ಸೋಲೋ ಟ್ರಿಪ್ (Solo Trip) ಅನ್ನೋದು ಸದ್ಯ ಟ್ರೆಂಡ್ ನಲ್ಲಿರುವ ಪ್ರವಾಸದ ಪ್ರಕಾರಗಳಲ್ಲಿ ಒಂದಾಗಿದೆ. ಫ್ಯಾಮಿಲಿ, ಫ್ರೆಂಡ್ಸ್ (Family, Friends) ಜೊತೆ ಪ್ರವಾಸ ಹೋಗೋದು ಒಂದು ವಿಧವಾದರೆ ಒಬ್ಬರೇ ಟ್ರಿಪ್ (Trip) ಹೋಗಿ ಮನಸ್ಪೂರ್ತಿ ಎಂಜಾಯ್ (Enjoy) ಮಾಡ್ಕೊಂಡು ಬರೋದು ಮತ್ತೊಂದು ವಿಧ. ಯಾರದ್ದೂ ಒತ್ತಡವಿಲ್ಲದೇ ಮನಸ್ಸಿಗೆ ಹೇಗೆ ಬರುತ್ತೋ ಹಾಗೆ ಇದ್ದು ಸ್ಥಳಗಳನ್ನು ನೋಡಿ, ಓಡಾಡಿಕೊಂಡು ಬರೋದು ಒಂದು ಬೇರೆಯದೇ ಅನುಭವ ನೀಡುತ್ತದೆ. ಇತ್ತೀಚಿಗೆ ಸಾಕಷ್ಟು ಜನರು ಹೀಗೆ ಸೋಲೋ ಟ್ರಿಪ್ ಹೋಗ್ತಾರೆ.
ಅದರಲ್ಲೂ ಈಗ ಡಿಸೆಂಬರ್… ಬಹಳಷ್ಟು ಕಂಪನಿಗಳಿಗೆ ಇಯರ್ ಎಂಡ್ ಗೆ ಒಂದಿಷ್ಟು ರಜೆಗಳೂ ಇರುತ್ತವೆ. ಹಾಗಾಗಿ ನೀವೇನಾದರೂ ಒಬ್ಬರೇ ಟ್ರಿಪ್ ಹೋಗೋಕೆಂದು ಪ್ಲಾನ್ ಮಾಡ್ತಾ ಇದ್ರೆ ಇಲ್ಲೊಂದಿಷ್ಟು ಉತ್ತಮ ಪ್ರವಾಸಿ ತಾಣಗಳ ಪಟ್ಟಿ ಇದೆ.
ಲಾಂಡೂರ್-ಮಸ್ಸೂರಿ, ಉತ್ತರಾಖಂಡ:
ಈ ಬ್ರಿಟಿಷ್ ಕಾಲದ ಕಂಟೋನ್ಮೆಂಟ್ ಪಟ್ಟಣದಲ್ಲಿ ನೀವು ಸಾಕಷ್ಟು ಜಾಗಗಳಿಗೆ ಭೇಟಿ ನೀಡಬಹುದು. ಅಲ್ಲದೇ ಇದು ಚಿಕ್ಕದಾಗಿದ್ದು ನಿಮಗೆ ಅನ್ವೇಷಿಸಲು, ದಾರಿಗಳನ್ನು ಹುಡುಕಲು ಸುಲಭವಾಗುವಂತಿದೆ. ಅಂದಹಾಗೆ ನೀವು ರಸ್ಕಿನ್ ಬಾಂಡ್ ಅಭಿಮಾನಿಯೇ? ಹಾಗಿದ್ರೆ ಇದು ರಸ್ಕಿನ್ ಬಾಂಡ್ ರ ತವರು ಅನ್ನೋದನ್ನು ಹೊರತುಪಡಿಸಿಯೂ ಈ ಚಿಕ್ಕ ಪಟ್ಟಣ ಅವರ ಕಥೆಗಳಲ್ಲಿ ಏಕೆ ಅಷ್ಟು ದೊಡ್ಡದಾಗಿ ಅನ್ನೋದನ್ನು ನೀವು ತಿಳಿದುಕೊಳ್ಳಬಹುದು. ಇಲ್ಲಿ ಒಬ್ಬರೇ ಓಡಾಡುವಾಗ ನೀವು ಎಂಜಾಯ್ ಮಾಡೋದು ಖಂಡಿತ.
ಡಾರ್ಜಿಲಿಂಗ್, ಪಶ್ಚಿಮ ಬಂಗಾಳ: ಬ್ರಿಟಿಷರ ಕಾಲದ ಮತ್ತೊಂದು ಪಟ್ಟಣ ಡಾರ್ಜಿಲಿಂಗ್ ಯಾವಾಗಲೂ ಏಕಾಂಗಿ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿನ ಅಪ್ರತಿಮ ಚಹಾ ತೋಟಗಳಿಂದ ಹಿಡಿದು ಪಟ್ಟಣದಲ್ಲಿರುವ ಚಿಕ್ಕ ಕೆಫೆಗಳವರೆಗೆ ಈ ಗಿರಿಧಾಮ ಉತ್ಸಾಹದ ಚಿಲುಮೆಯಾಗಿದೆ.
ಹಂಪಿ, ಕರ್ನಾಟಕ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಹಂಪಿಯಲ್ಲಿ ಈಗಿರುವುದು ಅವಶೇಷಗಳಾದರೂ ಇದೊಂದು ಅದ್ಭುತವಾದ ಪ್ರವಾಸಿ ತಾಣ. ಬಂಡೆಗಲ್ಲುಗಳಿಂದ ತುಂಬಿದ್ದರೂ ಇದು ಛಾಯಾಗ್ರಾಹಕರ ಮತ್ತು ಇತಿಹಾಸ ಪ್ರೇಮಿಗಳ ಸ್ವರ್ಗವಾಗಿದೆ. ಇಲ್ಲಿ ನೀವು ತುಂಗಭದ್ರಾ ನದಿಯಲ್ಲಿ ಕೊರಾಕಲ್ ರೈಡ್ ಅನ್ನು ಟ್ರೈ ಮಾಡಬಹುದು. ಜೊತೆಗೆ ಸುಂದರವಾದ ಸೂರ್ಯಾಸ್ತವನ್ನು ಆನಂದಿಸಬಹುದು.
ಉದಯಪುರ, ರಾಜಸ್ಥಾನ: ಉದಯಪುರದ ಅಪರೂಪದ ಕೋಟೆಗಳು ಮತ್ತು ಅರಮನೆಗಳನ್ನು ಅನ್ವೇಷಿಸಲು ನಿಮಗೆ ನಿಜವಾಗಿಯೂ ಸ್ನೇಹಿತರ ಗುಂಪಿನ ಅಗತ್ಯವಿಲ್ಲ. ಸೋಲೋ ಟ್ರಿಪ್ ನಲ್ಲಿ ನಿಮ್ಮದೇ ಆಗ ವೇದಲ್ಲಿ ಉದಯಪುರದ ವೈಭವವ್ನು ನೀವು ಕಣ್ತುಂಬಿಕೊಳ್ಳಬಹುದು. ಅಲ್ಲಿನ ಸ್ಥಳದ ಸೌಂದರ್ಯವನ್ನು ಅನುಭವಿಸಲು ನೀವು ನಿಧಾನವಾಗಿ ಪ್ರಯಾಣಿಸಿದರೆ ಇನ್ನೂ ಉತ್ತಮ.
ಅಲೆಪ್ಪಿ, ಕೇರಳ: ಕೇರಳದಲ್ಲಿ ಎಲ್ಲೆಲ್ಲೂ ಕಾಣಸಿಗುವ ಕಡಲತೀರಗಳು, ಹಿನ್ನೀರು, ಚಿಕ್ಕ ಚಿಕ್ಕ ಹಳ್ಳಿ ಇವೆಲ್ಲದರಲ್ಲಿಯೂ ಸಾಕಷ್ಟು ವಿನೋದವಿದೆ. ಇಲ್ಲಿನ ಮತ್ತೊಂದು ವಿಶೇಷವೇಂದರೆ ಇಲ್ಲಿ ನೀವು ಸಾಂಪ್ರದಾಯಿಕವಾದ ಅನೇಕ ಸಂಗತಿಗಳನ್ನು ಅನುಭವಿಸಬಹುದು. ಅದು ಸಾಂಪ್ರದಾಯಿಕ ದೋಣಿ ವಿಹಾರದಿಂದ ಹಿಡಿದು ಆಯುರ್ವೇದ ಚಿಕಿತ್ಸೆಗಳ ವರೆಗೆ ನೀವು ಇಲ್ಲಿ ವಿಶೇಷ ಅನುಭವ ಪಡೆಯಬಹುದು.
ಪಾಂಡಿಚೇರಿ: ಎಲ್ಲಿ ನೋಡಿದರೂ ಭೋರ್ಗರೆಯುವ ಸಮುದ್ರದ ಅಬ್ಬರ, ಬೀಚ್ ಪಾರ್ಟಿಗಳು, ಮೋಜಿನ ಕೆಫೆಗಳು ಪಾಂಡಿಚೇರಿಯ ಪ್ರಮುಖ ಆಕರ್ಷಣೆಗಳಾಗಿವೆ. ಅಲ್ಲದೇ ಇಲ್ಲಿನ ಫ್ರೆಂಚ್ ಕ್ವಾರ್ಟರ್ಸ್, ಸ್ಥಳೀಯ ಮಾರ್ಕೆಟ್, ದೇವಸ್ಥಾನಗಳು, ಸಾಂಪ್ರದಾಯಿಕ ತಮಿಳು ಮನೆಗಳನ್ನು ಹೊಂದಿರುವ ಹಳ್ಳಿಗಳು ಮತ್ತಷ್ಟು ಆಕರ್ಷಣೆಗಳಾಗಿವೆ. ಹಾಗಾಗಿ ನೀವು ಇಲ್ಲಿ ನಿಮ್ಮ ಸಮಯವನ್ನು ಸಂತೋಷದಾಯಕವಾಗಿ ಕಳೆಯಬಹುದಾಗಿದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚಾಗುವ ಶ್ವಾಸಕೋಶ ತೊಂದರೆಗೆ ಬೆಲ್ಲವೇ ಮನೆಮದ್ದು-ಹೀಗೆ ಸೇವಿಸಿ
ಧರ್ಮಶಾಲಾ, ಹಿಮಾಚಲ ಪ್ರದೇಶ: ಧರ್ಮಶಾಲಾದಲ್ಲಿ ನೀವು ಹಿಮದಿಂದ ಆವೃತವಾದ ಧೌಲಾಧರ್ ಶ್ರೇಣಿಯ ನೋಟವನ್ನು ಆನಂದಿಸಬಹುದು. ಇಲ್ಲಿ ಬೌದ್ಧ ಮಠಗಳಿವೆ. ನೀವು ಬೌದ್ಧ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನ್ವೇಷಿಸಬಹುದು. ಮಾರುಕಟ್ಟೆಗಳು ಮತ್ತು ತಂಪಾದ ಕೆಫೆಗಳು ನಿಮ್ಮನ್ನು ಇನ್ನಷ್ಟು ಉಲ್ಲಸಿತರನ್ನಾಗಿಸುತ್ತದೆ. ಅಲ್ಲದೇ ಈ ಕೆಲವು ಕೆಫೆಗಳಲ್ಲಿ ನೀವು ಅತ್ಯುತ್ತಮ ಇಟಾಲಿಯನ್ ಆಹಾರವನ್ನು ಟೇಸ್ಟ್ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ