ಬಾಲಿವುಡ್ ತಾರೆ,(Bollywood) ಕತ್ರಿನಾ ಕೈಫ್ (Katrina Kaif) ಅವರ ಸ್ಲೈಸ್ ಜಾಹೀರಾತು, ಮಾವಿನ ಹಣ್ಣನ್ನು ಕಚ್ಚಿದಾಗ ಯಾರಿಗಾದರೂ ಮಾವಿನ ಹಣ್ಣನ್ನು ತಿನ್ನಬೇಕು ಅನಿಸುವುದರಲ್ಲಿ ಅನುಮಾನವಿಲ್ಲ. ಆದರೆ ಸಮೋಸ ನೋಡಿದಾಗ ಅದಕ್ಕಿಂತ ಹೆಚ್ಚು ಬಯಕಕೆ ಉಂಟಾಗುತ್ತದೆ. ಮಸಾಲೆಯುಕ್ತ ಆಲೂಗಡ್ಡೆ, ಮಾಂಸ, ಈರುಳ್ಳಿ, ಬಟಾಣಿ ತುಂಬಿದ ಈ ಸಮೋಸ (Samosa) ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ನಮ್ಮ ಬೆಂಗಳೂರಿನಲ್ಲಿರುವ ಅತ್ಯುತ್ತಮ ಸಮೋಸಾ ಸಿಗುವ ಸ್ಥಳಗಳ ಪಟ್ಟಿ ಇಲ್ಲಿದೆ.
ಗೌರ್ಮೆಟ್ ಸಮೋಸಾ, ಸಮೋಸಾ ಪಾರ್ಟಿ, ಜೀವನ್ ಭೀಮಾ ನಗರ
ಜೀವನ್ ಭೀಮಾ ನಗರದಲ್ಲಿ ಇರುವ ಒಂದು ಅದ್ಭುತ ಅಂಗಡಿ ಇದಾಗಿದ್ದು ಮತ್ತೊಂದು ಕೋರಮಂಗಲದಲ್ಲಿದೆ. ಇಲ್ಲಿನ ಸಮೋಸ ಬೆಂಗಳೂರಿಗರ ಫೇವರೇಟ್ ಸಮೋಸ ಎನ್ನಬಹುದು. ಇಲ್ಲಿ ಚಿಕನ್ ಸಮೋಸಾ, ಥಾಯ್ ಕರಿ, ಮ್ಯಾಕ್ ಮತ್ತು ಚೀಸ್ ಸಮೋಸಾ ಮತ್ತು ಬಾರ್ಬೆಕ್ಯೂ ಚಿಕನ್ ಸಮೋಸಾದಂತಹ ವಿವಿಧ ರೀತಿಯ ಸಮೋಸಗಳು ಲಭ್ಯವಿದ್ದು, ನೀವು ಇಲ್ಲಿ ನಿಮ್ಮ ಗ್ಯಾಂಗ್ ಅನ್ನು ಕರೆದುಕೊಂಡು ಹೋಗಬಹುದು ಮತ್ತು ಆರೋಗ್ಯಕರ ಮಾಂಸಾಹಾರಿ ಅಥವಾ ಸಸ್ಯಹಾರಿ ಸಮೋಸಾ ತಟ್ಟೆಯನ್ನು ಪ್ರಯತ್ನಿಸಬಹುದು.
ವಿಳಾಸ: 11, 10ನೇ ಮುಖ್ಯ, HAL 3ನೇ ಹಂತ, ಜೀವನ್ ಭೀಮಾ ನಗರ, ಬೆಂಗಳೂರು
ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 9 ರವರೆಗೆ
ಪೂನಂ ಸ್ವೀಟ್ ಸೆಂಟರ್, ಬನಶಂಕರಿ
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಸ್ಟ್ ಕಾಫಿ ಸಿಗುವ ಟಾಪ್ 6 ಸ್ಥಳಗಳ ಲಿಸ್ಟ್ ಇಲ್ಲಿದೆ
ನಿಮ್ಮ ಶಾಪಿಂಗ್ ಮಾಡಲು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ಗೆ ಭೇಟಿ ನೀಡಿದಾಗ, ನೀವು ಈ ಸ್ಥಳವನ್ನು ತಪ್ಪಿಸಿಕೊಳ್ಳಬಾರದು. ಈ ಅಂಗಡಿಯ ಹೊರಗಿರುವ ಭಾರೀ ಜನಸಂದಣಿ, ಗಾಳಿಯಲ್ಲಿ ಬಿಸಿಯಾದ ಸಮೋಸಗಳ ಆ ಪರಿಮಳ ನಿಮ್ಮನ್ನ ಸೆಳೆಯುತ್ತದೆ. ಇಲ್ಲಿನ ಕರಿದ ಬಿಸಿಯಾದ ಮಸಾಲೆ ಸಮೋಸಾಗಳು ಮತ್ತು ಗರಿಗರಿಯಾದ ಜಿಲೇಬಿಗಳು ನಿಮ್ಮನ್ನು ಜೊಲ್ಲು ಸುರಿಸುವಂತೆ ಮಾಡುತ್ತದೆ. ಪೂನಂ ಸ್ವೀಟ್ ಸೆಂಟರ್ ಖಂಡಿತವಾಗಿಯೂ ಬೆಂಗಳೂರಿನಲ್ಲಿರುವ ಅತ್ಯುತ್ತಮ ಸಮೋಸಾ ಸ್ಥಳಗಳಲ್ಲಿ ಒಂದಾಗಿದೆ.
ವಿಳಾಸ: 43, ಬಿಡಿಎ ಕಾಂಪ್ಲೆಕ್ಸ್, 2ನೇ ಹಂತ, ಬನಶಂಕರಿ, ಬೆಂಗಳೂರು
ಸಮಯ: ಬೆಳಿಗ್ಗೆ 8 ರಿಂದ ರಾತ್ರಿ 9:30 ರವರೆಗೆ
ಮುರಳಿ ಬೇಕರಿ, ಬೆಳ್ಳಂದೂರು
ಬೆಳ್ಳಂದೂರಿನ ಮುರಳಿ ಬೇಕರಿ ಬೆಂಗಳೂರಿನ ಅತ್ಯುತ್ತಮ ಸಮೋಸಾ ಸ್ಥಳಗಳಲ್ಲಿ ಒಂದಾಗಿದೆ. ಪ್ರಕಾಶಮಾನವಾದ ಬೆಳಕಿನ ಸ್ಥಳವು ಗ್ರಾಹಕರಿಗೆ ಒಳ್ಳೆಯ ವಾತಾವರಣವನ್ನು ನೀಡುತ್ತದೆ. ಇಲ್ಲಿನ ಗರಿಗರಿಯಾದ ಬಿಸಿ ಸಮೋಸಾಗಳನ್ನು ಮಿಸ್ ಮಾಡದೇ ತಿನ್ನಿ.
ವಿಳಾಸ: 207, ಗ್ರೀನ್ ಗ್ಲೆನ್ ಲೇಔಟ್, ಎದುರು ಎಂ.ಕೆ. ಅಹಮದ್ ಸೂಪರ್ ಮಾರ್ಕೆಟ್, ಬೆಳ್ಳಂದೂರು, ಬೆಂಗಳೂರು
ಸಮಯ: ಬೆಳಿಗ್ಗೆ 9 ರಿಂದ ರಾತ್ರಿ 11 ರವರೆಗೆ
ಸಮೋಸಾ ಎಕ್ಸ್ಪ್ರೆಸ್, ಹಲವಾರು ಶಾಖೆಗಳಿದೆ
ನಗರದಾದ್ಯಂತ ಅನೇಕ ಮಳಿಗೆಗಳನ್ನು ಹೊಂದಿರುವ ಸಮೋಸಾ ಎಕ್ಸ್ಪ್ರೆಸ್ ಬೆಂಗಳೂರಿನ ಜನಪ್ರಿಯ ಸಮೋಸಾ ಸ್ಥಳವಾಗಿದೆ. ನಿಮ್ಮ ಸ್ನೇಹಿತರ ಜೊತೆ ಹೋಗಿ ವಿಶೇಷವಾದ ನೂಡಲ್ ತುಂಬಿದ ನೂಡಲ್ ಸಮೋಸಾವನ್ನು ಪ್ರಯತ್ನಿಸಿ. ನೀವು ಪಾಸ್ತಾ ಸಮೋಸಾ, ಮಲೈ ಪನೀರ್ ಸಮೋಸಾ, ಮೆಕ್ಸಿಕನ್ ಚಿಕನ್ ಸಮೋಸಾ ಮತ್ತು ಚಿಕನ್ ಸೀಖ್ ಸಮೋಸಾವನ್ನು ಸಹ ತಿನ್ನಬಹುದು.
ವಿಳಾಸ: ಮಾರತನಹಳ್ಳಿ, ಬೆಂಗಳೂರು
ಸಮಯ: ಮಧ್ಯಾಹ್ನ 12:30 ರಿಂದ ರಾತ್ರಿ 11 ರವರೆಗೆ
ಆಲ್ಬರ್ಟ್ ಬೇಕರಿ, ಫ್ರೇಜರ್ ಟೌನ್
1902 ರಲ್ಲಿ ನಿರ್ಮಿಸಲಾದ ಫ್ರೇಜರ್ ಟೌನ್ನಲ್ಲಿರುವ ಆಲ್ಬರ್ಟ್ ಬೇಕರಿ ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರತಿಷ್ಠಿತ ಬೇಕರಿಗಳಲ್ಲಿ ಒಂದಾಗಿದೆ. ಹಾಗಾದರೆ ಅವರ ಸಮೋಸಾಗಳು ಎಷ್ಟು ರುಚಿಕರವಾಗಿರಬಹುದು ಎಂದು ನೀವು ಊಹಿಸಬಹುದು. ಅವರ ಮಿನಿ ವೆಜ್, ಮಿನಿ ಚಿಕನ್ ಮತ್ತು ಮಿನಿ ಮಟನ್ ಸಮೋಸಾಗಳು ನಿಮ್ಮನ್ನ ಸಂತುಷ್ಠಗೊಳಿಸುತ್ತವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪಂಜಾಬಿ ಸ್ಟೈಲ್ ಆಹಾರ ಟೇಸ್ಟ್ ಮಾಡೋಕೆ ಇವೇ ಬೆಸ್ಟ್ ಸ್ಥಳಗಳು
ವಿಳಾಸ: 93, ಮಸೀದಿ ರಸ್ತೆ, ಫ್ರೇಜರ್ ಟೌನ್, ಬೆಂಗಳೂರು
ಸಮಯ: ಮಧ್ಯಾಹ್ನ 3 ರಿಂದ ರಾತ್ರಿ 9 ರವರೆಗೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ