ಏನನ್ನಾದರೂ ಬಯಸುವ ಪ್ರತಿಯೊಬ್ಬರ ಅಭಿರುಚಿಗೆ ತಕ್ಕಂತೆ ಮೇಘಾಲಯವು ಒಳಗೊಂಡಿದೆ: ಸಮೃದ್ಧ ಸಂಗೀತಭರಿತ ದೃಶ್ಯ, ಪ್ರಾಕೃತಿಕ ಹಾದಿ, ಮನಸೆಳೆಯುವ ಲಿವಿಂಗ್ ರೂಟ್ ಬ್ರಿಡ್ಜ್‌ಗಳು, ರಿವರ್ ಸ್ಕ್ಯೂಬಾ ಡೈವಿಂಗ್‌ಗೆ ಪರಿಪೂರ್ಣವಾಗಿ ಹೊಂದುವ ಕೆರೆಗಳು ಮತ್ತು ನದಿಗಳು, ಉತ್ಸಾಹಭರಿತ ಸಾಹಸ ಕ್ರೀಡೆಗಳ ದೃಶ್ಯಾವಳಿ, ಎಂದಿಗೂ ಮುಗಿಯದ ಗುಹೆ ವ್ಯವಸ್ಥೆಗಳು, ವೈವಿಧ್ಯಮಯವಾದ ಆಹಾರ ಹಾಗೂ ವಿಭಿನ್ನ ಸಂಸ್ಕೃತಿಗಳ ಸಂಗಮ!


  ಬಹುತೇಕರು ಹೇಳುವಂತೆ, ಮೇಘಾಲಯದ ಅತ್ಯುನ್ನತ ಸೀಸನ್ ಮೇಘಾಲಯನ್ ಬೇಸಿಗೆ ಕಾಲವಾದ ಏಪ್ರಿಲ್‌ನಿಂದ ಜೂನ್‌ವರೆಗೆ ಇರುತ್ತದೆ. ಹಾಗಿದ್ದರೂ, ಕೊಂಚ ಮಳೆಯಿಂದ ನಿಮಗೇನೂ ಕಿರಿಕಿರಿ ಇಲ್ಲ ಎಂದರೆ, ಅಥವಾ ನೀವು ಇಬ್ಬನಿ ಮತ್ತು ಮಂಜಿನಲ್ಲಿ ಆನಂದಿಸುವುದಾದರೆ ಅಥವಾ ಚುಮುಚುಮು ಚಳಿಗಾಲದ ವಾತಾವರಣದಲ್ಲಿ ನೀವು ಬೆಚ್ಚಗೆ, ಅತ್ಯುತ್ತಮವಾಗಿ ಖುಷಿಪಡುವುದಾದರೆ ಮೇಘಾಲಯವು ವರ್ಷವಿಡೀ ನಿಮಗೆ ನವೋಲ್ಲಾಸ ನೀಡುತ್ತದೆ.   


  ಬೇಸಿಗೆ ಕಾಲದಲ್ಲಷ್ಟೇ ಅಲ್ಲದೆ ಇನ್ನುಳಿದ ಸಮಯದಲ್ಲೂ ನಡೆಯುವ ಮೆಚ್ಚಿನ ಈವೆಂಟ್‌ಗಳು ಮತ್ತು ಉತ್ಸವಗಳ ನಮ್ಮ ಪಟ್ಟಿ ಇಲ್ಲಿದ್ದು, ಅದಕ್ಕೆ ಸೂಕ್ತವಾಗುವಂತೆ ನಿಮ್ಮ ಮೇಘಾಲಯನ್ ಹಾಲಿಡೇ ಪ್ಲಾನ್ ಅನ್ನು ನೀವು ರೂಪಿಸಬಹುದು.


  ಶಾದ್ ಸುಕ್ ಮೈನ್‌ಸಿಯೆಮ್ ಉತ್ಸವ: ಧನ್ಯವಾದ ಸಮರ್ಪಣೆ ಮತ್ತು ಫಲವತ್ತತೆಯ ಸಂಭ್ರಮಾಚರಣೆ


  ಶಾದ್ ಸುಕ್ ಮೈನ್‌ಸಿಯೆಮ್ ಉತ್ಸವ: ಧನ್ಯವಾದ ಸಮರ್ಪಣೆ ಮತ್ತು ಫಲವತ್ತತೆಯ ಸಂಭ್ರಮಾಚರಣೆ


  ದೇವರು ಎಲ್ಲದರಲ್ಲಿಯೂ ಜೀವಿಸಿದ್ದಾನೆ ಎಂದು ಖಾಸಿಗಳು ನಂಬಿದ್ದಾರೆ. ಕಾ ಶಾದ್ ಸುಕ್ ಮೈನ್‌ಸಿಯೆಮ್ ಅಥವಾ ಆನಂದದಾಯಕ ಮತ್ತು ಶಾಂತಿಯುತ ಹೃದಯಗಳ ನೃತ್ಯವನ್ನು (The Dance Of Joyful and Peaceful Hearts) ಉತ್ತಮ ಕೊಯ್ಲಿಗಾಗಿ ಪ್ರಕೃತಿ ಮಾತೆಗೆ ಧನ್ಯವಾದ ಸಮರ್ಪಿಸಲು ಮತ್ತು ಹೊಸ ಬೀಜಗಳನ್ನು ಬಿತ್ತುವ ಮೊದಲು ಆಕೆಯ ಫಲವತ್ತತೆಯನ್ನು ಸಂಭ್ರಮಿಸಲು ಆಚರಿಸಲಾಗುತ್ತದೆ. ಈ ಉತ್ಸವವನ್ನು ಮುಖ್ಯವಾಗಿ ನೃತ್ಯದ ಮೂಲಕ ಆಚರಿಸಲಾಗುತ್ತದೆ – ಫಲವತ್ತತೆಯನ್ನು ಸೂಚಿಸುವ ಧಾರ್ಮಿಕ ಆಚರಣೆಯಲ್ಲಿ ಅವಿವಾಹಿತ ಮಹಿಳೆಯರು ಮತ್ತು ಪುರುಷರು ಮಾತ್ರ ಪ್ರತಿ ವರ್ಷ ಇದರಲ್ಲಿ ಭಾಗವಹಿಸುತ್ತಾರೆ - ಮಹಿಳೆಯರು ಬೀಜಗಳನ್ನು ಸ್ವೀಕರಿಸುವ ಮತ್ತು ಫಲ ನೀಡುವವರಾಗಿದ್ದರೆ, ಪುರುಷರು ಕೃಷಿಕರಾಗಿದ್ದು ಬೆಳೆಯು ಕಟಾವಿಗೆ ಬರುವವರೆಗೂ ಅವರು ಬೀಜಗಳನ್ನು ರಕ್ಷಿಸುತ್ತಾರೆ ಹಾಗೂ ಆರೈಕೆ ಮಾಡುತ್ತಾರೆ. ಅತ್ಯಾಕರ್ಷಕ ಸಾಂಪ್ರದಾಯಿಕ ಉಡುಗೆತೊಡುಗೆ, ಬುಡಕಟ್ಟು ಸಂಗೀತ ವಾದ್ಯಗಳು, ಆಭರಣ, ಟೋಪಿ ಮತ್ತು ಆಯುಧಗಳು ಈ ಉತ್ಸವವನ್ನು ಅಕ್ಷರಃ ದೃಶ್ಯಾವಳಿಯ ರಸದೌತಣವನ್ನಾಗಿಸುತ್ತವೆ.


  ಯಾವಾಗ: ಏಪ್ರಿಲ್ ಆರಂಭ, ವಸಂತಕಾಲದ ಬಿತ್ತನೆ ಸಮಯದ ಆರಂಭದಲ್ಲಿ.


  ಎಲ್ಲಿ: ಪ್ರತಿಯೊಂದು ಹಳ್ಳಿಯೂ ಇದನ್ನು ಆಯೋಜಿಸುತ್ತದೆಯಾದರೂ ಅತ್ಯಂತ ವಿಸ್ತೃತ ಸಂಭ್ರಮಾಚರಣೆಯು ಶಿಲ್ಲಾಂಗ್‌ನಲ್ಲಿ ನಡೆಯುತ್ತದೆ.


  ಏನನ್ನು ಕೊಂಡೊಯ್ಯಬೇಕು: ಹತ್ತಿ, ಸನ್‌ಸ್ಕ್ರೀನ್, ನೀರಿನ ಬಾಟಲ್‌ಗಳು


  ಬೆಹೆದೇನ್‌ಖ್ಲಾಮ್: ದುಷ್ಟ ಶಕ್ತಿಗಳ ವಿನಾಶದ ಆರಂಭ!


  ಬೆಹೆದೇನ್‌ಖ್ಲಾಮ್ (ದುಷ್ಟ ಶಕ್ತಿಗಳನ್ನು ಓಡಿಸುವುದು) ಜೈಂತಿಯಾಗಳ ಅತಿ ದೊಡ್ಡ ಉತ್ಸವವಾಗಿದೆ ಮತ್ತು ಅದು ಉತ್ತಮ ಇಳುವರಿ ಹಾಗೂ ವರ್ಷಪೂರ್ತಿ ದೊರಕಿದ ಸಾಕಷ್ಟು ಬೆಳೆಗೆ ಸಮರ್ಪಿತವಾಗಿದೆ. ಹಲವಾರು ಆಚರಣೆಗಳಿದ್ದರೂ ಅವುಗಳಲ್ಲಿ ಪ್ರವಾಸಿಗರು ಅತ್ಯಂತ ಬಲವಾಗಿ ಆಕರ್ಷಿತರಾಗುವುದು ಪೂಜಾರಿಯು ದುಷ್ಟ ಶಕ್ತಿಗಳು ದೂರವಾಗಲಿ ಎಂದು ಪ್ರತಿ ಮನೆಯ ಚಾವಣಿಗೆ ಹೊಡೆಯುವ ಪ್ರಕ್ರಿಯೆಗೆ ಆಗಿದೆ. ದುಷ್ಟ ಶಕ್ತಿಗಳನ್ನು ಓಡಿಸಿದ ನಂತರ, ಆಗ ತಾನೆ ತಯಾರಿಸಲಾದ ರೈಸ್ ಬಿಯರ್‌ನೊಂದಿಗೆ (ಸಂಪೂರ್ಣವಾಗಿ ಒಂದು ಭಿನ್ನವಾದ ಆತ್ಮ!) ಪುರುಷರು ಆರಾಮಾಗಿರುತ್ತಾರೆ. ಬೆಹೆದೇನ್‌ಖ್ಲಾಮ್‌ನ ಅಂತಿಮ ಮೆರವಣಿಗೆಯು ಫೋಟೊ ತೆಗೆದುಕೊಳ್ಳಲು ಸಾಕಷ್ಟು ಅವಕಾಶಗಳನ್ನು ಒದಗಿಸುತ್ತದೆ ಮತ್ತು ಮೇಲಿನ ಹಾಗೂ ಕೆಳಗಿನ ಕಣಿವೆಯ ನಿವಾಸಿಗಳ ನಡುವೆ ನಡೆಯುವ ಸೌಹಾರ್ಯುತ ಆಟವಾದ ದಾತ್ ಲವಕೋರ್‌ಗೆ ಸಾಕಷ್ಟು ಆಸಕ್ತರು ಸೇರುತ್ತಾರೆ! ಪೈಪೋಟಿಯನ್ನು ಆಚೆಗಿಡಿ, ಈ ಆಟವನ್ನು ನೋಡಲು ಬಹಳ ಆಸಕ್ತಿದಾಯಕವಾಗಿರುತ್ತದೆ: ನೀರಿನ ಕೊಳದಲ್ಲಿ ಮರದ ಬಾಲ್‌ ಬಳಸಿ ಫುಟ್‌ಬಾಲ್ ಆಡುವುದನ್ನು ಕಲ್ಪಿಸಿಕೊಳ್ಳಿ. ಆಟದ ವಿಜಯಶಾಲಿಗಳು ಇನ್ನೊಂದು ತಂಡಕ್ಕಿಂತ ಹೆಚ್ಚಿನ ಇಳುವರಿಯನ್ನು ನಿರೀಕ್ಷಿಸುತ್ತಾರೆ.


  ಯಾವಾಗ: ಬಿತ್ತನೆ ಅವಧಿಯ ನಂತರ ಜುಲೈ ಮಧ್ಯಭಾಗದ.


  ಎಲ್ಲಿ: ಜೋವಾಯ್ (ಪಶ್ಚಿಮ ಜೈಂತಿಯಾ ಬೆಟ್ಟಗಳು) ಮತ್ತು ಟುಬರ್ಕ್‌ಮೈ (ಪೂರ್ವ ಜೈಂತಿಯಾ ಬೆಟ್ಟಗಳು).


  ಏನನ್ನು ಕೊಂಡೊಯ್ಯಬೇಕು: ಛತ್ರಿಗಳು, ರೇನ್‌ಕೋಟ್‌ಗಳು ಮತ್ತು ಬೂಟುಗಳು!


  ಶಿಲ್ಲಾಂಗ್ ಶರತ್ಕಾಲದ ಉತ್ಸವ: ಕಿವಿಗಳಿಗೆ ಸಂಗೀತದ ರಸದೌತಣ (ಕಣ್ಣುಗಳು ಮತ್ತು ಬಾಯಿಗೂ ಸಹ!)


  ಇದು 2-ದಿನಗಳ ಸಂಗೀತ, ಕಲೆ ಮತ್ತು ಆಹಾರದ ಮಹೋತ್ಸವ! ಸುಂದರವಾದ ಉಮಿಯಮ್ ಲೇಕ್ ದಂಡೆಯಲ್ಲಿ ಇದನ್ನು ಆಯೋಜಿಸಲಾಗುತ್ತಿದ್ದು, ದೇಶದಾದ್ಯಂತದ ಕಲಾವಿದರಿಗೆ ಈ ಉತ್ಸವವು ವೇದಿಕೆ ಒದಗಿಸುತ್ತದೆ, ಜತೆಗೆ ಸ್ಥಳೀಯ ಬ್ಯಾಂಡ್‌ಗಳು ಮತ್ತು ಕಲಾವಿದರಿಗೆ ತಮ್ಮ ಕಲಾಭಿವ್ಯಕ್ತಿಗೆ ಅವಕಾಶ ನೀಡಲಾಗುತ್ತದೆ. EDM, ಹಿಪ್ ಹಾಪ್, ಮೆಟಲ್ ಅಂಡ್ ರಾಕ್‌ನಿಂದ ದೇಶದ ಅತ್ಯುನ್ನತ ಪ್ರದರ್ಶನಗಳನ್ನು ಕಣ್ತುಂಬಿಕೊಳ್ಳುವುದರಲ್ಲಿ ಆಶ್ಚರ್ಯವೇನು ಇಲ್ಲ. ಅದ್ಭುತ ಸಂಗೀತರ ಹೊರತಾಗಿಯೂ ಸ್ಥಳೀಯ ಆಹಾರ ಹಾಗೂ ಸ್ಥಳೀಯ ವೈನ್‌ಗಳು ಹಾಗೂ ಉಪ್ಪಿನಕಾಯಿಗಳ ಸ್ಯಾಂಪಲ್ ರುಚಿ ಸವಿಯುವುದಕ್ಕೂ ಇದೊಂದು ಅತ್ಯಾಕರ್ಷಕ ತಾಣವಾಗಿದೆ. ಸುಸ್ಥಿರ ಕಲೆ ಮತ್ತು ವಿನ್ಯಾಸದ ಬಗ್ಗೆ ಒಲವುಳ್ಳವರಿಗೆ, ವಿವಿಧ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಕಲಾವಿದರನ್ನು ಸಂಪರ್ಕಿಸಲು ಮತ್ತು ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸಲು ಈ ಉತ್ಸವವು ಸಾಕಷ್ಟು ಅವಕಾಶ ಒದಗಿಸುತ್ತದೆ. 


  ಯಾವಾಗ: ಶರತ್ಕಾಲ- ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ


  ಎಲ್ಲಿ: ಉಮಿಯಮ್ ಲೇಕ್ ದಂಡೆ.


  ಏನು ಕೊಂಡೊಯ್ಯಬೇಕುಸದೃಢ ರೇನ್‌ಕೋಟ್, ಮತ್ತು ಬೂಟುಗಳು! ಒಂದು ವೇಳೆ ವಾತಾವರಣವು ಹೆಚ್ಚು ಚಳಿಯಿಂದ ಕೂಡಿದ್ದರೆ ನಿಮ್ಮನ್ನು ಬೆಚ್ಚಗಿಡುವ ರೇನ್ ಜ್ಯಾಕೆಟ್‌ಗೆ ಹುಡಿಕೆ ಮಾಡುವುದು ಉತ್ತಮ.


  ವಾಂಗಲಾ ಉತ್ಸವ: 100 ಡ್ರಮ್‌ಗಳ ಲಯದೆಡೆಗಿನ ನಡಿಗೆ!


  ಗಾರೋ ಬುಡಕಟ್ಟು ಜನಾಂಗದವರ ಪ್ರಮುಖವಾದ ಹಬ್ಬ ವಾಂಗಲಾ ಉತ್ಸವ


  100 ಡ್ರಮ್‌ ಉತ್ಸವ ಎಂದೇ ಕರೆಯಲಾಗುವ, ವಾಂಗಲಾ ಉತ್ಸವವು, ಗಾರೋ ಬುಡಕಟ್ಟು ಜನಾಂಗದವರ ಪ್ರಮುಖವಾದ ಹಬ್ಬವಾಗಿದೆ. ಈ ಹಬ್ಬವು ಸೂರ್ಯ ದೇವರನ್ನು ಪೂಜಿಸುವುದರೊಂದಿಗೆ, ದೀರ್ಘಕಾಲದ ಸುಗ್ಗಿಯ ಕಾಲದ ಅಂತ್ಯವನ್ನು ಗುರುತಿಸುತ್ತದೆ. ಸೂರ್ಯ ದೇವರ ಆಚರಣೆಯನ್ನು ನಾಗ್ರಾ ಡ್ರಮ್‌ನ ಲಯಬದ್ಧವಾದ ಬಡಿತದ ಜೊತೆಗೆ ಸಂಪ್ರದಾಯದಂತೆ, ಸಾಂಪ್ರದಾಯಿಕ ನೃತ್ಯದೊಂದಿಗೆ ವಿದ್ಯುಕ್ತವಾಗಿ ನೆರವೇರಿಸುತ್ತಾರೆ. ಸೊಗಸಾದ ಕರಕುಶಲ ವಸ್ತುಗಳು (ಬಿದಿರು ಮತ್ತು ಕೇನ್‌ ಕಲಾಕೃತಿಗಳನ್ನು ಒಳಗೊಂಡಂತೆ) ಕುಶಲಕರ್ಮಿಗಳ ಮಳಿಗೆಗಳಿಂದ ನೇರವಾಗಿ ನಿಮ್ಮ ಕೈ ಸೇರುವ ಸದಾವಕಾಶ ಇದಾಗಿದೆ. ಡಿಸೆಂಬರ್‍‌ 1976 ರಿಂದ ಆಚರಿಸಲಾಗುತ್ತಿರುವ ಈ ಉತ್ಸವವು ಪ್ರತಿವರ್ಷ ನೂರಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ.


  ಯಾವಾಗ: ಸುಗ್ಗಿಕಾಲದ ಅಂತ್ಯದಲ್ಲಿ, ನವೆಂಬರ್‍‌ ಎರಡನೇ ವಾರ.


  ಎಲ್ಲಿ: ಟೂರಾ ಪಟ್ಟಣ ಮತ್ತು ಪಶ್ಚಿಮ ಗಾರೋ ಬೆಟ್ಟಗಳು.


  ಏನನ್ನು ಕೊಂಡೊಯ್ಯಬೇಕು: ನಿಮ್ಮ ಎಲ್ಲಾ ಖರೀದಿಗಾಗಿ ಹೆಚ್ಚಿನ ಬ್ಯಾಗ್‌ಗಳು!


  ಶಿಲ್ಲಾಂಗ್ ಚೆರ್ರಿ ಬ್ಲಾಸಮ್ ಫೆಸ್ಟಿವಲ್: ಈ ನೆಲದ ಅತ್ಯಂತ ಸಂತಸದಾಯಕ ಉತ್ಸವ!


  ಶಿಲ್ಲಾಂಗ್ ಚೆರ್ರಿ ಬ್ಲಾಸಮ್ ಫೆಸ್ಟಿವಲ್: ಈ ನೆಲದ ಅತ್ಯಂತ ಸಂತಸದಾಯಕ ಉತ್ಸವ!


  ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು, ಆಹಾರ, ಕರಕುಶಲ ವಸ್ತುಗಳು ಮತ್ತು ಕಲೆ ಇವೆಲ್ಲವನ್ನೂ ಒಳಗೊಂಡ ಕಣ್ಮನ ಸೆಳೆಯುವ ಬಹು-ದಿನದ, ಬಹು-ಕಾರ್ಯಕ್ರಮಗಳ ಉತ್ಸವವಾಗಿದೆ. ಚೆರ್ರಿ ಬ್ಲಾಸಮ್ ಮರದಲ್ಲಿ ಹೂಗಳು ಅರಳುವ ಸಮಯದಲ್ಲಿ ಈ ಉತ್ಸವವನ್ನು ನಡೆಸುವುದರಿಂದ ಈ ಉತ್ಸವಕ್ಕೆ ಆ ಹೆಸರು ಬಂದಿದೆ. ಕಲಾ ಪ್ರದರ್ಶನಗಳಲ್ಲದೆ, ಸ್ಥಳೀಯ ಕಲಾವಿದರು ತಮ್ಮ ಗಾಯನ ಮತ್ತು ನೃತ್ಯ ಪ್ರತಿಭೆ, ಫ್ಯಾಶನ್ ಡಿಸೈನ್ ಹಾಗೂ ಕೊರಿಯೊಗ್ರಫಿ, ಆಹಾರ ಮತ್ತು ವೈನ್‌ಗಾಗಿ ಇರುವ ರೆಸಿಪಿಗಳಿಗಾಗಿ ತಮ್ಮ ಪ್ರತಿಭೆ ಪ್ರದರ್ಶಿಸಲು ಅವರಿಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ! ಈ ಉತ್ಸವಕ್ಕೆ ಸ್ಥಳಿಯ ಯುವಕ ಯುವತಿಯರು ಮತ್ತು ಪ್ರವಾಸಿಗರ ದಂಡೇ ನೆರೆದಿರುತ್ತದೆಯಾದ್ದರಿಂದ ಎಲ್ಲೆಲ್ಲೂ ಸಂತಸ ಮನೆಮಾಡಿರುತ್ತದೆ. 


  ಯಾವಾಗ: ನವೆಂಬರ್, ಚೆರ್ರಿ ಬ್ಲಾಸಮ್ ಮರಗಳು ಹೂ ಬಿಡುವ ಸಮಯ.


  ಎಲ್ಲಿ: ವಾರ್ಡ್ಸ್ ಲೇಕ್ ಮತ್ತು ಸಂಗೀತ ಪ್ರದರ್ಶನ ಹಾಗೂ ಸ್ಟಾಲ್‌ಗಳಿಗಾಗಿ ಶಿಲ್ಲಾಂಗ್‌ನ ದಿ JN ಸ್ಪೋರ್ಟ್ಸ್ ಕಾಂಪ್ಲೆಕ್ಸ್.


  ಏನು ಕೊಂಡೊಯ್ಯಬೇಕು: ವಿಂಟರ್ ಫ್ಯಾಶನ್!


  ವಿಂಟರ್ ಟೇಲ್ಸ್ ಫೆಸ್ಟಿವಲ್: ಕುಶಲಕರ್ಮಿಗಳ ಚಳಿಗಾಲದ ಸಂಭ್ರಮ!


  ಈ ಉತ್ಸವವು ಒಂದು ವೇದಿಕೆಯಾಗಿ ಬೆಂಬಲಿಸಲಿದ್ದು ಅದರಲ್ಲಿ ಮೇಘಾಲಯದಾದ್ಯಂತದ ಅನನ್ಯ ಪ್ರತಿಭೆಗಳು ಹಾಗೂ ಉದ್ಯಮಿಗಳು ತಮ್ಮ ಆಹಾರ, ಕಲೆ, ಕರಕುಶಲ ಮತ್ತು ಸಂಗೀತದೊಂದಿಗೆ ತಮ್ಮ ಕಥನವನ್ನು ಹಂಚಿಕೊಳ್ಳಬಹುದು. ಸ್ಥಳೀಯ ಕ್ರಿಯಾಶೀಲ ಸಮುದಾಯದೊಂದಿಗೆ ತೊಡಗಿಸಿಕೊಳ್ಳಲು ಮತ್ತು ಅವರ ಕೆಲಸವನ್ನು ಪ್ರಶಂಸಿಸಲು ಇದು ಸ್ಥಳೀಯರು ಮತ್ತು ಪ್ರವಾಸಿಗಳಿಬ್ಬರಿಗೂ ಅವಕಾಶ ಒದಗಿಸುತ್ತದೆ. ಇನ್ನೇನು ಕ್ರಿಸ್‌ಮಸ್ ಸಮೀಪಿಸಲಿದ್ದು, ಸ್ಥಳೀಯ ಕಲಾವಿದರು ಮತ್ತು ಅವರ ಕಲೆಯನ್ನು ಬೆಂಬಲಿಸುವ ಜತೆಗೆ ನಿಮ್ಮ ಪ್ರೀತಿಪಾತ್ರರಿಗೆ ಅರ್ಥಪೂರ್ಣ ಗಿಫ್ಟ್‌ಗಳನ್ನು ಕಂಡುಕೊಳ್ಳಲು ಇದೊಂದು ಅದ್ಭುತ ತಾಣವಾಗಿದೆ. 


  ಯಾವಾಗ: ಡಿಸೆಂಬರ್, ಕ್ರಿಸ್‌ಮಸ್‌ಗೂ ಸ್ವಲ್ಪ ಮೊದಲು


  ಎಲ್ಲಿ: ವಾರ್ಡ್ಸ್ ಲೇಕ್, ಶಿಲ್ಲಾಂಗ್


  ಏನು ಕೊಂಡೊಯ್ಯಬೇಕು: ಚಳಿಗಾಲದಲ್ಲಿ ಬೆಚ್ಚಗಿಡುವ ಉಡುಗೆ, ಮತ್ತು ಸದೃಢ ಬೂಟುಗಳು!


  ಸಾರಾಂಶ:


  ಇದಿಷ್ಟು ಹೇಳಿದ್ದಾಯ್ತು! ಫಲವತ್ತೆಯನ್ನು ಸಂಭ್ರಮಿಸುವ ಆರಾಮದಾಯಕ ಬೆಚ್ಚಗಿನ ವಸಂತಕಾಲದ ದಿನಗಳಿಂದ ಹಿಡಿದು ಶರತ್ಕಾಲದಲ್ಲಿ ಅರಳುವ ಚೆರ್ರಿಗಳ ತನಕ, ಶಿಲ್ಲಾಂಗ್‌ನ ಕಲಾತ್ಮಕ ದೃಶ್ಯಾವಳಿಯ ಬೆಡಗು, ಮೇಘಾಲಯವು ವರ್ಷಪೂರ್ತಿ ನಿಮ್ಮನ್ನು ಮುದಗೊಳಿಸುತ್ತದೆ. ಹಾಗಾಗಿ ಯೋಜನೆ ರೂಪಿಸಿ. ಮೇಘಾಲಯದ ಸಹಜ ಸೌಂದರ್ಯವನ್ನು ಆಸ್ವಾದಿಸಿ, ಸಂಸ್ಕೃತಿಯನ್ನು ಅರಿಯಿರಿ ಮತ್ತು ನಿಜಕ್ಕೂ ಅದ್ಭುತವೆನಿಸುವ ರಸದೌತಣವನ್ನು ಸವಿಯಿರಿ….ಹಾಗೂ ನೀವು ಅಲ್ಲಿದ್ದಾಗ ಒಂದೆರಡಾದರೂ ಉತ್ಸವಗಳಲ್ಲಿ ಭಾಗವಹಿಸಿ! 

  Published by:Bhavana Kumari
  First published: