Mudde Oota Near Me: ಮುದ್ದೆ ತಿನ್ನೋ ಆಸೆನಾ? ಬೆಂಗ್ಳೂರಿನ ಈ ಸ್ಥಳಗಳಲ್ಲಿ ಬೆಸ್ಟ್ ಮುದ್ದೆ ಸಿಗುತ್ತೆ ನೋಡಿ

Ragi Mudde or Balls Oota near me: ಬೆಂಗಳೂರಿನಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ ಕೊಡುವ ಹಲವಾರು ಸ್ಥಳಗಳಿವೆ. ನೀವು ಸಹ ಬೆಸ್ಟ್ ರಾಗಿ ಮುದ್ದೆ ಊಟ ಹುಡುಕುತ್ತಿದ್ದರೆ, ಕೆಲ ಸ್ಥಳಗಳ ಲಿಸ್ಟ್​ ಇಲ್ಲಿದೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕದಲ್ಲಿ (Karnataka) ಏನು ಫೇಮಸ್​ ಎಂದು ಕೇಳಿದಾಗ ಕೆಲ ಸ್ಥಳಗಳ (Places)  ಹೆಸರು ಬರುತ್ತದೆ. ಅದೇ ಊಟಕ್ಕೆ ಏನು ಫೇಮಸ್​ ಎಂದರೆ ರಾಗಿ ಮುದ್ದೆ (Ragi Mudde or Balls)  ಎಂದು ಎಲ್ಲರ ಬಾಯಲ್ಲಿ ಬರುತ್ತದೆ. ಅಷ್ಟರ ಮಟ್ಟಿಗೆ ಇದು ಪ್ರಸಿದ್ದ. ಕರ್ನಾಟಕದ ಬಹುತೇಕ ಜನರಿಗೆ ರಾಗಿ ಮುದ್ದೆ ಇಲ್ಲದೇ ಊಟ ಆಗುವುದಿಲ್ಲ. ಕೊನೆಪಕ್ಷ ಒಂದು ಹೊತ್ತಾದರೂ ರಾಗಿ ಮುದ್ದೆ ಬೇಕಾಗುತ್ತದೆ. ಆದರೆ ಸದ್ಯದ ಜನರ ಜೀವನಶೈಲಿಯ (Lifestyle) ಕಾರಣದಿಂದ ಮನೆಯಲ್ಲಿಯೇ ರಾಗಿ ಮುದ್ದೆ ಮಾಡಲು ಕಷ್ಟವಾಗುತ್ತದೆ. ಕೆಲವರು ಪಿಜಿಯಲ್ಲಿರುತ್ತಾರೆ, ಇನ್ನೂ ಕೆಲವರಿಗೆ ಮುದ್ದೆ ಮಾಡಲು ಬರುವುದಿಲ್ಲ, ಹಾಗೆಯೇ ಸಮಯವಿಲ್ಲದೇ ಮುದ್ದೆ ತಿನ್ನಲಾಗದೇ ಪರದಾಡುತ್ತಿರುತ್ತಾರೆ. ಬೆಂಗಳೂರಿನಲ್ಲಿ (Bengaluru) ಮಧ್ಯಾಹ್ನ ಹಾಗೂ ರಾತ್ರಿ ಮುದ್ದೆ ಊಟ ಕೊಡುವ ಹಲವಾರು ಸ್ಥಳಗಳಿವೆ. ನೀವು ಸಹ ಬೆಸ್ಟ್ ರಾಗಿ ಮುದ್ದೆ ಊಟ ಹುಡುಕುತ್ತಿದ್ದರೆ, ಕೆಲ ಸ್ಥಳಗಳ ಲಿಸ್ಟ್​ ಇಲ್ಲಿದೆ.

ಮುದ್ದೆ ಮಾದಪ್ಪ ಮೆಸ್, ಗಾಂಧಿ ನಗರ, ಬೆಂಗಳೂರು

ಮುದ್ದೆ ಸವಿಯಲು ಇದು ಬೆಸ್ಟ್​ ಸ್ಥಳ ಎನ್ನಬಹುದು. ಇಲ್ಲಿ ಮುದ್ದೆ ಬಸ್ಸಾರು, ಕಾಳಿನ ಪಲ್ಯ ತಿಂದರೆ ಪದೇ ಪದೇ ಹೋಗುವುದು ಸತ್ಯ. ಇಲ್ಲಿ ನಿಮಗೆ ಕೇವಲ ಮುದ್ದೆಯನ್ನು ಸಹ ಪಾರ್ಸಲ್ ಕೊಡುತ್ತಾರೆ. ಮನೆಗೆ ಸಹ ತೆಗೆದುಕೊಂಡು ತಿನ್ನಬಹುದು. ಯಾವಾಗಲಾದರೂ ಸಡನ್ ಆಗಿ ಮುದ್ದೆ ತಿನ್ನಬೇಕು ಎಂದರೆ ಇಲ್ಲಿಗೆ ಹೋಗಿ.

ವಿಳಾಸ: ಸಂ. 4, ಎಸ್​ಜೆಎಂ ಟವರ್ಸ್, 5 ನೇ ಮುಖ್ಯ ರಸ್ತೆ, ಗಾಂಧಿ ನಗರ, ಬೆಂಗಳೂರು, ಕರ್ನಾಟಕ 560009

ಸಮಯ: ಬೆಳಗ್ಗೆ 7.30 ರಿಂದ 10.30, ಮಧ್ಯಾಹ್ನ 12.30ರಿಂದ 4ರ ವರೆಗೆ , ಸಂಜೆ 7 ರಿಂದ ರಾತ್ರಿ 9.30

ಮೊಬೈಲ್ ನಂಬರ್: 098808 83801

ಹಳ್ಳಿ ಮನೆ ಮುದ್ದೆ ಊಟ, ಜೆಪಿ ನಗರ, ಬೆಂಗಳೂರು

ಈ ಹೋಟೆಲ್​ ನಾನ್ ವೆಜ್​ ಆಹಾರ ಪದಾರ್ಥಗಳಿಗೆ ಹೆಚ್ಚು ಫೇಮಸ್​. ಆದರೆ ಇಲ್ಲಿ ನಾನ್​ ಕರಿ ಜೊತೆ ಮುದ್ದೆ ತಿಂದರೆ ಆಹಾ, ಅದರ ರುಚಿಯೇ ಬಹಳ ವಿಭಿನ್ನ. ಅಲ್ಲದೇ, ಮೀನಿನ ಸಾರು ಅಥವಾ ಚಿಕನ್ ಸಾರಿನ ಜೊತೆ ಒಂದು ದೊಡ್ಡ ಮುದ್ದೆ ಊಟ ನಿಮ್ಮ ಹೊಟ್ಟೆ ಫುಲ್ ಮಾಡುವುದಲ್ಲದೇ, ಮನಸ್ಸನ್ನು ಫುಲ್ ಮಾಡುತ್ತದೆ. ಬೆಸ್ಟ್​ ನಾಟಿ ಸ್ಟೈಲ್ ಮುದ್ದೆ ಊಟ ಸವಿಯಲು ಇಲ್ಲಿದೆ ನಿಜಕ್ಕೂ ವಿಸಿಟ್​ ಮಾಡಲೇಬೇಕು.

ಇದನ್ನೂ ಓದಿ: ಸೂಪರ್ ಟೇಸ್ಟಿ ಬಿರಿಯಾನಿ ಮಾಡೋಕೆ ಇದೊಂದು ಮಸಾಲೆ ಇದ್ರೆ ಸಾಕು

ವಿಳಾಸ: 1 ಕೃಷ್ಣ ಕಾಂಪ್ಲೆಕ್ಸ್, ಗೌರವ್ ನಗರ್, ಜೆಪಿ ನಗರ್  7ನೇ ಫೇಸ್​, ಬೆಂಗಳೂರು, ಕರ್ನಾಟಕ

ಸಮಯ: ಬೆಳಗ್ಗೆ 11.30 ರಿಂದ ರಾತ್ರಿ 10.30ರ ವರೆಗೆ

ಮೊಬೈಲ್ ನಂಬರ್: 098445 66567

ನಂದೀಶ್ವರ ಮುದ್ದೆ ಊಟ, ಬತ್ತರಹಳ್ಳಿ, ಬೆಂಗಳೂರು

ನೀವೂ ಗೂಗಲ್​ನಲ್ಲಿ ಬೆಂಗಳೂರಿನಲ್ಲಿ ಬೆಸ್ಟ್​ ಮುದ್ದೆ ಊಟ ಸಿಗುವ ಸ್ಥಳಗಳನ್ನು ಹುಡುಕಿದ್ರೆ ಮೊದಲು ಸಿಗೋದು ಈ ನಂದೀಶ್ವರ ಮುದ್ದೆ ಊಟ. ಹೌದು, ಜನರು ಹೆಚ್ಚು ಇಷ್ಟಪಡುವ ಮುದ್ದೆ ಊಟ ಸಿಗುವ ಸ್ಥಳಗಳಲ್ಲಿ ಇದು ಒಂದು. ಮಧ್ಯಾಹ್ನದ ಊಟದ ಸಮಯದಲ್ಲಿ ಜನ ಇಲ್ಲಿ ಕ್ಯೂ ನಿಲ್ಲದ ದಿನವಿಲ್ಲ ಎನ್ನಬಹುದು. ರಾಗಿ ಮುದ್ದೆ ಮಾತ್ರವಲ್ಲದೇ, ಮಟನ್ ಹಾಗೂ ಚಿಕನ್ ಪದಾರ್ಥಗಳು ಸಹ ಬಹಳ ಸೂಪರ್ ಆಗಿರುತ್ತದೆ.

ವಿಳಾಸ: ಸಣ್ಣತಮ್ಮನಹಳ್ಳಿ, ಬತ್ತರಹಳ್ಳಿ, ಬೆಂಗಳೂರು, ಕರ್ನಾಟಕ

ಸಮಯ: ಬೆಳಗ್ಗೆ 1.45 ರಿಂದ ರಾತ್ರಿ 9.30ರ ವರೆಗೆ

ಗೌಡ್ರು ಮನೆ ಮುದ್ದೆ ಊಟ, ಬ್ಯಾಟರಾಯನ ಪುರ, ಬೆಂಗಳೂರು

ಕರ್ನಾಟಕ ಹೇಗೆ ರಾಗಿ ಮುದ್ದೆಗೆ ಫೇಮಸ್​ ಹಾಗೆಯೇ ಈ ರಾಗಿ ಮುದ್ದೆಗೆಈ ಗೌಡ್ರು ಹೋಟೆಲ್​ ಫೇಮಸ್​ ಅನ್ನಬಹುದು. ಅವರು ಮಾಡುವ ರಾಗಿ ಮುದ್ದೆಯನ್ನು ಒಮ್ಮೆಯಾದರೂ ತಿನ್ನಲೇಬೇಕು ಅಂತಾರೆ ಜನ. ಅಷ್ಟರ ಮಟ್ಟಿಗೆ ಇಲ್ಲಿ ರುಚಿಯಾದ ಮುದ್ದೆ ಊಟ ಸಿಗುತ್ತದೆ. ಇಲ್ಲಿ ಮುದ್ದೆಯ ಜೊತೆ ನಾನ್​ ವೆಜ್​ ಊಟ ಸಹ ಸಿಗುತ್ತದೆ.

ಇದನ್ನೂ ಓದಿ: ಮನೆಯಲ್ಲೇ ಸಿಂಪಲ್ ಮೇಕಪ್ ಮಾಡ್ಕೊಳ್ಳೋದು ಹೇಗೆ? ಬ್ಯೂಟಿಶಿಯನ್ ಹೇಳಿಕೊಡ್ತಾರೆ ನೋಡಿ

ವಿಳಾಸ: 10, ಅಮೃತನಗರ, ಎ ಸೆಕ್ಟರ್ Rd3H5W+5F9, ಅಮೃತನಗರ, ಅಂಚೆ, ಸಹಕಾರ ನಗರ, ಬ್ಯಾಟರಾಯನಪುರ, ಬೆಂಗಳೂರು, ಕರ್ನಾಟಕ

ಸಮಯ: ಬೆಳಗ್ಗೆ 7.30 ರಿಂದ ರಾತ್ರಿ 10.30ರ ವರೆಗೆ

ಮೊಬೈಲ್ ನಂಬರ್: 097408 20754
Published by:Sandhya M
First published: