• Home
  • »
  • News
  • »
  • lifestyle
  • »
  • Shawarma Centers: ಬೆಂಗಳೂರಲ್ಲಿ ಬಾಯಲ್ಲಿ ನೀರೂರಿಸೋ ಷವರ್ಮಾ ಇಲ್ಲೇ ಸಿಗೋದು, ಹೋಗಿದ್ದೀರಾ?

Shawarma Centers: ಬೆಂಗಳೂರಲ್ಲಿ ಬಾಯಲ್ಲಿ ನೀರೂರಿಸೋ ಷವರ್ಮಾ ಇಲ್ಲೇ ಸಿಗೋದು, ಹೋಗಿದ್ದೀರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Near Me: ಮಧ್ಯಪ್ರಾಚ್ಯದಲ್ಲಿ ಷವರ್ಮಾ ತಿಂದ ಅನೇಕರು Savoury ನ ಷವರ್ಮಾ ಬೆಸ್ಟ್​ ಎನ್ನುತ್ತಾರೆ. ಕ್ರೀಮಿ ಮಾಂಸದ ಸ್ಟಫಿಂಗ್ ಷವರ್ಮಾದ ನಿಮ್ಮನ್ನ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.  ನೀವು ಅವರ ಯಾವುದೇ ಔಟ್‌ಲೆಟ್‌ಗಳಲ್ಲಿ ಹೋಗಿ ತಿಂದರೂ ಅದರ ರುಚಿ ಹಾಗೆಯೇ ಇರುತ್ತದೆ.  

  • Share this:

ಷವರ್ಮಾ (Shawarma) ಇದರ ಹೆಸರನ್ನೇ ಕೇಳಿದ್ರೆ ಸಾಕು ನಾನ್​ವೆಜ್​ (Non Veg) ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ರೋಲ್​ ಮಧ್ಯೆ ಇರುವ ಮಸಾಲೆ ಸ್ಟಫಿಂಗ್ ನಿಜಕ್ಕೂ ಎಲ್ಲರಿಗೂ ಇಷ್ಟವಾಗದೇ ಇರದು. ಬೆಂಗಳೂರಿನಲ್ಲಿ (Bengaluru)  ಬೆಸ್ಟ್ ಷವರ್ಮಾ ಸಿಗುವ ಹಲವಾರು ಸ್ಥಳಗಳಿಗೆ. ಬೆಸ್ಟ್​ ಅಲ್ಲಿ ಬೆಸ್ಟ್​ ಷವರ್ಮಾ ಬೇಕು ಅಂದರೆ ನಾವು ನೀಡುವ ಸ್ಥಳಗಳ ಲಿಸ್ಟ್​ ಚೆಕ್​ ಮಾಡಿ.


ಬೈಬ್ಲೋಸ್, ಫ್ರೇಜರ್ ಟೌನ್, ಬೆಂಗಳೂರು


ಅವರ ಚಿಕನ್ ಷವರ್ಮಾವನ್ನು ಸವಿಯಲು ಅವರ ಮೆನುವಿನಲ್ಲಿರುವ ಸ್ಯಾಂಡ್‌ವಿಚ್‌ಗಳ ವಿಭಾಗಕ್ಕೆ ತೆರಳಿ. ತೆಳುವಾದ ರೊಟ್ಟಿಯು ಮಾಂಸದ ಮಸಾಲೆಯಿಂದ ತುಂಬಿರುತ್ತದೆ. ಜೊತೆಗೆ ರುಚಿಕರವಾದ ಬೆಳ್ಳುಳ್ಳಿ ಸಾಸ್ ಕೊಡುವುದರಿಂದ ಅದರ ರುಚಿ ಇನ್ನೂ ಹೆಚ್ಚಾಗುತ್ತದೆ.


ವಿಳಾಸ: 66/1, ಕೋಲ್ಸ್ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು


ಜೈಟೂನ್, ಕೋಡಿಹಳ್ಳಿ, ಬೆಂಗಳೂರು


ಪ್ರತಿದಿನ ಸಂಜೆ, ಗ್ರಾಹಕರು ತಮ್ಮ ರುಚಿಕರ ಷವರ್ಮಾಕ್ಕಾಗಿ ಈ ರೆಸ್ಟೋರೆಂಟ್‌ನಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ. ಅವರ ಅಧಿಕೃತ ಷವರ್ಮಾ ರೋಲ್ ಪ್ರಯತ್ನಿಸಿದ ನಂತರ ಪದೇ ಪದೇ ಇಲ್ಲಿಗೆ ಬರದೇ ಇರಲಾರಿರಿ.ಇದರ ಮಸಾಲೆಯುಕ್ತ ಮೆಕ್ಸಿಕನ್ ಷವರ್ಮಾವನ್ನು ನೀವು ಒಮ್ಮೆ ಟ್ರೈ ಮಾಡಲೇಬೇಕು.


ವಿಳಾಸ: ಮಾರುತಿ ಟವರ್ಸ್, ೧೩೮, ಓಲ್ಡ್ ಏರ್ಪೋರ್ಟ್ ರೋಡ್, ಕೋಡಿಹಳ್ಳಿ, ಬೆಂಗಳೂರು


21, 24ನೇ ಮುಖ್ಯರಸ್ತೆ, 6ನೇ ಹಂತ, ಜೆಪಿ ನಗರ, ಬೆಂಗಳೂರು


ಸೇವರಿ ರೆಸ್ಟೋರೆಂಟ್, ಫ್ರೇಜರ್ ಟೌನ್, ಬೆಂಗಳೂರು


ಮಧ್ಯಪ್ರಾಚ್ಯದಲ್ಲಿ ಷವರ್ಮಾ ತಿಂದ ಅನೇಕರು Savoury ನ ಷವರ್ಮಾ ಬೆಸ್ಟ್​ ಎನ್ನುತ್ತಾರೆ. ಕ್ರೀಮಿ ಮಾಂಸದ ಸ್ಟಫಿಂಗ್ ಷವರ್ಮಾದ ನಿಮ್ಮನ್ನ ಬಾಯಿ ಚಪ್ಪರಿಸುವಂತೆ ಮಾಡುತ್ತದೆ.  ನೀವು ಅವರ ಯಾವುದೇ ಔಟ್‌ಲೆಟ್‌ಗಳಲ್ಲಿ ಹೋಗಿ ತಿಂದರೂ ಅದರ ರುಚಿ ಹಾಗೆಯೇ ಇರುತ್ತದೆ.


ವಿಳಾಸ: 27, ಮಸೀದಿ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು


ಜಸ್ಟ್​ ಷವರ್ಮಾ, ಹಲಸೂರು, ಬೆಂಗಳೂರು


ಇದನ್ನೂ ಓದಿ: ಸೂಪರ್ ಟೇಸ್ಟಿ ಪಾಸ್ತಾ ಸಿಗುವ ಬೆಂಗಳೂರಿನ ಟಾಪ್ 5 ಸ್ಥಳಗಳಿವು


ಕೇವಲ ಷವರ್ಮಾ ಸಿಗುವ ಈ ಫಾಸ್ಟ್-ಫುಡ್ ಶಾಪ್​ ಪಟ್ಟಣದ ಸುತ್ತಮುತ್ತಲಿನ ಅನೇಕ ಏರಿಯಾಗಳಾದ ಜಯನಗರ, ಕೋರಮಂಗಲ ಮತ್ತು ಸರ್ಜಾಪುರ ಸೇರಿದಂತೆ ವಿವಿಧೆಡೆ ಹಲವು ಬ್ರಾಂಚ್​ಗಳನ್ನು ಹೊಂದಿದೆ. ಅವರ ಹೋಲ್ ಮೀಟ್ ಷವರ್ಮಾ ನೀವು ಟ್ರೈ ಮಾಡಲೇಬೇಕು.


ವಿಳಾಸ: ಸ್ಕೈವಾಕ್ ಕಟ್ಟಡ, ಕೆಳ ನೆಲ ಮಹಡಿ, ಅಸ್ಸೇ ರಸ್ತೆ, ಹಲಸೂರು, ಬೆಂಗಳೂರು


487-ಎ, 80 ಅಡಿ ರಸ್ತೆ, 1ನೇ ಹಂತ, ಬನಶಂಕರಿ, ಬೆಂಗಳೂರು ಸೇರಿದಂತೆ ವಿವಿಧೆಡೆ ಅನೇಕ ಶಾಖೆಗಳಿದ್ದು, ಬೇಟಿ ನೀಡಬಹುದು.


ಕಬಾಬ್ ಮ್ಯಾಜಿಕ್, ಜಯನಗರ, ಬೆಂಗಳೂರು


ಬೆಂಗಳೂರು ನಗರದ ಹಲವೆಡೆ ಸಾಕಷ್ಟು ಕಬಾಬ್ ಮ್ಯಾಜಿಕ್ ಮಳಿಗೆಗಳಿವೆ ಆದರೆ ಅವರ ಜಯನಗರ ಮತ್ತು ಬಸವನಗುಡಿ ಅಂಗಡಿಗಳಲ್ಲಿ ನಿಮಗೆ ಬೇಕಾದ ಎಲ್ಲಾ ವೆರೈಟಿ ಲಭ್ಯವಿದೆ. ಇಲ್ಲಿರುವ ಷವರ್ಮಾಗಳು ಪ್ರತಿಯೊಬ್ಬರ ಹಾಟ್​ ಪೇವರೇಟ್​ ಆಹಾರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ ಮತ್ತು ನೀವು ಖಂಡಿತವಾಗಿಯೂ ಇಷ್ಟಪಡುವ ಒಂದು ಅದ್ಭುತ ಜಾಗಗಳಲ್ಲಿ ಇದು ಒಂದು ಎನ್ನಬಹುದು.


ವಿಳಾಸ: 1548, ಈಸ್ಟ್ ಎಂಡ್ ಸರ್ಕಲ್, 9ನೇ ಬ್ಲಾಕ್, ಜಯನಗರ, ಬೆಂಗಳೂರು


31, ವಿಜಯಾ ಕಾಲೇಜು ಎದುರು , ಆರ್​.ವಿ ರೋಡ್​, ಬಸವನಗುಡಿ ಬೆಂಗಳೂರು


ಅಲಿಬಾಬಾ ಕೆಫೆ ಮತ್ತು ರೆಸ್ಟೋರೆಂಟ್, ಫ್ರೇಜರ್ ಟೌನ್, ಬೆಂಗಳೂರು


ಪಟ್ಟಣದ ಅತ್ಯುತ್ತಮ ಅರೇಬಿಯನ್ ರೆಸ್ಟೋರೆಂಟ್‌ಗಳಲ್ಲಿ ಒಂದಾದ ಅಲಿಬಾಬಾ ಷವರ್ಮಾದಲ್ಲಿ ಕೆಲವು ರುಚಿಕರವಾದ ಆಯ್ಕೆಗಳನ್ನು ನಿಮಗೆ ನೀಡುತ್ತದೆ. ಸಸ್ಯಾಹಾರಿಗಳು ಸಹ ಇಲ್ಲಿ ಕಡಲೆ ಪ್ಯಾಟಿಗಳೊಂದಿಗೆ ತುಂಬಿದ ಷವರ್ಮಾಗಳನ್ನು ಸೇವನೆ ಮಾಡಬಹುದು.


ಇದನ್ನೂ ಓದಿ:ಬೆಂಗಳೂರಲ್ಲಿ ಒಳ್ಳೆ ಬಿರಿಯಾನಿ ತಿನ್ಬೇಕು ಅಂದ್ರೆ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಿ!


ವಿಳಾಸ: 69, ಎಂಎಂ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು

Published by:Sandhya M
First published: