• Home
  • »
  • News
  • »
  • lifestyle
  • »
  • Tea Shops: ಚಹಾ ಪ್ರಿಯರಿಗೆ ಇಲ್ಲಿದೆ ಬೆಂಗಳೂರಿನ ಟಾಪ್ 5 ರುಚಿಕರ ಟೀ ಅಂಗಡಿಗಳ ಲಿಸ್ಟ್

Tea Shops: ಚಹಾ ಪ್ರಿಯರಿಗೆ ಇಲ್ಲಿದೆ ಬೆಂಗಳೂರಿನ ಟಾಪ್ 5 ರುಚಿಕರ ಟೀ ಅಂಗಡಿಗಳ ಲಿಸ್ಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Tea Shops Near Me: ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನ ಚಹಾ ಪ್ರಿಯರಿದ್ದಾರೆ, ಅವರಿಗಾಗಿಯೇ ವಿಧ ವಿಧವಾದ ಚಹಾಗಳು ಲಭ್ಯವಿದೆ.  ನೀವು ನಿಮ್ಮನ್ನು ನಿಜವಾದ ಚಹಾ-ಪ್ರೇಮಿ ಎಂದು ಕರೆದುಕೊಳ್ಳುವುದಾದರೆ ಬೆಂಗಳೂರಿನಲ್ಲಿ (Bengaluru) ನೀವು ಟ್ರೈ ಮಾಡಬೇಕಿರುವ 5 ಸ್ಥಳಗಳ ಲಿಸ್ಟ್ ಇಲ್ಲಿದೆ.  

ಮುಂದೆ ಓದಿ ...
  • Share this:

ಬೀದಿ ಬದಿಯ ಟೀ ಸ್ಟಾಲ್ (Tea Stall) ಭಾರತದ ನೆಚ್ಚಿನ ಅಡ್ಡಾ ಆಗಿ ಪ್ರಾಬಲ್ಯ ಸಾಧಿಸಿದ್ದರೂ  ನಮ್ಮ ನೆಚ್ಚಿನ ಕಾಫಿಗಳಿಗೆ ಉನ್ನತ ಮಟ್ಟದ ಕೆಫೆಗಳು (Cafe) ಇದ್ದಂತೆ ನಮ್ಮ ಪ್ರೀತಿಯ ಕಪ್ ಚಹಾವೂ (Tea) ಸಹ ಅದೇ ರೀತಿಯ ಕೆಫೆಗಳನ್ನು ಅಥವಾ ಅಂಗಡಿಯನ್ನು ಹೊಂದಿದೆ. ಭಾರತದ ಜನಸಂಖ್ಯೆಯಲ್ಲಿ ಹೆಚ್ಚಿನ ಚಹಾ ಪ್ರಿಯರಿದ್ದಾರೆ, ಅವರಿಗಾಗಿಯೇ ವಿಧ ವಿಧವಾದ ಚಹಾಗಳು ಲಭ್ಯವಿದೆ.  ನೀವು ನಿಮ್ಮನ್ನು ನಿಜವಾದ ಚಹಾ-ಪ್ರೇಮಿ ಎಂದು ಕರೆದುಕೊಳ್ಳುವುದಾದರೆ ಬೆಂಗಳೂರಿನಲ್ಲಿ (Bengaluru) ನೀವು ಟ್ರೈ ಮಾಡಬೇಕಿರುವ 5 ಸ್ಥಳಗಳ ಲಿಸ್ಟ್ ಇಲ್ಲಿದೆ.


ಇನ್ಫಿನಿಟಿಯ ಟೀ ರೂಮ್ ಮತ್ತು ಟೀ ಸ್ಟೋರ್


ಊಲಾಂಗ್ಸ್‌ನಿಂದ ವಿಭಿನ್ನ ಗಿಡಮೂಲಿಕೆ ಮತ್ತು ಹಣ್ಣಿನ ಮಿಶ್ರಣಗಳು, ಡಾರ್ಜಿಲಿಂಗ್‌ನಿಂದ ಅಸ್ಸಾಂ, ಗ್ರೀನ್ ಮತ್ತು ವೈಟ್​ ಚಹಾಗಳು, ಹೂವಿನ ಚಹಾಗಳು ಕಡಕ್ ಚಾಯ್ ಹೀಗೆ ಇನ್ಫಿನಿಟಿಯಾ ಎಲ್ಲವನ್ನೂ ಹೊಂದಿದೆ. ಅಲ್ಲದೇ ಇಲ್ಲಿನ ನ್ಯಾಚೋಸ್, ಚಿಕನ್ ಪಾರ್ಮಿಜಿಯಾನಾ, ಬೆಲ್ಜಿಯನ್ ಡಾರ್ಕ್ ಚಾಕೊಲೇಟ್ ಕೇಕ್ ಬಹಳಷ್ಟು ರುಚಿಕರ. ನಾವು ಹೇಳಿದಂತೆ ನಿಜವಾದ ಚಹಾ ಪ್ರಿಯರಿಗೆ ಇರುವ ಒಂದು ಸ್ಥಳ ಎನ್ನಬಹುದು.


ಸ್ಥಳ: 26, ಇಎಸ್‌ಐ ಆಸ್ಪತ್ರೆ ರಸ್ತೆ, ಎಚ್‌ಎಎಲ್ 2 ನೇ ಹಂತ, 100 ಅಡಿ ರಸ್ತೆ, ಇಂದಿರಾನಗರ


ಚಾಯ್ ಪತ್ತಿ


ಇವರ ಕಡಕ್ ಚಾಯ್ ಸಾಕಾಗದೇ ಇದ್ದರೆ, ಚಾಯ್​ ಪತ್ತಿಯ ರೋಮಾಂಚಕ ಅಲಂಕಾರ ಮತ್ತು ಮುದ್ದಾದ ಸ್ಟೂಲ್ ಮತ್ತು ಟೇಬಲ್‌ಗಳು ನಿಮ್ಮ ಮುಡ್​ ಅನ್ನು ಸರಿ ಮಾಡುತ್ತದೆ. ಕುಲ್ಹಾದ್ ಚಾಯ್, ಮಸಾಲಾ ಚಾಯ್, ಐಸ್‌ಡ್ ಟೀ, ಚೀಸ್ ಬಾಲ್‌ಗಳು, ಚಿಕನ್ ಸಾಸೇಜ್‌ಗಳು ಮತ್ತು ಗ್ರಿಲ್ಡ್ ಸ್ಯಾಂಡ್‌ವಿಚ್ ಇಲ್ಲಿ ನೀವು ಟ್ರೈ ಮಾಡಲೇಬೇಕು.


ಸ್ಥಳ: 772, 2 ನೇ ಮಹಡಿ, 12 ನೇ ಮುಖ್ಯ ಸಿಗ್ನಲ್ ಹತ್ತಿರ, 100 ಅಡಿ ರಸ್ತೆ, ಇಂದಿರಾನಗರ,


ಇದನ್ನೂ ಓದಿ: ಸಂಜೆ ಟೀ ಜೊತೆ ಟ್ರೈ ಮಾಡಿ ಈ ಸ್ಪೆಷಲ್ ಸ್ನ್ಯಾಕ್ಸ್​


ಬೆಂಗಳೂರು ಚಾಯ್ ಪಾಯಿಂಟ್


ನಗರದಾದ್ಯಂತ ಹರಡಿರುವ ಡಜನ್ ಚಾಯ್ ಪಾಯಿಂಟ್‌ಗಳು ಚಿಕ್ಕ ಕಪ್‌ಗಳು ಮತ್ತು ಕುಲ್ಹಾದ್‌ಗಳಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಶುಂಠಿ, ಮಸಾಲಾ, ಐಸ್ ಚಹಾ ಹೀಗೆ ಇಲ್ಲಿ ಹಲವಾರು ವಿಧಗಳು ಲಭ್ಯವಿದೆ. ಚಾಯ್ ಪಾಯಿಂಟ್ ಎಲ್ಲಾ ಚಾಯ್ ಪ್ರಿಯರಿಗೆ  ಇಷ್ಟವಾಗುತ್ತದೆ. ಇಲ್ಲಿನ ಪೋಹಾ, ಸಮೋಸಾ, ಮಸಾಲಾ ಕಡಲೆಕಾಯಿ ಮಿಸ್​ ಮಾಡಲೇಬಾರದು.


ಸ್ಥಳ- ಟ್ರಿನಿಟಿ ಹತ್ತಿರ ಮಹಾತ್ಮ ಗಾಂಧಿ ರೋಡ್​ ಬೆಂಗಳೂರು ಸೇರಿದಂತೆ ಹಲವಾರು ಮಳಿಗೆಗಳಿವೆ.


Tea Brew The Picture perfect Tea room


ಅತ್ಯಂತ ವಿಭಿನ್ನ ಶ್ರೇಣಿಯ ಚಹಾವನ್ನು ಹೊಂದಿರುವ ಮುದ್ದಾದ ಕೆಟಲ್‌ಗಳು ಯಾವುದೇ ಚಹಾ ಪ್ರಿಯರನ್ನು ಮೆಚ್ಚಿಸಲು ಖಚಿತವಾಗಿದೆ. ಕೇಸರಿಯಾ ಚಾಯ್, ಗುಡ್ ಕಿ ಚಾಯ್, ಕುಲ್ಹಾದ್ ಅಸ್ಸಾಂ, ಕಾಶ್ಮೀರಿ ಕಹ್ವಾ, ಮಚಾ, ಸೆಂಚಾ, ಸ್ಟ್ರಾಬೆರಿ ಬ್ಲಶ್, ಜಾಸ್ಮಿನ್ ಪರ್ಲ್ ಮತ್ತು ಪೀಚ್ ಟ್ರ್ಯಾಂಕ್ವಾಲಿಟಿ ಹೀಗೆ ಇಲ್ಲಿನ ಬೆಸ್ಟ್ ಚಹಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮೊಮೊಸ್, ಪನೀರ್ ಸ್ಯಾಂಡ್‌ವಿಚ್, ವೆಜ್ ಕ್ಲಬ್ ಸ್ಯಾಂಡ್‌ವಿಚ್, ಪಾಸ್ಟಾ ನಿಮ್ಮ ಬೆರಳನ್ನು ನೆಕ್ಕುವಂತೆ ಮಾಡುತ್ತದೆ.


ಸ್ಥಳ: 172, 2ನೇ ಅಡ್ಡ ರಸ್ತೆ, ಇಂದಿರಾನಗರ ಡಬಲ್ ರೋಡ್, ಇಂದಿರಾನಗರ, ಬೆಂಗಳೂರು


ಮೈ ಟೀ ಹೌಸ್


ಮೈ ಟೀ ಹೌಸ್ ಔಷಧೀಯ ಚಹಾಗಳಿಗೆ ಮೀಸಲಾಗಿರುವ ವಿಶೇಷ ಶ್ರೇಣಿಯ ಚಹಾಗಳನ್ನು ಹೊಂದಿದೆ, ಇದು ಹಳೆಯ ಆಯುರ್ವೇದ ಪದ್ಧತಿಯನ್ನು ಅನುಸರಿಸುತ್ತದೆ. ಊಲಾಂಗ್, ಮಲ್ಲಿಗೆ, ಪುದೀನಾ ಮತ್ತು ಹಸಿರು ಪುದೀನ ಚಹಾ ಇಲ್ಲಿನ ಬೆಸ್ಟ್​ ಚಹಾಗಳು.  ಸುಂದರವಾದ ಚಹಾ ಕೊಠಡಿಯು ರಷ್ಯಾ, ಸಿಲೋನ್, ತೈವಾನ್, ವಿಯೆಟ್ನಾಂ, ಸಿಯಾಮ್, ನೇಪಾಳ ಮತ್ತು ತೈವಾನ್‌ನಂತಹ ಪ್ರಪಂಚದ ವಿವಿಧ ಭಾಗಗಳಿಗೆ ಸೇರಿದ ಅತ್ಯುತ್ತಮವಾದ ವಸ್ತುಗಳನ್ನು ಹೊಂದಿದೆ.


ಇದನ್ನೂ ಓದಿ: ಬೆಂಗಳೂರಿನ ಬೆಸ್ಟ್ 5 ಇಟಾಲಿಯನ್ ರೆಸ್ಟೊರೆಂಟ್ ಗಳ ಲಿಸ್ಟ್ ಇಲ್ಲಿದೆ, ಇಲ್ಲಿ ಸಿಗೋ ಪಾಸ್ತಾ-ಪಿಜ್ಜಾ ದಿ ಬೆಸ್ಟ್ ಅಂತೆ!


ಸ್ಥಳ: 126, KHB ಕಾಲೋನಿ, 1ನೇ 'ಎ' ಕ್ರಾಸ್, ಜ್ಯೋತಿ ನಿವಾಸ್ ಕಾಲೇಜು ರಸ್ತೆ, ಕೋರಮಂಗಲ 5ನೇ ಬ್ಲಾಕ್, ಬೆಂಗಳೂರು

Published by:Sandhya M
First published: