Restaurants Near Me: ಬೆಂಗಳೂರಿನ ಈ ರೆಸ್ಟೊರೆಂಟ್​ಗಳಲ್ಲಿ ಡಿಫರೆಂಟ್​ ಟೈಪ್​ ಥಾಲಿ ಸಿಗುತ್ತಂತೆ

Best Thalis Near Me Bangalore: ಬೆಂಗಳೂರಿನ ವಿವಿಧ ರೆಸ್ಟೊರೆಂಟ್​ಗಳಲ್ಲಿ ಲಭ್ಯವಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಥಾಲಿ ನೀಡುವ ರೆಸ್ಟೊರೆಂಟ್​ಗಳ ಲಿಸ್ಟ್​ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೊಡ್ಡ ಮತ್ತು ಸಣ್ಣ ರೆಸ್ಟೊರೆಂಟ್‌ಗಳು (Restaurants) ತಮ್ಮ ಥಾಲಿಗಳ (Thali)  ಕಾರಣದಿಂದ ಬಹಳ ಪ್ರಸಿದ್ದವಾಗಿದೆ.  ನಾಗಾಲ್ಯಾಂಡ್, ಬಂಗಾಳ, ಅಸ್ಸಾಂ, ರಾಜಸ್ಥಾನ, ಮತ್ತು ಗುಜರಾತ್‌ನಂತಹ ವಿಭಿನ್ನ ಥಾಲಿ ಜೊತೆಗೆ ಕರಾವಳಿ (Coastal) ಮತ್ತು ಕರ್ನಾಟಕದ (Karnataka) ಸುತ್ತಮುತ್ತಲಿನ ಆಹಾರಗಳಿರುವ ಥಾಲಿ ಸಹ ಬೆಂಗಳೂರಿನ ವಿವಿಧ ರೆಸ್ಟೊರೆಂಟ್​ಗಳಲ್ಲಿ ಲಭ್ಯವಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಥಾಲಿ ನೀಡುವ ರೆಸ್ಟೊರೆಂಟ್​ಗಳ ಲಿಸ್ಟ್​ ಇಲ್ಲಿದೆ.  

Bamey's Restro Café, ಕೋರಮಂಗಲ, ಬೆಂಗಳೂರು

ನೀವು ಇಲ್ಲಿ ನೇಪಾಳದ ಥಾಲಿಯನ್ನು ಸವಿಯಬಹುದು. ಅಲ್ಲದೇ, ಇಲ್ಲಿ ಉತ್ತರ ಭಾರತದ ವಿವಿಧ ಆಹಾರ ಪದಾರ್ಥಗಳು ಸಹ ಲಭ್ಯವಿದೆ. ದಾಲ್​, ರಸಂ ಮಾತ್ರವಲ್ಲದೇ, ಮಟನ್ ಅಥವಾ ಚಿಕನ್ ಥಾಲಿಗಳನ್ನು ಪ್ರಯತ್ನಿಸಿ. ಇದು ಅನ್​ಲಿಮಿಟೆಡ್​ ಥಾಲಿ ಆಗಿದ್ದು, ನಿಮಗೆ ಒಂದು ಸುಂದರ ಅನುಭವ ನೀಡುತ್ತದೆ.

ವಿಳಾಸ: A-5, ನೆಲ ಮಹಡಿ, KHB ಕಾಲೋನಿ, 5 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918041102071

ಸಮಯ: ಬೆಳಗ್ಗೆ 11 ರಿಂದ ರಾತ್ರಿ 10.30ರ ವರೆಗೆ

Bhojohori Manna, ಕೋರಮಂಗಲ, ಬೆಂಗಳೂರು 

ಕೋರಮಂಗಲದ ಭೋಜೋಹರಿ ಮನ್ನಾದಲ್ಲಿ ದೊಡ್ಡ ಮತ್ತು ಸಣ್ಣ ಥಾಲಿಗಳು ಲಭ್ಯವಿದ್ದು, ಬಂಗಾಳದ ರುಚಿಕರ ಆಹಾರಗಳನ್ನು ನೀವು ಇಲ್ಲಿ ಸವಿಯಬಹುದು. ಪೂರಿ, ಸಾಗು, ಆಲೂರ್ ಡೊಮ್, ಪುಲಾವ್, ಚಟ್ನಿ, ಹಪ್ಪಳ, ಗಟ್ಟಿ ಮೊಸರು ಆಹಾ! ಅದ್ಬುತ ಆಹಾರವನ್ನು ಸವಿಯಲು ಇಲ್ಲಿಗೆ ಭೇಟಿ ನೀಡಲೇಬೇಕು.

ವಿಳಾಸ: 668-ಬಿ, 17ನೇ ಎಸ್ ಮುಖ್ಯರಸ್ತೆ, 6ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918025503666

ಸಮಯ: ಬೆಳಗ್ಗೆ 10 ರಿಂದ ರಾತ್ರಿ 10ರ ವರೆಗೆ

Gam’s Delicacy, ಕೋರಮಂಗಲ, ಬೆಂಗಳೂರು

ಸಾಂಪ್ರದಾಯಿಕ ಅಸ್ಸಾಮಿ ಥಾಲಿ ಸವಿಯಲು ಇಲ್ಲಿಗೆ ಹೋಗಬಹುದು. ಆರೊಮ್ಯಾಟಿಕ್ ಜೋಹಾ ಅಕ್ಕಿ, ದಾಲ್​ ಮಾತ್ರವಲ್ಲದೇ ನಾನ್​ ವೆಜ್​ ಥಾಲಿ ಹೀಗೆ ನಿಮಗೆ ಯಾವುದು ಬೇಕೋ ಆ ವಿಧದ ಥಾಲಿ ಇಲ್ಲಿ ಸಿಗುತ್ತದೆ. ನಿಮ್ಮ ಫ್ಯಾಮಿಲಿ ಜೊತೆ ಹೋಗಿ ಲಂಚ್ ಮಾಡಲು ಇದು ಉತ್ತಮ ಸ್ಥಳ.

ವಿಳಾಸ: 61, 4 ನೇ ಮಹಡಿ, 1 ನೇ ಮುಖ್ಯ, 7 ನೇ ಬ್ಲಾಕ್, ಕೋರಮಂಗಲ, ಬೆಂಗಳೂರು

ಮೊಬೈಲ್ ನಂಬರ್: +918049653153

ಸಮಯ: ಬೆಳಗ್ಗೆ 11.30 ರಿಂದ ರಾತ್ರಿ 12 ಗಂಟೆಯ ವರೆಗೆ

ಇದನ್ನೂ ಓದಿ: ಕಡಲೆಹಿಟ್ಟು ಕಲಬೆರಕೆ ಪತ್ತೆ ಹಚ್ಚುವುದು ಬಹಳ ಸುಲಭ, ಮನೆಯಲ್ಲೇ ಈ ವಿಧಾನ ಅನುಸರಿಸಿ

ಫಿಶ್‌ಲ್ಯಾಂಡ್, ಮೆಜೆಸ್ಟಿಕ್, ಬೆಂಗಳೂರು

ಮೆಜೆಸ್ಟಿಕ್‌ನಲ್ಲಿರುವ ರೆಸ್ಟೊರೆಂಟ್​ನಲ್ಲಿ ಸೀ ಫುಡ್​ ಬಹಳ ಪ್ರಸಿದ್ದವಾಗಿದೆ. ಇಲ್ಲಿ ವಿಶೇಷ ಸೀಫುಡ್ ಥಾಲಿಯನ್ನು ನೀವು ಸವಿಯಲೇಬೇಕು. ಬೆಳಗ್ಗೆ 11 ರಿಂದ ಮಧ್ಯಾಹ್ನ 3:30 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 9:30 ರವರೆಗೆ ಈ ರೆಸ್ಟೊರೆಂಟ್​ ತೆರೆದಿರುತ್ತದೆ. ನಾನ್ ವೆಜ್​ ಪ್ರಿಯರಿಗೆ ಎನ್ನುವುದಕ್ಕಿಂತ ಮುಖ್ಯವಾಗಿ ಫಿಶ್​ ಪ್ರಿಯರಿಗೆ ಇದು ಬಹಳ ಸೂಕ್ತವಾದ ಸ್ಥಳ ಎನ್ನಬಹುದು.

ವಿಳಾಸ: ಸುಜಾತಾ ಕಾಂಪ್ಲೆಕ್ಸ್, 1 ನೇ ಮುಖ್ಯ, ಗಾಂಧಿನಗರ, ಮೆಜೆಸ್ಟಿಕ್, ಬೆಂಗಳೂರು

ಸಮಯ: ಬೆಳಗ್ಗೆ 11 ರಿಂದ ಮಧ್ಯಾಹ್ನ 3:30 ರವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 9:30 ರವರೆಗೆ

ಮೊಬೈಲ್ ನಂಬರ್: +918277082007

ಖಾಂದಾನಿ ರಾಜಧಾನಿ, ಮಲ್ಲೇಶ್ವರಂ, ಬೆಂಗಳೂರು

ನಿಮಗೆ ಬೆಂಗಳೂರಿನಲ್ಲಿ ಅತ್ಯುತ್ತಮ ಸಸ್ಯಾಹಾರಿ ಥಾಲಿ ಬೇಕು ಎಂದರೆ ಖಾಂದಾನಿ ರಾಜಧಾನಿ ಉತ್ತಮ ಆಯ್ಕೆ. ರಾಜಸ್ಥಾನಿ ಮತ್ತು ಗುಜರಾತಿ ಆಹಾರಗಳ ಜೊತೆ ದಕ್ಷಿಣ ಭಾರತದ ಅದ್ಭುತ ಆಹಾರಗಳನ್ನು ನೀವಿಲ್ಲಿ ಸವಿಯಬಹುದು. ಮಧ್ಯಾಹ್ನ 12 ರಿಂದ 3:30 ರವರೆಗೆ ಮತ್ತು ಸಂಜೆ 7 ರಿಂದ 11 ರವರೆಗೆ ಈ ರೆಸ್ಟೊರೆಂಟ್​ ತೆರೆದಿರುತ್ತದೆ.

ಇದನ್ನೂ ಓದಿ: ಹಸಿ ಹಾಲು ಕುಡಿಯುವ ಅಭ್ಯಾಸವಿದ್ರೆ ಈಗ್ಲೇ ಬಿಡಿ, ಈ ಸಮಸ್ಯೆಗಳು ಬರಬಹುದು

ವಿಳಾಸ: ಮಂತ್ರಿ ಸ್ಕ್ವೇರ್, 3ನೇ ಫ್ಲೋರ್, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು

ಮೊಬೈಲ್ ನಂಬರ್: +918022682092

ಸಮಯ: ಮಧ್ಯಾಹ್ನ 12 ರಿಂದ 3:30 ರವರೆಗೆ ಮತ್ತು ಸಂಜೆ 7 ರಿಂದ 11 ರವರೆಗೆ
Published by:Sandhya M
First published: