Sweets Shops: ಬೆಂಗಳೂರಿನಲ್ಲಿ ರುಚಿ ರುಚಿಯಾದ ಸ್ವೀಟ್ಸ್​ ಸಿಗುವ ಟಾಪ್​ 5 ಅಂಗಡಿಗಳಿವು

Near Me Sweets Shops: ಎಲ್ಲಾ ಸ್ವೀಟ್​​ಗಳು ಎಲ್ಲಾ ಕಡೆ ಚನ್ನಾಗಿ ಸಿಗುವುದಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ. ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಸ್ವೀಟ್​ ಅಂಗಡಿಗಳಿಗೇನು ಕಡಿಮೆ ಇಲ್ಲ. ಇಲ್ಲಿನ ಸ್ವೀಟ್​ ಅಂಗಡಿಗಳಲ್ಲಿ ಬೆಸ್ಟ್ ಅಂಗಡಿಗಳು ಯಾವುವು ಎಂಬ ಲಿಸ್ಟ್ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ಹಬ್ಬ (Festival)  ಎಂದರೆ ಮೊದಲು ನೆನಪಾಗುವುದು ಸಿಹಿ (Sweets) , ಕೇವಲ ಹಬ್ಬ ಅಂತಲ್ಲ ಯಾವುದೇ ಶುಭ ಸಂದರ್ಭ, ಶುಭ ಸುದ್ದಿ ಇರಲಿ ಸ್ವೀಟ್​ ಇಲ್ಲದೇ ಆಗುವುದಿಲ್ಲ. ರಸಗುಲ್ಲಾ, ತುಪ್ಪ ಮಯವಾಗಿರುವ ಮೈಸೂರ್ ಪಾಕ್, ಕಾಜು ಬರ್ಫಿ, ಗುಲಾಬ್ ಜಾಮೂನ್‌ಗಳು, ಜಿಲೇಬಿ (Jilebi) , ಲಡ್ಡುಗಳು ಆಹಾ, ಈ ಸ್ವೀಟ್​ಗಳ ಲಿಸ್ಟ್​ ಹೇಳುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ. ಆದರೆ ಎಲ್ಲಾ ಸ್ವೀಟ್​​ಗಳು ಎಲ್ಲಾ ಕಡೆ ಚನ್ನಾಗಿ ಸಿಗುವುದಿಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ. ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಸ್ವೀಟ್​ ಅಂಗಡಿಗಳಿಗೇನು ಕಡಿಮೆ ಇಲ್ಲ. ಇಲ್ಲಿನ ಸ್ವೀಟ್​ ಅಂಗಡಿಗಳಲ್ಲಿ ಬೆಸ್ಟ್ ಅಂಗಡಿಗಳು ಯಾವುವು ಎಂಬ ಲಿಸ್ಟ್ ಇಲ್ಲಿದೆ.  

ಕಾಂತಿ ಸ್ವೀಟ್ಸ್​, ಬಹು ಮಳಿಗೆಗಳಿದೆ

ಬೆಂಗಳೂರಿನಲ್ಲಿರುವ ಉತ್ತಮ ಸ್ವೀಟ್​ ಅಂಗಡಿ ಎಂದರೆ ಕಾಂತಿ ಸ್ವೀಟ್ಸ್​ ಎನ್ನುತ್ತಾರೆ. ಹಬ್ಬದ ಸಮಯದಲ್ಲಿ ಇಲ್ಲಿ ವಿಭಿನ್ನ ರೀತಿಯ ಸಿಹಿ ತಿಂಡಿಗಳು ಲಭ್ಯವಿರುತ್ತದೆ. ಅವರ ಬಳಿ ಅಂಜೀರ್ ಡ್ರೈ ಫ್ರೂಟ್ ರೋಲ್, ಕಾಜು ಬಾದಮ್ ಫೂಲ್, ಬೂಂದಿ ಲಡ್ಡೂಸ್ ಮತ್ತು ಅಂಗೂರ್ ಗುಲಾಬ್ ಜಾಮೂನ್ ಮುಂತಾದ ಅದ್ಭುತವಾದ ಸ್ವೀಟ್ಸ್​ ಗಳು ಲಭ್ಯವಿದ್ದು, ಒಮ್ಮೆಯಾದರೂ ನೀವು ಇಲ್ಲಿಗೆ ಭೇಟಿ ನೀಡಲೇಬೇಕು.

ವಿಳಾಸ: ನಂ. 65, ನೆಲ ಮಹಡಿ, ಬ್ಲೂಮೂನ್ ಕಾಂಪ್ಲೆಕ್ಸ್ ಎಮ್ ಜಿ ರಸ್ತೆ ಮೆಟ್ರೋ ಸ್ಟೇಷನ್ ಮಹಾತ್ಮ ಗಾಂಧಿ ರಸ್ತೆ, ದೀಪಂ ಸಿಲ್ಕ್ಸ್ ಪಕ್ಕದಲ್ಲಿ, ಬೆಂಗಳೂರು, ಕರ್ನಾಟಕ 560001. ಇದಲ್ಲದೇ ಇನ್ನೂ ಹಲವಾರು ಮಳಿಗೆಗಳಿವೆ.

ಸಮಯ: ಬೆಳಗ್ಗೆ 9 ರಿಂದ ರಾತ್ರಿ 10:30

ಪೂನಂ ಸ್ವೀಟ್ಸ್, ಬನಶಂಕರಿ

ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬೆಂಗಳೂರಿನಲ್ಲಿ ಬಜೆಟ್ ಶಾಪಿಂಗ್‌ಗೆ ಉತ್ತಮ ಸ್ಥಳ ಎನ್ನಲಾಗಿದೆ. ಇದನ್ನ ನಿಜವಾದ ಬೆಂಗಳೂರು ಸಂಸ್ಕೃತಿಯ ಪ್ರತಿಬಿಂಬ ಎನ್ನಬಹುದು. ಬನಶಂಕರಿ ಬಿಡಿಎ ಕಾಂಪ್ಲೆಕ್ಸ್‌ನಲ್ಲಿ ಹೆಚ್ಚು ಪ್ರಸಿದ್ಧವಾಗಿರುವುದು ಪೂನಂ ಸ್ವೀಟ್ಸ್. ಇಲ್ಲಿ ಹೊಸದಾಗಿ ತಯಾರಿಸಿದ ಬಿಸಿಯಾದ ಸಮೋಸಾ, ಕಚೋರಿ, ಜಿಲೇಬಿಯ ರುಚಿ ಅದ್ಭುತವಾಗಿರುತ್ತದೆ. ಇದು ಬೆಂಗಳೂರಿನ ಅತ್ಯುತ್ತಮ ಸಿಹಿತಿಂಡಿ ಅಂಗಡಿಗಳಲ್ಲಿ ಒಂದಾಗಿದೆ.

ವಿಳಾಸ: 43, ಬಿಡಿಎ ಕಾಂಪ್ಲೆಕ್ಸ್, 2ನೇ ಹಂತ, ಬನಶಂಕರಿ, ಬೆಂಗಳೂರು

ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 9:30 ರವರೆಗೆ

ಇದನ್ನೂ ಓದಿ: ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲು ಇಲ್ಲಿದೆ ಟಿಪ್ಸ್

ಸಂತಾನಂ ಸ್ವೀಟ್ಸ್, ಕಮರ್ಷಿಯಲ್ ಸ್ಟ್ರೀಟ್

ಕಮರ್ಷಿಯಲ್ ಸ್ಟ್ರೀಟ್‌ನ ಸಣ್ಣ ದಾರಿಗಳಲ್ಲಿರುವ ಉತ್ತಮವಾದ ಸ್ವೀಟ್​ ಅಂಗಡಿ ಎಂದರೆ ಸಂತಾನಂ ಸ್ವೀಟ್ಸ್. ಇದು ಬೆಂಗಳೂರಿನ ಹಳೆಯ ಮತ್ತು ಜನಪ್ರಿಯ ಸಿಹಿ ಅಂಗಡಿಯಾಗಿದೆ. ಇದು ಗರಿಗರಿಯಾದ ಮತ್ತು ರುಚಿಕರವಾಗಿರುವ ದಹಿ ಪಾಪ್ಡಿ ಚಾಟ್‌ನಂತಹ ಚಾಟ್ ಐಟಂಗಳಿಗೆ ಹೆಸರುವಾಸಿಯಾಗಿದೆ. ಚಾಟ್‌ನ ಹೊರತಾಗಿ ಇಲ್ಲಿ ರಸಭರಿತವಾದ, ಸಿಹಿಯಾದ ಗುಲಾಬ್ ಜಾಮೂನ್ ಅನ್ನು ನೀವು ಟ್ರೈ ಮಾಡಲೇಬೇಕು. ಇಲ್ಲಿ ತಯಾರಿಸಿದ ವಿವಿಧ ಹಾಲಿನ ಸಿಹಿತಿಂಡಿಗಳನ್ನು ಸಹ ಪ್ರಯತ್ನಿಸಬಹುದು.

ವಿಳಾಸ: 294, ನಾರಾಯಣ ಪಿಳ್ಳೈ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಬೆಂಗಳೂರು

ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ

ಬಂಚಾರಂ, ಕೋರಮಂಗಲ

ಕೋಲ್ಕತ್ತಾದ ಪ್ರಸಿದ್ಧ ಮಿಠಾಯಿ ಅಂಗಡಿ, ಬಾಂಚರಾಮಸ್ ಬೆಂಗಳೂರಿನ ಸುತ್ತಮುತ್ತ ಅನೇಕ ಔಟ್‌ಲೆಟ್​ಗಳನ್ನು ಹೊಂದಿದೆ. ಇಲ್ಲಿನ ಸಂದೇಶ ಅನ್ನು ನೀವು ಟ್ರೈ ಮಾಡಲೇಬೇಕು. ಅಲ್ಲದೇ ಇಲ್ಲಿನ ಕೆಲ ಸಿಹಿ ತಿಂಡಿಗಳು ನಿಜಕ್ಕೂ ಉತ್ತಮ ರುಚಿಯನ್ನು ಹೊಂದಿರುತ್ತದೆ. ಅಲ್ಲದೇ ಇಲ್ಲಿನ ಸ್ವೀಟ್​ಗಳನ್ನು ನೀವು ಉಡುಗೊರೆಯಾಗಿ ನೀಡಬಹುದು.

ವಿಳಾಸ: ಕೋರಮಂಗಲ 7ನೇ ಬ್ಲಾಕ್, ಕೋರಮಂಗಲ ಲೇಔಟ್, ಬೆಂಗಳೂರು, ಕರ್ನಾಟಕ 560030

ಸಮಯ: ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ

ತಾಜಾ ಮಿಠಾಯಿ, ಜೆಪಿ ನಗರ

ಬೆಂಗಾಲಿ ಚಮ್ಚಮ್, ಹಾಲಿನ ಕೇಕ್ಗಳು, ಡ್ರೈ ಫ್ರೂಟ್ ಲಡ್ಡೂಗಳು, ರಸಮಲೈ,  ಸೋನ್ ಪಾಪಡಿಗಳಂತಹ ತಾಜಾ ಸಿಹಿತಿಂಡಿಗಳನ್ನು ನೀವು ಇಲ್ಲಿ ಆಸ್ವಾಧಿಸಬಹುದು. ಇದು ನೀವು ಭೇಟಿ ನೀಡಲೇಬೇಕಾದ ಬೆಂಗಳೂರಿನ ಅತ್ಯುತ್ತಮ ಸಿಹಿತಿಂಡಿ ಅಂಗಡಿಗಳಲ್ಲಿ ಇದೂ ಒಂದಾಗಿದೆ.

ಇದನ್ನೂ ಓದಿ: ಹಬ್ಬದ ದಿನ ಹೀಗೆ ಮೇಕಪ್ ಮಾಡಿದ್ರೆ ಎಷ್ಟು ಚಂದ ನೋಡಿ

ವಿಳಾಸ: 954, 24 ನೇ ಕ್ರಾಸ್, 2 ನೇ ಹಂತ, ಜೆಪಿ ನಗರ, ಬೆಂಗಳೂರು

ಸಮಯ: ಬೆಳಿಗ್ಗೆ 8:30 ರಿಂದ ರಾತ್ರಿ 10 ರವರೆಗೆ
Published by:Sandhya M
First published: