• Home
  • »
  • News
  • »
  • lifestyle
  • »
  • Sandwich Centers: ಎಸ್​ ಫಾರ್​ ಸ್ಯಾಂಡ್​ವಿಚ್ ಎನ್ನುವವರು ಈ ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

Sandwich Centers: ಎಸ್​ ಫಾರ್​ ಸ್ಯಾಂಡ್​ವಿಚ್ ಎನ್ನುವವರು ಈ ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Near Me Searches: ಈ ಸ್ಥಳವು ರುಚಿಕರವಾದ ಸ್ಯಾಂಡ್‌ವಿಚ್‌ಗಳನ್ನು ನಿಮಗೆ ಒದಗಿಸುತ್ತದೆ. ಹೊಸದಾಗಿ ತಯಾರಿಸಿದ ಗುಣಮಟ್ಟದ ಪದಾರ್ಥಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಸ್ಥಳದಲ್ಲಿ ಸ್ಯಾಂಡ್‌ವಿಚ್ ತಿನ್ನುವುದನ್ನ ಮಿಸ್​ ಮಾಡಿಕೊಳ್ಳಬೇಡಿ. ಅವರು ಹೋಮ್​ ಡೆಲಿವರಿ ಮತ್ತು ಪಾರ್ಸಲ್​ ತೆಗೆದುಕೊಂಡು ಹೋಗುವ ಆಯ್ಕೆಗಳನ್ನು ಸಹ ಹೊಂದಿದ್ದಾರೆ. 

ಮುಂದೆ ಓದಿ ...
  • Share this:

ಸ್ಯಾಂಡ್​ವಿಚ್ (Sandwich) ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಎಲ್ಲರಿಗೂ ಇಷ್ಟ.  ಒಂದೆಲ್ಲ ಒಂದು ರೀತಿಯ ಸ್ಯಾಂಡ್​ವಿಚ್​ಗಳು ಲಭ್ಯವಿದೆ. ಪನೀರ್, ಸ್ಯಾಂಡವಿಚ್​, ಕಾರ್ನ್​ ಸ್ಯಾಂಡ್​ವಿಚ್​, ವೆಜ್​ ಸ್ಯಾಂಡ್​ವಿಚ್​ ಹೀಗೆ ನೂರಾರು ರೀತಿಯಲ್ಲಿ ನಿಮಗೆ ಸಿಗುತ್ತದೆ. ಇನ್ನೂ ಕೆಲವೊಂದು ಅಂಗಡಿಗಳಲ್ಲಿ ತುಂಬಾ ರುಚಿಕರವಾದ ಸ್ಯಾಂಡ್​ವಿಚ್​ ಸಿಗುತ್ತದೆ. ನೀವು ಸಹ ಬೆಂಗಳೂರಿನಲ್ಲಿ (Bengaluru)  ಬೆಸ್ಟ್ ಸ್ಯಾಂಡ್​ವಿಚ್​ ಸ್ಥಳವನ್ನು ಹುಡುಕುತ್ತಿದ್ರೆ ಇಲ್ಲಿದೆ ಲಿಸ್ಟ್​.


ಸ್ಯಾಂಡ್ವಿಚ್ ಗುರು, ಜಯನಗರ


ನೀವು ಜಯನಗರದ ಸಮೀಪದಲ್ಲಿದ್ದರೆ  ನೀವು ಸ್ಯಾಂಡ್‌ವಿಚ್‌ಗಾಗಿ ಕಷ್ಟಪಡುವುದು ಬೇಡ. ಸ್ಯಾಂಡ್ವಿಚ್ ಗುರು ನಿಮಗೆ ಬೆಸ್ಟ್ ಸ್ಥಳ ಎನ್ನಬಹುದು. ಈ ಸ್ಥಳವು ರುಚಿಕರವಾದ ಸ್ಯಾಂಡ್‌ವಿಚ್‌ಗಳನ್ನು ನಿಮಗೆ ಒದಗಿಸುತ್ತದೆ. ಹೊಸದಾಗಿ ತಯಾರಿಸಿದ ಗುಣಮಟ್ಟದ ಪದಾರ್ಥಗಳನ್ನು ಇಲ್ಲಿ ನೀಡಲಾಗುತ್ತದೆ. ಈ ಸ್ಥಳದಲ್ಲಿ ಸ್ಯಾಂಡ್‌ವಿಚ್ ತಿನ್ನುವುದನ್ನ ಮಿಸ್​ ಮಾಡಿಕೊಳ್ಳಬೇಡಿ. ಅವರು ಹೋಮ್​ ಡೆಲಿವರಿ ಮತ್ತು ಪಾರ್ಸಲ್​ ತೆಗೆದುಕೊಂಡು ಹೋಗುವ ಆಯ್ಕೆಗಳನ್ನು ಸಹ ಹೊಂದಿದ್ದಾರೆ.


ವಿಳಾಸ: ನಂ 4/2, ಹಳೆಯ ಸಂಖ್ಯೆ 81 ಬಿ, 8 ನೇ ಮುಖ್ಯ ರಸ್ತೆ, ಜಯನಗರ ಪೂರ್ವ, ಜಯನಗರ, ಬೆಂಗಳೂರು 


ದಿ ಹೋಲ್ ಇನ್ ದಿ ವಾಲ್ ಕೆಫೆ, ಕೋರಮಂಗಲ


ಮನೆ ತರಹದ ಪ್ಯಾಕ್ ಮಾಡಲಾದ ದಿ ಹೋಲ್ ಇನ್ ದಿ ವಾಲ್ ಕೆಫೆ ಕೆಲವು ರುಚಿಕರವಾದ ಸ್ಯಾಂಡ್‌ವಿಚ್‌ಗಳನ್ನು ಆನಂದಿಸಲು ಒಂದು ಹಿತಕರವಾದ ಸ್ಥಳವಾಗಿದೆ. ಈ ಸ್ಥಳವನ್ನು ಸುಂದರವಾದ ಕಲಾಕೃತಿಗಳು, ವರ್ಣಚಿತ್ರಗಳು, ಪೋಸ್ಟರ್‌ಗಳು, ಸಸ್ಯಗಳು ಮತ್ತು ಹೆಚ್ಚಿನವುಗಳಿಂದ ಅಲಂಕಾರ ಮಾಡಲಾಗಿದೆ. ಇದು ಉತ್ತಮ ಶೈಲಿಯ ಸ್ಯಾಂಡ್​ವಿಚ್​ಗಳನ್ನು ನೀಡುತ್ತದೆ. ಇಂಗ್ಲಿಷ್ ಶೈಲಿಯ ಸ್ಯಾಂಡ್‌ವಿಚ್‌, ಚಿಕನ್ ಸಾಸೇಜ್ ಸ್ಯಾಂಡ್‌ವಿಚ್ ಅನ್ನು ಟ್ರೈ ಮಾಡಬೇಕು. ಕ್ಲಾಸಿಕ್ ಬೇಕನ್-ಲೆಟಿಸ್-ಟೊಮ್ಯಾಟೊ ಸ್ಯಾಂಡ್​ವಿಚ್​ ಹೆಚ್ಚು ರುಚಿಕರವಾಗಿರುತ್ತದೆ.


ಇದನ್ನೂ ಓದಿ: ಈ Valentine's Day ದಿನ ನಿಮ್ಮ ಪ್ರೇಯಸಿ ಜೊತೆ ಈ ಬೀಚ್‌ಗಳಿಗೆ ವಿಸಿಟ್ ಕೊಡಿ


ವಿಳಾಸ: 4, 8ನೇ ಮುಖ್ಯರಸ್ತೆ, ಕೋರಮಂಗಲ 4ನೇ ಬ್ಲಾಕ್, ಬೆಂಗಳೂರು 


ಕೋಶಿಸ್​ ಬಾರ್ & ರೆಸ್ಟೋರೆಂಟ್, ಅಶೋಕ ನಗರ


ಬೆಂಗಳೂರಿನ ಐಕಾನ್‌ ರೆಸ್ಟೋರೆಂಟ್​ಗಳಲ್ಲಿ ಒಂದಾದ ಕೋಶಿಸ್​ ಬಾರ್ ಅಂಡ್ ರೆಸ್ಟೋರೆಂಟ್ ಮೋಡಿ ಮಾಡುತ್ತದೆ. ಇಲ್ಲಿನ ಸ್ಯಾಂಡ್‌ವಿಚ್‌ ವಿಚಾರಕ್ಕೆ ಬಂದಾಗ ಅತ್ಯುತ್ತಮವಾದ ಆಯ್ಕೆಗಳನ್ನು ನೀಡುತ್ತದೆ. ಅವರ ಸರಳವಾದ ಚೀಸ್ ಚಟ್ನಿ ಸ್ಯಾಂಡ್‌ವಿಚ್ ಜನಪ್ರಿಯ ಆಯ್ಕೆಯಾಗಿದೆ. ಅಲ್ಲದೇ, ಅವರ ಹ್ಯಾಮ್, ಬೇಕನ್ ಮತ್ತು ಆಮ್ಲೆಟ್ ಸ್ಯಾಂಡ್‌ವಿಚ್‌ಗಳನ್ನು ಮಿಸ್​ ಮಾಡಲೇಬೇಡಿ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ, ಪದೇ ಪದೇ ಹೋಗುತ್ತಾರೆ.


ವಿಳಾಸ: ಕೋಶಿಸ್​ ಬಾರ್ & ರೆಸ್ಟೋರೆಂಟ್, ಸೇಂಟ್ ಮಾರ್ಕ್ಸ್ ರಸ್ತೆ, ಶಾಂತಲಾ ನಗರ, ಅಶೋಕ್ ನಗರ, ಬೆಂಗಳೂರು


ಕೂಲ್​ ಜಾಯಿಂಟ್​, ಜಯನಗರ


ಪಾಕೆಟ್ ಸ್ನೇಹಿ ಮತ್ತು ರುಚಿಕರವಾದ ಸ್ಯಾಂಡ್‌ವಿಚ್‌ಗಳನ್ನು ತಿನ್ನಬೇಕು ಎಂಬ ಆಸೆ ಇದ್ದರೆ, ಕೂಲ್​ ಜಾಯಿಂಟ್​ ಸೂಕ್ತವಾದ ಸ್ಥಳ.ಕೂಲ್ ಜಾಯಿಂಟ್ ನಿಜವಾಗಿಯೂ ನಗರದ ಬೆಸ್ಟ್​ ಹ್ಯಾಂಗ್‌ಔಟ್ ತಾಣಗಳಲ್ಲಿ ಒಂದಾಗಿದೆ. ಇಲ್ಲಿನ ರುಚಿಕರವಾದ ಗ್ರಿಲ್ಡ್ ಸ್ಯಾಂಡ್‌ವಿಚ್ ಎಂದರೆ ಹಲವಾರು ಜನರ ಹಾಟ್​ ಫೇವರೇಟ್​. ಅವರ ಪನೀರ್ ಮತ್ತು ಚೀಸ್ ಸ್ಯಾಂಡ್‌ವಿಚ್‌ಗಳು ಹೆಚ್ಚು ಬೇಡಿಕೆಯಿರುವ ಆಯ್ಕೆಯಾಗಿದ್ದು, ನೀವು ಟ್ರೈ ಮಾಡಿ. ಇಲ್ಲಿನ ಬಾಯಲ್ಲಿ ನೀರೂರಿಸುವ ಸ್ಯಾಂಡ್‌ವಿಚ್‌ಗಳನ್ನು ತಿನ್ನಲು ಕಾಯುತ್ತಿರುವ ಜನರಿಂದ ಈ ಸ್ಥಳವು ಯಾವಾಗಲೂ ತುಂಬಿರುತ್ತದೆ.


ವಿಳಾಸ: ಬುಕ್ ಪ್ಯಾಲೇಸ್ ಹತ್ತಿರ, 30 ಕೂಲ್ ರೋಡ್, 4 ಬ್ಲಾಕ್, ಜಯನಗರ, ಬೆಂಗಳೂರು  


ಸಬ್​ ವೇ, ದೊಮ್ಮಲೂರು


ಸಬ್​ ವೇ ಸಹ ಹೆಚ್ಚಿನ ಜನರಿಂದ ಕೂಡಿರುತ್ತದೆ. ಅವರ ಸ್ಯಾಂಡ್‌ವಿಚ್‌ಗಳು ಅದ್ಭುತವಾದ ಟೇಸ್ಟ್ ಅನ್ನು ಹೊಂದಿರುತ್ತವೆ, ನೀವಿಲ್ಲಿ ಹಲವು ರಿತಿಯ ಸ್ಯಾಂಡ್​ವಿಚ್​ಗಳನ್ನು ಟ್ರೈ ಮಾಡಹುದು. ನೀವು ಬೆಂಗಳೂರಿನಲ್ಲಿ ಇದ್ದರೆ ಒಂದು ಬಾರಿಯಾದರೂ ಇಲ್ಲಿಗೆ ಭೇಟಿ ನೀಡಲೇಬೇಕು.


ಇದನ್ನೂ ಓದಿ: ನಿಮ್ಗೆ ಯಾವ ಬುಕ್ ಬೇಕು ಹೇಳಿ.. ಬೆಂಗಳೂರಿನ ಈ ಅಂಗಡಿಗಳಲ್ಲಿ ಅವೆಲ್ಲವೂ ಸಿಗುತ್ತವೆ!


ವಿಳಾಸ: 4, 1ನೇ ಮುಖ್ಯ ರಸ್ತೆ, ಹಂತ 2, ದೊಮ್ಮಲೂರು, ಬೆಂಗಳೂರು

Published by:Sandhya M
First published: