Honeymoon Places: ಬೇಸಿಗೆಯಲ್ಲಿ ಈ ತಂಪಾದ ಸ್ಥಳಗಳಿಗೆ ಹನಿಮೂನ್​ ಹೋಗಿ, ಎಂಜಾಯ್ ಮಾಡಿ

Travel Places: ಪೂರ್ವ ಹಿಮಾಲಯದಲ್ಲಿ ಮಧುಚಂದ್ರವನ್ನು ಕಳೆಯಲು ಇದಕ್ಕಿಂದ ಉತ್ತಮ ಜಾಗ ಬೇರೊಂದಿಲ್ಲ. ಅಲ್ಲಿರುವ ಬ್ರಿಟೀಷರ ಕಾಲದ ಪಾರಂಪರಿಕ ಕಟ್ಟಡಗಳು ನಿಮ್ಮನ್ನು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಕೊಂಡೊಯ್ಯುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಳಿಗಾಲದಲ್ಲಿ (Winter) ಮದುವೆಯಾಗಲು (Wedding)  ಯಾರಿಗೆ ಇಷ್ಟವಿಲ್ಲ ಹೇಳಿ? ಬಹಳಷ್ಟು ಮಂದಿ ಅದಕ್ಕಾಗಿ ಸರ್ವ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಪ್ರತಿಯೊಬ್ಬರಿಗೂ ಅಂತಹ ಅದೃಷ್ಟ ಸಿಗಬೇಕಲ್ಲ. ಹಾಗಂತ, ಬೇಸಿಗೆಯಲ್ಲಿ (Summer)  ಮದುವೆಯಾದರೆ, ನೀವು ಮಧುಚಂದ್ರದ (Honeymoon) ಕ್ಷಣಗಳನ್ನು ತಂಪಾದ ಹವಾಮಾನದಲ್ಲಿ ಕಳೆಯಲು ಸಾಧ್ಯವಿಲ್ಲ ಎಂದು ಬೇಸರ ಪಟ್ಟುಕೊಳ್ಳಬೇಕಿಲ್ಲ. ತಣ್ಣನೆಯ ಸ್ಥಾನಗಳನ್ನು ಹುಡುಕಿಕೊಂಡು ವಿದೇಶ ಪ್ರವಾಸಕ್ಕೆ ಹೋಗಬೇಕಿಲ್ಲ. ಬೇಸಿಗೆಯಲ್ಲೂ ಮೈಗೆ ತಂಪು, ಮನಸ್ಸಿಗೆ ಹಿತ ನೀಡುವ ಸಾಕಷ್ಟು ತಣ್ಣನೆಯ ವಾತಾವರಣವನ್ನು ಹೊಂದಿರುವ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿ ಇವೆ. ಬೇಸಿಗೆಯಲ್ಲಿ ಹನಿಮೂನ್​ ಹೋಗುವ ಯೋಚನೆ ನಿಮ್ಮದಾಗಿದ್ದರೆ, ಅದಕ್ಕೆ ಸೂಕ್ತವಾದ ಭಾರತದ ಕೆಲವು ತಂಪು ವಾತಾವರಣವುಳ್ಳ ಪ್ರವಾಸಿ ತಾಣಗಳ (Travel Places) ಮಾಹಿತಿ ಇಲ್ಲಿದೆ.

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ
ಇದು ಪ್ರಕೃತಿ ಭೂಮಿಯ ಮೇಲೆ ಸೃಷ್ಟಿಸಿದ ಸ್ವರ್ಗದಂತಿದೆ. ತಿಳಿ ನೀರಿನ ಸರೋವರಗಳು, ಹಚ್ಚ ಹಸಿರಿನ ಕಣಿವೆಗಳು ಮತ್ತು ಕಣ್ಣಿಗೆ ಮುದ ನೀಡುವ ಪ್ರಕೃತಿ ಸೌಂದರ್ಯದ ನೋಟಗಳು , ಹನಿಮೂನ್​ ಮಧುರ ನೆನಪುಗಳನ್ನು ತಮ್ಮದಾಗಿಸಿಕೊಳ್ಳಲು ಬಯಸುವ ಜೋಡಿಗಳಿಗೆ ಮೆಚ್ಚುಗೆಯಾಗುವುದರಲ್ಲಿ ಸಂಶಯವಿಲ್ಲ. ಬಾಲಿವುಡ್ ಸೇರಿದಂತೆ ಎಷ್ಟೋ ಭಾರತೀಯ ಸಿನಿಮಾಗಳ ಚಿತ್ರೀಕರಣ ಇಲ್ಲಿ ನಡೆದಿದೆ. ಈ ಸ್ಥಳದ ಸೊಬಗನ್ನು ವರ್ಣಿಸುವ ಹಾಡುಗಳನ್ನು ಕೂಡ ನೀವು ಸಿನಿಮಾಗಳಲ್ಲಿ ಕೇಳಿರಬಹುದು. ಹನಿಮೂನ್​ಗೆ ಹೋಗುವ ದಂಪತಿಗಳು ಶಿಕರಗಳಲ್ಲಿ (ಶ್ರೀನಗರದ ಸರೋವರಗಳಲ್ಲಿನ ಮರದ ದೋಣಿಗಳು) ಉಳಿದುಕೊಂಡರಂತೂ ಪ್ರವಾಸ ಇನ್ನೂ ಉಲ್ಲಾಸದಾಯಕವಾಗಿರುತ್ತದೆ.

ಶಿಮ್ಲಾ, ಹಿಮಾಚಲ ಪ್ರದೇಶ
ಶಿಮ್ಲಾ, ನವದಂಪತಿಗಳ ಪ್ರವಾಸಕ್ಕೆ ಅತ್ಯುತ್ತಮವಾದ ತಾಣ. ಇಲ್ಲಿನ ಹಳ್ಳಿಗಾಡು ಪ್ರದೇಶಗಳ ಮೋಡಿ, ವಸಹತುಶಾಹಿ ಕಾಲದ ಕಟ್ಟಡಗಳು, ಅಂಕುಡೊಂಕಾದ ರಸ್ತೆಗಳು, ತಂಪು ಹವಾಮಾನ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗಳ ಮನಸ್ಸಿಗೆ ಮುದ ನೀಡುತ್ತದೆ. ಬೇಸಿಗೆಯಲ್ಲಿ ಹನಿಮೂನ್​ ಹೋಗಲು ಇದು ಸೂಕ್ತ ಜಾಗ. ಜಾಖೂ ಪರ್ವತ, ನಲ್‍ಡೆಹ್ರಾ ಪೀಕ್, ದ ಸ್ಕ್ಯಾಂಡಲ್ ಪಾಯಿಂಟ್ ಮುಂತಾದವುಗಳನ್ನು ನೋಡಿಲ್ಲವೆಂದರೆ ಶಿಮ್ಲಾ ಪ್ರವಾಸ ಅಪೂರ್ಣವೆನಿಸುತ್ತದೆ.

ಇದನ್ನೂ ಓದಿ: ಹೈಟ್ ಕಮ್ಮಿ ಇದ್ದರೆ ಯಾವ ಬಣ್ಣದ ಬಟ್ಟೆ ಬೆಸ್ಟ್? ವ್ಯಕ್ತಿತ್ವವನ್ನೇ ಹೈಲೈಟ್ ಮಾಡುತ್ತೆ ಉಡುಪು

ಮೌಂಟ್ ಅಬು, ರಾಜಸ್ಥಾನ್
ಬೇಸಿಗೆಯ ಧಗೆಯಲ್ಲಿ ತಂಪನ್ನು ಬಯಸುತ್ತೀರಾದರೆ , ಹನಿಮೂನ್​ಗೆ ಮೌಂಟ್ ಅಬು ಹೇಳಿ ಮಾಡಿಸಿದಂತಿದೆ. ಈ ಸ್ಥಳ ರಸ್ತೆ ಮತ್ತು ರೈಲು ಮಾರ್ಗಗಳ ಉತ್ತಮ ಸಂಪರ್ಕ ಇರುವುದರಿಂದ, ಪ್ರವಾಸವನ್ನು ಆಯೋಜಿಸುವುದು ಕಷ್ಟದ ಸಂಗತಿಯಲ್ಲ. ಇದೊಂದು ಗಿರಿಧಾಮವಾಗಿದ್ದು, ಇಲ್ಲಿನ ನಕ್ಕಿ ಸರೋವರ ಮತ್ತು ಸನ್‍ಸೆಟ್ ಪಾಯಿಂಟ್ ಸೇರಿದಂತೆ, ವಿವಿಧ ದೇವಾಲಯಗಳು ಮತ್ತು ಅವುಗಳ ಸುಂದರ ವಾಸ್ತು ಶಿಲ್ಪಗಳು ಕಣ್ಮನ ಸೆಳೆಯುತ್ತವೆ.

ಔಲಿ, ಉತ್ತರಾಖಂಡ್
ಹಿಮಾಲಯದ ತಪ್ಪಲಿನ ರಾಜ್ಯದಲ್ಲಿರುವ ಈ ಪ್ರವಾಸಿ ತಾಣ ಚಳಿಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಔಲಿಯಲ್ಲಿ ಹನಿಮೂನ್ ಎಂದರೆ, ಮನಮೋಹಕ ಹವಾಮಾನ, ಸುದೀರ್ಘವಾದ ಪ್ರಕೃತಿ ನಡಿಗೆಗಳು, ಕ್ಯಾಂಪಿಂಗ್, ಟ್ರೆಕ್ಕಿಂಗ್ ಮತ್ತು ಕಣ್ಮನ ಸೆಳೆಯುವ ಸುಂದರ ನೋಟಗಳನ್ನು ಆಸ್ವಾದಿಸುವುದು.

ಊಟಿ, ತಮಿಳುನಾಡು
ಪ್ರಶಾಂತವಾದ ಮತ್ತು ಏಕಾಂತಕ್ಕೆ ಅವಕಾಶವಿರುವ ಸ್ಥಳಕ್ಕೆ ಹನಿಮೂನ್‍ಗೆ ಹೋಗಬೇಕೆಂಬ ಯೋಚನೆ ನಿಮಗಿದ್ದರೆ, ಊಟಿ ಅದಕ್ಕೆ ಸೂಕ್ತ ತಾಣ. ಈ ಜನಪ್ರಿಯ ಗಿರಿಧಾಮದಲ್ಲಿ ನಿಮಗೆ ಏಕಾಂತ ಸ್ಥಳಗಳಿಗೆ ಬರವಿಲ್ಲ. ಇಲ್ಲಿ ನಿಮ್ಮ ಸಂಗಾತಿಯೊಂದಿಗೆ ಬಹಳ ಕಾಲ ಅಡ್ಡಾಡಬಹುದು, ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚಿಸಬಹುದು ಮತ್ತು ತಮಿಳುನಾಡಿನ ಸುಂದರ ಬೆಟ್ಟಗಳ ಸೌಂದರ್ಯವನ್ನು ಸವಿಯಬಹುದು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡಯಾಗ್ನೋಸ್ಟಿಕ್ ಸೆಂಟರ್​ ಹುಡುಕುತ್ತಿದ್ರೆ ಇಲ್ಲಿದೆ ಲಿಸ್ಟ್

ಡಾರ್ಜಿಲಿಂಗ್, ಪಶ್ಚಿಮ ಬಂಗಾಳ
ಪೂರ್ವ ಹಿಮಾಲಯದಲ್ಲಿ ಹನಿಮೂನ್​ ಕಳೆಯಲು ಇದಕ್ಕಿಂದ ಉತ್ತಮ ಜಾಗ ಬೇರೊಂದಿಲ್ಲ. ಅಲ್ಲಿರುವ ಬ್ರಿಟೀಷರ ಕಾಲದ ಪಾರಂಪರಿಕ ಕಟ್ಟಡಗಳು ನಿಮ್ಮನ್ನು ಸ್ವಾತಂತ್ರ್ಯ ಪೂರ್ವದ ಕಾಲಕ್ಕೆ ಕೊಂಡೊಯ್ಯುತ್ತವೆ. ಹಾಗೆಯೇ ಇಲ್ಲಿ ಕಾಂಚನಚುಂಗಾ ಶಿಖರದ ಸೌಂದರ್ಯವನ್ನು ಸವಿಯಬಹುದು. ಮಧುಚಂದ್ರಕ್ಕೆ ಹೋಗುವ ದಂಪತಿಗೆ ಈ ತಾಣ ಸ್ವರ್ಗದಂತೆ ಭಾಸವಾಗುತ್ತದೆ.
Published by:Sandhya M
First published: