Sweet Shops Near Me: ಬೆಂಗಳೂರಲ್ಲಿ ನಿಮ್ಮ ಮನೆ ಬಳಿಯೇ ಇರೋ ಈ ಅಂಗಡಿಗಳಲ್ಲಿ ಸಖತ್ ಸ್ವೀಟ್ಸ್ ಸಿಗುತ್ತಂತೆ ನೋಡಿ

Sweet Shops Near Me in Bengaluru: ಬಾಯಲ್ಲಿ ನೀರೂರಿಸುವ ಭಾರತೀಯ ಸ್ವೀಟ್ಸ್​ ಎಲ್ಲಾ ಹಬ್ಬದ ಭಾಗವಾಗಿದೆ. ಈಗ ಕೃಷ್ಣ ಜನ್ಮಾಷ್ಟಮಿ ಹತ್ತಿರ ಇದೆ. ಈ ಹಬ್ಬಕ್ಕೆ ಸಿಹಿ ಇಲ್ಲದಿದ್ದರೆ ಹೇಗೆ ತಾನೆ ಸಾಧ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯುಗಾದಿಯಿಂದ (Ugadi) ದೀಪಾವಳಿಯವರೆಗೆ (Deepavali), ಈಸ್ಟರ್ ಮತ್ತು ಈದ್ ವರೆಗೆ, ಭಾರತದ (India) ಯಾವುದೇ ಹಬ್ಬವೂ (Festival) ಸ್ವೀಟ್​ (sweet) ಇಲ್ಲದೇ ಆಗುವುದಿಲ್ಲ. ಪ್ರತಿ ಆಚರಣೆಯನ್ನು (Celebration) ಹೆಚ್ಚು ಸಿಹಿಯಾಗಿಸಲು ಸಾಕಷ್ಟು ಮಿಠಾಯಿ ಅಗತ್ಯವಿದೆ. ಬಾಯಲ್ಲಿ ನೀರೂರಿಸುವ ಭಾರತೀಯ ಸ್ವೀಟ್ಸ್​ ಎಲ್ಲಾ ಹಬ್ಬದ ಭಾಗವಾಗಿದೆ. ಈಗ ಕೃಷ್ಣ ಜನ್ಮಾಷ್ಟಮಿ ಹತ್ತಿರ ಇದೆ. ಈ ಹಬ್ಬಕ್ಕೆ ಸಿಹಿ ಇಲ್ಲದಿದ್ದರೆ ಹೇಗೆ ತಾನೆ ಸಾಧ್ಯ. ಸಾಂಪ್ರದಾಯಿಕ ಸಿಹಿತಿಂಡಿಗಳಿಂದ ಹಿಡಿದು ಎಲ್ಲಾ ವಿಧದ ಸ್ವೀಟ್​ಗಳು ಲಭ್ಯವಿರುವ ಬೆಂಗಳೂರಿನ ಟಾಪ್ ಸ್ವೀಟ್​ ಶಾಪ್​ಗಳ (Near Me Sweets Shops) ಲಿಸ್ಟ್ ಇಲ್ಲಿದೆ.  

ಕಾರ್ತಿಕ್​ ಮಿಠಾಯಿ ಶಾಪ್, ಇಂದಿರಾ ನಗರ್, ಬೆಂಗಳೂರು

ಸುಮಾರು ವರ್ಷಗಳಿಂದ, ಕಾರ್ತಿಕ್‌ ಮಿಠಾಯಿ ಶಾಪ್​ ನಗರದಲ್ಲಿ ಭಾರತೀಯ ಸಿಹಿತಿಂಡಿಗಳಿಗೆ ಹೆಸರುವಾಸಿಯಾಗಿದೆ. ಅವರ ಮೂತಿಚೂರ್ ಲಡ್ಡೂಗಳು ಮತ್ತು ಗರಿಗರಿಯಾದ ಜಿಲೇಬಿಗಳು ಎಲ್ಲರ ಬಾಯಲ್ಲೂ ನೀರೂರಿಸುತ್ತವೆ. ಇಲ್ಲಿ ಪಾನಿ ಪುರಿಯಿಂದ ರಾಜ್ ಕಚೋರಿಯವರೆಗೆ ಚಾಟ್‌ಗಳನ್ನು ಸಹ ಲಭ್ಯವಿದೆ. ಗುಲಾಬ್ ಜಾಮೂನ್‌ನಿಂದ ಕಾಜು ಕಟ್ಲಿಯವರೆಗಿನ ಎಲ್ಲಾ ಕ್ಲಾಸಿಕ್‌ ಸ್ವೀಟ್​ಗಳು ಸಹ ಇಲ್ಲಿ ಸಿಗುತ್ತದೆ. ಬೆಳಗ್ಗೆ 9 ರಿಂದ ರಾತ್ರಿ 9:30 ರವರೆಗೆ ತೆರೆದಿರುತ್ತದೆ.

ವಿಳಾಸ: ಶಾಲಿನಿ ಕಾಂಪ್ಲೆಕ್ಸ್, 322, CMH ರಸ್ತೆ, ಇಂದಿರಾನಗರ, ಬೆಂಗಳೂರು

ಸಮಯ: ಬೆಳಗ್ಗೆ 9 ರಿಂದ ರಾತ್ರಿ 9:30

ಮೊಬೈಲ್​ ನಂಬರ್: +918041264166

ಕೆಸಿ ದಾಸ್, ಅಶೋಕ್ ನಗರ, ಬೆಂಗಳೂರು

ಬೆಂಗಾಲ್‌ನ ಎಲ್ಲಾ ಕ್ಲಾಸಿಕ್‌ ಸ್ವೀಟ್​ಗಳು ಅದೇ ರುಚಿಯಲ್ಲಿ ಬೆಂಗಳೂರಿನಲ್ಲಿ ಸಿಗುತ್ತದೆ ಎಂದರೆ ಅದರ ಖುಷಿಯೇ ಬೇರೆ. ಕೆಸಿ ದಾಸ್ ಶಾಪ್ ಕೆಲವೇ ವರ್ಷಗಳಲ್ಲಿ ಸಾಕಷ್ಟು ಗ್ರಾಹಕರನ್ನು ಗಳಿಸಿದ್ದಾರೆ, ರಸಗೊಲ್ಲಾ ಮತ್ತು ರಸಮಲೈಗಳ ಸೃಷ್ಟಿಕರ್ತರು ಎನ್ನಬಹುದು. ಇಲ್ಲಿ ಒಮ್ಮೆ ಇವುಗಳನ್ನು ತಿಂದರೆ ಪದೇ ಪದೇ ತಿನ್ನದೇ ಇರುವುದಿಲ್ಲ. ಬರ್ಫಿಗಳು, ಖಿರ್ ಕಧಮ್ ಮತ್ತು ಸೊಂದೇಶ್​ ಅನ್ನು ಸಹ ಇಲ್ಲಿ ಮಿಸ್​ ಮಾಡಬಾರದು.

ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ ಹಬ್ಬ ಯಾವಾಗ? ಪೂಜೆ ಮುಹೂರ್ತ, ವಿಧಿ-ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ

ವಿಳಾಸ: 295, 17ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು

ಮೊಬೈಲ್ ನಂಬರ್: +918023469192ವಿಳಾಸ: 38, ಚರ್ಚ್ ಸ್ಟ್ರೀಟ್, ಅಶೋಕ್ ನಗರ, ಬೆಂಗಳೂರು

ಮೊಬೈಲ್ ನಂಬರ್: +918025587003

ಸಮಯ: ಬೆಳಗ್ಗೆ 10 ರಿಂದ ರಾತ್ರಿ 9:30

ಭಗತ್ರಮ್ ಸ್ವೀಟ್ಸ್, ಶಿವಾಜಿ ನಗರ, ಬೆಂಗಳೂರು

ಕಮರ್ಷಿಯಲ್ ಸ್ಟ್ರೀಟ್‌ನಲ್ಲಿರುವ ಈ ಪ್ರಸಿದ್ಧ ಸ್ವೀಟ್​ ಅಂಗಡಿಯು ತಮ್ಮ ಪ್ರಸಿದ್ಧವಾದ ಗುಲಾಬ್ ಜಾಮೂನ್‌ಗಳು, ರಸಗುಲ್ಲಾಗಳು ಮತ್ತು ಜಿಲೇಬಿಗಳೊಂದಿಗೆ ವರ್ಷಗಳಿಂದ ಜನರಿಗೆ ಅದ್ಭುತ ರುಚಿ ನೀಡುತ್ತಿದೆ. ದಿನದಿಂದ ದಿನಕ್ಕೆ ಖ್ಯಾತಿಯನ್ನು ಬೆಳೆಸಿಕೊಳ್ಳುತ್ತಿರುವ ಈ ಸ್ಥಳವು ಈಗ ನಗರದಲ್ಲಿ ಒಂದು ಹೆಗ್ಗುರುತಾಗಿದೆ, ಇದು ಬೆಳಗ್ಗೆ 10:30 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ ಮತ್ತು ಸ್ವಿಗ್ಗಿ ಮತ್ತು ಡೆಂಜೊದಲ್ಲಿ ಸಹ ಲಭ್ಯವಿದೆ.

ವಿಳಾಸ: 174/1/14, ಕಮರ್ಷಿಯಲ್ ಸ್ಟ್ರೀಟ್, ಟಾಸ್ಕರ್ ಟೌನ್, ಶಿವಾಜಿ ನಗರ, ಬೆಂಗಳೂರು

ಸಮಯ: ಬೆಳಗ್ಗೆ 10:30 ರಿಂದ ರಾತ್ರಿ 9

ಮೊಬೈಲ್ ನಂಬರ್: +919980116903

ಎ2ಬಿ - ಅಡ್ಯಾರ್ ಆನಂದ ಭವನ, ಪಾಂಡುರಂಗ ನಗರ್, ಬೆಂಗಳೂರು

ಉತ್ತಮ ಹಳೆಯ A2B ಚೆನ್ನೈ ಮೂಲದ ಈ ಶಾಪ್​ ನಿಮಗೆ ಸ್ವೀಟ್ಸ್​ ಮಾತ್ರವಲ್ಲದೇ ತಿಂಡಿ ಹಾಗೂ ಊಟವನ್ನು ಸಹ ನೀಡುತ್ತದೆ. ಅಂಗಡಿಯು ಹಲವು ವರ್ಷಗಳಿಂದ ಶಾಖೆಗಳನ್ನು ಹೊಂದಿದೆ ಮತ್ತು ಇದೀಗ ಬೆಂಗಳೂರಿನಲ್ಲಿ 20 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದೆ.

ವಿಳಾಸ: 9 ಹೆಚ್​ಎಸ್​ಬಿಸಿ ಬ್ಯಾಂಕ್ ಎದುರು, ಬನ್ನೇರಕಟ್ಟಾ ರಸ್ತೆ, ಪಾಂಡುರಂಗ ನಗರ, ಬೆಂಗಳೂರು

ಸಮಯ: ಬೆಳಗ್ಗೆ 10 ರಿಂದ ರಾತ್ರಿ 11.30

ಮೊಬೈಲ್ ನಂಬರ್: +917550004734

 ಶ್ರೀ ಕೃಷ್ಣ ಸ್ವೀಟ್ಸ್, ಮಲ್ಲೇಶ್ವರಂ, ಬೆಂಗಳೂರು

ಇಲ್ಲಿನ ಮೈಸೂರ್ ಪಾಕ್‌ ಅನ್ನು ಒಮ್ಮೆ ತಿಂದರೆ ಬೇರೆ ಎಲ್ಲೂ ತಿನ್ನುವುದಿಲ್ಲ. ವಿವಿಧ ಪೇಡಾಗಳು, ತುಪ್ಪದಿಂದ ಮಾಡಿದ ಸ್ವೀಟ್​ಗಳು  ಹಾಲಿನ ಕೇಕ್ಗಳು, ಡ್ರೈ ಫ್ರೂಟ್ ಲಡ್ಡೂಗಳು, ರಸಮಲೈ,  ಸೋನ್ ಪಾಪಡಿಗಳಂತಹ ತಾಜಾ ಸಿಹಿತಿಂಡಿಗಳನ್ನು ನೀವು ಮಿಸ್​ ಮಾಡಿಕೊಳ್ಳಬಾರದು.

ಇದನ್ನೂ ಓದಿ: ಕೃಷ್ಣನಿಗೆ ಬೆಣ್ಣೆ ಅಂದ್ರೆ ಯಾಕ್ ಅಷ್ಟು ಇಷ್ಟ? ಅದಕ್ಕೂ ಒಂದು ಮಹತ್ವವಿದೆಯಂತೆ

ವಿಳಾಸ: 51, 7ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು

ಸಮಯ: ಬೆಳಗ್ಗೆ 9.30 ರಿಂದ ರಾತ್ರಿ 10.00

ಮೊಬೈಲ್ ನಂಬರ್: +918023463582
Published by:Sandhya M
First published: