Silk Saree Shops: ಬೆಂಗಳೂರಿನಲ್ಲಿ ರೇಷ್ಮೆ ಸೀರೆ ಎಲ್ಲಿ ಖರೀದಿ ಮಾಡೋದು ಅನ್ನೊ ಯೋಚ್ನೆ ಬಿಡಿ, ಈ ಅಂಗಡಿಗಳಿಗೆ ಹೋಗಿ

Near Me Silk Shops: ಇನ್ನು ಹಬ್ಬ ಹರಿದಿನ ಬಂತೆಂದರೆ ಸಾಕು ಮಹಿಳೆಯರು ಉತ್ಸಾಹದಿಂದ ಖರೀದಿ ಮಾಡುತ್ತಾರೆ. ಪ್ರತಿ ಹಬ್ಬ ಅಥವಾ ಆಚರಣೆಯು ಹೊಸ ಸೀರೆಯನ್ನು ಖರೀದಿಸಲು ಒಂದು ಕಾರಣ ಎಂದರೆ ತಪ್ಪಾಗಲಾರದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಾದ್ಯಂತ ಮಹಿಳೆಯರಿಗೆ (Women) ಸಾಂಪ್ರದಾಯಿಕ ಉಡುಪೆಂದರೆ ಸೀರೆ (Traditional Dress Saree) . ಈ ಸೀರೆ ಸೌಂದರ್ಯವನ್ನು ಇಮ್ಮಡಿಗೊಳಿಸುವ ಶಕ್ತಿಯನ್ನು ಹೊಂದಿದೆ. ಇದನ್ನು ಮಹಿಳೆಯರು ಯಾವ ರಾಜ್ಯದವರಾಗಿದ್ದರೂ ಹಾಗೂ ಎಲ್ಲಾ ವಯಸ್ಸಿನವರೂ ಸಹ ಧರಿಸುತ್ತಾರೆ. ಭಾರತದಲ್ಲಿ ಸೀರೆಗಳಿಗೆ ಪ್ರಚಂಡ ಬೇಡಿಕೆಯಿದೆ ಮತ್ತು ಇದರ ಶೈಲಿ ಕೂಡ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಮಹಿಳೆಯರ ಬಳಿ ಕನಿಷ್ಠ 10 ಸೀರೆಯಂತೂ ಇದ್ದೇ ಇರುತ್ತದೆ. ಇನ್ನು ಹಬ್ಬ ಹರಿದಿನ ಬಂತೆಂದರೆ ಸಾಕು ಮಹಿಳೆಯರು ಉತ್ಸಾಹದಿಂದ ಖರೀದಿ ಮಾಡುತ್ತಾರೆ. ಪ್ರತಿ ಹಬ್ಬ ಅಥವಾ ಆಚರಣೆಯು ಹೊಸ ಸೀರೆಯನ್ನು ಖರೀದಿಸಲು ಒಂದು ಕಾರಣ ಎಂದರೆ ತಪ್ಪಾಗಲಾರದು.

ಅದರಲ್ಲೂ ರೇಷ್ಮೆ ಸೀರೆ ಎಂದರೆ ಕೇಳಬೇಕಾ? ಹೆಂಗಳೆಯರ ಅಚ್ಚು ಮೆಚ್ಚು. ರೇಷ್ಮೆ ಸೌಂದರ್ಯದ ಸಂಕೇತವಾಗಿದೆ. ರೇಷ್ಮೆ ಸೀರೆಯು ಮಹಿಳೆಯರ ಸೊಬಗು ಮತ್ತು ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಅತ್ಯಂತ ಸೊಗಸಾದ ಮತ್ತು ಅತಿರಂಜಿತ ಬಟ್ಟೆಗಳನ್ನು, ಮುಖ್ಯವಾಗಿ ಸೀರೆಗಳನ್ನು ತಯಾರಿಸಲು ಜವಳಿ ಉದ್ಯಮಗಳು ಬಳಸುವ ಅಪರೂಪದ ಮತ್ತು ಅಮೂಲ್ಯವಾದ ವಸ್ತು ಎನ್ನಬಹುದು. ನೀವು ಸಹ ಬೆಂಗಳೂರಿನಲ್ಲಿರುವ ಅತ್ಯುತ್ತಮ ರೇಷ್ಮೆ ಸೀರೆ ಅಂಗಡಿಗಳನ್ನು ಹುಡುಕುತ್ತಿದ್ರೆ ಇಲ್ಲಿದೆ ಲಿಸ್ಟ್​.

ವಿಜಯಲಕ್ಷ್ಮಿ ಸಿಲ್ಕ್ಸ್, ಶಿವಾಜಿ ನಗರ

ಈ ದೊಡ್ಡದಾದ ಅಂಗಡಿಯೂ ನಿಮಗೆ ಬೇಕಾದ ಶೈಲಿಯ ರೇಷ್ಮೆ ಸೀರೆಗಳನ್ನು ಒದಗಿಸುತ್ತದೆ. ಇಲ್ಲಿ ವಿಭಿನ್ನ ಮಾತ್ರವಲ್ಲದೇ ನಿಮ್ಮ ಬಜೆಟ್​ಗೆ ತಕ್ಕ ಸೀರೆಗಳು ಸಹ ಲಭ್ಯವಿದೆ. ಈ ಅಂಗಡಿಯ ಒಳಗೆ ಒಮ್ಮೆ ಹೋದರೆ 3 ರಿಂದ 4 ಸೀರೆ ಖರೀದಿ ಮಾಡದೇ ಬರುವುದಿಲ್ಲ.

ವಿಳಾಸ: ನಂ. 52, ಮಹಾತ್ಮ ಗಾಂಧಿ ರಸ್ತೆ, ಹರಿದೇವಪುರ, ಶಾಂತಲಾ ನಗರ, ಶಿವಾಜಿ ನಗರ, ಬೆಂಗಳೂರು, ಕರ್ನಾಟಕ 560001

ಮೊಬೈಲ್​ ನಂಬರ್:  095909 00092

ಮೈಸೂರು ಉದ್ಯೋಗ, ಶಿವಾಜಿ ನಗರ

ಕಮರ್ಷಿಯಲ್​ ಸ್ಟ್ರೀಟ್​ನಲ್ಲಿ ಯಾವುದೇ ವಸ್ತು ಸಿಗುವುದಿಲ್ಲ ಎನ್ನುವ ಮಾತಿಲ್ಲ , ಎಲ್ಲವೂ ಇಲ್ಲಿ ಸಿಗುತ್ತದೆ. ಹಣೆಗೆ ಇಡುವ ಬಿಂದಿಯಿಂದ ಹಿಡಿದು, ಕಾಲಿಗೆ ಹಾಕುವ ಚಪ್ಪಲಿ ತನಕ ನಿಮಗೆ ವಿವಿಧ ಶೈಲಿಯದ್ದು ಇಲ್ಲಿ ಸಿಗುತ್ತದೆ. ಎಲ್ಲಾ ಸಿಗುವ ಕಡೆ ಅದ್ಭುತ ರೇಷ್ಮೆ ಸೀರೆಗಳು ಸಹ ಸಿಗದೇ ಇರದು. ಇಲ್ಲಿರುವ ಮೈಸೂರ್ ಉದ್ಯೋಗ ಅಂಗಡಿಯಲ್ಲಿ ಮೈಸೂರ್​ ಸಿಲ್ಕ್​ನಿಂದ ಹಿಡಿದು ಎಲ್ಲಾ ರೀತಿಯ ರೇಷ್ಮೆ ಸೀರೆಗಳು ಲಭ್ಯವಿದ್ದು, ಒಮ್ಮೆ ಹೋಗಲು ಮರೆಯದಿರಿ.

ವಿಳಾಸ: 1ನೇ ಮಹಡಿ, ಮಹಾವೀರ್ ಮಾಲ್, 316, ಕಾಮರಾಜ್ ರಸ್ತೆ, ಶಿವಾಜಿ ನಗರ, ಬೆಂಗಳೂರು, ಕರ್ನಾಟಕ 560042

ಮೊಬೈಲ್ ನಂಬರ್:  087228 50451

ಇದನ್ಮೂ ಓದಿ: ಫ್ಯಾಮಿಲಿ ಜೊತೆ ಡಿನ್ನರ್​ ಎಂಜಾಯ್​ ಮಾಡ್ಬೇಕು ಅಂದ್ರೆ ಬೆಂಗಳೂರಿನ ಈ ರೆಸ್ಟೊರೆಂಟ್​ಗಳಿಗೆ ವಿಸಿಟ್​ ಮಾಡಿ

ಪ್ರಸಿದ್ಧಿ ಸಿಲ್ಕ್ಸ್, ಆನಂದ್ ನಗರ

ಹೆಸರೇ ಪ್ರಸಿದ್ಧಿ ಎಂದ ಮೇಲೆ ಇಲ್ಲಿನ ಸೀರೆಗಳು ಸಹ ಹೆಚ್ಚು ಪ್ರಸಿದ್ದ. ಮದುವೆಗೆ, ಗಿಫ್ಟ್​ ನೀಡಲು ನಿಮಗೆ ರೇಷ್ಮೆ ಸೀರೆ ಖರೀದಿಸಲು ಇದು ಬೆಸ್ಟ್​ ಸ್ಥಳ ಎನ್ನಬಹುದು. ಇಲ್ಲಿ ನಿಮಗೆ ನಿಮ್ಮ ಬಜೆಟ್​ಗೆ ತಕ್ಕ ಸೀರೆಗಳು ಸಿಗಲಿದ್ದು, ಬಣ್ಣ ಬಣ್ಣದ, ಡಿಸೈನ್​ ಡಿಸೈನ್​ ಸೀರೆಗಳನ್ನು ಖರೀದಿ ಮಾಡಬಹುದು.

ವಿಳಾಸ: 9&10, ಸರ್ವೀಸ್ ರಸ್ತೆ, ಆನಂದ್ ನಗರ ಲೇಔಟ್, ಮಾರತಹಳ್ಳಿ ಜಂಕ್ಷನ್ ಹತ್ತಿರ, ಬೆಂಗಳೂರು, ಕರ್ನಾಟಕ 560037

ಮೊಬೈಲ್ ನಂಬರ್: 080 2523 6639

ದೀಪಮ್ ಸಿಲ್ಕ್ ಇಂಟರ್ನ್ಯಾಷನಲ್, ಶಾಂತಲಾ ನಗರ,

ಹೆಂಗಳೆಯರಿಗೆ ಸೀರೆ ಎಂದರೆ ಬಹಳ ಇಷ್ಟ. ಯಾವುದೇ  ಸಂದರ್ಭದಲ್ಲಿ ಈಗ ಅದೆಷ್ಟೇ ವಿಧದ ಬಟ್ಟೆಗಳು ಲಭ್ಯವಿದ್ದರೂ ಸಹ, ಸೀರೆಯ ಮುಂದೆ ಬೇರೆಯಾವುದಿಲ್ಲ ಎಂಬುದು ಬಹಳ ಮುಖ್ಯ. ಹೆಣ್ಣು ಮಕ್ಕಳ ಟೇಸ್ಟ್​ಗೆ ಇಷ್ಟವಾಗುವ ಎಲ್ಲಾ ತರಹದ ಸೀರೆಗಳು ಇಲ್ಲಿ ಲಭ್ಯವಿದ್ದು, ಯಾವುದು ಆಯ್ಕೆ ಮಾಡುವುದು ಎಂಬ ಗೊಂದಲ ಉಂಟಾಗುತ್ತದೆ.

ವಿಳಾಸ: 67, ಮಹಾತ್ಮ ಗಾಂಧಿ ರಸ್ತೆ, ಹರಿದೇವಪುರ, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು, ಕರ್ನಾಟಕ 560001

ಮೊಬೈಲ್ ನಂಬರ್: 098860 41100

ಸುದರ್ಶನ್ ಫ್ಯಾಮಿಲಿ ಸ್ಟೋರ್, ಚಿಕ್ಕಪೇಟೆ

ಈ ಅಂಗಡಿಯ ಹೆಸರನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತಾರೆ. ಅದರಲ್ಲೂ ಸೀರೆಗಳಿಗೆ ಪ್ರಸಿದ್ದವಾಗಿರುವ ಚಿಕ್ಕಪೇಟೆಯಲ್ಲಿದ್ದು, ಒಳಗೆ ಹೊಕ್ಕರೆ ಹೊರಬರಲು ಮನಸ್ಸೇ ಆಗುವುದಿಲ್ಲ.

ಇದನ್ನೂ ಓದಿ: ವಾರ ಪೂರ್ತಿ ಕೆಲಸ ಮಾಡಿ ಬೋರ್ ಆಗಿದ್ರೆ, ವೀಕೆಂಡ್​ ಬೆಂಗಳೂರಿನ ರೆಸಾರ್ಟ್​ಗಳಿಗೆ ಹೋಗಿ ಎಂಜಾಯ್ ಮಾಡಿ

ವಿಳಾಸ: ಸುದರ್ಶನ್ ಫ್ಯಾಮಿಲಿ ಸ್ಟೋರ್, 231, ಚಿಕ್‌ಪೆಟ್ ರಸ್ತೆ, ಎದುರು. ಸಿಂಡಿಕೇಟ್ ಬ್ಯಾಂಕ್, ರಾಗಿಪೇಟ್, ಮಾಮುಲ್‌ಪೇಟ್, ಚಿಕ್ಕಪೇಟೆ, ಬೆಂಗಳೂರು, ಕರ್ನಾಟಕ 560053

ಮೊಬೈಲ್ ನಂಬರ್: 080 4130 0306
Published by:Sandhya M
First published: