Sweet Shops: ಜಯನಗರದ ಬೆಸ್ಟ್ ಸ್ವೀಟ್ಸ್​ ಶಾಪ್​ಗಳ ಲಿಸ್ಟ್ ಇಲ್ಲಿದೆ - ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ

Near Me: ಅದರಲ್ಲೂ ನೀವು ಜಯನಗರದ ನಿವಾಸಿಗಳಾಗಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಬೆಂಗಳೂರಿನ ಜಯನಗರದಲ್ಲಿರುವ ಅತ್ಯುತ್ತಮ ಸಿಹಿ ಅಂಗಡಿಗಳ ಲಿಸ್ಟ್ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ಹಬ್ಬದ ಉತ್ತಮ ಭಾಗವೆಂದರೆ ಕ್ರ್ಯಾಕರ್ಸ್, ಆಚರಣೆ (Celebration), ಕುಟುಂಬದವರ ಜೊತೆ ಬೆರೆಯುವುದು ಮಾತ್ರ ಅಲ್ಲ. ಸ್ವೀಟ್ಸ್ (Sweets) ಕೂಡ ಒಂದು ಪ್ರಮುಖ ಭಾಗ. ಸಿರಪಿ ರಸಗುಲ್ಲಾಗಳು, ತುಪ್ಪದ ಮೈಸೂರ್ ಪಾಕ್, ಎಲ್ಲರ ಮೆಚ್ಚಿನ ಕಾಜು ಬರ್ಫಿ, ರಸಭರಿತವಾದ ಗುಲಾಬ್ ಜಾಮೂನ್‌ಗಳು, ಗರಿಗರಿಯಾದ ಜೆಲಾಬಿಸ್, ಸವಿಯಾದ ಲಡ್ಡೂಗಳು ಯಾರ ಬಾಯಲ್ಲಿ ನೀರೂರಿಸಬಹುದು. ನೀವು ಸಹ ಸಿಹಿ ಪ್ರಿಯರಾಗಿದ್ದರೆ, ಸಿಹಿ ತಿನ್ನಲು ಒಂದು ಕಾರಣ ಹುಡುಕುತ್ತಿರಿ. ಈಗ ನೀವು ತಿನ್ನಲು ಅಥವಾ ಉಡುಗರೆ (Gift) ನೀಡಲು ಸಿಹಿ ಹುಡುಕುತ್ತಿದ್ದರೆ, ಅದರಲ್ಲೂ ನೀವು ಜಯನಗರದ ನಿವಾಸಿಗಳಾಗಿದ್ದರೆ ನಾವು ನಿಮಗೆ ಸಹಾಯ ಮಾಡುತ್ತೇವೆ. ಬೆಂಗಳೂರಿನ ಜಯನಗರದಲ್ಲಿರುವ ಅತ್ಯುತ್ತಮ ಸಿಹಿ ಅಂಗಡಿಗಳ ಲಿಸ್ಟ್ ಇಲ್ಲಿದೆ.

ಕಾಂತಿ ಸ್ವೀಟ್ಸ್
ಬೆಂಗಳೂರಿನಲ್ಲಿರುವ ಉತ್ತಮ ನೆರೆಹೊರೆಯ ಸಿಹಿತಿಂಡಿ ಅಂಗಡಿ ಎಂದರೆ ಕಾಂತಿ ಸ್ವೀಟ್ಸ್ ಎನ್ನುತ್ತಾರೆ. ಕಾಂತಿ ಸ್ವೀಟ್ಸ್ ಈ ಹಬ್ಬ ಅಥವಾ ಯಾವುದೇ ಶುಭ ಸಮಾರಂಭಕ್ಕೆ ಸಿಹಿ ತರಲು ನಿಮಗೆ ಸೂಕ್ತವಾದ ಸ್ಥಳವಾಗಿದೆ. ಅವರ ಬಳಿ ಅಂಜೀರ್ ಡ್ರೈ ಫ್ರೂಟ್ ರೋಲ್, ಕಾಜು ಬಾದಮ್ ಫೂಲ್, ಬೂಂದಿ ಲಡ್ಡೂಸ್ ಮತ್ತು ಅಂಗೂರ್ ಗುಲಾಬ್ ಜಾಮೂನ್ ಮುಂತಾದ ಅದ್ಭುತವಾದ ಸಿಹಿತಿಂಡಿಗಳಿವೆ, ಅವು ತುಂಬಾ ರುಚಿಕರವಾಗಿದೆ. ಹಾಗಾಗಿ ಸ್ವೀಟ್ಸ್ಶಾಪಿಂಗ್‌ಗಾಗಿ ನೀವು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು.

ವಿಳಾಸ: 162/158-1, 6ನೇ ಮುಖ್ಯ ರಸ್ತೆ, 4ನೇ ಬ್ಲಾಕ್, ಜಯನಗರ, ಬೆಂಗಳೂರು, ಕರ್ನಾಟಕ 560011
ಮೊಬೈಲ್ ನಂಬರ್: 080 2296 0632
ಸಮಯ: ಬೆಳಗ್ಗೆ 9 ಗಂಟೆಯಿಂದ ರಾತ್ರಿ 10

ಆನಂದ್ ಸ್ವೀಟ್ಸ್
ಈ ಅಂಗಡಿಯ ಪ್ರಸಿದ್ಧ ಜಲೇಬಿಗಳ ಬಗ್ಗೆ ನೀವು ಖಂಡಿತವಾಗಿಯೂ ಕೇಳಿರಬೇಕು. ಆನಂದ್ ಸ್ವೀಟ್ಸ್ ಮತ್ತು ಸವರಿಯಲ್ಲಿ ನಿಮ್ಮ ಕಣ್ಣುಗಳ ಮುಂದೆಯೇ ಅತಿ ತೆಳುವಾದ ಗರಿಗರಿಯಾದ ಜಿಲೇಬಿಯನ್ನು ತಯಾರಿಸಲಾಗುತ್ತದೆ. ಪಿಸ್ತಾ ಮತ್ತು ರೋಸ್ ವಾಟರ್‌ನಿಂದ ತಯಾರಿಸಿದ ಅವರ ಬಕ್ಲಾವಾವನ್ನು ಇಲ್ಲಿ ಒಮ್ಮೆ ಟ್ರೈ ಮಾಡಲೇಬೇಕು. ಹೊಸದಾಗಿ ತಯಾರಿಸಿದ ಸಿಹಿತಿಂಡಿಗಳನ್ನು ಅನ್ವೇಷಿಸಲು ಇದು ಸೂಕ್ತವಾದ ಸ್ಥಳ.

ವಿಳಾಸ: ಸಂಖ್ಯೆ: 1A/39, ಅಂಗಡಿ ಸಂಖ್ಯೆ: 4 & 5, 27 ನೇ ಅಡ್ಡ ರಸ್ತೆ, ಹೋಟೆಲ್ ನಂದಿನಿ ಹತ್ತಿರ, ಜಯ ನಗರ 1 ನೇ ಬ್ಲಾಕ್, 4 ನೇ ಬ್ಲಾಕ್, ಬೆಂಗಳೂರು, ಕರ್ನಾಟಕ 560011
ಸಮಯ: ಬೆಳಗ್ಗೆ 9 ಗಂಟೆಯಿಂದ ರಾತ್ರಿ 10
ಮೊಬೈಲ್ ನಂಬರ್: 093531 35383

ಜಲರಾಮ್ ಸ್ವೀಟ್ಸ್
ಕೋಲ್ಕತ್ತಾದ ಪ್ರಸಿದ್ಧ ಮಿಠಾಯಿ ಅಂಗಡಿಗಳಲ್ಲಿ ಸಿಗುವ ರುಚಿಕರ ಸ್ವೀಟ್ಸ್ಗಳನ್ನು ನೀವು ಬೆಂಗಳೂರಿನ ಸುತ್ತಮುತ್ತ ಹುಡುಕುತ್ತಿದ್ದಾರೆ, ಇದು ಬೆಸ್ಟ್ ಆಯ್ಕೆ ಎನ್ನಬಹುದು. ಇಲ್ಲಿನ ಸೋಂದೆಶ್, ಕಾಜು ಬರ್ಫಿಯನ್ನು ನಿಜಕ್ಕೂ ಟ್ರೈ ಮಾಡಲೇಬೇಕು. ಸೆಲೆಬ್ರೇಷನ್, ಹ್ಯಾಪಿನೆಸ್ ಮತ್ತು ಫೆಸ್ಟಿವಲ್ ಬಾಕ್ಸ್‌ಗಳಂತಹ ಬಗೆಬಗೆಯ ಸಿಹಿತಿಂಡಿಗಳ ಉಡುಗೊರೆ ಪ್ಯಾಕೇಜ್ ಅನ್ನು ಸಹ ಈ ಅಂಗಡಿ ನೀಡುತ್ತದೆ.

ವಿಳಾಸ: ಅಂಗಡಿ ಸಂಖ್ಯೆ, T2F, 26ನೇ ಅಡ್ಡ ರಸ್ತೆ, ಡ್ರೀಮ್ ಬುಕ್ ಹೌಸ್ ಜೈನಗರ, ಜೈನಗರ 3ನೇ ಬ್ಲಾಕ್, ಜೈನಗರ, ಬೆಂಗಳೂರು, ಕರ್ನಾಟಕ 570095
ಸಮಯ: ಬೆಳಗ್ಗೆ 8.30 ರಿಂದ ರಾತ್ರಿ 9 ಗಂಟೆ
ಮೊಬೈಲ್ ನಂಬರ್: 080 2244 7956

ಇದನ್ನೂ ಓದಿ: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ

ಆರ್ಯನ್ ಸ್ವೀಟ್ಸ್
ಬೆಂಗಳೂರಿನಲ್ಲಿ ಫೇವರೇಟ್ ಸ್ವೀಟ್ ಅಂಗಡಿ ಯಾವುದು ಎಂದು ಯಾರನ್ನಾದರೂ ಕೇಳಿದರೆ, ಅದರಲ್ಲೂ ಜಯನಗರ ನಿವಾಸಿಗಳನ್ನು ಕೇಳಿದರೆ, ಹೇಳೋದು ಆರ್ಯನ್ ಸ್ವೀಟ್ಸ್ ಎನ್ನುತ್ತಾರೆ. ಡ್ರೈ ಫ್ರೂಟ್ ಖೋವಾ, ಗರಿಗರಿಯಾದ ಗೋಲ್ಡನ್ ಸ್ವೀಟ್ ಸೂಪರ್ ರಿಚ್ ಮತ್ತು ಟೇಸ್ಟಿಯಾಗಿದೆ. ಇದರ ಹೊರತಾಗಿ ನೀವು ಇಲ್ಲಿ ಆರ್ಯನ್ ಸ್ವೀಟ್ ಸೆಂಟರ್‌ನಲ್ಲಿ ಪ್ರಯತ್ನಿಸಲೇಬೇಕಾದ ಸಾಕಷ್ಟು ಇತರ ರುಚಿಕರವಾದ ತಾಜಾ ಹಾಲಿನ ಸಿಹಿತಿಂಡಿಗಳಿವೆ, ಇದು ಖಂಡಿತವಾಗಿಯೂ ನೀವು ಭೇಟಿ ನೀಡಲೇಬೇಕಾದ ಜಯನಗರದ ಅತ್ಯುತ್ತಮ ಸಿಹಿ ಅಂಗಡಿಗಳಲ್ಲಿ ಒಂದಾಗಿದೆ.

ವಿಳಾಸ: ಬಿಟಿಬಿ ಪ್ರದೇಶ, 4ನೇ ಟಿ ಬ್ಲಾಕ್ ಪೂರ್ವ, ಜಯನಗರ, ಬೆಂಗಳೂ
ಸಮಯ: ಬೆಳಗ್ಗೆ 10 ರಿಂದ ರಾತ್ರಿ 11
ಮೊಬೈಲ್ ನಂಬರ್: 099867 67874

ಮಿಶ್ರ ಪೇಡಾ
ನೀವು ದಕ್ಷಿಣ ಬೆಂಗಳೂರಿನ ಜಯನಗರದ ಸುತ್ತಲೂ ಶಾಪಿಂಗ್ ಮಾಡುತ್ತಿರುವಾಗ ಜಯನಗರ 4 ನೇ ಬ್ಲಾಕ್‌ನ ಹೃದಯಭಾಗದಲ್ಲಿರುವ ಮಿಶ್ರ ಪೇಡಾ ಅಂಗಡಿಗೆ ಭೇಟಿ ನೀಡದೇ ವಾಪಸ್ ಬರಬೇಡಿ. ಧಾರವಾಡ ಪೇಡಾಗೆ ಹೆಸರುವಾಸಿಯಾಗಿರುವ ಈ ಸ್ಥಳ, ಇತರ ವಿಭಿನ್ನ ರೀತಿಯ ಸ್ವೀಟ್ಗಳನ್ನು ಸಹ ಹೊಂದಿದೆ.

ಇದನ್ನೂ ಓದಿ: ರಾಜರಾಜೇಶ್ವರಿ ನಗರದ ಕಡೆ ಹೋದ್ರೆ ಈ ರೆಸ್ಟೋರೆಂಟ್ ಗಳಿಗೆ ಹೋಗೋದು ಮಿಸ್ ಮಾಡ್ಬೇಡಿ

ವಿಳಾಸ: 1/2, 5ನೇ ಕ್ರಾಸ್, ಜನತಾ ಬಜಾರ್ ಜಯನಗರ ಪಾಪ್‌ಕಾರ್ನ್ ಎದುರು, 2ನೇ ಬ್ಲಾಕ್ ಈಸ್ಟ್, 5ನೇ ಬ್ಲಾಕ್, ಜೈಶಂಕರ್, ಬೆಂಗಳೂರು, ಕರ್ನಾಟಕ
ಸಮಯ: ಬೆಳಗ್ಗೆ 8.30 ರಿಂದ ರಾತ್ರಿ 9 ಗಂಟೆ
Published by:Sandhya M
First published: